AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರಿಗೆ ಇಂದು ಸಂಗಾತಿಯಿಂದ ಅಪಮಾನವೂ ಆಗಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರಿಗೆ ಇಂದು ಸಂಗಾತಿಯಿಂದ ಅಪಮಾನವೂ ಆಗಬಹುದು
ಇಂದಿನ ರಾಶಿ ಭವಿಷ್ಯ
Rakesh Nayak Manchi
|

Updated on: Apr 13, 2023 | 6:01 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 13 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಶಿವ, ಕರಣ : ಬಾಲ, ಸೂರ್ಯೋದಯ ಬೆಳಗ್ಗೆ 06:21ಕ್ಕೆ, ಸೂರ್ಯಾಸ್ತ ಸಂಜೆ 06:44ಕ್ಕೆ, ರಾಹು ಕಾಲ ಮಧ್ಯಾಹ್ನ 02:06 – 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:21 – 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:27 – 11:00ರ ವರೆಗೆ.

ಸಿಂಹ: ಇಂದು ನಿಮಗೆ ಮನಸ್ಸು ಹಾಗು ದೇಹವು ವಿಶ್ರಾಂತಿಯನ್ನು ಬಯಸಲಿದೆ. ಓಡಾಟದ ಸುಸ್ತು ಅಧಿಕವಾಗಲಿದೆ. ಯಾರಮೇಲಾದರೂ ನಂಬಿಕೆಯನ್ನು ಇಡುವಾಗ ಮುನ್ನೆಚ್ಚರೊಕೆ ಇರಲಿ. ಪ್ರಣಯಪ್ರಸಂಗದಲ್ಲಿ ಅನಿರೀಕ್ಷಿತ ತಿರುವುಗಳು ಇರಬಹುದು. ದುಃಖವನ್ನೂ ಅನುಭವಿಸುವ ಸಂಗತಿಗಳು ಬರಬಹುದು. ಮನಸ್ಸನ್ನು ಸುಮ್ಮನೆ ಬಿಡದೇ ಅನ್ಯ ಕಾರ್ಯದಲ್ಲಿ ತೊಡಗಿಸಿ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ.

ಕನ್ಯಾ: ನೂತನ ಗೃಹನಿರ್ಮಾಣವನ್ನು ಮಾಡಲು ಹೋಗಿ ನಷ್ಟವನ್ನೇ ಅನುಭವಿಸುವಿರಿ. ಮೋಸ ಹೋಗುವ ಸಾಧ್ಯತೆ ಇದೆ.‌ ವ್ಯಾಪಾರದಲ್ಲಿ ಚೇತರಿಕೆಯನ್ನು ಇಂದು ಕಾಣಬಹುದಾಗಿದೆ. ಜನರೊಡನೆ ವ್ಯಾವಹಾರಿಕವಾದ ಬಾಂಧವ್ಯವು ಚೆನ್ನಾಗಿರಲಿದೆ. ಆತುರಪಟ್ಟು ಅವಗಢಕ್ಕೆ ಸಿಲುಕಬೇಡಿ. ಹಿರಿಯರ ಸೇವೆಯನ್ನು ಕೆಲಸವೆಂದು ಮಾಡದೇ ಕರ್ತವ್ಯವೆಂದು ಮಾಡಿ. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿದ್ದು ಅನುಭವಿಗಳಿಂದ ಸ್ಪಷ್ಟತೆಯನ್ನು ತಂದುಕೊಳ್ಳುವಿರಿ. ನಿಮ್ಮ ವಿರುದ್ಧ ವಂಚನೆಯ ಆರೋಪವು ಬರಬಹುದು.

ತುಲಾ: ಅನಿರೀಕ್ಷಿತವಾಗಿ ಹಣ ಬೇಕಾಗಿದ್ದು ಮಿತ್ರನಿಂದ ಹಣವನ್ನು ಪಡೆದು ಸದ್ಯದ ಸಂಕಟವನ್ನು ಸರಿಮಾಡಿಕೊಳ್ಳುವಿರಿ. ಇಲ್ಲವಾದರೆ ಅದಕ್ಕೆ ಅಧಿಕವಾದ ಹಣವು ವ್ಯಯವಾದೀತು. ಸಂಸ್ಥೆಯ ಕುರಿತು ನಿಮಗಿರುವ ಕಾಳಜಿಗೆ ಪ್ರಶಂಸೆಗಳು ಇರಲಿದೆ. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಶುಭವಾರ್ತೆಯು ಸಿಗಬಹುದು. ಅಪರಿಚಿತ ವ್ಯಕ್ತಿಯ ಜೊತೆ ಜಗಳವಾಡಿ ದ್ವೇಷ ಬರುವಂತೆ ಮಾಡಿಕೊಳ್ಳುವಿರಿ. ಮಾತಿನ ಮೇಲೆ ಹಿಡಿತವಿರಲಿ. ಏನನ್ನೋ ಮಾತನಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬೇಡಿ.

ವೃಶ್ಚಿಕ: ಇಂದು ನೀವು ಉದ್ಯೋಗವನ್ನು ಕಳೆದುಕೊಂಡು ಒದ್ದಾಡುವಿರಿ. ಈ ವಿಷಯಕ್ಕೆ ಮನೆಯಲ್ಲಿ ತಂದೆಯ ಜೊತೆ ಮಾತುಕತೆಗಳು ನಡೆಯಬಹುದು. ಸಂಗಾತಿಯಿಂದ ಅಪಮಾನವೂ ಆಗಬಹುದು. ಒತ್ತಡವಿರುವ ಸಂದರ್ಭದಲ್ಲಿ ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಲೆಂದು ಏನನ್ನಾದರೂ ಹೇಳಬಹುದು. ಅದಕ್ಕೆ ಉತ್ತರಿಸಲು ಹೋಗಿ ಇನ್ನಷ್ಟು ಅಪಮಾನವಾಗಲಿದೆ. ಸ್ವಾರ್ಥದಿಂದ ನೀವು ಬಹಳ ವಿಷಯವನ್ನು ಕಳೆಸುಕೊಳ್ಳುವಿರಿ. ಈ ಕಾರಣಕ್ಕೆ ನಿಮ್ಮ ಕೆಲಸಕ್ಕೆ ಸಹಾಯವೂ ಸಿಗದೆ ಹೋಗಬಹುದು.

-ಲೋಹಿತಶರ್ಮಾ ಇಡುವಾಣಿ