AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ಪ್ರಾತಿನಿಧಿಕ ಚಿತ್ರImage Credit source: tv9hindi.com
ಗಂಗಾಧರ​ ಬ. ಸಾಬೋಜಿ
|

Updated on: Apr 11, 2023 | 6:00 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 11 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಸಿಂಹ: ನಿಮಗೆ ಬರಬೇಕಾದ ಹಣದ ಕುರಿತು ಲೆಕ್ಕವಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಯೋಗ್ಯರ ಜೊತೆ ನಿಮ್ಮ ಮಾತುಕತೆಗಳು ಇರಲಿ. ಇಲ್ಲದಿದ್ದರೆ ಅಪಮಾನವಾದೀತು. ಅಮೂಲ್ಯವಸ್ತುವೊಂದನ್ನು ನಷ್ಟಮಾಡಿಕೊಳ್ಳುವಿರಿ. ದುಃಖಿಸುವ ಅಗತ್ಯವಿಲ್ಲ. ಇನ್ನಷ್ಟು ಉತ್ತಮವಾದುದನ್ನು ನೀಡಲು ಸಂಭವಿಸಿರಬಹುದು ಎಂದು ಭಾವಿಸಿ. ಮನಸ್ಸಿನ ನೆಮ್ಮದಿಯು ಕೆಡಬಹುದು. ಆಗದೇ ಇರುವ ಕೆಲಸಕ್ಕೆ ಬೇಸರ ಬೇಡ.

ಕನ್ಯಾ: ವಾಹನ ಅಪಘಾತವು ಆಗಬಹುದು, ಜಾಗರೂಕತೆಯಿಂದ ಇರಿ. ಹೊರಗೆ ಆಹಾರವನ್ನು ಸ್ವೀಕರಿಸಬೇಕು ಎನ್ನುವ ಆಸೆಯು ನಿಮಗಿದ್ದರೂ ಆರೋಗ್ಯವನ್ನು ಗಮನಿಕೊಳ್ಳಬೇಕಾಗುವುದು. ಕೃಷಿಕರು ತಾವು ಬೆಳೆದ ಬೆಳೆಯಿಂದ ನಷ್ಟವನ್ನು ಅನುಭವಿಸುವಿರಿ. ನಿಮ್ಮನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ ವ್ಯಕ್ತಿಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ನೀವೇ ನಿರ್ಮಿಸಿಕೊಂಡ ಯಶಸ್ಸಿನ ಮೆಟ್ಟಿಲನ್ನು ಅನಾಯಾಸದಿಂದ, ಆನಂದದಿಂದ ಇರುವಿರಿ. ಅಕಾರಣ ಸಿಟ್ಟು ನಿಮ್ಮ ದಿನವನ್ನು ಹಾಳು ಮಾಡುವುದು.

ತುಲಾ: ಸರ್ಕಾರದ ಕೆಲಸಗಳು ನಿಧಾನವಾಗಲಿದೆ. ಮತ್ತೆ ಮತ್ತೆ ಬರುವ ಸಂಕಷ್ಟಕ್ಕೆ ದೈವಕ್ಕೆ ಮೊರೆ ಹೋಗಬೇಕಾಗುವುದು. ಪ್ರತಿಕೂಲ ವಾತಾವರಣದಲ್ಲಿಯೂ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿ ಸಿಗುವ ದಿನ. ದಾಂಪತ್ಯದಲ್ಲಿ ಸುಖವಿರಲಿದೆ. ಖಾಸಗಿ ಉದ್ಯೋಗಿಗಳಿಗೆ ತೊಂದರೆಯಾಗಬಹುದು. ಕುಟುಂಬದಲ್ಲಿ ನಿಮ್ಮನ್ನು ಸರಿಯಾಗಿ ಮಾತನಾಡಿಸದೇ ಇರಬಹುದು. ಸುತ್ತಾಟದಿಂದ ಆಯಾಸವಾಗಬಹುದು. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ.

ವೃಶ್ಚಿಕ: ರಾಜಕಾರಣಿಗಳು ಗೆಲ್ಲುವ ತಂತ್ರವನ್ನು ಹೂಡುವರು. ನೂತನ ವಿದ್ಯುತ್ ಉಪಕರಣವನ್ನು ಖರೀದಿಸುವಿರಿ. ವಾಹನವು ರಿಪೇರಿಗೆ ಬರಲಿದೆ. ಹಣವೂ ನಷ್ಟವಾಗುವುದು. ನಿಮ್ಮದಲ್ಲದ ವಸ್ತುವಿಗೆ ಕೈ ಹಾಕುವುದನ್ನು ಬಿಡಿ. ಕಳ್ಳತನದ ಅಪವಾದವನ್ನು ಹೊತ್ತುಕೊಳ್ಳುವಿರಿ. ಸಂಗಾತಿಯ ಬೇಸರವನ್ನು ದೂರ ಮಾಡಲು ಎಲ್ಲಿಯಾದರೂ ದೂರ ಕರೆದುಕೊಂಡು ಹೋಗಿ. ಸುಂದರ ಸ್ಥಳಗಳನ್ನು ನೋಡಿಬನ್ನಿ. ನಿಮಗೆ ಇಂದಿನ ಕಾರ್ಯವು ಸಫಲವಾಗಬೇಕಿದ್ದರೆ ಪಶ್ಚಿಮದಿಕ್ಕಿಗೆ ಮುಖಮಾಡಿ ಹೊರಡಿ.

-ಲೋಹಿತಶರ್ಮಾ ಇಡುವಾಣಿ

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ