
ಬೆಂಗಳೂರು, ಅಕ್ಟೋಬರ್ 27: 2025ರ ನವೆಂಬರ್ ತಿಂಗಳಲ್ಲಿ (November Monthly Horoscope) ಗ್ರಹಗಳ ಬದಲಾವಣೆಯಾಗಲಿದೆ. ಮಂಗಳನು ಸ್ವಕ್ಷೇತ್ರ ಜಾಗೂ ಸೂರ್ಯ ಹಾಗೂ ಶುಕ್ರರು ಮಿತ್ರ ಸಮಕ್ಷೇತ್ರದಲ್ಲಿ ಇದ್ದು ಅಶುಭವನ್ನು ಕಡಿಮೆ ಮಾಡುವುದರ ಜೊತೆಗೆ ಗುರುವು ತನ್ನನ್ನು ಉಚ್ಚ ಸ್ಥಾನಕ್ಕೆ ಬಂದಿದ್ದು ಪೂರ್ವಕೃತ ದೋಷಗಳು ನಾಶವಾಗಲಿವೆ ಅಥವಾ ದೋಷನಾಶಕ್ಕೆ ದಾರಿಯೂ ಸಿಗಲಿದೆ. ಹಾಗಾಗಿ ಈ ತಿಂಗಳು ಎಲ್ಲ ಪಾಲಿಗೆ ಶುಭವೇ ಆಗಿದ್ದು, ಇನ್ನಷ್ಟು ಶುಭಫಲವನ್ನು ಎಲ್ಲ ಗ್ರಹರೂ ನೀಡಲಿ.
ಮೇಷ ರಾಶಿ: ನವೆಂಬರ್ ತಿಂಗಳಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ಸ್ವಸ್ಥಾನವಾದ ವೃಶ್ಚಿಕದಲ್ಲಿದ್ದಾನೆ. ಪತ್ನಿ ಅಥವಾ ಸ್ತ್ರೀಯರು ನಿಮ್ಮನ್ನು ಒಪ್ಪಿಕೊಳ್ಳದೇ ತಿರಸ್ಕರಿಸುವರು. ಮಕ್ಕಳ ವಿಚಾರಕ್ಕೆ ನಿಮಗೆ ಸಮಾಧಾನ ಸಿಗದು. ಬುಧನ ದೃಷ್ಟಿ ಈ ರಾಶಿಗೆ ಇದ್ದು ಬರವಣಿಗೆ ಪ್ರೋತ್ಸಾಹ ಸಿಗುವುದು. ಇದೇ ಸಂಪಾದನೆಯ ಮೂಲವೂ ಆಗಲಿದೆ. ಅಪೇಕ್ಷೆ ಇಲ್ಲದೇ ಇದ್ದರೂ ನಿಮ್ಮನ್ನು ಸಮ್ಮಾನಿಸುವರು. ವ್ಯಾಪಾರ ವಹಿವಾಟುಗಳಿಗೆ ಬಂಧುಗಳಿಂದ ಸಹಕಾರ ಸಿಗಲಿದೆ. ಧನಸಂಪಾದನೆಗೆ ಆತಂಕವು ಬಾರದೇ ಉತ್ತಮ ರೀತಿಯಲ್ಲಿ ಈ ತಿಂಗಳು ಕಳೆಯುವುದು. ಕುಜ ದಶೆಯುಳ್ಳವರಿಗೆ ಈ ತಿಂಗಳು ಶುಭಪ್ರದವಾಗಿದೆ.
ವೃಷಭ ರಾಶಿ: ನವೆಂಬರ್ ತಿಂಗಳಲ್ಲಿ ಎರಡನೇ ರಾಶಿಯವರಿಗೆ ಅಸುಖ. ಸಂಗಾತಿಯ ಜೊತೆ ಕಲಹ. ಎಲ್ಲರೆದುರು ಸೌಮ್ಯತೆ ಇದ್ದರೂ ಅನಂತರ ಕೋಪಗೊಳ್ಳುವಿರಿ. ಸಿಟ್ಟನ್ನು ಎಲ್ಲರೆದುರು ತೋರಿಸಲಾರಿರಿ. ಪರರ ವಿಚಾರದಲ್ಲಿ ಆಸಕ್ತಿ ಹೆಚ್ಚು. ಅವರಿಗಾಗಿ ಏನನ್ನೂ ಮಾಡಲು ಶಕ್ತರಾಗುವಿರಿ. ಮನೆಯಲ್ಲಿ ನಿಮ್ಮನ್ನು ನಿಷ್ಪ್ರಯೋಜಕರಂತೆ ನೋಡುವರು. ಸ್ತ್ರೀಯರಿಗೆ ಎಂತಹ ಕಾರ್ಯವನ್ನು ಮಾಡಲೂ ಸಿದ್ಧರಿರುವಿರಿ. ಶನಿಯ ದೃಷ್ಟಿ ನಿಮ್ಮ ರಾಶಿಯ ಮೇಲೆ ಇರುವ ಕಾರಣ ಪುರುಷ ಪ್ರಯತ್ನವನ್ನು ವಿಧಿಯೇ ಬದಲಿಸಲಿದೆ. ಶುಕ್ರದಶೆ ಭೋಗದ, ವಿಲಾಸಿಯ ದೃಷ್ಟಿಯಿಂದ ಉತ್ತಮ.
ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯಾಗಿದ್ದು ಬುಧನು ಪಂಚಮದಲ್ಲಿರುವನು. ಕ್ಲಿಷ್ಟಕರವಾದ ಸಂದರ್ಭವನ್ನು ಸರಳವಾಗಿ ನಿಭಾಯಿಸುವುದು ತಿಳಿದಿರುವುದು. ಕಾರ್ಯ ಸಾಧನೆಗೆ ಬೇಕಾದ ಉಪಾಯಗಳನ್ನು ಚಿಂತಿಸುವಿರಿ. ಸಂಪತ್ತನ್ನು ಸಪರಿಚಿತರಿಗೆ ಅಪೇಕ್ಷೆಯಿಂದಿಗೆ ದಾನ ಮಾಡುವಿರಿ. ಹಣದ ಬದಲಾಗಿ ಅದಕ್ಕಿಂತ ದೊಡ್ಡ ಮೊತ್ತದ ಬೇರೆಯದನ್ನು ಅವರಿಂದ ಪಡೆಯುವಿರಿ. ಗುರುವಿನಲ್ಲಿ, ಹಿರಿಯರಲ್ಲಿ ಶ್ರದ್ಧೆ, ಪ್ರೀತಿ ಇರುವುದು. ವಿದೇಶದ ವ್ಯವಹಾರದಲ್ಲಿ ಪ್ರಗತಿಯೂ ಸಿಗಲಿದೆ. ಬುಧ ದಶೆ ಅನುಕೂಲಕರದ್ದಾಗಿದೆ. ಕುಜನ ದೃಷ್ಟಿ ಈ ರಾಶಿ ಮೇಲೆ ಇರುವ ಕಾರಣ ಸಿಟ್ಟು, ಅಸಹನೆ, ಹಿಂಬುತನ ಎಲ್ಲವೂ ಆಗಾಗ ಕಾಣಿಸಿಕೊಂಡು ಮಾಯವಾಗುವುದು.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ಗುರುವು ಕೆಲವು ದಿನಗಳ ಕಾಲ ಈ ರಾಶಿಯಲ್ಲಿ ಇರುವನು. ಸಕಾರಾತ್ಮಕ ಆಲೋಚನೆಗಳಿಂದ ಪರಿವರ್ತನೆ ಸಾಧ್ಯ. ಹೊಸ ವಸ್ತ್ರಗಳ ಬಗ್ಗೆ ಆಸಕ್ತಿ, ಶತ್ರುಗಳಿಂದ ಜಯ. ಪರರ ವಸ್ತುಗಳನ್ನು ಬಯಸುವುದು, ಗೊತ್ತಾಗದಂತೆ ತನ್ನದನ್ನಾಗಿಸಿಕೊಳ್ಳುವ ಮನಸ್ಸು ಆಗಾಗ ಬರಲಿದೆ. ಸಂಸಾರದ ಕಡೆಗೆ ಹೆಚ್ಚು ಗಮನವಿರಲಿದೆ. ಕಫದಿಂದ ಬಾಧೆಪಡಬೇಕಾಗುವುದು. ಕೃಷಿ ಉತ್ಪನ್ನಗಳ ತಯಾರಿಕೆಗೆ ಮನಸ್ಸು ತುಡಿಯುವುದು. ಕಾವ್ಯ ಮೊದಲಾದ ಸೃಜನಾತ್ಮಕ ವಿಚಾರಕ್ಕೆ ಸಮಯಕೊಡುವಿರಿ. ಧರ್ಮಕಾರ್ಯಗಳನ್ನು ಮಾಡುವಿರಿ ಅಥವಾ ಮಾಡಿಸುವಿರಿ. ಗುರು ದಶೆ ನಿಮಗೆ ಸಕಲವನ್ನು ಸಾಧಿಸಿಕೊಡುವುದು.
ಸಿಂಹ ರಾಶಿ: ರವಿಯ ಆಧಿಪತ್ಯದ ಈ ರಾಶಿಗೆ ನವೆಂಬರ್ ತಿಂಗಳಲ್ಲಿ ನೀಚ ಸ್ಥಾನದಿಂದ ಮುನ್ನಡೆಯುವನು. ಈ ಸಮಯದಲ್ಲಿ ಅಶುದ್ಧವಾದ ಕಲಬೆರಕೆ ವಸ್ತುಗಳ ಮಾರಾಟದಿಂದ ಹಣಸಂಪಾದನೆಯಾಗಲಿದೆ. ಇದರಿಂದ ತೊಂದರೆಯೂ ಬರಲಿದೆ. ಸರ್ಕಾರದಿಂದ ನಿಮಗೆ ದಂಡವೂ ವಿಧಿಸಲ್ಪಡಬಹುದು. ಇನ್ನು ಸುತ್ತಾಟದಲ್ಲಿ ಆಸಕ್ತಿ ಹೆಚ್ಚು. ಅಕಾರಣವಾದ ತಿರುಗಾಟವನ್ನು ಮಾಡಬೇಕಾಗುವುದು. ಬಂಗಾರದ ಕೆಲಸ, ಬಂಗಾರವನ್ನು ಪರಿಶ್ರಮದಿಂದ ತೆಗೆಯುವ ಕೆಲಸವನ್ನು ಮಾಡುವಿರಿ. ಔಷಧ ಮೊದಲಾದ ದ್ರವ್ಯಗಳ ಮಾರಾಟ ಮಾಡುವರು. ಅದರಿಂದ ಲಾಭ ಪಡೆಯುವರು. ವಿದ್ಯಾಭ್ಯಾಸ ನಿಮಗೆ ಸಂತೃಪ್ತಿಯನ್ನು ಕೊಡಲಿದೆ. ರವಿದಶೆ ನಿಮಗೆ ಮಿಶ್ರದಶೆಯಾಗಿದ್ದು, ಎಡವುವ ಸಂದರ್ಭದಲ್ಲಿ ಜಾಗರೂಕತೆ ಇರಲಿ.
ಕನ್ಯಾ ರಾಶಿ: ನವೆಂಬರ್ ತಿಂಗಳಲ್ಲಿ ಆರನೇ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ದ್ವಿತೀಯಸ್ಥಾನದಲ್ಲಿರುವನು. ಬೋದಕ ವರ್ಗದಲ್ಲಿ ಗುರುತಿಸಿಕೊಳ್ಳುವರು. ವ್ಯಾಪಾರದಲ್ಲಿ ಬಹಳ ಅಚ್ಚುಕಟ್ಟಾಗಿ ಮಾತನ್ನಾಡಿ ವ್ಯವಹಾರವನ್ನು ಗಿಟ್ಟಿಸಿಕೊಂಡು ಲಾಭ ಮಾಡಿಕೊಳ್ಳುವರು. ಧನಸಂಪಾದನೆಯನ್ನು ವ್ರತದ ರೀತಿಯಲ್ಲಿ ಕೈಗೊಳ್ಳುವರು. ವಾಗ್ಮಿಗಳಿಗೆ ಅವಕಾಶ ಹಾಗೂ ಮಾತಿನ ಕೌಶಲವಿರುವವರಿಗೆ ಬೇರೆ ಬೇರೆ ವಿಭಾಗಗಳಲ್ಲಿ ಸೇರಿಕೊಳ್ಳುವ ಅವಕಾಶವೂ ಸಿಗಲಿದೆ. ಬುಧ ದಶೆ ಅನುಕೂಲ ದಶೆಯಾಗಿಯೇ ಇದೆ. ಶನಿ ದೃಷ್ಟಿ ಈ ರಾಶಿಗೆ ಇರುವ ಕಾರಣ ಸಾಮರ್ಥ್ಯದಿಂದ ಸ್ಥಾನ ಕಷ್ಟ. ಕಬ್ಬಿಣ ಮುಂತಾದ ಕೆಲಸಕ್ಕೂ ದಾರಿ ಸಿಗುವುದು. ಸೇವಕನಾಗಿಯೂ ಜೀವನ ಸಾಗಿಸಬೇಕಾಗುವುದು.
ತುಲಾ ರಾಶಿ: ಏಳನೇ ರಾಶಿಗೆ ನವೆಂಬರ್ ತಿಂಗಳಲ್ಲಿ ಶುಭ. ರಾಶಿಯ ಅಧಿಪತಿ ತನ್ನ ರಾಶಿಯಿಂದ ಮಿತ್ರನ ರಾಶಿಗೆ ಹೋಗುವನು. ರಸಿಕತೆಯ ಮಾತುಗಳನ್ನು ಹೆಚ್ಚಾಡುವರು. ಸ್ತ್ರೀಯರ ಸಂಗದಲ್ಲಿ ಸದಾ ಇರುತ್ತಾರೆ. ಅವರ ಜೊತೆ ಮಾತನಾಡಲು, ಸುತ್ತಾಡಲು ಬಹಳ ಇಷ್ಟ. ಅವರಿಗೋಸ್ಕರ ಸಂಪತ್ತು ಕಳೆದುಕೊಳ್ಳುವುದು ಆಗಲಿದೆ. ತಿಂಗಳ ಆರಂಭದಲ್ಲಿ ಇದ್ದ ಕಾರ್ಯನಿಷ್ಠೆ, ಸಂಪಾದನೆಯ ಕುಶಲತೆ, ಎಲ್ಲವೂ ಅನಂತರ ಕಾಮದಿಂದಾಗಿ ನಷ್ಟವಾಗುವುದು. ಬಂಧುಗಳಲ್ಲಿ ಗುರುತಿಸಲ್ಪಡುವ ಸಂಪತ್ತು ಇವರದಾಗಿರುತ್ತದೆ. ಶುಕ್ರದಶೆ ಚೆನ್ನಾಗಿ ಇವರಿಗೆ ಆಗಿಬರುವುದಿದ್ದರೂ ಉಳಿದ ವಿಚಾರಕ್ಕೆ ಸಂಬಂಧಿಸಿದಂತೆ ಜಾಗರೂಕತೆ ಬೇಕು. ಮಕ್ಕಳು ದಾರಿ ತಪ್ಪುವ ಸಾಧ್ಯತೆ ಈ ತಿಂಗಳಲ್ಲಿ ಅಧಿಕ.
ವೃಶ್ಚಿಕ ರಾಶಿ: ಎಂಟನೇ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಶುಭ. ರಾಶಿಯ ಅಧಿಪತಿ ಸ್ವರಾಶಿಯಲ್ಲಿಯೇ ಇದ್ದು, ರಾಶಿಕರಿಗೆ ಒಳ್ಳೆಯದನ್ನೇ ಮಾಡುವನು. ನಿಮ್ಮ ಕಾರ್ಯಕ್ಕೆ ಹಲವರಿಂದ ಹಲವು ಕಡೆಗಳಿಂದ ಪ್ರಶಂಸೆಯ ಪ್ರವಾಹವೇ ಬರುವುದು. ರಾಜಮರ್ಯಾದೆ ಸಿಗಲಿದೆ. ಸ್ವಂತ ಕಾರ್ಯಕ್ಕಾಗಿ ಹೆಚ್ಚು ಓಡಾಟವನ್ನೂ ಮಾಡಬೇಕು. ಶ್ರಮವಹಿಸದೇ ಸ್ಥಾನ ಸಿಗದು. ಸ್ಥಾನಮಾನದ ಆಸಕ್ತಿಯೂ ಇರುವುದು. ಹಾಗಾಗಿ ಉತ್ಸಾಹಕ್ಕೆ ಯಾರಿಂದಲೂ ಭಂಗವಿಲ್ಲ. ಇದ್ದರೂ ಅದು ಇವರನ್ನು ಬಾಧಿಸದು. ಸೈನ್ಯ ಅಥವಾ ರಕ್ಷಣೆಯ ವಿಷಯದಲ್ಲಿ ನೇತೃತ್ವ ಸಿಗುವುದು. ಅಯುಧಗಳಿಂದ ದೇಹಕ್ಕೆ ಘಾಸಿಯಾಗಲಿದೆ. ಮನಸ್ಸಿಗೂ ಕೆಲವರ ಮಾತು ಚುಚ್ಚಲಿದೆ. ಗುರುದೃಷ್ಟಿ ಇರುವಾಗ ಅದು ಮನಸ್ಸಿಗೆ ಅಂಟಿಕೊಳ್ಳದೇ ದೂರಾಗುವುದು. ಕುಜ ದಶೆಯಿದ್ದವರಿಗೆ ಶ್ರೇಯಸ್ಸು.
ಧನು ರಾಶಿ: ನವೆಂಬರ್ ತಿಂಗಳಲ್ಲಿ ನೀವು ಅಷ್ಟೊಂದು ಶುಭದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಗುರುವು ಅಷ್ಟಮದಲ್ಲಿ ಸ್ಥಿತನಾಗಿದ್ದಾನೆ. ಸಂತತಿ ಸಂಸಾರ ಎಲ್ಲವೂ ಇದ್ದರೂ ಅವರ ಜೊತೆ ಸುಖವಾಗಿ ಸಂತೋಷಪಡಲಾರರು. ಕೊರತರಗಳೇ ಕಾಣಿಸುವುದು. ಕಫಕ್ಕೆ ಸಂಬಂಧಿಸಿದ ರೋಗದ ಆಧಿಕ್ಯವೂ ಆಗಲಿದೆ. ಮನಸ್ಸೂ ದುರ್ಬಲವಾಗುವುದು. ತಿಂಗಳ ಅಂತ್ಯದಲ್ಲಿ ಪ್ರಭಾವಿಗಳ ಸಹವಾಸ, ಮಕ್ಕಳ ಜೊತೆಗಿನ ಮನಸ್ತಾಪ, ಬೋಧನೆಯಿಂದ ಅರ್ಥ ಲಾಭ. ಸಂಗಾತಿಯೂ ನಿಮಗೆ ಬೇಕಾದ ಸಹಕಾರವನ್ನು ಕೊಡುವಳು. ಕಲಾವಿದರಿಗೆ ನಿರೀಕ್ಷಿತ ಸ್ಥಾನ, ಮನ್ನಣೆ ಸಿಗಲಿದೆ. ಗುರುದಶೆ ನಿಮಗೆ ಉತ್ತಮ.
ಮಕರ ರಾಶಿ: ಹತ್ತನೇ ರಾಶಿಯೂ ಶನಿಯ ಆಧಿಪತ್ಯದ್ದೇ ಆಗಿದ್ದು ಈ ವಾರ ಶುಭ. ತನಗೆ ಸಮಾನವಾದ ರಾಶಿಯಲ್ಲಿಯೂ ತೃತೀಯದಲ್ಲಿಯೂ ಇರುವ ಕಾರಣ ಎಲ್ಲ ಕಾರ್ಯಗಳನ್ನೂ ಬುದ್ಧಿವಂತಿಕೆಯಿಂದ ಮಾಡುವಿರಿ. ಆತ್ಮವಿಶ್ವಾಸಕ್ಕೂ ಯಾವ ಅಡ್ಡಿಯೂ ಆಗದು. ನಕಾರಾತ್ಮಕ ಅಂಶಗಳನ್ನು ಮನಸ್ಸಿಗೆ ತಂದುಕೊಳ್ಳದೇ ಮಾಡಬೇಕಾದುದನ್ನು ಮಾಡುವಿರಿ. ವೃದ್ಧಾಪ್ಯದವರಾಗಿದ್ದರೆ ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದು. ಅಧಿಕಾರಿಗೆ ನಿಷ್ಠರಾಗಿ ಅಥವಾ ಯಾವುದಾದರೂ ಪ್ರಭಾವಿಗಳ ಸಹವಾಸ ನಿಮಗೆ ಸಿಗಲಿದೆ. ಶನಿದಶೆ ನಿಮಗೆ ಉತ್ತಮವೇ. ಗುರುವಿನ ವಿಶೇಷ ದೃಷ್ಟಿ ಈ ತಿಂಗಳ ಮಧ್ಯದವರೆಗೂ ಇರಲಿದ್ದು, ನಿಮ್ಮ ಕಾರ್ಯಕ್ಕೆ ಉಂಟಾಗುವ ಅಡೆತಡೆಗಳೂ ನಿರ್ಮೂಲವಾಗಲಿವೆ.
ಕುಂಭ ರಾಶಿ: ಈ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ರಾಶಿಯ ಅಧಿಪತಿ ದ್ವಿತೀಯದಲ್ಲಿರುವನು. ರಾಜರಿಗೆ ಸಮಾನವಾದ ಗೌರವ ಆದರಗಳು ನಿಮ್ಮನ್ನು ಅನಾಯಾಸವಾಗಿ ನಿಮಗೆ ಮುಖಂಡತ್ವ ಸಿಗುವುದು. ವಿದ್ಯೆಯ ಸಂಪಾದನೆಯನ್ನೂ ವಿದ್ಯೆಯಿಂದ ಸಂಪಾದನೆಯನ್ನೂ ಮಾಡಲು ಸಾಧ್ಯ. ಆದರೆ ಇದಕ್ಕೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಇಲ್ಲವಾದರೆ ಲೆಕ್ಕಪರಿಶೋದನೆಯಿಂದ ಸ್ವಯಾರ್ಜಿತ ಸಂಪತ್ತು ನಾಶವಾಗಬಹುದು. ಮುಖ ತಲೆ, ಕಣ್ಣು, ಕಿವಿಯ ರೋಗಗಳು ಕಾಣಿಸಿಕೊಳ್ಳುವುದು. ಔಷಧೋಪಚಾರವನ್ನು ಅಲಕ್ಷ್ಯ ಮಾಡುವುದು ಬೇಡ. ಶನಿ ದಶೆ ಸದ್ಯ ಅನುಕೂಲವನ್ನೇ ಮಾಡಿಕೊಡುವುದು. ಸಾಡೇಸಾಥ್ ಎಂಬ ಭಯಬಿಟ್ಟು ಕಾರ್ಯಪರರಾಗಿ.
ಮೀನ ರಾಶಿ: ನವೆಂಬರ್ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಈ ತಿಂಗಲ ಮಧ್ಯಭಾಗದವೆರೆಗೆ ಪಂಚಮದಲ್ಲಿರುವನು. ಕರ್ಕಾಟಕ ರಾಶಿಯಲ್ಲಿರುವ ಗುರು ಒಳ್ಳೆಯ ಮಕ್ಕಳನ್ನೂ, ನಿಮ್ಮನ್ನು ಅನುಸರಿಸುವ ಸಂಗಾತಿಯನ್ನು ಕೊಡುವನು. ಸುಖವಾದ ಜೀವನ ಮಧ್ಯಾವಧಿಯ ತನಕ ಇರಲಿದೆ. ಅನಂತರ ನಿಮಗೆ ಹೆಚ್ಚು ಉಪಕರಣಗಳನ್ನು ಬಳಸುವಿರಿ, ಮಕ್ಕಳು ನಿಮ್ಮ ಜೊತೆಗೇ ಇರುವರು. ನಿರಂತರ ಯಾವುದಾದರೊಂದು ಆಲೋಚನೆಯಲ್ಲಿ ಸರ್ವದಾ ಮುಳುಗಿರುವಿರಿ. ಆದರೆ ಯಾವುದೇ ಸುಖಕ್ಕೆ ಕೊರತೆಯಾಗದು. ಗುರು ದಶೆ ನಿಮಗೆ ಉತ್ತಮವಾದುದು. ಇದರ ಜೊತೆಗೆ ಶನಿಯೂ ನಿಮ್ಮ ರಾಶಿಯವರಲ್ಲಿ ಇರುವ ಕಾರಣ ಇನ್ನೊಬ್ಬರ ಹಣವನ್ನು ಆಶ್ರಯಿಸಬೇಕಾಗದು. ಸರ್ಕಾರದ ಕಾರ್ಯಗಳಿಗಾಗಿ ಬೇಗ ಮಾಡಿಕೊಳ್ಳುವ ಚತುರತೆ ಇರುವುದು. ಎಲ್ಲಿಯಾದರೂ ನಾಯಕತ್ವನ್ನು ಪಡೆಯುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)