AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

October Monthly Horoscope: ಅಕ್ಟೋಬರ್ ತಿಂಗಳಲ್ಲಿ ಯಾವ ರಾಶಿಗೆ ಯಾವ ಫಲ, ಇಲ್ಲಿದೆ ನೋಡಿ

ಅಕ್ಟೋಬರ್ ಮಾಸ ಭವಿಷ್ಯ: ಅಕ್ಟೋಬರ್ ತಿಂಗಳಿನಲ್ಲಿ ಕೆಲವೊಂದು ರಾಶಿಗಳಲ್ಲಿ ಬದಲಾವಣೆ ಆಗಲಿದೆ. ಅಕ್ಟೋಬರ್ ತಿಂಗಳಲ್ಲಿ ಅನೇಕ ಗ್ರಹಗಳ ಬದಲಾವಣೆ ಆಗಲಿದೆ. ಈ ತಿಂಗಳಿನಲ್ಲಿ ಅನೇಕ ರಾಶಿಯವರಿಗೆ ಈ ಅವಧಿ ಪರಮಶುಭವಾಗಿ ಪರಿಣಮಿಸಲಿದೆ. ಇನ್ನು ಶುಕ್ರ ಹಾಗೂ ರವಿ ಇಬ್ಬರೂ ನೀಚಸ್ಥಾನಕ್ಕೆ ಹೋಗುವರು. ಈ ಸಮಯಲ್ಲಿ ಬದುಕಿನಲ್ಲಿ ಹಾಗೂ ಆರೋಗ್ಯದಲ್ಲಿ ಕೆಲವೊಂದು ಬದಲಾವಣೆ ಆಗಲಿದೆ. ಈ ಬಗ್ಗೆ ಇಲ್ಲಿದೆ ನೋಡಿ.

October Monthly Horoscope: ಅಕ್ಟೋಬರ್ ತಿಂಗಳಲ್ಲಿ ಯಾವ ರಾಶಿಗೆ ಯಾವ ಫಲ, ಇಲ್ಲಿದೆ ನೋಡಿ
ಅಕ್ಟೋಬರ್ ತಿಂಗಳ ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 25, 2025 | 4:05 PM

Share

2025ರ ಅಕ್ಟೋಬರ್ ತಿಂಗಳಲ್ಲಿ (October Monthly Horoscope) ಅನೇಕ ಗ್ರಹಗಳ ಬದಲಾವಣೆ ಇದ್ದರೂ ವಿಶೇಷವಾಗಿ ಗುರುವು ಒಂದು ತಿಂಗಳುಗಳ‌ ಕಾಲ ಕರ್ಷಕ ರಾಶಿಗೆ ಹೋಗಲಿದ್ದಾನೆ. ಉಚ್ಚರಾಶಿಯೂ ಆಗಿದ್ದು, ಹನ್ನೆರಡು ವರ್ಷಗಳ ಅನಂತರ ಈ ಸ್ಥಾನಕ್ಕೆ ಬಂದಿದ್ದಾನೆ. ಅನೇಕ ರಾಶಿಯವರಿಗೆ ಈ ಅವಧಿ ಪರಮಶುಭವಾಗಿ ಪರಿಣಮಿಸಲಿದೆ. ಇನ್ನು ಶುಕ್ರ ಹಾಗೂ ರವಿ ಇಬ್ಬರೂ ನೀಚಸ್ಥಾನಕ್ಕೆ ಹೋಗುವರು. ಆರೋಗ್ಯ ಮತ್ತು ಸುಖ, ಐಷಾರಾಮಿ ಬದುಕಿಗೆ ಕಂಟಕ‌ ಬರಲಿದೆ. ಕುಜನು ಸ್ವಕ್ಷೇತ್ರದಲ್ಲಿ ಇರುವನು. ಒಟ್ಟಿನಲ್ಲಿ ಈ ತಿಂಗಳು ಶುಭವೂ ಅಶುಭವೂ ಆಗಿದ್ದು, ಅದನ್ನು ಸರಿಯಾಗಿ ತೂಗಿಸಿಕೊಳ್ಳುವ ಜವಾಬ್ದಾರಿ ಕೂಡ ಎಲ್ಲರ ಮೇಲಿರಲಿದೆ.

ಮೇಷ ರಾಶಿ :

ಕುಜಾಧಿಪತ್ಯದ ಈ ರಾಶಿಗೆ ಅಕ್ಟೋಬರ್ ತಿಂಗಳಲ್ಲಿ ಶುಭ. ರಾಶಿಯ ಅಧಿಪತಿ ಅಷ್ಟಮದಲ್ಲಿದ್ದು ಆರೋಗ್ಯದಲ್ಲಿ ಸುಧಾರಣೆ, ಉತ್ಸಾಹ ಹೆಚ್ಚಾಗುವುದು. ನೀಚನಾದ ರವಿಯ ದೃಷ್ಟಿ ನಿಮ್ಮ ಮೇಲಿದ್ದು, ಸಂಗಾತಿಯ ಆರೋಗ್ಯದ ಕಡೆಗೆ ಗಮನ ಮುಖ್ಯ. ಗುರುಬಲವೂ ತಕ್ಕಮಟ್ಟಿಗಿದ್ದು ನಿಮ್ಮ ಮಾತು ಮನೆಯಲ್ಲಿ ನಡೆಯುವುದು. ಸಂಗಾತಿಯ ಜೊತೆ ವಾಗ್ವಾದ, ಬೇಸರ ಹೆಚ್ಚು ಕಾಣಿಸುವುದು. ವಾತ ಪಿತ್ತ ಕಫಗಳ ವಿಕಾರಗಳಿಂದ ಅದರ ಸಾಮ್ಯತೆಗೆ ಗಮನ ಬೇಕು. ಶನಿಯು ದ್ವಾದಶದಲ್ಲಿ ಕೆಟ್ಟವರ ಸೇವೆ ಮಾಡುವಿರಿ. ರಾಹುವು ಏಕಾದಶದಲ್ಲಿ ಶುಭ ದಶೆ ಅದಾಗಿದೆ.

ವೃಷಭ ರಾಶಿ :

ರಾಶಿ ಚಕ್ರದ ಎರಡನೇ ರಾಶಿ ಇದಾಗಿದ್ದು, ರಾಶಿಯ ಅಧಿಪತಿ ಶುಕ್ರ ಈ ತಿಂಗಳಲ್ಲಿ ಪಂಚಮದಲ್ಲಿ ಇರುವನು. ಗುರುಬಲವೂ ಕಡಿಮೆಯಾಗಿ ಮನಸ್ಸಿಗೆ ದುರ್ಬಲತ್ವ ಬರಲಿದೆ. ಸ್ತ್ರೀಸಂತಾನವಾಗಲಿದ್ದು ಮನೆಯಲ್ಲಿ ಸಂತಸ. ಸಂಗಾತಿಯ ಜೊತೆ ವಾಗ್ವಾದ ನಡೆಯುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ವೈದ್ಯರಿಂದ ಚಿಕಿತ್ಸೆ ನಡೆಯಲಿದೆ. ಏಕಾದಶ ಸ್ಥಾನದಲ್ಲಿ ಶನಿಯಿದ್ದು, ನೀಚ ಜನರ ಸಹವಾಸ ಹೆಚ್ಚಾಗುವುದು, ದೈಹಿಕ ಶ್ರಮದಿಂದ ಕಾರ್ಯ ಮಾಡುವಿರಿ. ವಿದೇಶ ಪ್ರವಾಸದಿಂದ ವಾಪಾಸಾಗುವಿರಿ. ಶನಿ ದಶೆಯಿಂದ ಮಾನಸಿಕ ನೆಮ್ಮದಿ.

ಮಿಥುನ ರಾಶಿ :

ಬುಧಾಧಿಪತ್ಯದ ಈ ರಾಶಿಗೆ ಅಕ್ಟೋಬರ್ ತಿಂಗಳಲ್ಲಿ ಶುಭ. ಈ ತಿಂಗಳ ಮಧ್ಯದಲ್ಲಿ ಗುರುವು ದ್ವಿತೀಯ ಸ್ಥಾನಕ್ಕೆ ಹೋಗಲಿದ್ದು ಗುರುಬಲ ಜೊತೆ ಮನೋಬಲವೂ ಹೆಚ್ಚಾಗುವುದು. ಸಕಾರಾತ್ಮಕ ಯೋಚನೆಗಳನ್ನು ಮಾಡುವಿರಿ ಮತ್ತು ಅದು ಸಿದ್ಧಿಸುವ ಕಾರಣ ಸಂತೋಷವೂ ಹೆಚ್ಚಾಗಲಿದೆ. ಮಗನು ತಂದೆ ನಿಮ್ಮ ತಂದೆಯ ಹೋಲಿಕೆ, ಗುಣಗಳಿಂದ ಕೂಡಿದ್ದು, ಖುಷಿಯಾಗುವುದು. ಬಾಂಧವ್ಯದಲ್ಲಿ ಉಂಟಾದ ಶತ್ರುತ್ವ ಮರೆಯಾಗುವುದು. ಕುಟುಂಬದಲ್ಲಿ ಸ್ತ್ರೀ ಪ್ರಧಾನವಾಗಿದ್ದರೂ ಅವರ ಮಾತು ಸದ್ಯಕ್ಕೆ ನಡೆಯದು. ಅದಕ್ಕೆ ಕೋಪ ವೃದ್ಧಿಯಾಗಿ ಅರೋಗ್ಯ ಹಾಳಾಗುವುದು. ಕುಜ ಅಥವಾ ಗುರುದಶೆ ಶುಭ.

ಕರ್ಕಾಟಕ ರಾಶಿ :

ರಾಶಿ ಚಕ್ರದ ನಾಲ್ಕನೆಯ ರಾಶಿ ಇದಾಗಿದ್ದು, ಈ ತಿಂಗಳು ನಿಮಗೆ ಮಿಶ್ರಫಲ. ದ್ವಾದಶದಲ್ಲಿದ್ದ ಗುರುವು ನಿಮ್ಮದೇ ರಾಶಿಯಲ್ಲಿದ್ದು ಉಚ್ಚಸ್ಥಾನಕ್ಕೂ ಹೋಗಲಿರುವನು. ಆದರೂ ಮಾನಸಿಕವಾಗದ ದೃಢತೆ ಇದ್ದರೂ ಉಳಿದಂತೆ ಯಾವ ಬದಲಾವಣೆ ವಿಶೇಷವಾಗಿ ಆಗದು. ಧೈರ್ಯಂ ಸರ್ವತ್ರ ಸಾಧನಮ್ ಎನ್ನುವಂತೆ ಅನಿರೀಕ್ಷಿತವಾಗಿ ಬರುವ ಧನವ್ಯಯಕ್ಕೂ ಹೆದರಲಾರಿರಿ. ಸಮಯಕ್ಕೆ ಸರಿಯಾಗಿ ಎಲ್ಲವೂ ತಾನಾಗಿಯೇ ಒಂದು ಕಡೆಯಿಂದ ಆಗಲಿದೆ. ಇನ್ನು ಮಕ್ಕಳ ವಿಚಾರಕ್ಕೆ ಕೋಪ ಹೆಚ್ಚಾಗಲಿದ್ದು, ಅಸಂಬದ್ಧ ಮಾತುಗಳನ್ನಾಡುವಿರಿ. ಕುಟುಂಬದ ಜೊತೆ ಸೌಹಾರ್ದ ಸಂಬಂಧವಿರದು. ನಿಮಗೆ ಗುರುದಶೆ ಹೆಚ್ಚಿನ ಸತ್ಫಲವನ್ನು ಕೊಡುವುದು.

ಸಿಂಹ ರಾಶಿ :

ಅಕ್ಟೋಬರ್ ತಿಂಗಳಲ್ಲಿ ಐದನೇ ರಾಶಿಯವರಿಗೆ ಅಶುಭ. ರಾಶಿಯ ಅಧಿಪತಿ ಸೂರ್ಯ ನೀಚಸ್ಥಾನಕ್ಕೆ ಹೋಗಿರುವನು. ಗುರುಬಲವೂ ಮಧ್ಯಾವಧಿಯಿಂದ ಇರಲಾಗದು. ಹಾಗಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಕುಗ್ಗುವುದು. ಕೇತುವು ನಕಾರಾತ್ಮಕ ಅಂಶಗಳಿಗೆ ಬಲ ತುಂಬುವನು. ವಾತದ ಆಧಿಕ್ಯದಿಂದ ದೇಹಪೀಡೆ ಕಾಣಿಸುವುದು. ರಸವತ್ತಾದ ಮಾತುಗಳಿಂದ ಎಲ್ಲರನ್ನೂ ಆಕರ್ಷಿಸುವಿರಿ. ಸಹೋದರರ ಬಾಂಧವ್ಯ ಆಪ್ತವಾಗಲಿದೆ. ಸಂಗಾತಿಯ ಬಗ್ಗೆ ಸಕಾರಾತ್ಮಕ ಅಂಶಗಳು ನಿಮಗೆ ಕಾಣಿಸದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಖರ್ಚಾಗಲಿದೆ. ರವಿ ಹಾಗೂ ಗುರು ದಶೆ ಅಶುಭವಾಗಿರುವುದು.

ಕನ್ಯಾ ರಾಶಿ :

ಬುಧನ ಆಧಿಪತ್ಯದ ರಾಶಿ ಇದಾಗಿದ್ದು, ಅಕ್ಟೋಬರ್ ತಿಂಗಳು ಮಿಶ್ರಫಲವನ್ನು ಕೊಡುವುದು. ತೃತೀಯದಲ್ಲಿ ಬುಧನು ಸಹೋದರ ಬಂಧವನ್ನು ಬೆಸೆದರೂ ಅನನುಕೂಲ. ತಿಂಗಳ‌ ಮಧ್ಯದಲ್ಲಿ ನಿಮಗೆ ಗುರುವಿನ ಸ್ಥಾನ ಬದಲಾವಣೆ ಆಗಲಿದ್ದು, ವ್ಯಾಪಾರದಲ್ಲಿ ಪ್ರಗತಿ, ಉನ್ನತ ಸ್ಥಾನಕ್ಕೆ ಅವಕಾಶ, ಗೌರವಾದರಗಳು ಬರಲಿದೆ. ಶನಿಯ ದೃಷ್ಟಿ ನಿಮ್ಮ ರಾಶಿಯ ಮೇಲಿದ್ದು, ಶುಕ್ರನೂ ನೀಚನಾದ ಕಾರಣ ಇರುಸುಮುರುಸುಗಳಾಗುವ ಸಾಧ್ಯತೆ ಹೆಚ್ಚು. ಸ್ತ್ರೀಯರಿಗೆ ಸಂಬಂಧಿಸಿದ ಅಸಮಾಧನದಿಂದ ಹೊರಬರಲಾಗದು. ಸುಖದ ಅನಂತರ ಬೇಸರ, ದುಃಖಗಳೇ ಬರುವುದು. ವಾಹನಗಳಿಂದ ಅಸಮಾಧಾನವಾಗಲಿದೆ. ವಿದೇಶ ಪ್ರಯಾಣದಿಂದ ಪ್ರತಿಷ್ಠೆ ಹೆಚ್ಚಾಗುವುದು. ಗುರು ದಶೆ ನಿಮಗೆ ಉತ್ತಮ.

ತುಲಾ ರಾಶಿ :

ರಾಶಿ ಚಕ್ರದ ಏಳನೇ ರಾಶಿಯವರಿಗೆ ಮಾತು ತಿಂಗಳಲ್ಲಿ ಮಿಶ್ರಫಲ. ರಾಶಿಯ ಅಧಿಪತಿ ವ್ಯಯದಲ್ಲಿ ಇದ್ದು ಅಭಾವ ವೈರಾಗ್ಯ ಎದ್ದು ತೋರುವುದು. ಸಂಗಾತಿಯ ಕಾರಣದಿಂದ ಸಂಪತ್ತು ಪ್ರಾಪ್ತಿ. ಮಾತಿನ ಬಗ್ಗೆ ಬಹಳ ಎಚ್ಚರಿಕೆ ಬೇಕು. ಬಲಿಷ್ಠರ ಜೊತೆ ವೈರ ಬೆಳೆಸಿಕೊಳ್ಳುವಿರಿ. ಆಯುಧಗಳ ಅಥವಾ ವಿದ್ಯುತ್ ಉಪಕರಣಗಳ ವ್ಯಾಪಾರದಿಂದ ಆರ್ಥಿಕತೆ ಬಲವಾಗುವುದು. ಉದ್ಯೋಗದಲ್ಲಿ ತಕ್ಕಮಟ್ಟಿನ‌ ಪ್ರಗತಿ ನಿಮಗೆ ನೆಮ್ಮದಿ ಕೊಡುವುದು. ಬಂಧುವಿರೋಧವು ಮಾತಿನಿಂದ ಬರಲಿದ್ದು, ಸಿಟ್ಟಿನಿಂದ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಶುಕ್ರದಶೆ ಪ್ರತಿಕೂಲ ದಶೆಯಾಗಿದೆ.

ವೃಶ್ಚಿಕ ರಾಶಿ :

ಅಕ್ಟೋಬರ್ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಸ್ವಸ್ಥಾನದಲ್ಲಿ ಇದ್ದಾನೆ. ಮಿತ್ರನಾದ ಗುರುವಿನ ದೃಷ್ಟಿಯೂ ನಿಮ್ಮ ಮೇಲಿದೆ. ಸತ್ಕರ್ಮಗಳು ಫಲಿಸಲಿದ್ದು ಚಿಂತೆಯಿಂದ ಮುಕ್ತರಾಗುವಿರಿ. ಭಯಗೊಳ್ಳುವ ನಿಮಗೆ ತಾನಾಗಿಯೇ ಧೈರ್ಯ, ಸ್ಥೈರ್ಯಗಳು ಬಂದು ಸೇರುವುವು. ಸಾಹಿತ್ಯ ಕ್ಷೇತ್ರಕ್ಕೆ ಹಿನ್ನಡೆ. ಮಾಡಿದ ಕಾರ್ಯಗಳು ಬಹಳಷ್ಟಿದ್ದು, ಪೂರ್ಣ ಮಾಡಲಾಗದು. ಸಂಗಾತಿ ಬಗ್ಗೆ ಸದಭಿಪ್ರಾಯವಿದ್ದರೂ ದೃಢವಾಗಿರದು. ತಂದೆಯ ಆರೋಗ್ಯದಲ್ಲಿ ಅತೃಪ್ತಿಯ ಬೆಳವಣಿಗೆ ಇರುವುದು. ಉನ್ನತ ವಿದ್ಯಾರ್ಥಿಗಳಿಗೆ ಅಪೂರ್ಣವಾಗುವಂತೆ ತೋರುವುದು. ಮಾತಿನ ಕಠೋರತೆಯನ್ನು ಸಹಿಸಲಾಗದು. ಕುಜ ದಶೆ ಅಥವಾ ಗುರು ದಶೆ ನಿಮಗೆ ಅನುಕೂಲತೆಯನ್ನು ಉಂಟುಮಾಡಲಿವೆ.

ಧನು ರಾಶಿ :

ಗುರುವಿನ ಆಧಿಪತ್ಯದ ರಾಶಿಯಾಗಿರುವ ನಿಮಗೆ ಅಕ್ಟೋಬರ್ ತಿಂಗಳು ಅಶುಭ. ರಾಶಿಯ ಅಧಿಪತಿ ತಿಂಗಳ ಮಧ್ಯದಲ್ಲಿ ಅಷ್ಟಮಕ್ಕೆ ಹೋಗಲಿದ್ದಾನೆ. ಉಚ್ಚಸ್ಥಾನವಾಗಿದ್ದಾರೂ ಪುಣ್ಯಸ್ಥಳದಲ್ಲಿ ಮರಣದ ಸೂಚನೆ ಸಿಗುವುದು. ಕುಟುಂಬದ ಅಪಮಾನ, ಸುಖವು ಸಿಕ್ಕಂತೆ ಕಂಡರೂ ಸಿಗದೇ ಇರುವುದು. ಬಂಧುಗಳ ಜೊತೆ ವೈರ, ಶತ್ರುಗಳು ಉದ್ಯೋಗದಲ್ಲಿ ಹೆಚ್ಚು, ತಂದೆಯ ಸಹಾಯವನ್ನು ನಂಬಿರಲಾಗದು, ಸರ್ಕಾರ ಕೆಲಸ ಸಿಗದೇ ಇದ್ದರೂ ಕೆಲವು ಜವಾಬ್ದಾರಿ ನಿರ್ವಹಣೆ ಮಾಡುವಿರಿ. ಸಂಗಾತಿಯ ಜೊತೆ ವಿರಸವೇರ್ಪಡುವುದು. ಕೇತುವು ನವಮದಲ್ಲಿ ಇದ್ದು ಕೆಟ್ಟ ಕರ್ಮಗಳು ಫಲಕೊಡಲಿವೆ ಹಾಗೂ ದುರಾಲೋಚನೆಯೇ ನಿಮ್ಮ ಕಾರ್ಯಕ್ಕೆ ಒತ್ತುಕೊಡಿಸಲಿವೆ.

ಮಕರ ರಾಶಿ :

ಶನಿಯ ಆಧಿಪತ್ಯದ ಈ ರಾಶಿಗೆ ಅಕ್ಟೋಬರ್ ತಿಂಗಳಲ್ಲಿ ಶುಭ. ಶತ್ರು ಪೀಡೆ, ಅಪಮಾನಗಳನ್ನು ಎದುರಿಸುತ್ತಿರುವ ನಿಮಗೆ ಅಲ್ಪ‌ಕಾಲ ಇದೆಕ್ಕೆಲ್ಲ ವಿರಾಮ ಸಿಗುವುದು. ಗುರುವು ಸಪ್ತಮಸ್ಥಾನಕ್ಕೆ ಬಂದು ನಿಮ್ಮ ನಿಜಸ್ವರೂಪವನ್ನು ತೋರಿಸುವಂತೆ ಮಾಡುವನು. ಆಲಸ್ಯದಿಂದ ನಿಮ್ಮ ಅನನುಕೂಲತೆ ಸೃಷ್ಟಿಯಾಗಿದ್ದು, ಯಾರಿಂದಲಾದರೂ ಪ್ರೇರಣೆ ಬೇಕಾಗುವುದು. ಶುಕ್ರನು ನೀಚನಾಗಿದ್ದು ಸ್ತ್ರೀಯರಿಂದ ಅಪಮಾನ, ಸುಖವಿಲ್ಲದೇ ಸಂಕಟಪಡುವುದು, ಐಷಾರಾಮಿ ಜೀವನಕ್ಕೆ ತಡೆ, ಭೂಮಿಯ ಖರೀದಿಗೆ ಕಸರತ್ತು ಇವೆಲ್ಲವನ್ನೂ ಮಾಡಬೇಕಾಗುವುದು. ಬಂಧುಗಳೇ ಶತ್ರುವಾಗಿದ್ದು, ಅವರಿಂದ ಭೂಲಾಭವಾಗುವುದು. ಆದಾಯದ ಮೂಲ ಹಲವು ಇದ್ದು, ರಾಹು ದಶೆಯವರಿಗೆ ಅನುಕೂಲ.

ಇದನ್ನೂ ಓದಿ: ಏನಿದು ಬುಧ- ಶುಕ್ರ ಪರಿವರ್ತನೆ ಯೋಗ? ಇದರ ಪರಿಣಾಮ ಏನಾಗಲಿದೆ?

ಕುಂಭ ರಾಶಿ :

ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅಶುಭವೇ ಅಧಿಕ. ಗುರುಬಲವು ಮಧ್ಯ ತಿಂಗಳಿನಿಂದ ಇರದು. ಹಾಗಾಗಿ ಸುಖವು ಇಲ್ಲದಿರವ ಲಕ್ಷಣವು ಅರಿವಿಗೆ ಬರಲಿದೆ. ಇನ್ನು ಶುಕ್ರನು ಅಷ್ಟಮದಲ್ಲಿದ್ದು ಸಂಗಾತಿಯ ಮೇಲೆ ಪ್ರೀತಿ, ಅನುಕಂಪಗಳು ಕಡಿಮೆ. ಕೋಪ ಅಥವಾ ನಿರ್ಲಕ್ಷ್ಯ ಹೆಚ್ಚಾಗುವುದು. ಸ್ವಕ್ಷೇತ್ರದ ಕುಜನ ದೃಷ್ಟಿಯು ಈ ರಾಶಿಯ ಮೇಲೆ ಬರುವ ಕಾರಣ ಸಾಹಸ, ಧೈರ್ಯಕ್ಕೆ ತೊಂದರೆ ಇಲ್ಲ. ದುಡುಕುವುದು ಅತಿಯಾಗುವುದು. ವಿಚಾರಶಕ್ತಿ ಕಡಿಮೆ ಮಾಡಿಕೊಂಡು ಅನಂತರ ಪಶ್ಚಾತ್ತಾಪ. ರವಿಯು ನೀಚನಾಗಿ ನವಮದಲ್ಲಿ ಇದ್ದು, ಸರ್ಕಾರದ ಕಾರ್ಯಗಳು ಆಗದು. ವೈದ್ಯ ವೃತ್ತಿಯಲ್ಲಿ ಅಪಕೀರ್ತಿ ಬರುವ ಸಾಧ್ಯತೆಯೇ ಹೆಚ್ಚು. ಇಂಜಿನಿಯರ್ ಉದ್ಯೋಗಕ್ಕೆ ಬೇಡಿಕೆ ಬರುವುದು. ರವಿ ದಶೆ ಉತ್ತಮವಾಗಿಲ್ಲದ ಕಾರಣ ಸೂರ್ಯ ನಾರಾಯಣನ ಉಪಾಸನೆ ಮಾಡಿ.

ಮೀನ ರಾಶಿ :

ಅಕ್ಟೋಬರ್ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಪಂಚಮ‌ ಸ್ಥಾನಕ್ಕೂ ಉಚ್ಚ ರಾಶಿಗೂ ಹೋಗುವ ಕಾರಣ ಈ ರಾಶಿಯವರ ಅದೃಷ್ಟ ಬದಲಾಗದಲಿದೆ. ಮತ್ತೂ ವಿಶೇಷವೆಂದರೆ ಗುರುವಿನ ದೃಷ್ಟಿ ನಿಮ್ಮ ಮೇಲಿದ್ದು ಊಹಿಸಲಾಗದ ಏಳಿಗೆ ನಿಮಗೆ ಸಿಗುವುದು. ಇಷ್ಟು ದಿನದ ಸಂಕಟವೆಲ್ಲವೂ ಒಮ್ಮೆಲೇ ಕರಗುವುದು. ಉನ್ನತ ವಿದ್ಯಾಭ್ಯಾಸ, ವಿದ್ಯೆಗೆ ತಕ್ಕಂತೆ ಸ್ಥಾನವೂ ನಿಮಗೆ ಸಿಗಲಿದ್ದು ದುಃಖವೆಲ್ಲ ದೂರಾಗಿ ಸ್ವಲ್ಪ ದಿನ ನೆಮ್ಮದಿಯ ಜೀವನ ನಡಡಸುವಿರಿ. ಶುಕ್ರನು ನೀಚನಾಗಿ ಈ ರಾಶಿಯ ಮೇಲೆ ದೃಷ್ಟಿ ಇರಲಿದ್ದು, ಸಂಗಾತಿಯ ಕೋಪ, ಬೇಸರಗಳು ನಿಮ್ಮ ಮೇಲೆ ವಿಪರೀತ ಪರಿಣಾಮ ಬೀರವುದು. ಗುರುದಶೆ ನಿಮಗೆ ಅತ್ಯುತ್ತಮ ದಶೆಯಾಗಲಿದೆ. ದುರ್ಗಾದೇವಿಯನ್ನು ಸ್ತೋತ್ರ ಮಾಡಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ