Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 22ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 22 ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 22ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
Rakesh Nayak Manchi
|

Updated on:Feb 23, 2023 | 10:25 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 22ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಆಲೋಚನೆ, ನಡವಳಿಕೆ, ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮ ಶ್ರಮಕ್ಕೂ ದೊರೆಯುತ್ತಿರುವ ಪ್ರತಿಫಲಕ್ಕೂ ತಾಳೆಯೇ ಆಗದಷ್ಟು ಕಡಿಮೆ ಇದೆ ಎಂದು ಬಲವಾಗಿ ನಿಮ್ಮ ಮನಸಿಗೆ ಅನಿಸಲಿದೆ. ಪಬ್, ಬಾರ್- ರೆಸ್ಟೋರೆಂಟ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಇಳಿಮುಖ ಆಗಲಿದೆ. ಮಾಂಸಾಹಾರಕ್ಕೆ ಸಂಬಂಧಿಸಿದ ವ್ಯವಹಾರ, ಉದ್ಯಮಗಳಲ್ಲಿ ತೊಡಗಿರುವವರಿಗೆ ಯಾವುದಾದರೊಂದು ರೂಪದಲ್ಲಿ ನಷ್ಟ ಎದುರಾಗುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ನಿಮ್ಮ ತಾಳ್ಮೆ, ಸಂಯಮ, ಆತ್ಮಸ್ಥೈರ್ಯದ ಸಹಾಯದಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಆದರೆ ಇದು ನಿಮಗೆ ನಿಧಾನವಾಗಿ ಅನುಭವಕ್ಕೆ ಬರಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಮಾಡುತ್ತಿರುವವರಿಗೆ ದೀರ್ಘಾವಧಿಯಲ್ಲಿ ಲಾಭದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಮ್ಯಾನೇಜ್ ಮೆಂಟ್ ಪರವಾದ ಕೆಲಸಗಳನ್ನು ಮಾಡುವಂಥ ಉನ್ನತ ಹುದ್ದೆಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಾಗಿರಲಿದೆ. ಊಟ- ತಿಂಡಿ ವಿಚಾರದಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಅಸಮಾಧಾನ ಕಾಣಿಸಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಪುಸ್ತಕ ಪ್ರಕಾಶಕರು, ಮುದ್ರಕರು ಅಥವಾ ಕಾಗದದ ಉದ್ಯಮದಲ್ಲಿ ಇರುವಂಥವರಿಗೆ ಲಾಭದ ಪ್ರಮಾಣದಲ್ಲಿ ಇಳಿಕೆ ಆಗಲಿದೆ. ಈಗಾಗಲೇ ಆಗಿರುವ ಒಪ್ಪಂದಲ್ಲಿ ಬದಲಾವಣೆಯೋ ಅಥವಾ ರದ್ದು ಆಗುವುದರಿಂದ ಭಾರೀ ಹಿನ್ನಡೆ ಆಗಲಿದೆ. ಬ್ಯಾಂಕ್​ಗಳಲ್ಲಿ ಸಾಲಕ್ಕಾಗಿ ಪ್ರಯತ್ನಿಸುವವರಿಗೆ ಸಾಲ ದೊರೆತರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನೀವು ಅಂದುಕೊಂಡಂತೆಯೇ ಕೆಲವು ಯೋಜನೆಗಳು ಸಾಗದಿರುವುದರಿಂದ ಭಾರೀ ಚಿಂತೆಗೆ ಗುರಿ ಆಗುತ್ತೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಎಲ್ಲರನ್ನೂ ಒಪ್ಪಿಸಿ ಅಥವಾ ಮೆಚ್ಚಿಸಿ ಕೆಲಸ ಮಾಡುವುದು ಅಸಾಧ್ಯದ ಮಾತು. ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಾಗಿ. ದಾಕ್ಷಿಣ್ಯದ ಮಾತಿಗೆ ಸಿಲುಕಿಕೊಂಡು, ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ಈಗಾಗಲೇ ಪ್ರಯತ್ನಿಸುತ್ತಿದ್ದಲ್ಲಿ ಗೊಂದಲದ ಸನ್ನಿವೇಶ ಸೃಷ್ಟಿಯಾಗುತ್ತದೆ. ಸೆಕೆಂಡ್ ಹ್ಯಾಂಡ್ ಸ್ಕೂಟರ್, ಬೈಕ್ ಖರೀದಿ ಮಾಡುವಂತೆ ಸ್ನೇಹಿತರು, ಸಂಬಂಧಿಗಳು ಸಲಹೆ ನೀಡಿದರೆ ಅಥವಾ ನಿಮಗೇ ಆ ಆಲೋಚನೆ ಇದ್ದಲ್ಲಿ ಅದನ್ನು ಮನಸ್ಸಿನಿಂದ ತೆಗೆದುಹಾಕಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮಲ್ಲಿನ ಸೌಂದರ್ಯ ಪ್ರಜ್ಞೆ ಜಾಸ್ತಿ ಆಗಲಿದೆ. ಬ್ಯೂಟಿಪಾರ್ಲರ್, ಬ್ರ್ಯಾಂಡೆಡ್ ಶರ್ಟ್, ಪ್ಯಾಂಟ್ ಅಥವಾ ಬಟ್ಟೆಗಳಿಗೆ ಹೆಚ್ಚಿನ ಖರ್ಚು ಆಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಕೂಡ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಲ್ಲಿ ಎಷ್ಟು ಹಾಗೂ ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಿ ಎಂಬ ಬಗ್ಗೆ ನಿಗಾ ಇರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಖರ್ಚು ಅಳತೆ ಮೀರಿ ಹೋಗುತ್ತದೆ. ಅನಗತ್ಯ ಸಾಲ, ವೆಚ್ಚಗಳನ್ನು ಮಾಡುವಂತಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸಣ್ಣ- ಪುಟ್ಟ ತಮಾಷೆ, ಮನರಂಜನೆ, ಕುಟುಂಬದವರ ಜತೆಗೆ ಕಿರು ಪ್ರವಾಸ ಇವೆಲ್ಲ ಮನಸ್ಸಿಗೆ ಸಂತೋಷ, ನೆಮ್ಮದಿಯನ್ನು ನೀಡುವಂಥದ್ದು. ಮನೆಯಲ್ಲಿ, ಸಂಬಂಧಿಕರಲ್ಲಿ ನಿಮ್ಮ ಬಗ್ಗೆ ಗೌರವಾದರಗಳು ಹೆಚ್ಚಾಗಲಿವೆ. ಹೊಸ ಆದಾಯ ಮೂಲಗಳನ್ನು ಹುಡುಕಿಕೊಳ್ಳಲಿದ್ದೀರಿ. ಸಂಗಾತಿಯ ಆರೋಗ್ಯ ಸಮಸ್ಯೆಯು ನಿಮಗೆ ಚಿಂತೆ ತರಲಿದೆ. ಧನ್ವಂತರಿ ನಾರಾಯಣನನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಳ್ಳಿ. ನಿಮ್ಮಿಂದ ಸಾಧ್ಯವಾದಲ್ಲಿ ದೇವರ ಮನೆಯಲ್ಲಿ ಹಾಲು- ಸಕ್ಕರೆಯನ್ನು ಅರ್ಪಣೆ ಮಾಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಆಸ್ತಿಯನ್ನೋ ವಾಹನವನ್ನೋ ಅಥವಾ ಮತ್ಯಾವುದಾದರೂ ಮಾರಾಟಕ್ಕೆ ಅಂತ ಇಟ್ಟಿದ್ದಲ್ಲಿ ಸೂಕ್ತ ಖರೀದಿದಾರರು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಸಾಲಗಳು ಇರುವವರು ಅದನ್ನು ತೀರಿಸುವುದಕ್ಕೆ ಏನೇನು ಮಾಡಬೇಕು ಎಂಬ ಬಗ್ಗೆ ಮಾರ್ಗಗಳನ್ನು ಹುಡುಕಿಕೊಳ್ಳಲಿದ್ದೀರಿ. ಯಾವುದೇ ಕೆಲಸವನ್ನು ಈ ದಿನ ಧಾವಂತದಿಂದ ಮಾಡಬೇಡಿ. ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡಿ. ತಂದೆ- ತಾಯಿಯ ಪ್ರವಾಸಕ್ಕಾಗಿ ಸಿದ್ಧತೆ ಮಾಡಿಕೊಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಸ್ವಭಾವದಲ್ಲಿ ತಪ್ಪುಗಳನ್ನು ಹೇಳುವವರು ಈ ದಿನ ಹೆಚ್ಚಾಗಬಹುದು. ಸಣ್ಣ ಪುಟ್ಟ ವೈಫಲ್ಯಕ್ಕೂ ನಿಮ್ಮ ನಿರ್ಧಾರ ಹಾಗೂ ಬೇಜವಾಬ್ದಾರಿ ಕಾರಣ ಎಂದು ಕೆಲವರು ದೂರಬಹುದು. ಆದರೆ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಈ ಹಿಂದೆ ನೀವು ಮಾಡಿದ್ದ ಕೆಲಸ ಹಾಗೂ ತೆಗೆದುಕೊಂಡಿದ್ದ ನಿರ್ಧಾರಗಳು ಮತ್ತು ಪಟ್ಟ ಶ್ರಮದ ಫಲವಾಗಿ ಈ ದಿನ ನಿಮ್ಮ ವರ್ಚಸ್ಸು ಉಳಿಯಲಿದೆ. ಎಲ್ಲಕ್ಕೂ ಪ್ರತಿಕ್ರಿಯೆ ನೀಡಬೇಕು, ಗಟ್ಟಿಯಾದ ಧ್ವನಿಯಲ್ಲಿ ಉತ್ತರ ನೀಡಬೇಕು ಎಂದು ಹೊರಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ದೈಹಿಕ, ಮಾನಸಿಕ ವಿಶ್ರಾಂತಿಯ ಅಗತ್ಯ ಕಂಡುಬರುತ್ತದೆ. ಕುಟುಂಬದವರಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡುವುದಕ್ಕೆ ಆಲೋಚನೆ ಮಾಡುತ್ತೀರಿ. ಸಂಗಾತಿಯ ಮಾತಿಗೆ ಹಾಗೂ ಸಲಹೆಗೆ ಬೆಲೆ ನೀಡಿ. ಮನೆಗೆ ಅಗತ್ಯ ಇರುವ ಕೆಲವು ವಸ್ತುಗಳನ್ನು ತರುವಂಥ ಯೋಗ ಇದೆ. ಈ ಹಿಂದೆ ನೀವು ಕೆಲಸ ಮಾಡಿದ್ದ ಸ್ಥಳದಿಂದ ಕೆಲವು ಮುಖ್ಯ ಮಾಹಿತಿಗಳನ್ನು ಕೇಳುವಂಥ ಸಾಧ‌್ಯತೆ ಇದೆ ಅಥವಾ ನಿಮ್ಮಿಂದ ಕೆಲವು ವಿಚಾರಗಳನ್ನು ಕೇಳಬಹುದು. ಇದರಿಂದ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.

ಲೇಖನ- ಎನ್‌.ಕೆ.ಸ್ವಾತಿ

Published On - 5:30 am, Wed, 22 February 23

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ