Weekly Horoscope: ವಾರ ಭವಿಷ್ಯ: ನ.26 ರಿಂದ ಡಿ.02 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2023 | 12:01 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ನವೆಂಬರ್ 26 ರಿಂದ​ ಡಿಸೆಂಬರ್​ 02 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ವಾರ ಭವಿಷ್ಯ: ನ.26 ರಿಂದ ಡಿ.02 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ವಾರ ಭವಿಷ್ಯ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ನವೆಂಬರ್ 26 ರಿಂದ​ ಡಿಸೆಂಬರ್​.02 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : ಇದು ಈ ತಿಂಗಳ ಕೊನೆಯ ವಾರವಾದಿದ್ದು ಮಿಶ್ರ ಫಲಗಳನ್ನು ನಿರೀಕ್ಷಿಸಬಹುದು. ಶುಕ್ರನು ಷಷ್ಠದಿಂದ ಸಪ್ತಮಕ್ಕೆ ಬರಲಿದ್ದು ಪತ್ನಿಯ ವಿಚಾರದಲ್ಲಿ ಸಕಾರಾತ್ಮಕ ನಿಲುವು, ಪ್ರೀತಿ ಎಲ್ಲವೂ ಅಧಿಕವಾಗಲಿದೆ. ಬುಧನು ನವಮಕ್ಕೆ ಹೋಗಲಿದ್ದು ವಿದ್ವಾಂಸರ ಭೇಟಿ, ಅವರಿಂದ ಉಪದೇಶಗಳು ಸಿಗಲಿವೆ. ಆರ್ಥಿಕ ಪರಿಸ್ಥಿತಿ ಮಧ್ಯಮವಾಗಿರುತ್ತದೆ. ಈ ವಾರವು ಆತ್ಮವಿಶ್ವಾಸ ಹೆಚ್ಚಿರಲಿದೆ. ಕಾರ್ಯದಲ್ಲಿ ಅತಿಯಾದ ಉತ್ಸಾಹವೂ ಬೇಡ. ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ಕೆಲವು ಸಂದರ್ಭದಲ್ಲಿ ನಡೆಯಬಹುದು. ಈ ವಾರ ಯಾವುದೇ ರೀತಿಯ ಆರ್ಥಿಕಯಿಂದ ಆಗುವ ಅಪಾಯವನ್ನು ಸ್ವೀಕರಿಸಬೇಡಿ. ಮೃದು ಮಾತಿನಿಂದ ಕಾರ್ಯವನ್ನು ವಶಮಾಡಿಕೊಳ್ಳುವಿರಿ. ಕುಟುಂಬದಲ್ಲಿನ ಕಿರಿಕಿರಿ ಮಾನಸಿಕ ತೊಂದರೆಗೆ ಕಾರಣವಾಗಬಹುದು.

ವೃಷಭ ರಾಶಿ : ಈ ವಾರವು ನವೆಂಬರ್ ತಿಂಗಳ ಕೊನೆಯ ವಾರವಾಗಿದೆ. ಮಧ್ಯಮ ಫಲವಿರುವ ವಾರವು ಇದು. ಪಂಚಮದಿಂದ ಷಷ್ಠಕ್ಕೆ ಬರಲಿದ್ದು ಸಂಗಾತಿಯ ವಿಚಾರದಲ್ಲಿ ಅಸಮಾಧಾನ ಇರಬಹುದು. ಬುಧನು ಅಷ್ಟಮಸ್ಥಾನಕ್ಕೆ ಬರುವ ಕಾರಣ ಅಗೌರವ, ಅನಾರೋಗ್ಯ, ದೇಹದಲ್ಲಿ ನಾನಾ ಬಾಧೆಗಳು ಕಾಣಿಸಿಕೊಳ್ಳುವುದು. ವೃತ್ತಿಯಲ್ಲಿ ಮಾಡುವ ಪ್ರಯತ್ನಗಳು ಪೂರ್ಣ ಯಶಸ್ಸನ್ನು ಪಡೆದುಕೊಳ್ಳದೇ ಹೋದೀತು. ಭೋಗವಸ್ತುವಿನ ಮೇಲೆ ಅತಿಯಾದ ಮೋಹವು ಉಂಟಾದೀತು. ವೃತ್ತಿಜೀವನದಲ್ಲಿ ಪ್ರಭಾವ ಹೆಚ್ಚಾಗುತ್ತದೆ. ಗಳಿಕೆ ಹೆಚ್ಚಾಗಿದ್ದು ಸಂತೋಷವಾಗುವುದು. ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ, ಕುಟುಂಬದಲ್ಲಿ ಸಂತೋಷವು ಇರುವುದು. ನಿಮ್ಮ ಕಠಿಣ ಪರಿಶ್ರಮವು ಫಲವನ್ನು ನೀಡುತ್ತದೆ. ನಿಮ್ಮ ಸೂಕ್ತ ನಿರ್ಧಾರವು ನಿಮಗೆ ಗೌರವವನ್ನು ತಂದುಕೊಟ್ಟೀತು. ಮಕ್ಕಳ ಅಜಾಗರೂಕತೆಯಿಂದ ಒತ್ತಡ ಹೆಚ್ಚಾಗುವುದು.

ಮಿಥುನ ರಾಶಿ : ಈ ತಿಂಗಳ ಗ್ರಹಗತಿಗಳ ಚಲನೆಯು ಅನೇಕ ಶುಭವನ್ನು ಪಡೆದುಕೊಳ್ಳುವಿರಿ. ಪಂಚಮಕ್ಕೆ ಶುಕ್ರನ ಪ್ರವೇಶವಾಗಿದ್ದು ಮಕ್ಕಳಿಂದ ಶುಭಸಮಾಚಾರವನ್ನು ಪಡೆದುಕೊಳ್ಳುವಿರಿ. ಬುಧನು ಸಪ್ತಮಕ್ಕೆ ಬರಲಿದ್ದು ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯವು ದೂರವಾಗಲಿದೆ. ಮನಸ್ಸೂ ಒಂದು ಸ್ತಿಮಿತಕ್ಕೆ ಬರಲಿದೆ. ರಾಜಕೀಯದಲ್ಲಿ ನಿಮ್ಮ ಪ್ರಭಾವದಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಭಾವುಕರಾಗದೇ ನಿಮ್ಮ ಕರ್ತವ್ಯದ ಕಡೆ ಗಮನಕೊಡಿ. ಯಾವುದಾದರೂ ದೊಡ್ಡ ಲಾಭವು ರೂಪುಗೊಳ್ಳುತ್ತದೆ. ಹೊಸ ಮನೆಯ ಸಾಧ್ಯತೆಗಳು ಬಲಗೊಳ್ಳುತ್ತವೆ. ಬಹುನಿರೀಕ್ಷಿತ ಕೆಲಸದ ಯೋಗದಿಂದ ಯಶಸ್ಸು ಸಿಗಲಿದೆ. ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮಿತ್ರರ ಬೆಂಬಲವು ಸಿಗಲಿದೆ. ಮಾತಿನಲ್ಲಿ ಕಠೋರತೆ ಬೇಡ, ವಿವೇಚನೆಯನ್ನು ಬಳಸಿ.

ಕಟಕ ರಾಶಿ: ನವೆಂಬರ್ ತಿಂಗಳ ಕೊನೆಯ ವಾರವು ಇದಾಗಿದ್ದು, ಗ್ರಹಗಳ ಬದಲಾವಣೆಯು ನಿಮ್ಮ ಮೇಲೆ ಮಿಶ್ರಪರಿಣಾಮವನ್ನು ನೀಡುವುವು. ಚತುರ್ಥದಲ್ಲಿ ಶುಕ್ರನ ಆಗಮನವಾಗಲಿದ್ದು ಕುಟುಂಬದಲ್ಲಿ ಸ್ವಲ ನೆಮ್ಮದಿಯು ಇರಲಿದೆ. ಷಷ್ಠದಲ್ಲಿ ಬುಧನು ಇರಲಿದ್ದು ವಿದ್ಯೆ ಸಂಬಂಧಪಟ್ಟ ಅವಮಾನವನ್ನು ಎದುರಿಸಬೇಕಾದೀತು. ಅನೇಕ ಉತ್ತಮ ಅವಕಾಶಗಳು ಕಳೆದುಹೋಗುತ್ತವೆ. ಕುಟುಂಬ ಮಹತ್ವವನ್ನು ಅರ್ಥಮಾಡಿಕೊಂಡು ಅವರೊಂದಿಗೆ ಸಂತೋಷದಿಂದ ಇರಿ. ಪೋಷಕರಿಗೆ ನಿಮ್ಮ ಬಗ್ಗೆ ಚಿಂತೆಯುಂಟುಮಾಡಬಹುದು. ಅಲ್ಪಾವಧಿಯ ಹೂಡಿಕೆ ಲಾಭದಾಯಕವಾಗುತ್ತದೆ. ತಪ್ಪು ಲೆಕ್ಕಾಚಾರದಿಂದ ನಷ್ಟವಾಗುವ ವ್ಯಾಪಾರದಲ್ಲಿ ನಷ್ಟವಾಗಲಿದೆ. ಅಹಂಕಾರದಿಂದ ನಿಮ್ಮನ್ನು ನೀವು ದೂರವಿಟ್ಟುಕೊಳ್ಳಿ.

ಸಿಂಹ ರಾಶಿ: ಈ ವಾರದಲ್ಲಿ ಗ್ರಹಗಳಲ್ಲಿ ಕೆಲವು ಬದಲಾವಣೆಗಳು ಆಗಲಿದ್ದು ನೀಚಸ್ಥಾನದಲ್ಲಿರುವ ಶುಕ್ರನು ತೃತೀಯಕ್ಕೆ ಹೋಗುವನು. ಸಹೋದರ ಅಥವಾ ಸಹೋದರಿಯ ನಡುವಿನ ಭಿನ್ನಾಭಿಪ್ರಾಯವು ದೂರವಾಗಲಿದೆ. ಪಂಚಮದಲ್ಲಿ ಬುಧನ ಆಗಮನವಾಗಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಿದೆ. ಈ ವಾರವು ಉತ್ಸಾಹ, ನೆಮ್ಮದಿಯಿಂದ ಇರಲಿದೆ. ಅತಿಯಾದ ಆಲೋಚನೆಯಿಂದ ಆರೋಗ್ಯವು ಕೆಡಬಹುದು. ಸಹೋದರನ ಸಮಸ್ಯೆಯನ್ನು ನೀವೇ ಬಗೆಹರಿಸುವಿರಿ. ಹೊಸ ಆದಾಯದ ಮೂಲಗಳು ಕಂಡುಬರುವುದು. ರಾಜಕಾರಣಿಗಳಿಗೆ ಸಮಯ ಒಳ್ಳೆಯದು. ದುರಾಸೆಯಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಮೋಸ ಹೋಗುವ ಸಾಧ್ಯತೆ ಇದೆ. ವಿರುದ್ಧ ಲಿಂಗಿಗಳ ಜೊತೆ ಸಮಸ್ಯೆಯಾದೀತು. ಆಧ್ಯಾತ್ಮಿಕ ವ್ಯಕ್ತಿಯ ಆಶೀರ್ವಾದದಿಂದ ಶುಭವಾಗುವುದು.

ಕನ್ಯಾ ರಾಶಿ : ಈ ತಿಂಗಳ ಕೊನೆಯ ವಾರವು ಇದಾಗಿದ್ದು, ದ್ವಿತೀಯದಲ್ಲಿ ಶುಕ್ರನಿದ್ದು ಬರುವ ಸಂಪತ್ತು ನಿಮ್ಮ ಕೈ ಸೇರಲಿದೆ. ಚತುರ್ಥದಲ್ಲಿ ಬುಧ ಗಮನವಾಗಿದ್ದು ತಾಯಿಯ ಬಗ್ಗೆ ಗೌರವವು ಸಿಗಲಿದೆ. ಗೌರವವು ನಿಮಗೆ ಸಿಗದೇ ಕೋಪವು ಬರುವುದು. ವಿವೇಕದಿಂದ ಮಾಡಿದ ಕೆಲಸದ ಬಗ್ಗೆ ನಿಮಗೆ ಮೆಚ್ಚುಗೆ ಸಿಗುವುದು. ಹೊಸ ಉದ್ಯಮಗಳು ಅಭಿವೃದ್ಧಿಯತ್ತ ಸಾಗುವುದು. ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ. ಪ್ರಮುಖ ಜನರ ಜೊತೆ ಸಂಬಂಧಗಳು ರೂಪುಗೊಳ್ಳುತ್ತವೆ. ಸ್ವಲ್ಪ ಪ್ರಯತ್ನದಿಂದ ನೀವು ದೊಡ್ಡ ಲಾಭವನ್ನು ಪಡೆಯಲು ಸಾಧ್ಯವಾಗದು. ಮಕ್ಕಳಿಗೆ ಸಂಬಂಧಿಸಿದ ವಾರ್ತೆಯು ಸಂತೋಷವನ್ನು ಕೊಡುವುದು.

ತುಲಾ ರಾಶಿ : ಈ ವಾರವು ಗ್ರಹಗತಿಗಳ ಬದಲಾವಣೆಯಾಗಲಿದ್ದು ತೃತೀಯದಲ್ಲಿ ಬುಧನು ಇರಲಿದ್ದು ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅನುಕೂಲಕರವಾಗಿ ಇರಲಿದೆ. ನಿಮ್ಮ ಮನೆಯಲ್ಲಿ ಶುಕ್ರನು ಇರಲಿದ್ದು ದೇಹಾರೋಗ್ಯವು ಚೆನ್ನಾಗಿ ಇರುವುದು, ಸಂಗಾತಿಯಿಂದ ಪ್ರೀತಿಯನ್ನು ಪಡೆಯುವಿರಿ. ಅನೇಕ ಉತ್ತಮ ಅವಕಾಶಗಳಿಂದ ನೆಮ್ಮದಿ ಇರಲಿದೆ. ನೌಕರರ ನಡವಳಿಕೆಯಿಂದ ಸಂದೇಹವು ಬರಬಹುದು. ನೆರೆಯವರ ವರ್ತನೆಯಿಂದ ದುಃಖವಾದೀತು. ಪ್ರೇಮ ಸಂಬಂಧಗಳಲ್ಲಿ ಗೊಂದಲವಾಗುವ ಸಾಧ್ಯತೆ ಇದೆ. ಮೇಲಧಿಕಾರಿಗಳಿಂದ ಬೆಂಬಲವು ಸಿಗುವುದು. ವ್ಯಾಪಾರವು ಲಾಭದತ್ತ ಸಾಗುವುದು. ಅರ್ಥವಿಲ್ಲದ ಚರ್ಚೆಯನ್ನು ಮಾಡಿ ಸಮಯವನ್ನು ಹಾಳುಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ: ಈ ವಾರದಲ್ಲಿ ಕೆಲವು ಗ್ರಹಗತಿಗಳ ಬದಲಾವಣೆ ನಿಮ್ಮ ಜೀವನದಲ್ಲಿ ಮಿಶ್ರಫಲವನ್ನು ಕೊಡಲಿವೆ. ಶುಕ್ರನು ದ್ವಾದಶದಲ್ಲಿದ್ದು ನಿಮಗೆ ಕೆಲವು ಅನಗತ್ಯ ವಸ್ತುಗಳನ್ನು ಖರೀದಿಸಲು ಪ್ರೇರಿಸುವನು. ದ್ವಿತೀಯದಲ್ಲಿ ಬುಧನಿದ್ದು ನೀವು ಮಾತಿನಿಂದ ಹಣವನ್ನು ಸಂಪಾದಿಸುವಿರಿ ಅಥವಾ ನಿಮ್ಮ ಮಾತಿಗೆ ಬೇಕಾದ ಸಂಪತ್ತು ಸಿಗಬಹುದು. ನಿಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕಾಗುವುದು. ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿಯು ನಿಮ್ಮ ಎಲ್ಲ ನೋವನ್ನೂ ಮರೆಸುವುದು. ಆದಾಯವು ಸಾಮಾನ್ಯವಾಗಿಯೇ ಇರುವುದು. ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶಗಳು ಸಿಗುವುದು. ಮಕ್ಕಳ ವಿಚಾರದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಶತ್ರುಗಳ ಬಾಧೆ ಅಧಿಕವಾಗಿ ಕಾಡುವುದು.

ಧನು ರಾಶಿ : ನವೆಂಬರ್ ತಿಂಗಳ ಈ ವಾರ ನಿಮಗೆ ಕೆಲವು ಬದಲಾವಣೆಯು ಇರಲಿದೆ. ಬುಧನು ನಿಮ್ಮ ಮನೆಯಲ್ಲಿಯೇ ಇರುವುದುರಿಂದ ಆರೋಗ್ಯದಲ್ಲಿ, ಮಾನಸಿಕ ನೆಮ್ಮದಿಯು ಇರಲಿದೆ. ಶುಕ್ರನು ಏಕಾದಶದಲ್ಲಿರುವ ಕಾರಣ ಭೋಗವಸ್ತುವಿನ ಲಾಭವಾಗಲಿದೆ. ಸೂರ್ಯ ಹಾಗೂ ಕುಜರು ದ್ವಾದಶದಲ್ಲಿದ್ದ ಕಾರಣ ವಾಹನದಿಂದ ನಷ್ಟವಾಗಬಹುದು. ಸಾಮಾಜಿಕ ಗೌರವದ ಅಪೇಕ್ಷೆಯು ಅಧಿಕವಾಗಿ ಇರಲಿದೆ. ಬೌದ್ಧಿಕ ಕಸರತ್ತನ್ನು ಹೆಚ್ಚು ಮಾಡುವಿರಿ. ಹೊಸ ನಿರೀಕ್ಷೆಗಳು ಸಂತೋಷವನ್ನು ತರುತ್ತವೆ. ಎದುರಾಳಿಗಳನ್ನು ಸೋಲಿಸುವ ತಂತ್ರವನ್ನು ಯೋಚಿಸುವಿರಿ. ವಿರುದ್ಧ ಲಿಂಗದಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ಯಾರ ಮೇಲೂ ಅಧಿಕವಾದ ನಂಬಿಕೆ ಬಾರದು.

ಮಕರ ರಾಶಿ : ನವೆಂಬರ್ ತಿಂಗಳ ಈ ವಾರ ಗ್ರಹಗತಿಗಳ ಬದಲಾವಣೆಯಾಗಲಿದ್ದು ಮಿಶ್ರಫಲವು ಇರಲಿದೆ. ಬುಧನು ದ್ವಾದಶಕ್ಕೆ ಬರಲಿದ್ದು ಬಂಧುಗಳಿಗಾಗಿ ಧನಸಹಾಯವನ್ನು ಮಾಡಬೇಕಾದೀತು. ಶುಕ್ರನು ದಶಮಕ್ಕೆ ಬರಲಿದ್ದು ಇಷ್ಟು ದಿನ ಇದ್ದ ವೃತ್ತಿಯ ತೊಂದರೆಗಳು ದೂರವಾಗುವುದು. ಉತ್ತಮ ಉದ್ಯೋಗವು ಪ್ರಾಪ್ತವಾಗಲಿದೆ. ಸಿಕ್ಕವರಿಗೆ ಉನ್ನತ ಸ್ಥಾನ ಸಿಗುವುದು. ವೆಚ್ಚವನ್ನು ನಿಯಂತ್ರಿಸಲಾಗುವುದು ಮತ್ತು ಆರ್ಥಿಕ ಲಾಭ ಇರುತ್ತದೆ. ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿ ಉಳಿಯುತ್ತವೆ. ಯಾವುದೇ ತಪ್ಪು ಲಾಭದ ಬದಲು ನಷ್ಟಕ್ಕೆ ಕಾರಣವಾಗುತ್ತದೆ. ಕ್ಷೇತ್ರದಲ್ಲಿ ಉನ್ನತ ಅಧಿಕಾರಿಗಳ ಸಹಕಾರವಿರುತ್ತದೆ. ದೈಹಿಕ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ಮೃದು ಸ್ವಭಾವವು ಗೌರವವನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕತೆ, ಧ್ಯಾನ ಮತ್ತು ಯೋಗವು ಆಂತರಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕುಂಭ ರಾಶಿ : ಈ ವಾರವು ಗ್ರಹಗತಿಗಳ ಬದಲಾವಣೆಯಿಂದ ನವಮದಲ್ಲಿ ಶುಕ್ರನು ಬರಲಿದ್ದು ಗೌರವಾದರಗಳು ಇರಲಿದೆ. ನಿಮ್ಮ ಕೆಲಸಗಳಿಗೆ ಅನುಕೂಲತೆಗಳು ಸಿಗಲಿವೆ. ದ್ವಾದಶದಲ್ಲಿ ಬುಧನು ಇರಲಿದ್ದು ಶಿಕ್ಷಣಕ್ಷೇತ್ರದವರಿಗೆ ಸ್ಥಾನ, ಮಾನ ಸಿಗಲಿದೆ. ದೇಹಾಲಸ್ಯವು ಅಧಿಕವಾಗಲಿದೆ. ನಿಮಗೆ ಪರಿಚಯವಿರುವವರಿಂದ ಪ್ರಯೋಜನ ಪಡೆಯುವಿರಿ. ನಿಮ್ಮ ಶತ್ರುಗಳು ಪರೋಕ್ಷವಾಗಿ ಪ್ರಯೋಜನ ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಅಧಿಕಾರಿಗಳಿಂದ ಸಹಾಯ ಇರುತ್ತದೆ. ವ್ಯವಹಾರದಲ್ಲಿ ಲಾಭ ಗಳಿಸಲಾಗುತ್ತಿದೆ. ಈ ಸಮಯವು ಪ್ರೀತಿಗೆ ಒಳ್ಳೆಯದು ಯಾರಿಗೂ ಅಗೌರವ ತೋರುವುದು ಬೇಡ. ಸಹೋದ್ಯೋಗಿಗಳ ಸ್ವಭಾವದದಿಂದಾಗಿ, ಕೆಲಸದ ಒತ್ತಡದಿಂದಾಗಿ ಕೋಪ ಉಂಟಾಗುವುದು. ತಪ್ಪು ನಿರ್ಧಾರಗಳು ತೊಂದರೆ ಉಂಟುಮಾಡುತ್ತವೆ.

ಮೀನ ರಾಶಿ : ಇದು ತಿಂಗಳ ಕೊನೆಯ ವಾರವು ಇದಾಗಿದ್ದು ಗ್ರಹಗತಿಗಳ ಬದಲಾವಣೆಯಿಂದ ನಿಮಗೆ ಶುಭಾಶುಭ ಫಲವು ಇರಲಿದೆ. ಅಷ್ಟಮದಲ್ಲಿ ಶುಕ್ರನಿರುವ ಕಾರಣ ಸ್ತ್ರೀಯರಿಂದ ತೊಂದರೆಗಳು, ಅಪಮಾನವು ಆಗಲಿದೆ. ಬುಧನು ದಶಮದಲ್ಲಿ ಇರುವ ಕಾರಣ ನೂತನ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗದು. ಈ ವಾರ ವೃತ್ತಿಜೀವನವು ಪ್ರಯೋಜನ ಪಡೆಯುತ್ತದೆ ಮತ್ತು ವ್ಯವಹಾರದ ವಿಸ್ತರಣೆ ಸಾಧ್ಯವಾಗುವುದು. ಕ್ಷೇತ್ರದಲ್ಲಿ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗುತ್ತದೆ. ಯಾವುದೇ ರೀತಿಯ ಚರ್ಚೆಯನ್ನು ತಪ್ಪಿಸಿ. ಹತ್ತಿರದವರ ಜೊತೆ ಭಿನ್ನಾಭಿಪ್ರಾಯವಿರುವುದು. ಈ ವಾರ ಮಾನಸಿಕ ಶಾಂತಿಯು ಕಡಿಮೆಯಾಗಬಹುದು. ಜೀವನ ಸಂಗಾತಿಯ ಬೆಂಬಲವು ಸಿಗದೇಹೋಗಬಹುದು. ಸಹೋದರನ ಸ್ವಭಾವವು ನಿಮಗೆ ಇಷ್ಟವಾಗದೇ ಹೋಗಬಹುದು.

-ಲೋಹಿತಶರ್ಮಾ – 8762924271 (what’s app only)