ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 5) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ಬುಧ: ಮಂಗಳ, ತಿಥಿ : ಪೌರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 12:35 ರಿಂದ 02:07ರ ವರೆಗೆ, ಯಮಘಂಡ ಕಾಲ 07:59 ರಿಂದ 09:31ರ ವರೆಗೆ, ಗುಳಿಕ ಕಾಲ 11:03ರಿಂದ 12:35ರ ವರೆಗೆ.
ಮೇಷ: ಇಂದು ನಿಮಗೆ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವನ್ನು ಗಳಿಸಲಿದ್ದೀರಿ. ಪ್ರಯಾಣದ ಆಯಾಸವು ನಿಮಗೆ ವಿಶ್ರಾಂತಿಯನ್ನು ಕೇಳಬಹುದು. ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸಗಳು ಇರಲಿದೆ. ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ನೀವು ಏಳ್ಗೆಯನ್ನು ಕಾಣುವಿರಿ. ನಿಮ್ಮ ಸ್ವಾಂತ್ರ್ಯಕ್ಕೆ ಅಡ್ಡಿಯಾಗುವ ಘಟನೆಗಳು ನಡೆಯಬಹುದು. ಮನಸ್ಸನ್ನು ಕದಲುವ ಕೆಲಸಗಳು ಉಂಟಾಗಲಿದೆ. ಮಾತುಗಳೂ ಕೇಳಬಹುದು. ವಿಶಾಲವಾದ ಸ್ಥಳದಲ್ಲಿ ಒಂಟಿಯಾಗಿ ಓಡಾಡಲು ಇಚ್ಛಿವಿಸುವಿರಿ. ದಿನನಿತ್ಯದ ಕೆಲಸಗಳನ್ನು ಬದಲಿಸಿಕೊಳ್ಳಲಿದ್ದೀರಿ.
ವೃಷಭ: ಅನಗತ್ಯವಾದ ತಿರಗಾಟವು ಆಯಾಸವನ್ನು ತರಿಸಬಹುದು. ಕೆಲಸದ ಒತ್ತಡವಿದ್ದು ಕೆಲಸವನ್ನು ಮಾಡಲು ಏನೂ ತೋಚದೇ ಹೋಗಬಹುದು. ಹೊಸಬರ ಭೇಟಿಯಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳು ತಿಳಿಯುವುವು. ಉನ್ನತಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಯಾರ ಮಾತಿಗೆ ಎಷ್ಟು ಬೆಲೆ ಕೊಡಬೇಕು ಎನ್ನುವುದನ್ನು ಅರಿತಿದ್ದೀರಿ. ದುಃಖಕ್ಕೆ ಅವಕಾಶಗಳನ್ನು ಕೊಡಬೇಡಿ. ಯಾರನ್ನೂ ದೂಷಿಸುವ ಕೆಲಸಕ್ಕೆ ಹೋಗಬೇಡಿ.
ಮಿಥುನ: ಒಳ್ಳೆಯದಾಗುವುದೆಂಬ ಕಾಲದ ನಿರೀಕ್ಷೆಯಲ್ಲಿ ಇದ್ದೀರಿ. ಸಂಗಾತಿಯೊಂದಿಗೆ ವಿನಾಕಾರಣ ಅಥವಾ ಸಣ್ಣ ಕಾರಣಗಳಿಗೆ ಮುನಿಸಿಕೊಳ್ಳುವಿರಿ. ನೀವಿಂದು ಮಾಡುವ ಕೆಲಸದಲ್ಲಿ ಒತ್ತಡ ಇರಲಿದೆ. ತಾಯಿಯ ಸೇವೆಯನ್ನು ಮಾಡಲು ನಿಮಗೆ ಮನಸ್ಸಿರುವುದು. ವಿವಾಹಕ್ಕೆ ತಡೆಗಳು ಬರಬಹುದು. ಗೌರವವು ಸಿಗುವಲ್ಲಿ ಸಿಗದೇ ಇರುವುದು ನಿಮಗೆ ನೋವುಂಟು ಮಾಡಬಹುದು. ತಾಳ್ಮೆಯ ಪರೀಕ್ಷೆ ನಡೆಯುವ ದಿನವಾಗಲಿದೆ. ಜನರ ಜೊತೆ ಬೆರೆಯುವ ಮನಸ್ಸು ನಿಮ್ಮದಾಗಲಿದೆ.
ಕರ್ಕ: ನಿಮ್ಮ ಶಕ್ತಿ-ಸಾಮರ್ಥ್ಯಗಳು ಪ್ರದರ್ಶನವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಅಪಮಾನವಾದೀತು. ಆರ್ಥಿಕತೆಯು ನಿಧಾನವಾಗಿ ಏರುವುದು. ಬಂಧುಗಳ ನಡೆವೆ ವಾದ – ವಿವಾದಗಳು ಆಗಬಹುದು. ನಿಮ್ಮ ಕುರಿತು ಅವಲೋಕನ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರಬಹುದು. ಯಾರದೋ ಒತ್ತಾಯಕ್ಕೆ ಮಣಿದು ಕೆಲಸಗಳನ್ನು ಮಾಡಲು ಹೋಗಿ ಸಮಯವನ್ನು ಹಣವನ್ನೂ ವ್ಯಯಿಸಬೇಡಿ. ಸ್ವಂತಿಕೆ ಇರಲಿ. ನಿಮ್ಮನ್ನು ಅನುಸರಿಸುವ ಕೆಲವರು ಇರಲಿದ್ದಾರೆ. ಆರೋಗ್ಯದ ಬಗ್ಗೆ ಗಮನಹರಿಸುವುದು ಒಳ್ಳೆಯದು.
ಸಿಂಹ: ಪಾಲುದಾರಿಕೆಯ ವಿಚಾರದಲ್ಲಿ ಕೆಲವು ದಿನಗಳನ್ನು ಮುಂದೂಡುವುದು ಒಳ್ಳೆಯದು. ತಾಳ್ಮೆಗೆ ಬೇಕಾದ ವ್ಯವಸ್ಥೆಯನ್ನು ಆರಂಭಿಸಿವುದು ಒಳ್ಳೆಯದು. ಇಲ್ಲವಾದಲ್ಲಿ ಮನದ ಹಾಗೂ ಮನೆಯ ಆರೋಗ್ಯವು ಹಾಳಾಗಬಹುದು. ಆಸ್ತಿಯ ವಿಚಾರವನ್ನು ಯಾರೊಂದಿಗೂ ಹೇಳಬೇಡಿ. ನಿಮ್ಮ ಕೈತಪ್ಪಿಹೋಗಬಹುದು. ಉದ್ವೇಗದಿಂದ ವರ್ತಿಸಿ ಅಪಹಾಸ್ಯಕ್ಕೆ ಒಳಗಾಗಬೇಡಿ. ದಿನವೂ ನಿಮ್ಮ ಅವಲೋಕನ ಮಾಡಿಕೊಳ್ಳುವುದು ಅಗತ್ಯ. ನಿಮ್ಮ ಜೀವನದ ಏರಿಳಿತಗಳನ್ನು ಕಂಡು ನಿಮಗೆ ಆಶ್ಚರ್ಯವಾಗಬಹುದು.
ಕನ್ಯಾ: ಬೇರೆಯವರ ಬಗ್ಗೆ ಮಾಡಿದ ತಮಾಷೆಯು ಗಂಭೀರವಾದೀತು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಸಿಗಲಿದೆ. ಹಲವಾರು ದಿನಗಳಿಂದ ಅಂದುಕೊಂಡ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಪ್ರಯಾಣ ಬೆಳೆಸುವಿರಿ. ಮಕ್ಕಳು ನಿಮಗೆ ಸಹಾಯ ಮಾಡಿಲಿದ್ದಾರೆ. ಅತಿಯಾದ ಹಾಗೂ ಅಶುದ್ಧ ಆಹಾರದಿಂದ ಅನಾರೋಗ್ಯವು ಉಂಟಾಗಬಹುದು. ಬೆಳಗಿನ ಉತ್ಸಾಹ ಕಛೇರಿಗೆ ಹೋದ ಅನಂತರ ಇರಲಾರದು. ಸಹೋದ್ಯೋಗಿಗಳ ವರ್ತನೆಯು ಕಿರಿಕಿರಿ ತರಿಸಬಹುದು. ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಓದಿ ಹೊರಡಿ.
ತುಲಾ: ಇಂದು ಅಂದುಕೊಂಡಷ್ಟು ಕೆಲಸಗಳು ಆಗಲಿಲ್ಲ ಎಂಬ ಕೊರಗು ನಿಮ್ಮಲ್ಲಿ ಇರಬಹುದು. ಅನಿರೀಕ್ಷಿತ ಖರ್ಚು ನಿಮಗೆ ಇಂದು ಆತಂಕವನ್ನು ಸೃಷ್ಟಿಸಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳ ಜೊತೆ ಕಲಹವು ಉಂಟಾದೀತು. ನೂತನ ಗೃಹನಿರ್ಮಾಣದ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ಬೇಕಾದ ವಸ್ತು ಹಾಗೂ ವ್ಯಕ್ತಿಗಳು ಸಿಗದೇ ಒದ್ದಾಡಬೇಕಾದೀತು. ಮಾನಸಿಕ ಕಿರಿಕಿರಿಯಿಂದ ನಿಮ್ಮವರ ಮೇಲೆ ಸಿಟ್ಟಗೊಳ್ಳುವಿರಿ. ನೆಮ್ಮದಿಗಾಗಿ ಪ್ರಶಾಂತವಾದ ಸ್ಥಳವನ್ನು ಹುಡುಕುವಿರಿ.
ವೃಶ್ಚಿಕ: ಇಂದು ನೀವು ಪ್ರಭಾವೀ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಮುಂದಿನ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ಮಾಡಲಿದ್ದೀರಿ. ಧಾರ್ಮಿಕವಾದ ಕಾರ್ಯಗಳಲ್ಲಿ ಆಸಕ್ತಿಯೂ ಭಾಗವಹಿಸುವಿಕೆಯೂ ಇರಲಿದೆ. ಸಂಗಾತಿಯೊಂದಿಗೆ ವೈಮನಸ್ಯವು ಉಂಟಾಗಿ ಅದು ದಿನದ ಕೊನೆಯಲ್ಲಿ ಸಮಾಪ್ತಿಯಾಗುವುದು. ಭವಿಷ್ಯಕ್ಕೆಂದು ಹಣವನ್ನು ಹೂಡುವಿರಿ. ದುಃಸ್ವಪ್ನವು ನಿಮಗೆ ಭಯವನ್ನು ಉಂಟುಮಾಡಬಹುದು. ಬೆಳಗ್ಗೆ ಸ್ನಾನಮಾಡಿ ದೇವರಿಗೆ ತುಪ್ಪದ ದೀಪವನ್ನು ಬೆಳಗಿ ನಮಸ್ಕರಿಸಿ.
ಧನುಸ್ಸು: ಪರೀಕ್ಷೆ ಎಂದು ಒತ್ತಡವನ್ನು ತಂದುಕೊಳ್ಳುವ ಅವಶ್ಯಕತೆ ಇಲ್ಲ. ಏಕಾಗ್ರತೆಯ ಕೊರತೆಯನ್ನು ನೀವು ಧ್ಯಾನದ ಮೂಲಕ ಪರಿಹರಿಸಿಕೊಳ್ಳಬಹುದು. ಒತ್ತಡ ನಿವಾರಣೆಗೆ ಬೇಕಾದ ಯೋಗ ಮೊದಲಾದ ಚಿಕಿತ್ಸೆಯನ್ನು ಮಾಡಿ. ಸ್ವಲ್ಪ ಮೊತ್ತಕ್ಕೆ ಹೆಚ್ಚಿನದನ್ನು ಪಡೆಯಬೇಕು ಎನ್ನುವ ಮಾನಸಿಕವಾಗಿ ಸ್ಥಿತಿಯಿಂದ ಹೊರಬರುವುದು ಉತ್ತಮ. ಶ್ರಮಕ್ಕೆ ತಕ್ಕುದಾದ ಫಲವನ್ನೇ ನಿರೀಕ್ಷಿಸಿ. ಅತಿಯಾದ ಮುಂಗೋಪವು ಒಳ್ಳೆದಲ್ಲ. ಅಪರಿಚಿತರನ್ನು ಹತ್ತಿರ ಇಟ್ಟುಕೊಳ್ಳಬೇಡಿ. ಗುರುವಿನ ದರ್ಶನವನ್ನು ಪಡೆಯಿರಿ.
ಮಕರ: ತಪ್ಪುಗಳನ್ನು ಹುಡುಕುವ ಕೆಲಸಕ್ಕೆ ಹೋಗಬೇಡಿ. ಎಂದೋ ಆದ ಘಟನೆಗಳನ್ನು ನಿಮಗೆ ಹೇಳಬಹುದು. ಸತ್ಯವನ್ನು ಹೇಳಲು ಹೋಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಹಿತಶತ್ರುಗಳನ್ನು ನಿಮ್ಮಿಂದ ದೂರವಿಸಿಕೊಳ್ಳಿ. ಸಂಕುಚಿತ ಭಾವದಿಂದ ಹೊರಬನ್ನಿ ಹೃದಯವೈಶಾಲ್ಯವನ್ನು ಬೆಳೆಸಿಕೊಳ್ಳಿ. ಕಛೇರಿಯಲ್ಲಿ ನಿಮ್ಮ ಬುದ್ಧಿ, ಕಾರ್ಯಕೌಶಲಗಳು ಗೊತ್ತಾಗುವುವು. ಯಾರಾದರೂ ನಿಮ್ಮ ಬಗ್ಗೆ ಏನನ್ನಾದರೂ ಹೇಳಿದರೆ ಹೇಳಿದರೆ ಪ್ರತ್ಯುತ್ತವನ್ನು ಕೊಡಬೇಡಿ. ಕಾಲಾನಂತರದಲ್ಲಿ ಅವರಿಗೇ ಅರ್ಥವಾದೀತು.
ಕುಂಭ: ಉದ್ಯೋಗಾವಕಾಶಗಳನ್ನು ಬಿಟ್ಟು ಸ್ವತಂತ್ರವಾಗಿ ಇರುತ್ತೀರಿ ಎನ್ನುವ ನಿಮ್ಮ ದೃಢತೆಯು ಮೆಚ್ಚುವಂಥದ್ದೇ. ನಿಮ್ಮ ವಾಹನಚಾಲನೆ ಮಾಡುವಾಗ ಜಾಗರೂಕರಾಗಿರಿ. ಒಮ್ಮೆ ಓಡಿಸುವ ಸ್ಥಿತಿ ಬಂದರೂ ಚಾಲಕರಾಗಿ ಬೇರೆಯವರೇ ಇರಲಿ. ಆಭರಣದ ಖರೀದಿಯಲ್ಲಿ ಮೋಸವಾಗಲಿದೆ. ಆಲೋಚನೆಯ ಕ್ರಮವು ಸರಿಯಾಗಿರಲಿ. ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ನಿಮ್ಮ ಮುಖವಾಡವು ಬಯಲಾಗಬಹುದು, ಮಾತಿನ ಮೇಲೆ ಹಿಡಿತವಿರಿಲಿ. ಶಿವನಿಗೆ ಅಭಿಷೇಕವನ್ನು ಮಾಡಿ.
ಮೀನ: ವಿಧಿಯನ್ನು ಮೀರುವ ಸಾಹಸಕ್ಕೆ ಕೈಹಾಕಬೇಡಿ. ಬಂದಿದ್ದನ್ನು ಎದುರಿಸುವ ದಾರಿಯನ್ನು ನೋಡಿಕೊಳ್ಳುವುದು ಉತ್ತಮ. ಆಪ್ತರೊಬ್ಬರು ನಿಮ್ಮನ್ನು ಬಿಟ್ಟು ಹೋಗುವರು. ಬಹಳ ದುಃಖಿಸಬೇಕಾದ ಸಂದರ್ಭವಿದೆ. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವು ಸಿಗಬಹುದು. ಎಲ್ಲರನ್ನೂ ಗೌರವಿಸಿ. ಅವರ ವಿದ್ಯೆ, ಆಯುಸ್ಸಿಗೆ ಬೆಲೆ ಕೊಡಿ. ಮಾಡಬೇಕಾದ ಕೆಲಸದ ಬಗ್ಗೆ ಆಸಕ್ತಿ ಕಡಿಮೆಯಾಗಲಿದೆ. ಹೆಚ್ಚಿನ ಸಂಪತ್ತನ್ನು ಗಳಿಸಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಗೋಗ್ರಾಸವನ್ನು ನೀಡಿ ದೋಷಗಳನ್ನು ಪರಿಹರಿಸಿಕೊಳ್ಳಿ.
ಲೋಹಿತಶರ್ಮಾ ಇಡುವಾಣಿ – 8762924271 (what’s app only)