Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 8ರ ದಿನಭವಿಷ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 08, 2022 | 6:06 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನ ಭವಿಷ್ಯವನ್ನು (Daily Horoscope) ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 8ರ ದಿನಭವಿಷ್ಯ
ದಿನಭವಿಷ್ಯ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನ ಭವಿಷ್ಯವನ್ನು (Daily Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 8ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ನಿಮ್ಮ ತಂದೆ ಅಥವಾ ತಂದೆಗೆ ಸಮಾನರಾದವರ ಅನಾರೋಗ್ಯ ಚಿಂತೆಗೆ ಕಾರಣವಾಗುತ್ತದೆ. ವೈದ್ಯಕೀಯ ಖರ್ಚುಗಳಿಗಾಗಿ ಸಾಲ ಮಾಡಬೇಕಾಗಬಹುದು. ಈ ದಿನ ನಿಮ್ಮ ಮೊಬೈಲ್ ಫೋನ್ ಅಥವಾ ಸಂಪರ್ಕಿಸುವ ಸಾಧನ ನಿಮ್ಮ ಬಳಿ ಇರಿಸಿಕೊಳ್ಳಿ. ಏಕೆಂದರೆ ನಿಮಗೆ ಬಹಳ ಮುಖ್ಯವಾದವರಿಗೆ ಸಹಾಯದ ಅಗತ್ಯ ಇರುತ್ತದೆ. ಆದ್ದರಿಂದ ನಾಟ್ ರೀಚಬಲ್ ಆಗದಿರಿ.

ಜನ್ಮಸಂಖ್ಯೆ 2

ದಿಢೀರನೆ ಮಂಕು ಬಡಿದವರಂತೆ ಆಗುತ್ತೀರಿ. ಒಂದು ವೇಳೆ ಮನಸ್ಥಿತಿ ಕೆಲಸಕ್ಕೆ ಸಹಕರಿಸುತ್ತಿಲ್ಲ ಎಂದಾದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಅಥವಾ ಮುಖ್ಯವಾದ ಕೆಲಸಗಳು ಇದ್ದಲ್ಲಿ ಮುಂದೂಡಿ. ಶನೈಶ್ಚರನ ಗುಡಿಗೆ ಈ ದಿನ ಭೇಟಿ ನೀಡಿ. ಇದರ ಜತೆಗೆ ಗೋವಿಗೆ ಬಾಳೆಹಣ್ಣು ನೀಡಿ.

ಜನ್ಮಸಂಖ್ಯೆ 3

ಕ್ರೀಡಾಪಟುಗಳಿಗೆ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಪ್ರಾಯೋಜಕರಿಗಾಗಿ ಹುಡುಕುತ್ತಿರುವವರಿಗೆ ಈ ದಿನ ಶುಭ ಸುದ್ದಿ ಇದೆ. ಇನ್ನು ಧರಿಸುವ ದಿರಿಸಿನ ಬಗ್ಗೆ ಗಮನ ಇರಲಿ. ಸ್ವಾದಿಷ್ಟವಾದ ಆಹಾರವನ್ನು ಸೇವಿಸುವ ಯೋಗ ಇದೆ. ಸಣ್ಣ ಸಣ್ಣ ಸಂಗತಿಗಳನ್ನು ಗುರುತಿಸುವ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಜನ್ಮಸಂಖ್ಯೆ 4

ಈ ಹಿಂದೆ ನೀವು ಅಂದಾಜಿಸಿದ್ದ ಘಟನೆ, ಸನ್ನಿವೇಶ ನಿಜವಾಗಲಿದೆ. ಸಹೋದ್ಯೋಗಿಗಳು, ನಿಮ್ಮ ಜತೆ ಇರುವವರು ಬೆರಗಿನಿಂದ ನೋಡಲಿದ್ದಾರೆ. ನಿಮ್ಮಲ್ಲಿ ಕೆಲವರು ಯೋಗ, ಜಿಮ್ ಇಂಥದ್ದಕ್ಕೆ ಸೇರ್ಪಡೆ ಆಗುವುದಕ್ಕೆ ಮುಂದಾಗಲಿದ್ದೀರಿ. ನಿಮ್ಮ ಜತೆಗೆ ಈ ಹಿಂದೆ ಜಗಳ ಮಾಡಿಕೊಂಡವರು ಸಹಾಯ ಕೇಳಿಕೊಂಡು ಬರಲಿದ್ದಾರೆ.

ಜನ್ಮಸಂಖ್ಯೆ 5

ನಿಮ್ಮ ಪ್ರೀತಿಪಾತ್ರರ ಜತೆಗೆ ಸಮಯ ಕಳೆಯಲಿದ್ದೀರಿ. ಅಥವಾ ಅವರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಗುರಿಯನ್ನು ತಲುಪುವುದಕ್ಕೆ ಸರಿಯಾದ ಯೋಜನೆಯನ್ನು ರೂಪಿಸಿಕೊಳ್ಳಲಿದ್ದೀರಿ. ಈಗಾಗಲೇ ಮನೆಯನ್ನು ಕಟ್ಟಲು ಶುರು ಮಾಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಣಕಾಸಿಗೆ ಸಮಸ್ಯೆ ಆಗಬಹುದು.

ಜನ್ಮಸಂಖ್ಯೆ 6

ನಿಮ್ಮ ಹೆಸರು, ಸಾಮಾಜಿಕ ಗೌರವ, ಕೀರ್ತಿಯನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಕೆಲವರು ಪ್ರಯತ್ನಿಸಬಹುದು. ಆದ್ದರಿಂದ ಯಾರನ್ನೇ ಆದರೂ ಅಂತರಂಗದ ವಿಚಾರ ಹೇಳಿಕೊಳ್ಳುವ ತನಕ ಬಿಟ್ಟುಕೊಳ್ಳಬೇಡಿ. ಹಾಗೂ ಅವರಿಗೆ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಬೇಡಿ.

ಜನ್ಮಸಂಖ್ಯೆ 7

ಸುಮ್ಮನೆ ಹವ್ಯಾಸಕ್ಕೆ ಅಂತ ಶುರು ಮಾಡಿದ ಸಂಗತಿಯೊಂದು ನಿಮ್ಮ ಆದಾಯಕ್ಕೆ ದಾರಿ ಮಾಡಿಕೊಡುವ ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಅದರ ಬಗ್ಗೆ ನಿಮಗೆ ಸಂಪೂರ್ಣ ನಂಬಿಕೆ ಮೂಡಬೇಕು. ಇನ್ನು ಅಡುಗೆ ಕೆಲಸ ಮಾಡುವವರು, ಪುರೋಹಿತರು, ಜ್ಯೋತಿಷಿಗಳಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ.

ಜನ್ಮಸಂಖ್ಯೆ 8

ಹಣದ ವಿಚಾರ ಈ ದಿನ ಪ್ರಮುಖವಾಗಿ ಚರ್ಚೆ ಆಗುತ್ತದೆ. ನಿಮ್ಮ ಮನೆಯೊಳಗೆ ಯಾರಿಗೆ ಎಷ್ಟು ಗೌರವ ಮತ್ತು ಆದ್ಯತೆ ಎನ್ನುವುದಕ್ಕೆ ಹಣವು ಅಳತೆಗೋಲಾಗಬಹುದು. ಇನ್ನು ಬೆನ್ನು ನೋವಿನ ಸಮಸ್ಯೆ ಈಗಾಗಲೇ ಇದ್ದಲ್ಲಿ ಈ ದಿನ ದ್ವಿಚಕ್ರ ವಾಹನವನ್ನು ಓಡಿಸದಿರುವುದು ಉತ್ತಮ.

ಜನ್ಮಸಂಖ್ಯೆ 9

ಎಲ್ಲರೂ ಒಪ್ಪುವಂಥ ನಿರ್ಧಾರವನ್ನೇ ತೆಗೆದುಕೊಳ್ಳಬೇಕು ಅಂದುಕೊಳ್ಳದಿರಿ. ಇದರಿಂದ ನೀವು ಮಾನಸಿಕವಾಗಿ ಒತ್ತಡಕ್ಕೆ ಗುರಿ ಆಗುತ್ತೀರಿ. ವಿದೇಶಗಳಿಗೆ ಪ್ರಯಾಣ ಮಾಡಬೇಕು ಎಂದಿರುವವರಿಗೆ ಕಾಗದ- ಪತ್ರ ವಿಚಾರಗಳು ಅಡೆತಡೆಯಾಗಿ ಪರಿಣಮಿಸಬಹುದು. ಹಿರಿಯ ಅಧಿಕಾರಿಗಳ ನೆರವು ತೆಗೆದುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಇದೆ.

ಲೇಖನ- ಎನ್‌.ಕೆ.ಸ್ವಾತಿ

Published On - 6:06 am, Thu, 8 December 22