Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 3ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 3ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 3ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ದಿನ ಅತಿಥಿಗಳು, ಸಂಬಂಧಿಗಳು, ಸ್ನೇಹಿತ- ಸ್ನೇಹಿತೆಯರು ನಿಮ್ಮ ಮನೆಗೆ ಬರುವಂಥ ಯೋಗ ಇದ್ದು, ಸಂಭ್ರಮದ ವಾತಾವರಣ ಇರುತ್ತದೆ. ರುಚಿಕಟ್ಟಾದ ಊಟ- ತಿಂಡಿಯ ವ್ಯವಸ್ಥೆಯನ್ನು ಮಾಡಿಸಲಿದ್ದೀರಿ. ಇನ್ನು ಪ್ರಮುಖವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ನಿಮಗೇ ಅಚ್ಚರಿಯಾಗುವಂತೆ ಕೆಲವು ಆದಾಯ ಮೂಲಗಳ ಬಗ್ಗೆ ಚರ್ಚೆ ಆಗಲಿದೆ. ಇದಕ್ಕೆ ಪೂರಕವಾಗಿ ಕೆಲವರು ತಾವು ಕೂಡ ಅದರಲ್ಲಿ ಕೈ ಜೋಡಿಸುವುದಾಗಿ ಹೇಳಲಿದ್ದಾರೆ. ವಾಚ್ ಸೇರಿದಂತೆ ವಸ್ತುಗಳು ಕೆಲವನ್ನು ನಿಮಗೆ ಆಪ್ತರಾದವರು ಉಡುಗೊರೆಯಾಗಿ ನೀಡಬಹುದು. ಉದ್ಯೋಗದ ಸಲುವಾಗಿ ನೀವು ವಿದೇಶ ಪ್ರಯಾಣ ಮಾಡಬೇಕಾಗಬಹುದು ಎಂಬ ವಿಚಾರ ನಿಮಗೆ ತಿಳಿದುಬರಲಿದೆ. ಇನ್ನು ಸಂಗೀತಗಾರರು, ಕಲಾವಿದರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ ಆಗುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಈ ದಿನ ದೇವಾಲಯಗಳು, ತೀರ್ಥಕ್ಷೇತ್ರಗಳಿಗೆ ತೆರಳುವಂಥ ಯೋಗ ನಿಮ್ಮ ಪಾಲಿಗಿದೆ. ಸೋದರ ಅಥವಾ ಸೋದರಿಯ ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಉತ್ತಮ ಸಂಬಂಧಗಳು ದೊರೆಯಲಿವೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಮನೆಯಲ್ಲಿ ವಿವಾಹ ವಾರ್ಷಿಕೋತ್ಸವ, ಜನ್ಮದಿನಾಚರಣೆಯಂಥ ಕಾರ್ಯಕ್ರಮಗಳೋ ಅಥವಾ ಇನ್ಯಾವುದಾದರೂ ಸಮಾರಂಭಕ್ಕಾಗಿ ಸಿದ್ಧತೆ ನಡೆಸಬೇಕಾಗುತ್ತದೆ. ಬೆಳ್ಳಿ ತಟ್ಟೆ, ಲೋಟ ಅಥವಾ ತಂಬಿಗೆ ಅಥವಾ ದೀಪವನ್ನು ಖರೀದಿ ಮಾಡಲಿದ್ದೀರಿ. ಕಮರ್ಷಿಯಲ್ ಆದಂಥ ಆಸ್ತಿಗಳನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ನೀವು ಹುಡುಕುತ್ತಿರುವಂಥದ್ದೇ ಆಸ್ತಿ ದೊರೆಯಲಿದ್ದು, ಅದಕ್ಕೆ ಅಡ್ವಾನ್ಸ್ ಸಹ ಪಾವತಿಸುವಂತಹ ಸಾಧ್ಯತೆಗಳಿವೆ. ಒಂದು ವೇಳೆ ಪ್ರಮುಖ ಕಾಗದ- ಪತ್ರ ಅಥವಾ ದಾಖಲಾತಿಗಳನ್ನು ಮರೆತು, ಎಲ್ಲೋ ಇಟ್ಟುಬಿಟ್ಟಿದ್ದೀರಿ ಅಂತಾದಲ್ಲಿ ಅದು ಕೂಡ ಸಿಗುವ ಅವಕಾಶಗಳಿವೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ದಿನ ನಿಮ್ಮ ವಿರೋಧಿಗಳು, ಶತ್ರುಗಳಿಗೆ ಸವಾಲನ್ನು ಎಸೆಯಲಿದ್ದೀರಿ. ನನಗೆ ಅನಿಸಿದ್ದನ್ನು ಮಾಡಿಯೇ ಮಾಡುತ್ತೇನೆ, ನಿಮ್ಮಿಂದ ಅದೇನು ಮಾಡಿಕೊಳ್ಳುವುದಕ್ಕೆ ಸಾಧ್ಯವೋ ಮಾಡಿಕೊಳ್ಳಿ ಎಂದು ಸವಾಲು ಹಾಕಲಿದ್ದೀರಿ. ಮನೆಯ ನೆರೆಹೊರೆಯವರ ಜತೆಗೆ ನೀರಿನ ವಿಚಾರಕ್ಕೋ ಪಾರ್ಕಿಂಗ್ ವಿಚಾರಕ್ಕೋ ಅಥವಾ ಜೋರು ಧ್ವನಿಯಲ್ಲಿ ಕೂಗಾಟ- ಕಿರುಚಾಟ ಕೇಳಿಬರುತ್ತಿದೆ ಎಂಬ ಕಾರಣಕ್ಕೆ ಮನಸ್ತಾಪಗಳಾಗಿ, ಕಲಹ ಏರ್ಪಡಲಿದೆ. ನಿಮಗೆ ಪಾರಂಪರಿಕವಾಗಿ ಬಂದಂಥ ದೇವತಾ ಮೂರ್ತಿ ಸೇರಿದಂತೆ ಇತರ ವಸ್ತುಗಳನ್ನು ತಮಗೆ ನೀಡುವಂತೆ ಸೋದರ ಸಂಬಂಧಿಗಳು ಕೇಳಿಕೊಂಡು ಬರಬಹುದು. ಇದರ ಬಗ್ಗೆ ಏನನ್ನೂ ನಿರ್ಧರಿಸಿ ಹೇಳುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ ನೀವು ಇರುತ್ತೀರಿ. ನೀವು ಬಹಳ ಗೌರವದಿಂದ, ಪ್ರೀತಿಯಿಂದ ನೋಡುವಂಥ ವ್ಯಕ್ತಿಯೊಬ್ಬರು ತೀರಾ ಸಣ್ನ- ಪುಟ್ಟ ವಿಷಯಗಳಿಗೆ ನಿಮಗೆ ಬೇದರ ಮಾಡಲಿದ್ದಾರೆ..
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈ ದಿನ ನೀವು ಪಾರ್ಕ್, ಝೂ, ಮ್ಯೂಸಿಯಂ ಇಂಥ ಕಡೆಗಳಿಗೆ ಕುಟುಂಬದ ಜತೆಗೆ ತೆರಳುವಂಥ ಸಾಧ್ಯತೆಗಳಿವೆ. ಜತೆಗೆ ಮನೆಯಲ್ಲಿ ಇರುವಂತಹ ಸಣ್ಣ- ಪುಟ್ಟ ಕೌಟುಂಬಿಕ ಸಮಸ್ಯೆಗಳನ್ನು ಸಹ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ನಯವಾಗಿ ಮಾತನಾಡುವ ಮೂಲಕ ನಿಮಗೆ ಬೇಕಾದ ರೀತಿಯಲ್ಲಿ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳಲಿದ್ದೀರಿ. ಕಮಿಷನ್ ಆಧಾರದಲ್ಲಿ ಆದಾಯ ಗಳಿಸುವಂಥವರಿಗೆ ಈ ದಿನ ವಿಪರೀತ ಕೆಲಸದ ಒತ್ತಡ ಇರಲಿದೆ. ನಾನಾಯಿತು, ನನ್ನ ಪಾಡಾಯಿತು ಎಂಬಂತೆ ಕೆಲಸ ಮಾಡಿಕೊಂಡಿದ್ದರೂ ಹಲವರು ಬಂದು ನಿಮ್ಮ ಏಕಾಗ್ರತೆಗೆ ಭಂಗ ತರಬಹುದು. ಮನಃಪೂರ್ವಕವಾಗಿ ಇದನ್ನು ಒಪ್ಪಿಕೊಳ್ಳಬಹುದು ಎಂಬಂಥ ಯಾವ ಪ್ರಸ್ತಾವವೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದ ಬಾರದೆ ಆತಂಕದ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಂಗಾತಿಯ ಆರೋಗ್ಯ ವಿಚಾರವು ನಿಮ್ಮ ಚಿಂತೆಗೆ ಕಾರಣ ಆಗಲಿದೆ. ಬೇಕಂತಲೇ ನಿಮ್ಮ ಜತೆಗೆ ಸಿಟ್ಟು- ಸೆಡವು ಮಾಡುತ್ತಿದ್ದಾರೆ ಎಂಬ ಭಾವನೆ ನಿಮ್ಮಲ್ಲಿ ಮೂಡಲಿದೆ. ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ನಡೆಯುವಂಥ ಕಾರ್ಯಕ್ರಮಗಳಿಗೆ ಆಹ್ವಾನ ಬರಲಿದೆ. ಇನ್ನು ನಿಮ್ಮಲ್ಲಿ ಕೆಲವರು ಸಹೋದರ ಅಥವಾ ಸಹೋದರಿಯ ಮದುವೆಗಾಗಿ ಹೆಚ್ಚಿನ ಓಡಾಟವನ್ನು ಮಾಡಬೇಕಾಗುತ್ತದೆ. ಹೊಸ ಬಟ್ಟೆ, ಒಡವೆ- ವಸ್ತ್ರಗಳ ಖರೀದಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಬಹಳ ಸಮಯದ ಹಿಂದೆ ಸ್ನೇಹಿತರಿಗೋ ಸಂಬಂಧಿಗಳಿಗೋ ನೀಡಿದಂಥ ಹಣವನ್ನು ಗಟ್ಟಿ ಧ್ವನಿಯಲ್ಲಿ ಈ ದಿನ ವಾಪಸ್ ಕೇಳಬೇಕು ಎಂದು ತೀರ್ಮಾನ ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸುವಾಗ ಅದರ ಪಿನ್ ನಂಬರ್ ಇತರರು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರಿಕೆಯನ್ನು ವಹಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮನಸ್ಸಿಗೆ ಒಪ್ಪುವಂಥ ವ್ಯಕ್ತಿಯ ಎದುರಿಗೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೆ ಬಹಳ ಒಳ್ಳೆಯ ದಿನ ಇದಾಗಿರುತ್ತದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಮದುವೆ ನಿಶ್ಚಯ ಆಗುವ ಸಾಧ್ಯತೆಗಳು ಸಹ ಇವೆ. ದೇವತಾರಾಧನೆಯಲ್ಲಿ ತೊಡಗಿಕೊಳ್ಳುವುದರಿಂದ ಒಂದು ಬಗೆಯ ನೆಮ್ಮದಿ, ಸಮಾಧಾನ ದೊರೆಯಲಿದೆ. ನೀವು ನೋಡಿಯೇ ಬಹಳ ಸಮಯ ಆಗಿದ್ದಂಥ ವ್ಯಕ್ತಿಗಳು ಈ ದಿನ ದಿಢೀರ್ ನಿಮ್ಮನ್ನು ಭೇಟಿ ಆಗಲಿದ್ದಾರೆ. ಅವರು ಕೆಲವು ವ್ಯವಹಾರ ಪ್ರಸ್ತಾವಗಳನ್ನು ತೆಗೆದುಕೊಂಡು ಬರಬಹುದು ಅಥವಾ ನೀವು ಈಗಿರುವ ಕೆಲಸವನ್ನು ಬಿಟ್ಟು, ಅವರ ಜತೆಗೆ ಸೇರಿಕೊಂಡರೆ ಸಂಬಳದ ಜತೆಗೆ ಬರುವ ಲಾಭದಲ್ಲಿಯೂ ಪಾಲನ್ನು ನೀಡುವುದಾಗಿ ಹೇಳಬಹುದು. ಈ ಬಗ್ಗೆ ಯಾವುದೇ ನಿರ್ಧಾರ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ಆಲೋಚನೆ ಮಾಡಿ ಮೇಲೆ ನಿಮ್ಮ ಅಭಿಪ್ರಾಯ ಹೇಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಂಬಂಧಗಳೇ ಇರಬಹುದು, ವ್ಯವಹಾರಗಳೇ ಇರಬಹುದು. ಇಲ್ಲಿಯ ತನಕ ಎಷ್ಟು ಕೆಲಸ ಆಗಿದೆಯೋ ಅಲ್ಲಿಂದ ಮುಂದಕ್ಕೆ ಸಾಗದೆ ತಟಸ್ಥವಾಗಿ ನಿಂತಂತೆ ಅನಿಸುವುದಕ್ಕೆ ಶುರುವಾಗಲಿದೆ. ನೀವು ಬಹಳ ಶ್ರಮಪಟ್ಟು, ಒಪ್ಪಿಸಿ, ಮಾರ್ಕೆಟಿಂಗ್ ಮಾಡಿದಂಥ ಪ್ರಾಡಕ್ಟ್ ಗಳ ಬಗ್ಗೆ ಅದರ ಉತ್ಪಾದಕರೇ ಆಸಕ್ತಿ ಕಳೆದುಕೊಂಡವರಂತೆ ಮಾತನಾಡುವುದಕ್ಕೆ ಆರಂಭಿಸುತ್ತಾರೆ. ಇದರಿಂದ ನಿಮ್ಮ ಉತ್ಸಾಹ ಕೂಡ ಕುಗ್ಗಿ ಹೋಗಲಿದೆ. ಮನೆಯಲ್ಲಿ ಇರುವಂಥ ಎಲೆಕ್ಟ್ರಿಕ್ ವಸ್ತುಗಳು ಹೈ ವೊಲ್ಟೇಜ್ ನಿಂದಲೋ ಅಥವಾ ಮತ್ಯಾವುದಾದರೂ ವಿದ್ಯುತ್ ಸಮಸ್ಯೆಯಿಂದ ಹಾಳಾಗುವ ಯೋಗ ಈ ದಿನ ಇದೆ. ನಿಮಗೆ ಮಾತ್ರ ಗೊತ್ತಿದೆ ಎಂದುಕೊಂಡಿದ್ದ ರಹಸ್ಯವೊಂದನ್ನು ಬೇರೆಯವರು ಎಲ್ಲೆಡೆ ಗುಲ್ಲು ಎಬ್ಬಿಸಲಿದ್ದು, ಈ ರೀತಿ ರಹಸ್ಯವನ್ನು ಹೊರಗೆ ಬರುವಂತೆ ಮಾಡಿರುವುದು ನೀವೇ ಎಂಬ ಅನುಮಾನ ವ್ಯಕ್ತವಾಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸ್ನೇಹಿತರ ಜತೆಗೂಡಿ ಬೈಕ್ ನಲ್ಲಿಯೋ ಅಥವಾ ಕಾರಿನಲ್ಲಿಯೋ ಊಟ- ತಿಂಡಿಗಳನ್ನು ಸವಿಯುವ ಸಲುವಾಗಿಯೇ ಪ್ರಯಾಣವನ್ನು ಮಾಡಲಿದ್ದೀರಿ. ಇನ್ನು ಇದೇ ಸಂದರ್ಭದಲ್ಲಿ ಕೆಲವು ಹೊಸಬರು ಪರಿಚಯ ಆಗಲಿದ್ದಾರೆ. ನಿಮ್ಮಲ್ಲಿ ಯಾರು ಉದ್ಯೋಗದಲ್ಲಿ ಬದಲಾವಣೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿರುತ್ತೀರಿ ಅಂಥವರಿಗೆ ಈ ದಿನ ಪರಿಚಯ ಆಗುವ ವ್ಯಕ್ತಿಗಳಿಂದ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ. ನಿಮ್ಮಲ್ಲಿ ಕೆಲವರು ಹೊಸ ಕೋರ್ಸ್ ಗಳಿಗೆ ಸೇರಿಕೊಳ್ಳುವ ನಿರ್ಧಾರ ಮಾಡಲಿದ್ದೀರಿ. ಬೋರ್ ವೆಲ್ ತೋಡುವಂಥ ಯಂತ್ರಗಳನ್ನು ಇಟ್ಟುಕೊಂಡು, ಅದರ ಮೂಲಕವಾಗಿ ಆದಾಯ ಗಳಿಸುವಂಥವರಿಗೆ ಗಳಿಕೆಯಲ್ಲಿ ಹೆಚ್ಚಳ ಆಗಲಿದೆ. ಅದರ ಜತೆಗೆ ಒಂದೇ ಸಲಕ್ಕೆ ಹಲವು ಕಡೆಗಳಲ್ಲಿ ಬೋರ್ ವೆಲ್ ತೋಡಿಕೊಡುವಂತೆ ಕೇಳಿಕೊಂಡು ಜನರು ಬರಲಿದ್ದಾರೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮಲ್ಲಿ ಕೆಲವರು ಈ ದಿನ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಸೇರಿದಂತೆ ಉದ್ಯೋಗಕ್ಕೆ ಅಥವಾ ವೃತ್ತಿಗೆ ಅನುಕೂಲ ಆಗುವಂಥ ಕೆಲವು ಸಾಧನಗಳನ್ನು ಖರೀದಿ ಮಾಡುವಂತ ಯೋಗ ನಿಮ್ಮ ಪಾಲಿಗೆ ಇದೆ. ಸಂಗಾತಿಯನ್ನು ಸಂತೋಷ ಪಡಿಸುವ ಸಲುವಾಗಿ ಕಿರು ಪ್ರವಾಸವನ್ನಾದರೂ ಕೈಗೊಳ್ಳಬಹುದು. ಸ್ವಂತವಾಗಿ ಹೋಟೆಲ್, ರೆಸ್ಟೋರೆಂಟ್ ಗಳನ್ನು ನಡೆಸುತ್ತಿರುವವರು ವ್ಯಾಪಾರವನ್ನು ಇನ್ನಷ್ಟು ವಿಸ್ತರಣೆ ಮಾಡಬೇಕು ಎಂಬ ಕಾರಣಕ್ಕೆ ಪಾರ್ಟನರ್ ಷಿಪ್ ಗಾಗಿ ಸೂಕ್ತ ವ್ಯಕ್ತಿಗಳ ಹುಡುಕಾಟ ಮಾಡುವುದಕ್ಕೆ ಇತರರ ಸಹಾಯವನ್ನು ಕೇಳಲಿದ್ದೀರಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಹಣಕಾಸಿನ ಅಗತ್ಯ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಲಿದ್ದು, ಸ್ನೇಹಿತರು ಅಥವಾ ಸಂಬಂಧಿಗಳ ಬಳಿ ಸಾಲವನ್ನು ಪಡೆದುಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ