Rashi Bhavishya: ಈ ರಾಶಿಯವರಿಗೆ ಶತ್ರುಗಳು ಪರೋಕ್ಷವಾಗಿ ಉಪದೇಶ ಕೊಡಬಹುದು
ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ 02) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 30 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:05ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ.
ಸಿಂಹ ರಾಶಿ : ಇಂದು ಆರೋಗ್ಯ ವಿಷಯಗಳಲ್ಲಿ ಅಪಾಯಗಳು ಮತ್ತು ಅಜಾಗರೂಕತೆಯಿಂದ ದೂರವಿರಬೇಕು. ವ್ಯವಹಾರದಲ್ಲಿ ನೀವು ಸ್ಪರ್ಧಿಗಳ ಬಗ್ಗೆ ತಿಳಿಯಿರಿ. ಹಣಕಾಸಿನ ವಿಷಯಗಳಲ್ಲಿ, ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಪ್ರೇಮ ಜೀವನದ ಸಂದರ್ಭದಲ್ಲಿ, ದಿನವು ಸಾಮಾನ್ಯವಾಗಿರುತ್ತದೆ. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ಬಹಳ ದಿನಗಳಿಂದ ಇದ್ದ ಅನಾಥ ಭಯವನ್ನು ನೀವು ದೂರಮಾಡಿಕೊಳ್ಳುವಿರಿ. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗುವುದು. ಯಾರಾದರೂ ಸಂಬಂಧದ ನಡುವೆ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು.
ಕನ್ಯಾ ರಾಶಿ : ಇಂದು ನಿಮ್ಮ ಪ್ರಭಾವವು ಇಂದು ಹೆಚ್ಚಾಗಬಹುದು ಎಂದು ಅಂದುಕೊಳ್ಳುವಿರಿ. ನಿಮ್ಮ ಜಮೀನು ಅಥವಾ ಅದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ಜಯ ಸಾಧಿಸಬಹುದು. ನಿಮಗೆ ಬಂಧುಗಳ ಬೆಂಬಲವು ಯೋಜಿತ ಕಾರ್ಯಕ್ಕೆ ಸಿಗಲಿದೆ. ಇಂದು ನೀವು ಹಣಕಾಸಿನ ವಿಷಯದಲ್ಲಿ ಲಾಭವನ್ನು ಪಡೆಯುತ್ತೀರಿ. ನಿಮ್ಮ ಇಂದಿನ ಗಳಿಕೆಯಿಂದ ಸಂತೋಷವಾಗುತ್ತದೆ. ನೀವು ತಾಳ್ಮೆಯಿಂದಿರಿ ಮತ್ತು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖವಾಗುವ ಸಂದರ್ಭವಿದೆ. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು. ಮಕ್ಕಳಿಗಾಗಿ ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಿರಿ.
ತುಲಾ ರಾಶಿ : ಇಂದು ನಿಮ್ಮ ಮನಸ್ಸಿಗೆ ಅನೇಕ ಸಕಾರ ಹಾಗೂ ನಕಾರಾತ್ಮಕವಾದ ಮಿಶ್ರ ಆಲೋಚನೆಗಳು ಬರಬಹುದು. ನಿಮ್ಮ ಕ್ರಿಯಾಶೀಲತೆಯಿಂದ ಪ್ರಶಂಸೆಯು ಸಿಗಲಿದೆ. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಹೆಚ್ಚು ಚಿಂತೆ ಮಾಡಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕೆಲವು ಯೋಜನೆಗಳನ್ನು ಸಹ ಮಾಡಬಹುದು. ಆರ್ಥಿಕ ಲಾಭಕ್ಕಾಗಿ ನೀವು ಅವಕಾಶಗಳನ್ನು ಪಡೆಯುವುದನ್ನು ಮುಂದುವರಿಸುವಿರಿ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ವಿನಾಕಾರಣ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ಬೇಡ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ. ನಿಮ್ಮ ಮನಸ್ತಾಪವನ್ನು ಕೋಪದ ಮೂಲಕ ಹೊರಹಾಕುವಿರಿ. ನಿಮ್ಮ ನಡವಳಿಕೆಯ ಬಗ್ಗೆ ಹಿರಿಯರು ಮಾತನಾಡಿಕೊಳ್ಳುವರು.
ವೃಶ್ಚಿಕ ರಾಶಿ : ಇಂದು ಆಹ್ಲಾದಕರ ವಾತಾವರಣವು ಇರಲಿದೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಗಮನವೂ ಬೇಕು. ದೇಹಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದು ನಿಮಗೆ ಸರಿಹೊಂದುವುದು. ಇಂದು ನೀವು ದಿನದ ಕೊನೆಯಲ್ಲಿ ಸುವಾರ್ತೆಯನ್ನು ನಿರೀಕ್ಷಿಸಬಹುದು. ಸಹೋದರರ ಬೆಂಬಲ ಸಿಗಲಿದೆ. ಇಂದು ನಿಮ್ಮ ಹವ್ಯಾಸವನ್ನು ಪೂರೈಸಲು ಸಮಯವನ್ನು ತೆಗೆದುಕೊಳ್ಳುವಿರಿ. ಹಳೆಯ ಸ್ನೇಹಿತ ನಿಮ್ಮನ್ನು ಭೇಟಿಯಾಗಬಹುದು. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ ಆಗುವ ಸಾಧ್ಯತೆ ಇದೆ. ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ಇಂದು ನೀವು ಒತ್ತಡವನ್ನು ತಂದುಕೊಳ್ಳಬಾರದು ಎಂದು ಅಂದುಕೊಂಡಿದ್ದರೂ ಅಂತಹ ಸಂದರ್ಭವು ಸೃಷ್ಟಿಯಾಗಬಹುದು.