Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 22ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 22ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 22ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Dec 22, 2023 | 1:32 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 22ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ಬಹಳ ನಿರೀಕ್ಷೆಯೊಂದಿಗೆ ಆರಂಭಿಸಿದ ಕೆಲಸ ಒಂದನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಈ ದಿನ ನೀವೇನಾದರೂ ಸ್ನೇಹಿತರ ಜೊತೆಗೆ ಪ್ರಯಾಣ ಮಾಡುತ್ತಿದ್ದೀರಿ ಅಂತಾದಲ್ಲಿ ಸಾಮಾನ್ಯ ದಿನಗಳಿಗಿಂತ ಬಹಳ ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ. ಅದರಲ್ಲೂ ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದೀರಿ ಅಂತಾದರೆ ಇನ್ನೂ ಹೆಚ್ಚು ಜಾಗ್ರತೆಯನ್ನು ವಹಿಸಿ. ರಾತ್ರಿ ಪ್ರಯಾಣವಂತೂ ಸರ್ವತಾ ಕೂಡದು. ಯಾರು ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಇಂಥದ್ದನ್ನು ಹೆಚ್ಚಿಗೆ ಬಳಸುತ್ತೀರೋ ಅಂಥವರಿಗೆ ಕಣ್ ತಪ್ಪಿನಿಂದ ನಷ್ಟವಾಗುವ ಸಾಧ್ಯತೆಗಳಿವೆ. ಈ ದಿನ ಸಾಧ್ಯವಾದಲ್ಲಿ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣವನ್ನು ಮಾಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೆ ಬೇಕಾಗಿರುವುದೇನು ಅಥವಾ ಬೇಡವಾಗಿರುವುದೇನು ಎಂಬುದರ ಬಗ್ಗೆ ಸ್ಪಷ್ಟತೆಯೇ ಸಿಗದಂತೆ ಆಗುತ್ತದೆ. ಸಂಬಂಧಿಗಳ ಎದುರು ನಿಮಗೆ ಅವಮಾನ ಆಗುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾದಂತಹ ಸನ್ನಿವೇಶ ಸೃಷ್ಟಿಯಾಗಲಿದೆ. ಬಹಳ ನಂಬಿಕೆ ತಿಳಿಸಿದಂಥ ವ್ಯಕ್ತಿಗಳೇ ನಿಮ್ಮ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಲಿದ್ದಾರೆ. ಯಾವುದೇ ಕಾರಣಕ್ಕೂ ಷೇರು ಮಾರುಕಟ್ಟೆಯಲ್ಲೋ ಅಥವಾ ಹೊಸ ಉದ್ಯಮ, ವ್ಯಾಪಾರದಲ್ಲೂ ಹಣ ಹೂಡಿಕೆ ಮಾಡುವುದಕ್ಕೆ ಈ ದಿನ ಮುಂದಾಗಬೇಡಿ. ಹೊಸದಾಗಿ ಪರಿಚಯವಾದಂತಹ ವ್ಯಕ್ತಿಗಳ ಜೊತೆಗೆ ಸಂಸಾರಕ್ಕೆ ಸಂಬಂಧಪಟ್ಟದ್ದು ಅಥವಾ ನಿಮ್ಮ ಅಂತರಂಗದ ವಿಚಾರಗಳನ್ನು ಹಂಚಿಕೊಳ್ಳಲು ಹೋಗಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಾಮಾಜಿಕವಾಗಿ ನಿಮ್ಮ ಸ್ಥಾನ- ಮಾನ ಹೆಚ್ಚಾಗುವಂತಹ ಸಾಧ್ಯತೆಗಳಿವೆ. ಬಹಳ ಹಿಂದಿನಿಂದ ಮನೆಗೆ ತರಬೇಕು ಅಂದುಕೊಂಡಿದ್ದ ವಸ್ತುಗಳನ್ನು ಈಗ ತರಲಿದ್ದೀರಿ. ನವದಂಪತಿ ಇದ್ದಲ್ಲಿ ಪ್ರಯಾಣಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ಅದರಲ್ಲೂ ವಿದೇಶಗಳಿಗೆ ತರಡುವಂತಹ ಯೋಗ ಇದೆ. ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಸಂತಾನಕ್ಕಾಗಿ ಬಹಳ ಸಮಯದಿಂದ ಪ್ರಯತ್ನ ಪಡುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಮೂಲಕ ಸಂತಾನಕ್ಕಾಗಿ ಪ್ರಯತ್ನ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ಸ್ಥಳದ ಬಗ್ಗೆ ಮಾಹಿತಿ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಊಟ ತಿಂಡಿ ವಿಚಾರದಲ್ಲಿಯೇ ಮನೆಯಲ್ಲಿ ಒಂದು ಬಗೆಯ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ಇದೇ ಕಾರಣಕ್ಕೆ ಒಂದು ವೇಳೆ ಬೇಸರ ಅಥವಾ ಮನಸ್ತಾಪ ಉಂಟಾದಲ್ಲಿ ಕೂಗಾಡುವುದಕ್ಕೆ, ಕಿರುಚಾಡುವುದಕ್ಕೆ ಹೋಗಬೇಡಿ. ನೀವು ಬಹಳ ಶ್ರಮಪಟ್ಟು ತಂದಿದ್ದ ವಸ್ತು ಒಂದನ್ನು ಇತರರು ಬಹಳ ತುಚ್ಛವಾಗಿ ಕಾಣುತ್ತಿದ್ದಾರೆ ಎಂದು ನಿಮಗೆ ಅನಿಸಲಿದೆ. ನಿಮ್ಮ ಕೈಕೆಳಗೆ ಕೆಲಸ ಮಾಡುವಂಥವರು ಮೊದಲಿನಂತೆ ಗೌರವ ನೀಡುತ್ತಿಲ್ಲ ಅಂತಲೂ ಅನಿಸಲಿದೆ. ನೆನಪಿಡಿ, ಇದು ಈ ದಿನದ ಅನ್ನಿಸಿಕೆ ಮಾತ್ರ. ಇದನ್ನೇ ನೆಪವಾಗಿಟ್ಟುಕೊಂಡು ಗಂಭೀರವಾದ ಕ್ರಮಗಳನ್ನೇನಾದರೂ ತೆಗೆದುಕೊಂಡರೆ ಆ ನಂತರ ಪರಿತಪಿಸುವಂತಾಗುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬುದನ್ನು ಈ ದಿನ ಚೆನ್ನಾಗಿ ನೆನಪಿಟ್ಟುಕೊಳ್ಳಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ದೊಡ್ಡ ಸಮಸ್ಯೆ ಆಗಬಹುದು ಎಂದುಕೊಂಡಿದ್ದ ವಿಚಾರ ಅಥವಾ ವಿಷಯ ಒಂದು ನಿಮಗೆ ಸಾಧಕವಾಗಿ ಪರಿಣಮಿಸಬಹುದಾದ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಮಾಡುತ್ತಿರುವುದು ಸರಿ ಎಂದು ಖಾತ್ರಿಯಾದ ಮೇಲೆ ಯಾವುದಕ್ಕೂ ಹೆದರಬೇಡಿ. ಆದರೆ ನೀವು ಇದನ್ನು ಹೀಗೆ ಮಾಡಬೇಕು ಎಂದುಕೊಂಡಿದ್ದು ಯಾಕೆ ಎಂಬುದನ್ನು ಸ್ಪಷ್ಟ ಧ್ವನಿಯಲ್ಲಿ ಹೇಳುವುದು ತುಂಬಾ ಮುಖ್ಯವಾಗುತ್ತದೆ. ನಿಮಗಿಂತ ವಯಸ್ಸಿನಲ್ಲಿ ಹಿರಿಯರು, ಅನುಭವಸ್ಥರು ಆಗಿರುವವರಿಗೆ ಕೂಡ ಹೊಳೆಯದಂತಹ ಅನೇಕ ವಿಚಾರಗಳು ಈ ದಿನ ನಿಮಗೆ ಸ್ಫುಟವಾಗಿ ಗೋಚರಿಸಲಿದೆ. ಮುಖ್ಯ ಕೆಲಸಗಳಿಗಾಗಿ ತೆರಳುವ ಮುನ್ನ ಈ ದಿನ ಭೂವರಾಹ ಸ್ವಾಮಿ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿ ಅಥವಾ ಪೂಜಿಸಿ ಆ ನಂತರ ಹೊರಟರೆ ಉತ್ತಮ ಫಲಗಳನ್ನು ಕಾಣುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಎಲ್ಲರನ್ನೂ ಒಪ್ಪಿಸಿಯೇ ನಿರ್ಧಾರ ಕೈಗೊಳ್ಳುತ್ತೀನಿ ಎಂಬ ನಿಮ್ಮ ಪ್ರಯತ್ನ ಪೂರ್ಣ ಪ್ರಮಾಣದಲ್ಲಿ ಕೈಗೂಡುವುದಿಲ್ಲ. ನೀವು ಒಪ್ಪಿಕೊಂಡ ಕೆಲಸದಲ್ಲೋ ಅಥವಾ ಮಾಡುತ್ತಿರುವ ಕಾರ್ಯದಲ್ಲೋ ಲಾಭದ ಪ್ರಮಾಣ ನಿಮಗೆ ಹೆಚ್ಚಿಗೆ ಸಿಗಲಿದೆ ಎಂಬ ಆರೋಪ ಅಥವಾ ಗುಮಾನಿಗಳು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ ಆಗಿ, ಜಿಮ್, ಯೋಗ ಅಥವಾ ಪ್ರಾಣಾಯಾಮಕ್ಕೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ತಾತ್ಕಾಲಿಕವಾಗಿ ಇಷ್ಟವಿಲ್ಲದ ತಂಡದಲ್ಲೋ ವಿಭಾಗದಲ್ಲೋ ಕೆಲಸ ಮಾಡುವಂತಹ ಅನಿವಾರ್ಯ ಸೃಷ್ಟಿಯಾಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಸಮಯ, ಶ್ರದ್ಧೆ ಹಾಗೂ ಏಕಾಗ್ರತೆಯನ್ನು ತೊಡಗಿಸಿ ಬಹಳ ಸಮಯದಿಂದ ಮಾಡುತ್ತಿದ್ದ ಕೆಲಸ ಒಂದನ್ನು ಏಕಾಏಕಿ ನಿಲ್ಲಿಸಿ ಬಿಡುವಂತೆ ಮೇಲಧಿಕಾರಿಗಳು ಸೂಚಿಸುವ ಸಾಧ್ಯತೆಗಳು ಈ ದಿನ ಹೆಚ್ಚಿವೆ. ಯಾರೊಂದಿಗೂ ವಾದ ಮಾಡುತ್ತಾ ನಿಲ್ಲದಿರುವುದು ಉತ್ತಮ. ಈ ಹಿಂದೆ ಯಾವಾಗಲೂ ನೀವು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ಯಾರೋ ಒಬ್ಬರನ್ನು ಉಳಿಸುವುದಕ್ಕೆ ನೀವು ಮಾಡುವ ಪ್ರಯತ್ನಗಳಿಂದಾಗಿ ನಿಮ್ಮ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಈ ದಿನ ಹೆಚ್ಚಿವೆ. ಗಡುವಿನೊಳಗಾಗಿ ಕೆಲಸವನ್ನು ಮಾಡಬೇಕಾದಂತಹವರು ಕೊನೆ ಕ್ಷಣದ ತನಕ ಅದನ್ನು ಉಳಿಸಿಕೊಳ್ಳಲು ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ನಿಮಗೆ ಹೊಟ್ಟೆಗೆ ಸಂಬಂಧಪಟ್ಟಂತಹ ಅನಾರೋಗ್ಯ ಸಮಸ್ಯೆಗಳು ಕಾಡಬಹುದು ಅಥವಾ ಫುಡ್ ಪಾಯಿಸನ್ ಆಗಬಹುದು. ಆದ್ದರಿಂದ ಊಟ ತಿಂಡಿ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿ. ಮುಖ್ಯವಾಗಿ ಸ್ವಚ್ಛತೆ ಕಡೆಗೆ ಜಾಸ್ತಿ ಗಮನವನ್ನು ಕೊಡಿ. ನೀರಿಗೆ ಸಂಬಂಧಪಟ್ಟಂತಹ ವ್ಯವಹಾರಗಳನ್ನು ಮಾಡುವಂಥವರಿಗೆ ಸರ್ಕಾರದ ಕಡೆಯಿಂದ ನೋಟಿಸ್ ನೀಡಬಹುದು ಅಥವಾ ಯಾವುದಾದರೂ ಮಾಹಿತಿ ಅಥವಾ ದಾಖಲಾತಿಗಳನ್ನು ಕೇಳಿಕೊಂಡು ಅಧಿಕಾರಿಗಳು ಬರಬಹುದು. ಆದ್ದರಿಂದ ಇಂಥ ವ್ಯವಹಾರ ಮಾಡುತ್ತಿರುವವರು ಯಾವ್ಯಾವ ಮುಖ್ಯ ದಾಖಲೆಗಳಿವೆಯೋ ಅವುಗಳನ್ನು ಕೈಗೆ ಸಿಗುವಂತೆ ಎತ್ತಿಟ್ಟುಕೊಳ್ಳುವುದು ಉತ್ತಮ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸೋಷಿಯಲ್ ಮೀಡಿಯಾಗಳಲ್ಲಿಯಾಗಲಿ ಅಥವಾ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಫೋನ್ ನಲ್ಲಿ ಮಾತನಾಡುವಾಗ ಆಗಲಿ ಇತರ ವ್ಯಕ್ತಿಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬೀಸಾಗಿ ಹೇಳಬೇಡಿ. ಯಾರೋ ಹೇಳಿದ್ದು, ನೀವು ಎಲ್ಲೋ ಕೇಳಿಸಿಕೊಂಡಿದ್ದು ಇಂಥ ಮಾಹಿತಿಗಳ ಆಧಾರದ ಮೇಲೆ ಒಬ್ಬರ ನಡತೆ ಅಥವಾ ವ್ಯಕ್ತಿತ್ವದ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡದಿರುವುದು ಕ್ಷೇಮ. ಕಡಿಮೆ ಬೆಲೆಗೆ ಸಿಗುತ್ತಿದೆ ಅಥವಾ ಸ್ನೇಹಿತರೊಬ್ಬರು ತುಂಬಾ ಕಡಿಮೆ ಬೆಲೆಗೆ ಕೊಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ನಿಮಗೆ ಬೇಡದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಈ ದಿನ ಮುಂದಾಗಬೇಡಿ. ಇನ್ನು ಪ್ರೀತಿ, ಪ್ರೇಮದಲ್ಲಿ ಇರುವಂತಹವರಿಗೆ ಅಭಿಪ್ರಾಯ ಭೇದಗಳು ಉದ್ಭವಿಸಬಹುದು.

ಲೇಖನ- ಎನ್‌.ಕೆ.ಸ್ವಾತಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ