AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿ ಭವಿಷ್ಯ; ಗೆಳೆತನದಿಂದ ದುಃಖವಾಗಬಹುದು-ಎಚ್ಚರ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 28 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಗೆಳೆತನದಿಂದ ದುಃಖವಾಗಬಹುದು-ಎಚ್ಚರ
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Apr 28, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶಿವ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:13 ರಿಂದ 06:48 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:05 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:13 ರ ವರೆಗೆ

ಸಿಂಹ ರಾಶಿ: ಇಂದು ಎಷ್ಟು ಪ್ರಯತ್ನ ಪಟ್ಟರೂ ಹೆಚ್ಚಿನ ಖರ್ಚನ್ನು ತಡೆಯುವುದಕ್ಕೆ ಆಗುವುದಿಲ್ಲ. ಯಾವುದೋ ನಿಶ್ಚಿತ ಮೂಲದಿಂದ ಹಣ ಬರುವ ಖಾತ್ರಿ ಸಿಕ್ಕು, ಹೆಚ್ಚಿನ ಖರ್ಚು ಮಾಡಲು ಮುಂದಾಗುತ್ತೀರಿ. ಎಲ್ಲವನ್ನೂ ನಿಮ್ಮ ನೇರಕ್ಕೇ ಆಗಬೇಕು ಎನ್ನುವುದು ಆಗದು. ಬಂಧುಗಳು, ಸ್ನೇಹಿತರು ನಿಮ್ಮ ಸಮಯಪ್ರಜ್ಞೆಯನ್ನು ಮೆಚ್ಚುತ್ತಾರೆ. ಕಣ್ಣು ನೋವು ನಿಮ್ಮನ್ನು ಕಾಡಬಹುದು. ಕೆಲವನ್ನು ಅನುಭವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಸಮಯಕ್ಕಾಗಿ ನೀವು ಕಾಯುವುದು ಅನಿವಾರ್ಯವಾದೀತು. ಸ್ವಯಂಕೃತ ಅಪರಾಧದಿಂದ ನಿಮಗೆ ಕಿಂಚಿತ್ತೂ ಬೇಸರವಾಗದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ನೀವು ತೊಡಗಿರಿ. ನಿಮ್ಮ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಿಸಲಾರಿರಿ. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಇಂದಿನ ಆರ್ಥಿಕತೆಯಿಂದ ನಿಮಗೆ ತೃಪ್ತಿ.

ಕನ್ಯಾ ರಾಶಿ: ನಿಮ್ಮ ಆಸೆಗಳಿಗೆ ಪೂರಕವಾದ ಸನ್ನಿವೇಶಗಳನ್ನು ತಾನಾಗಿಯೇ ಬರುವುದು. ಯಾವುದೋ ಆತಂಕ ಇಡೀ ದಿನ ನಿಮ್ಮನ್ನು ಕಾಡಲಿದೆ. ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಯಾರ ಜತೆಗೂ ವಾಗ್ವಾದ ನಡೆಸದಿರಿ. ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ವಿದ್ಯುತ್ ಉಪಕರಣವನ್ನು ಹೆಚ್ಚು ಬಳಸುವಿರಿ. ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ನಿಮ್ಮ ವರ್ತನೆಗಳ ಬಗ್ಗೆ ಆಕ್ಷೇಪ ಬರಬಹುದು. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮಕ್ಕಳ‌ ವಿಚಾರದಲ್ಲಿ ದುಂದು ವೆಚ್ಚ ಮಾಡಬೇಕಾದೀತು. ಕಲಾವಿದರಿಗೆ ಹೊಸ ಅವಕಾಶಗಳು ತೆರೆಯುವುದು. ನಿಮ್ಮ ಉಡುಗೊರೆಯಿಂದ ಸಂತೋಷವಾಗಲಿದೆ.

ತುಲಾ ರಾಶಿ: ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವ ದೊರೆಯಲಿದೆ. ಹಣಕಾಸಿನ ಸಂಗತಿಗಳನ್ನು ಸಂಗಾತಿ ಜತೆಗೆ ಚರ್ಚಿಸಿ, ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಅನಿವಾರ್ಯ ಸಂದರ್ಭದಲ್ಲೂ ಸುಳ್ಳು ಹೇಳಬೇಡಿ. ಏಕೆಂದರೆ, ಸಿಕ್ಕುಬಿದ್ದು ಅವಮಾನದ ಪಾಲಾಗುತ್ತೀರಿ. ಆಲಸ್ಯದಿಂದ ಹೊರಬರುವ ಮನಸ್ಸಾಹುವುದು. ಎರಡು ಮನಸ್ಸನ್ನು ಮಾಡಿಕೊಂಡು ಮುಂದುವರಿಯುವುದು ಬೇಡ. ಆಯ್ಕೆಗಳನ್ನು ಆರಿಸಲಾಗದು. ಭಾವನಾತ್ಮಕ ಚಿಂತನೆಗಳು ನಿಮ್ಮ ಮೇಲೆ‌ ಸಕಾರಾತ್ಮಕ ಪರಿಣಾಮವನ್ನು ನೀಡಬಹುದು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಆಕ್ಷೇಪಗಳು ಎಲ್ಲವು ಮುರಿದು ಬೀಳಬಹುದು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಎಲ್ಲವನ್ನೂ ಸಮರಸದಿಂದ ಮಾಡುವಿರಿ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಗೆಳೆತನದಿಂದ ದುಃಖವಾಗಬಹುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಸಂಬಂಧಪಟ್ಟರ ಜೊತೆ ಮಾತನಾಡುವಿರಿ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಒಂದು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ. ನಿರೀಕ್ಷೆ ಮಾಡಿದಂತೆ ಆದಾಯ ಬರುವುದಿಲ್ಲ. ಇತರರ ಮೇಲೆ ದೋಷಾರೋಪ ಮಾಡಬೇಡಿ. ಹಿರಿಯರ ಮಾತುಗಳು ನಿಮ್ಮನ್ನು ಕಾಡಬಹುದು. ನಿಮ್ಮ ಯೋಜನೆಯು ಒಂದು ಎತ್ತರಕ್ಕೆ ಏರಿರುವುದು ಆತ್ಮಸಂತೋಷವಾಗಲಿದೆ. ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಮಕ್ಕಳನ್ನು ನೋಡಬೇಕೆನಿಸುವುದು. ಎಲ್ಲವನ್ನೂ ನೀವು ನಿಶ್ಚಯ ಮಾಡಿಕೊಳ್ಳಲು ಆಗದು. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು.