Horoscope: ರಾಶಿ ಭವಿಷ್ಯ; ಅಪರಿಚಿತರ ಬಗ್ಗೆ ಜಾಗರೂಕತೆ ಇರಲಿ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 13 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಅಪರಿಚಿತರ ಬಗ್ಗೆ ಜಾಗರೂಕತೆ ಇರಲಿ
ದಿನಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 13, 2024 | 12:33 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಸೌಭಾಗ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:27  ರಿಂದ 11:00ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ 03:39 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:21 ರಿಂದ 07:54ರ ವರೆಗೆ.

ಸಿಂಹ ರಾಶಿ : ಸಣ್ಣ ಮೊತ್ತವಾದರೂ ಅದನ್ನು ಉಳಿಸುವ ಬಗ್ಗೆ ಯೋಚಿಸುವಿರಿ‌. ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಸಂಗಾತಿಯ ಬಗ್ಗೆ ಪ್ರೀತಿಯನ್ನು ಅನುಭವಿಸುವಿರಿ. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಟುಂಬದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ. ಅದು ನಿಮಗೆ ಮುಳ್ಳಾಗಬಹುದು. ಎಲ್ಲದಕ್ಕೂ ಅತಿಯಾದ ತೊಂದರೆ ಇರುವಂತೆ ಅನ್ನಿಸಬಹುದು. ನಿಮ್ಮ ಅಂತರಂಗವನ್ನು ವ್ಯಕ್ತಪಡಿಸಲು ನಿಮಗೆ ಸೂಕ್ತ ಸಮಯವು ಲಭ್ಯವಾಗದೇ ಇರಬಹುದು. ಅಪರಿಚಿತರ ಬಗ್ಗೆ ಜಾಗರೂಕತೆ ಇರಲಿ. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯವಿರುವುದು.

ಕನ್ಯಾ ರಾಶಿ : ನೀವು ಮಾಡದ ಕಾರ್ಯಗಳಿಗೆ ನಿಮ್ಮ ಹಣೆಪಟ್ಟಿ ಬೀಳಬಹುದು. ಅದನ್ನು ಎದುರಿಸುವ ಚಾಕಚಕ್ಯತೆ ನಿಮ್ಮದಾಗಲಿದೆ. ನೀವೇ ಇಂದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪ್ರಣಯದ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸಬಹುದು. ಕೃಷಿಗೆ ಅನುಭವಿಗಳ ಬೆಂಬಲವು ಅನಿರೀಕ್ಷಿತವಾಗಿ ಸಿಗಬಹುದು. ನಿಮ್ಮದಾದ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕಾಗುವುದು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು. ನಿಮ್ಮ ಯೋಜನೆಯನ್ನು ಪ್ರಯೋಗಕ್ಕೆ ತರಲು ಪೂರ್ಣ ಯಶಸ್ಸನ್ನು ಪಡೆಯಲಾರಿರಿ. ಆಪ್ತರಿಂದ ನಿಮಗೆ ಏನಾದರೂ ಅಚ್ಚರಿಯ ಕೊಡುಗೆ ಸಿಗಲಿದೆ.

ತುಲಾ ರಾಶಿ : ಇಂದು ಧಾರ್ಮಿಕ ಕಾರ್ಯಗಳಿಗೆ ಸಮಯವನ್ನೂ ಬೇಕಾದ ವ್ಯವಸ್ಥೆಯನ್ನೂ ಮಾಡುವಿರಿ. ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಇಂದು ಏನಾದರೂ ಅಪ್ರಯೋಜನ ಎಂದನಿಸಿದ್ದನ್ನು ಮಾಡುವ ಮೊದಲು ಅದರ ಪರಿಣಾಮದ ಬಗ್ಗೆಯೂ ಆಲೋಚಿಸಿ. ಹಿರಿಯರ ಸಲಹೆಯನ್ನು ಪಡೆಯುವುದು ನಿಮಗೆ ಅಪಮಾನದಂತೆ ಕಂಡೀತು. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನೀವು ನಿರಾಸೆ ಅನುಭವಿಸುತ್ತೀರಿ. ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಪುಸ್ತಕಗಳ ಅಧ್ಯಯನ ಮಾಡಬೇಕು. ಉಗುರಿನಿಂದ ಆಗುವ ಕಾರ್ಯಕ್ಕೆ ಕೊಡಲಿ ಏಟು ತರುವುದು ಉಚಿತವಲ್ಲ. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ವೃದ್ಧರ, ಅಶಕ್ತರ ಸೇವೆಯಲ್ಲಿ ತೊಡಗಿಕೊಳ್ಳುವಿರಿ.

ವೃಶ್ಚಿಕ ರಾಶಿ : ಕಟ್ಟಿಕೊಟ್ಟ ಬುತ್ತಿ, ಹೇಳಿಕೊಟ್ಟ ಬುದ್ಧಿ ಎಲ್ಲಿಯವರೆಗೆ ಇದ್ದೀತು. ಸ್ವತಂತ್ರವಾಗಿರಲು ಇಚ್ಛಿಸುವಿರಿ. ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ಸಂಗಾಯನ್ನು ಹೊರಗೆ ಕರೆದುಕೊಂಡುಹೋಗುವ ಸನ್ನಿವೇಶ ಬರಬಹುದು. ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವ್ಯಾಪಾರಿಗಳಿಗೆ ಹಳೆಯ ಹೂಡಿಕೆಯ ಕಾರಣದಿಂದಾಗಿ ಇಂದು ನಷ್ಟವಾಗುವ ಸಾಧ್ಯತೆ ಇದೆ. ಹಿಂದೆ ಕೊಟ್ಟ ಸಾಲವು ಮರಳಿ ಬರುವ ನಿರೀಕ್ಷೆಯಲ್ಲಿ ಇರುವಿರಿ. ಸುಮ್ಮನೇ ವಾದ ಮಾಡುವ ಚಪಲವನ್ನು ಬಿಟ್ಟು ಸಹಜವಾಗಿ ಎಲ್ಲರ ಜೊತೆ ಮಾತನಾಡಿ. ದೈಹಕ ಕಾರ್ಯದಲ್ಲಿ ತೊಡಗಿದವರಿಗೆ ಹೆಚ್ಚು ಆದಾಯವು ಇರುವುದು. ಕಾರ್ಯಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು. ಎಲೆಕ್ಟ್ರಾನಿಕ್ ವಿಚಾರದಲ್ಲಿ ನೀವು ಚಾಣಾಕ್ಷರು.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ