Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 11ರ ದಿನಭವಿಷ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Jan 11, 2023 | 6:10 AM

ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 11ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 11ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 11ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Yearly Horoscope 2023: 12 ರಾಶಿಗಳ ವರ್ಷ ಭವಿಷ್ಯ ಹೇಗಿದೆ? ಯಾರಿಗಿದೆ ಅದೃಷ್ಟ?

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ದಿನ ನಿಮ್ಮಂತೆ ನೀವಿದ್ದರೆ ಸಾಕು. ಏನೋ ಮಹತ್ತರವಾದದ್ದು ಸಂಭವಿಸಲಿದೆ. ಅದು ಕೂಡ ಸಂಬಂಧದ ವಿಷಯದಲ್ಲಿ. ಇದರಿಂದ ನಿಮ್ಮ ಮನಸ್ಸಿಗೂ ಸಂತೋಷ ಆಗಲಿದೆ. ಗೊಂದಲಗಳು ಪರಿಹಾರ ಆಗುತ್ತದೆ. ಪ್ರೀತಿ- ಸ್ನೇಹ ಇನ್ನಷ್ಟು ಗಟ್ಟಿ ಆಗುತ್ತದೆ. ನೀವು ಮಾಡಬೇಕಾದ್ದೆಲ್ಲ ಇಷ್ಟೇ, ಬಿಗುಮಾನ ಬಿಡಿ, ಮುಕ್ತ ಮನಸ್ಸಿನಿಂದ ಇರಿ. ಮನರಂಜನೆಗಾಗಿ, ರೆಸ್ಟೋರೆಂಟ್ ಇಂಥವುಗಳಿಗಾಗಿ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಯಾರನ್ನೋ ಸ್ಪರ್ಧಿ ಅಂತ ಅಂದುಕೊಂಡು ಬಿಟ್ಟಿದ್ದರೆ ಅದನ್ನು ತಲೆಯಿಂದ ತೆಗೆದು ಹಾಕಬೇಕಾದ ದಿನ ಇದು. ಏಕೆಂದರೆ, ದೊಡ್ಡ ಅವಕಾಶ ನಿಮ್ಮೆದುರು ಕಾಯುತ್ತಾ ಇದೆ. ಆ ಕಡೆಗೆ ಲಕ್ಷ್ಯ ನೀಡಬೇಕು. ಸಣ್ಣ- ಪುಟ್ಟ ವಿಚಾರಗಳು, ಅನುಮಾನಗಳು, ಕೀಳರಿಮೆ ನಿಮ್ಮ ಅವಕಾಶದಿಂದ ದೂರಕ್ಕೆ ತಳ್ಳಬಾರದು. ಈ ದಿನ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡಿ, ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ಇದನ್ನೂ ಓದಿ: Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜ.8ರಿಂದ 14ರ ವರೆಗಿನ ವಾರಭವಿಷ್ಯ, ಯಾವ ರಾಶಿಗೆ ಏನು ಫಲ?

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಮನೆಯಲ್ಲಿನ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗ್ರತೆ ವಹಿಸಿ. ಹೊಸಬರನ್ನು ಮನೆಯೊಳಗೆ ಸೇರಿಸಿಕೊಳ್ಳುವ ಮುನ್ನ, ಖಾಸಗಿ ಸ್ಥಳಗಳಿಗೆ ಕರೆದೊಯ್ಯುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ, ಸಂಗೀತಗಾರರಿಗೆ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ದೇವಾಲಯ ಪಾರುಪತ್ತೆದಾರರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ಆಲಸ್ಯ ನಿಮ್ಮನ್ನು ಕಾಡಲಿದೆ. ಎಲ್ಲ ವಿಚಾರದಲ್ಲೂ ಒಂದು ಬಗೆಯ ನಿರಾಸಕ್ತಿ ಇರಲಿದೆ. ಇದು ಸಿಟ್ಟಾಗಿ ಪರಿವರ್ತನೆ ಆಗದಂತೆ ನೋಡಿಕೊಳ್ಳಿ. ಸ್ವಂತ ವ್ಯವಹಾರ ಮಾಡುತ್ತಿರುವವರು ಏನಾದರೂ ಬ್ಯಾಂಕ್‌ ಕೆಲಸಗಳು ಅಥವಾ ವ್ಯವಹಾರಗಳು ಇದ್ದರೆ ಅನಿವಾರ್ಯ ಅಂತಿಲ್ಲದಿದ್ದರೆ ಮುಂದೂಡುವುದು ಉತ್ತಮ. ಕೃಷಿಕರಿಗೆ ಮಿಶ್ರವಾದ ದಿನ ಇದು. ನಿಮ್ಮ ನಿಷ್ಠೆ ಬಗ್ಗೆ ಇತರರು ಪ್ರಶ್ನೆ ಎತ್ತುವುದು ಸಿಟ್ಟಿಗೆ ಕಾರಣ ಆಗುತ್ತದೆ,

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ವಿನಾಕಾರಣ ಶತ್ರುತ್ವ ಬೆಳೆಯುವಂತೆ ಆಗುತ್ತದೆ. ವಾಹನಗಳು ಪದೇ ಪದೇ ರಿಪೇರಿಗೆ ಬರುತ್ತವೆ. ಸಾಧ್ಯವಾದಷ್ಟೂ ವಾಹನಗಳನ್ನು ಬೇರೆಯವರಿಗೆ ನೀಡದಿರಿ. ಅಥವಾ ನೀವೇ ಚಲಾಯಿಸುವಾಗ ಕೂಡ ಹೆಚ್ಚಿನ ನಿಗಾ ಮಾಡಿ. ದೇವರ ಮೇಲೆ ನಂಬಿಕೆ ಕಳೆದುಕೊಳ್ಳದಿರಿ ಹಾಗೂ ತಪ್ಪು ವಿಚಾರಗಳಿಗೆ ಮನಸ್ಸು ಕೊಡದಿರಿ. ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗೆ ಮಾತನಾಡುವಾಗ ಪದ ಬಳಕೆ ಮೇಲೆ ಹಿಡಿತ ಇರಲಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಎಲ್ಲ ಸಂದರ್ಭದಲ್ಲೂ ನೇರ ಮಾತು ಕೆಲಸಕ್ಕೆ ಬರುವುದಿಲ್ಲ. ಬಹಳ ಡಿಪ್ಲೊಮಾಟಿಕ್ ಆಗಿ ಮಾತನಾಡಿ, ವ್ಯವಹಾರಗಳನ್ನು ಇತ್ಯರ್ಥ ಮಾಡಿಕೊಳ್ಳಿ. ನಿಮ್ಮೆದುರು ಹೇಗೆ ಕಾಣಿಸಿಕೊಳ್ಳುತ್ತಾರೆ ಅದನ್ನೇ ನಿಜ ಅಂದುಕೊಳ್ಳದಿರಿ. ಮದುವೆ, ನಿಶ್ಚಿತಾರ್ಥದ ಮಾತುಕತೆಗಳು ಇದ್ದಲ್ಲಿ ತುಂಬ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ತಾಯಿಯ ಕಡೆ ಸಂಬಂಧಿಕರು ಈ ದಿನ ಮನೆಗೆ ಬರುವಂಥ ಸಾಧ್ಯತೆ ಇದೆ. ಸಂಜೆ ನಂತರ ಬಿಡುವಿಲ್ಲದಷ್ಟು ಬಿಜಿ ಆಗುತ್ತೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವಂದುಕೊಂಡಂತೆ ಖರ್ಚು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲವೇ ಎಂದು ಪೇಚಾಡಿಕೊಳ್ಳುತ್ತೀರಿ. ಸಣ್ಣದಾದರೂ ಸರಿ ಪ್ರವಾಸಕ್ಕೆ ತೆರಳುವ ಯೋಗ ನಿಮ್ಮ ಪಾಲಿಗಿದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಸ್ವಲ್ಪ ಮಟ್ಟಿಗೆ ದೇಹಾಯಾಸ ಕೂಡ ಆಗಲಿದೆ. ಅದರರ್ಥ, ನಿಮಗೆ ನಡೆದುಹೋಗುವುದಕ್ಕೋ ಹೊತ್ತು ತರುವುದಕ್ಕೋ ಇಷ್ಟವಿಲ್ಲದಿದ್ದರೆ ಇಲ್ಲ- ಆಗಲ್ಲ ಎಂದು ಹೇಳಲಾಗದೆ ಇಂಥದ್ದೊಂದು ಸ್ಥಿತಿಗೆ ಸಿಲುಕಿಕೊಳ್ಳುತ್ತೀರಿ. ಮಕ್ಕಳ ಜತೆ ಮಾತನಾಡುವಾಗ ಸಂಯಮ ಇರಲಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ಪಾರ್ಟಿಗಳಲ್ಲಿ ಭಾಗೀ ಆಗುವುದಕ್ಕೆ ನಿಮ್ಮನ್ನು ಕರೆಯಲಿದ್ದಾರೆ. ಪರಿಚಯಗಳು, ಹೊಸ ಹೊಸ ಜನರ ಸಂಪರ್ಕ ನಿಮ್ಮ ಪಾಲಿಗೆ ಒದಗಿ ಬರಲಿದೆ. ವಿದೇಶಗಳಿಗೆ ಯಾವುದಾದರೂ ಟ್ರಾನ್ಸಿಷನ್‌ಗೆ ಹೋಗಬೇಕೆಂದಿರುವವರಿಗೆ ಒಂದಿಲ್ಲೊಂದು ನಿರಾಶೆ ಆಗುವಂಥ ವರ್ತಮಾನ ಬರಬಹುದು. ಆದರೆ ಇದು ತಾತ್ಕಾಲಿಕ ಗೊಂದಲ ಅಷ್ಟೇ ಆಗಿರುತ್ತದೆ. ಯಾರ ಮೇಲೂ ಸಿಟ್ಟಾಗಬೇಡಿ. ಕಣ್ಣಿನ ಸಮಸ್ಯೆಗಳು ಕಾಡಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಅನುಮಾನಗಳು ನಿಜ ಆಗಬೇಕು ಅಂತೇನಿಲ್ಲ. ಹಿಂದೆ ಯಾವಾಗಲೋ ಆದ ಕೆಟ್ಟ ಅನುಭವವೊಂದನ್ನು ಈಗ ಹೋಲಿಕೆ ಮಾಡುತ್ತಾ ಹೋಗದಿರಿ. ವಿದೇಶಕ್ಕೆ ಹೋಗುವುದಕ್ಕೆ ಪ್ರಯತ್ನ ಪಡುತ್ತಿರುವವರಿಗೆ ಶುಭ ವಾರ್ತೆ ಕೇಳುವ ಯೋಗ ಇದೆ. ಸೈಟು ಖರೀದಿ ಮಾಡಬೇಕು ಅಂತಿದ್ದಲ್ಲಿ ಇಷ್ಟು ಆಗುವಂಥ ಜಾಗ ಸಿಗಲಿದೆ. ಈ ದಿನ ಮನೆಯಿಂದ ಹೊರಗೆ ಹೋಗುವ ಮುನ್ನ ಹಸಿ ಕಡಲೇಕಾಳು ಬಾಯಿಗೆ ಹಾಕಿಕೊಂಡು ಹೋಗಿ.

ಲೇಖನ- ಎನ್‌.ಕೆ.ಸ್ವಾತಿ