Daily Horoscope: ಆಸ್ತಿ ವ್ಯವಹಾರ ಬಗೆ ಹರಿಯಲಿದೆ, ಆತಂಕ ಬೇಡ

ಇಂದಿನ (2023 ಏಪ್ರಿಲ್​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಆಸ್ತಿ ವ್ಯವಹಾರ ಬಗೆ ಹರಿಯಲಿದೆ, ಆತಂಕ ಬೇಡ
ಪ್ರಾತಿನಿಧಿಕ ಚಿತ್ರImage Credit source: thetotal.net
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 13, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಶಿವ, ಕರಣ : ಬಾಲ, ಸೂರ್ಯೋದಯ ಬೆಳಗ್ಗೆ 06-21 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ ಮಧ್ಯಾಹ್ನ 02:06 – 03:39ರ ವರೆಗೆ, ಯಮಘಂಡ ಕಾಲ 06:21 – 07:54ರ ವರೆಗೆ, ಗುಳಿಕ ಕಾಲ 09:27 – ಮಧ್ಯಾಹ್ನ 11:00ರ ವರೆಗೆ.

ಮೇಷ: ಇಂದು ಬರುವ ಕೋಪವನ್ನು ಕಡಿಮೆ ಮಾಡಿಕೊಳ್ಳಿ. ಮನಸ್ಸು ಶಾಂತವಾದ ಬಳಿಕ ನಿಮ್ಮ ಕಾರ್ಯಗಳನ್ನು ಆರಂಭಿಸಿ.‌ ಅನವಶ್ಯಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಪಮಾನವಾಗ ಅದಕ್ಕೆ ಉತ್ತರಿಸಲು ಹೋಗಿ ಇನ್ನೊಂದಿಷ್ಟು ಕೆಸರಿನ್ನು ಮೈಗೆ ಹಚ್ಚಿಕೊಳ್ಳುವ ಕೆಲಸವಾದೀತು. ಆರ್ಥಿಕ ಸಂಕಷ್ಟಕ್ಕೆ ಇಂದೇ ಯೋಜನೆಯನ್ನು ರೂಪಿಸಿ. ಆಸ್ತಿ ವ್ಯವಹಾರದಲ್ಲಿ ದಾಯಾದಿ ಕಲಹವಾಗಿ ಬಗೆ ಹರಿಯುವುದು. ಅನಿರೀಕ್ಷಿತ ಸುದ್ದಿಗೆ ಆತಂಕಪಡುವುದು ಬೇಡ.

ವೃಷಭ: ಇಂದು ಯಾರ ಜೊತೆಯಾದರೂ ವಾದವನ್ನು ಮಾಡಬೇಕು ಎಂದುಕೊಂಡಿರುತ್ತೀರಿ. ಉದ್ಯೋಗವನ್ನು ಬದಲಾಯಿಸುವ ಯೋಚನೆ ಇರಲಿದೆ. ಸ್ನೇಹಿತರ ಜೊತೆ ಸ್ನೇಹಕೂಟವನ್ನು ನಿಮ್ಮ ಮನೆಯಲ್ಲಿ ಏರ್ಪಡಿಸುವಿರಿ. ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದರೂ ಸುಮ್ಮನಿರುವಿರಿ. ಮನೆಯಲ್ಲಿ ಇದ್ದು ಎಲ್ಲರಿಗೂ ಸಹಾಯ ಮಾಡುವಿರಿ. ಕಷ್ಟವಾದರೂ ಇಂದು ಪ್ರಯಾಣವನ್ನು ಮಾಡಲೇ ಬೇಕಾಗಬಹುದು. ಎಲ್ಲರನ್ನೂ ಸಮಾಧಾನ ಮಾಡಲಾಗದು. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು.

ಮಿಥುನ: ಸ್ವಾಭಿಮಾನಿಯಾಗಿ ನೀವು ಅನೇಕ ಕಷ್ಟವನ್ನೂ ಹಸಿವನ್ನೂ ಅನುಭವಿಸುವಿರಿ. ಅನಾರೋಗ್ಯದಿಂದ ವೈದ್ಯರ ಭೇಟಿಯಾಗಲಿದ್ದೀರಿ. ಶತ್ರುಗಳ ಎದುರೇ ನೀವು ಮೇಲೆದ್ದು ಬರುವುದು ನಿಮಗೆ ಹೆಮ್ಮ ಎನಿಸಬಹುದು. ಯಂತ್ರಜ್ಙರಾದ ನಿಮಗೆ ಕೆಲಸವು ಹೆಚ್ಚಾಗಬಹುದು. ಹೆಂಡತಿಯ ಕಡೆಯಿಂದ ಏನಾದರೂಉ ಕಿರಿಕಿರಿ ಉಂಟಾಗಬಹುದು‌. ಕಛೇರಿಯಲ್ಲಿ ಸಮಾಧಾನ ತರುವ ವಿಚಾರಗಳು ಇರಬಹುದು. ಸಂಗಾತಿಯ ಜೊತೆ ಹರಟೆ ಹೊಡೆಯುತ್ತ ಕಾಲ ಕಳೆಯುವಿರಿ. ನಿಮ್ಮ ರಾಶಿಯಲ್ಲಿಯೇ ಕುಜನಿದ್ದಾನೆ. ಜ್ವರಾದಿಗಳು ಬರಬಹುದು. ಧನ್ವಂತರಿಯ ಸ್ತೋತ್ರ ಮಾಡಿ.

ಕರ್ಕ: ಇಷ್ಟು ದಿನ ಸ್ತಬ್ಧವಾಗಿದ್ದ ಕುಟುಂಬವು ಆಸ್ತಿಯ ವಿಚಾರದಿಂದ ಪ್ರಕ್ಷುಬ್ಧವಾಗಲಿದೆ. ಹೆಸರು ಗಳಿಸುವ ಮಹದಾಸೆ ನಿಮಗಿರಲಿದೆ. ಯಂತ್ರದಿಂದ ಅಥವಾ ವಾಹನದಿಂದ ನಷ್ಟವಾಗಬಹುದು. ಶತ್ರುಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಸರಿಮಾಡಿಕೊಳ್ಳುವುದು ಉತ್ತಮ. ಮಕ್ಕಳಿಂದ‌ ಸಂತೋಷವಾರ್ತೆ ಬರಲಿದೆ. ಮೇಲಧಿಕಾರಿಗಳ ಪ್ರಶಂಸೆಯಿಂದ ಕೆಲಸದಲ್ಲಿ ಆಸಕ್ತಿ ಬರಲಿದೆ. ಹಳೆಯ ರೋಗವು ಇಂದು ಮತ್ತೆ ಕಾಣಿಸಿಕೊಳ್ಳಬಹುದು. ಸರಿಯಾದ ಚಿಕಿತ್ಸೆಯ ಅಗತ್ಯವಿದೆ. ಮನಸ್ಸನ್ನು ಏಕಾಗ್ರಗೊಳಿಸುವತ್ತ ಗಮನಹರಿಸಿ.

ಸಿಂಹ: ಇಂದು ನಿಮಗೆ ಮನಸ್ಸು ಹಾಗು ದೇಹವು ವಿಶ್ರಾಂತಿಯನ್ನು ಬಯಸಲಿದೆ. ಓಡಾಟದ ಸುಸ್ತು ಅಧಿಕವಾಗಲಿದೆ. ಯಾರಮೇಲಾದರೂ ನಂಬಿಕೆಯನ್ನು ಇಡುವಾಗ ಮುನ್ನೆಚ್ಚರೊಕೆ ಇರಲಿ. ಪ್ರಣಯಪ್ರಸಂಗದಲ್ಲಿ ಅನಿರೀಕ್ಷಿತ ತಿರುವುಗಳು ಇರಬಹುದು. ದುಃಖವನ್ನೂ ಅನುಭವಿಸುವ ಸಂಗತಿಗಳು ಬರಬಹುದು. ಮನಸ್ಸನ್ನು ಸುಮ್ಮನೆ ಬಿಡದೇ ಅನ್ಯ ಕಾರ್ಯದಲ್ಲಿ ತೊಡಗಿಸಿ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ.

ಕನ್ಯಾ: ನೂತನ ಗೃಹನಿರ್ಮಾಣವನ್ನು ಮಾಡಲು ಹೋಗಿ ನಷ್ಟವನ್ನೇ ಅನುಭವಿಸುವಿರಿ. ಮೋಸ ಹೋಗುವ ಸಾಧ್ಯತೆ ಇದೆ.‌ ವ್ಯಾಪಾರದಲ್ಲಿ ಚೇತರಿಕೆಯನ್ನು ಇಂದು ಕಾಣಬಹುದಾಗಿದೆ. ಜನರೊಡನೆ ವ್ಯಾವಹಾರಿಕವಾದ ಬಾಂಧವ್ಯವು ಚೆನ್ನಾಗಿರಲಿದೆ. ಆತುರಪಟ್ಟು ಅವಗಢಕ್ಕೆ ಸಿಲುಕಬೇಡಿ. ಹಿರಿಯರ ಸೇವೆಯನ್ನು ಕೆಲಸವೆಂದು ಮಾಡದೇ ಕರ್ತವ್ಯವೆಂದು ಮಾಡಿ. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿದ್ದು ಅನುಭವಿಗಳಿಂದ ಸ್ಪಷ್ಟತೆಯನ್ನು ತಂದುಕೊಳ್ಳುವಿರಿ. ನಿಮ್ಮ ವಿರುದ್ಧ ವಂಚನೆಯ ಆರೋಪವು ಬರಬಹುದು.

ತುಲಾ: ಅನಿರೀಕ್ಷಿತವಾಗಿ ಹಣ ಬೇಕಾಗಿದ್ದು ಮಿತ್ರನಿಂದ ಹಣವನ್ನು ಪಡೆದು ಸದ್ಯದ ಸಂಕಟವನ್ನು ಸರಿಮಾಡಿಕೊಳ್ಳುವಿರಿ. ಇಲ್ಲವಾದರೆ ಅದಕ್ಕೆ ಅಧಿಕವಾದ ಹಣವು ವ್ಯಯವಾದೀತು. ಸಂಸ್ಥೆಯ ಕುರಿತು ನಿಮಗಿರುವ ಕಾಳಜಿಗೆ ಪ್ರಶಂಸೆಗಳು ಇರಲಿದೆ. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಶುಭವಾರ್ತೆಯು ಸಿಗಬಹುದು. ಅಪರಿಚಿತ ವ್ಯಕ್ತಿಯ ಜೊತೆ ಜಗಳವಾಡಿ ದ್ವೇಷ ಬರುವಂತೆ ಮಾಡಿಕೊಳ್ಳುವಿರಿ. ಮಾತಿನ ಮೇಲೆ ಹಿಡಿತವಿರಲಿ. ಏನನ್ನೋ ಮಾತನಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬೇಡಿ.

ವೃಶ್ಚಿಕ: ಇಂದು ನೀವು ಉದ್ಯೋಗವನ್ನು ಕಳೆದುಕೊಂಡು ಒದ್ದಾಡುವಿರಿ. ಈ ವಿಷಯಕ್ಕೆ ಮನೆಯಲ್ಲಿ ತಂದೆಯ ಜೊತೆ ಮಾತುಕತೆಗಳು ನಡೆಯಬಹುದು. ಸಂಗಾತಿಯಿಂದ ಅಪಮಾನವೂ ಆಗಬಹುದು. ಒತ್ತಡವಿರುವ ಸಂದರ್ಭದಲ್ಲಿ ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಲೆಂದು ಏನನ್ನಾದರೂ ಹೇಳಬಹುದು. ಅದಕ್ಕೆ ಉತ್ತರಿಸಲು ಹೋಗಿ ಇನ್ನಷ್ಟು ಅಪಮಾನವಾಗಲಿದೆ. ಸ್ವಾರ್ಥದಿಂದ ನೀವು ಬಹಳ ವಿಷಯವನ್ನು ಕಳೆಸುಕೊಳ್ಳುವಿರಿ. ಈ ಕಾರಣಕ್ಕೆ ನಿಮ್ಮ ಕೆಲಸಕ್ಕೆ ಸಹಾಯವೂ ಸಿಗದೆ ಹೋಗಬಹುದು.

ಧನುಸ್ಸು: ನಿಮಗೆ ಇಂದು ಪ್ರೇಮವಿವಾಹದಿಂದ ಆಗುವ ತೊಂದರೆಗಳ ಅರಿವಾಗಬಹುದು. ಅನಗತ್ಯ ತಿರುಗಾಟ, ಖರ್ಚುಗಳು ಜೀವನಕ್ಕೆ ದಿಕ್ಕು ಸಿಗಬಹುದು. ನಿಮ್ಮ ಉತ್ಸಾಹಕ್ಕೆ ಮನೆಯಲ್ಲಿ ಹಿನ್ನಡೆಯಾಗಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಡಬಹುದು. ಕಲಾವಿದರಿಗೆ ಪ್ರಶಂಸೆಗಳು ಸಿಕ್ಕಿ ಇನ್ನಷ್ಟು ಪ್ರಸಿದ್ಧಿಗೆ ಬರುವರು. ಭೂಮಿಯ ವ್ಯವಹಾರವು ಬಹಳ ಕಷ್ಟವೆನಿಸಿ ಬಿಡುವ ಸಾಧ್ಯತೆ ಇದೆ.

ಮಕರ: ಪ್ರಶಂಸೆಯನ್ನು ಇಷ್ಟಪಡುವ ನೀವು ಯಾರೂ ಪ್ರಶಂಸಿಸದಿದ್ದರೆ ಬೇಸರಿಸುವಿರಿ. ಊರಿನಲ್ಲಿ ನಿಮ್ಮ ಬಗ್ಗೆ ಅತ್ಯಂತ ಗೌರವವಿರಲಿದೆ. ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ನಿಮಗಿರಲಿದೆ. ನೀವಿಂದು ನೂತನ ಸಂಬಂಧವನ್ನು ಬೆಳೆಸುವ ಮನಸ್ಸಿರಲಿದೆ. ನಿಮ್ಮ ಆಲೋಚನೆಗೆ ವಿರುದ್ಧವಾದ ಅಭಿಪ್ರಾಯಗಳು ಬರಬಹುದು. ಉತ್ತಮವಾದ ಸಂಜೆಯನ್ನು ನೀವು ಸ್ನೇಹಿತರ ಜೊತೆ ಕಳೆಯುವಿರಿ. ವಾಹನಭೀತಿಯಿಂದ ನೀವು ಮನೆಯಲ್ಲಿ ಇರುವಿರಿ. ಅಮೂಲ್ಯವಸ್ತುವಿನ ಕಳ್ಳತನವಾಗಬಹುದು.

ಕುಂಭ: ಪಾಲುದಾರಿಕೆಯಲ್ಲಿ ಇಂದು ಸಣ್ಣ ಕ್ಲೇಶವು ಬರಬಹುದು. ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿ ಅಗೌರವವನ್ನು ತರಬಹುದು. ಹಣದ ಆಮಿಷಕ್ಕೆ ಬಲುಲಿಯಾಗದೇ ನಿಮ್ಮ ಕರ್ತವ್ಯವನ್ನು ಮಾಡುವುದು ಮುಖ್ಯವಾಗಿರಲಿ. ಪತ್ನಿಯ ಮನಃಸ್ಥಿತಿಯನ್ನು ಅರಿತು ಇಂದು ಅವರೊಡನೆ ವ್ಯವಹರಿಸುವುದು ಒಳ್ಳೆಯದು. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿದೆ ಎಂದು ನಿಮ್ಮನ್ನು ದ್ವೇಷಿಸುವವರು ಗುಲ್ಲೆಬ್ಬಿಸಬಹುದು. ಉದ್ಯೋಗಿಗಳು ಪರಿಶ್ರಮವನ್ನು ಬಿಟ್ಟು ಲಾಭ ಗಳಿಸಲು ಬೇರೆ ದಾರಿ ಇರದು. ಯಾರನ್ನೂ ಅನವಶ್ಯಕವಾಗಿ ಬದೂರಬೇಡಿ.

ಮೀನ: ನಿಮ್ಮ ಉದ್ಯೋಗವು ಅನ್ಯರ ಪಿತೂರಿಯಿಂದ ನಷ್ಟವಾಗಬಹುದು. ಧಾರ್ಮಿಕಶ್ರದ್ಧೆಯಿಂದ ನಿಮಗೆ ಅನುಕೂಲವಿದ್ದರೂ ಅದನ್ನು ಮಾಡಲು ನಿಮಗೆ ಶ್ರದ್ಧೆ, ಭಕ್ತಿಯ ಕೊರತೆ ಹೆಚ್ಚಿರಲಿದೆ‌. ಮೇಲಧಿಕಾರಿಗಳನ್ನು ಮೆಚ್ಚಿಸಲು ಹೋಗಿ ನಿಮ್ಮ ಸಮಯವನ್ನು ವ್ಯರ್ಥಮಡಿಕೊಳ್ಳುವಿರಿ. ಹಳೆಯದರ ನೆನಪಿನ ಜೊತೆ ದಿನವನ್ನು ಕಳೆಯಬೇಡಿ. ನಿಮ್ಮ ಮುಂದೆ ಬೇಕಾದಷ್ಟು ಕೆಲಸಗಳು ಇವೆ. ಅದರತ್ತ ಗಮನವಿರಲಿ. ನಿಮ್ಮ ಕೆಲಸಗಳನ್ನು ನೀವೇ ಹೊಗಳುತ್ತ ಅನ್ಯರ ಮೂದಲಿಕೆಗೆ ಸಿಕ್ಕುವಿರಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್