Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 12ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 12ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 12ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ದಿನ ದಯೆ- ಕರುಣೆ, ಅನುಕಂಪ ನಿಮಗೆ ಹೆಚ್ಚಾಗಿರುತ್ತದೆ. ಇನ್ನು ನಲವತ್ತು ವರ್ಷ ಮೇಲ್ಪಟ್ಟವರಿದ್ದಲ್ಲಿ ಕೆಲವು ಮೂಲಭೂತ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಮುಖ್ಯವಾಗಿ ದೇಹದ ತೂಕದ ಕಡೆಗೆ ನಿಗಾ ಕೊಡಿ. ಇತರರ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡಿ. ಸಾಧ್ಯವಾದಲ್ಲಿ ಸಾಯಿಬಾಬ ಮಂದಿರ ಅಥವಾ ಗುರುದ್ವಾರಕ್ಕೆ ಭೇಟಿ ನೀಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮಗೆ ಗೊತ್ತೇ ಆಗದಂತೆ ಬೆನ್ನ ಹಿಂದೆ ಏನೋ ಮಸಲತ್ತು ನಡೆಯುತ್ತಿದೆ ಎಂಬ ಗುಮಾನಿ ನಿಮಗೆ ಮೂಡುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಕೆಲವು ಬೆಳವಣಿಗೆಗಳು ಕೂಡ ಆಗಬಹುದು. ಆ ಕಾರಣಕ್ಕೆ ನಿಮ್ಮ ನೆಮ್ಮದಿ ಹಾಳುಮಾಡಿಕೊಳ್ಳದಿರಿ, ಯಾರನ್ನೂ ದೂಷಣೆ ಮಾಡದಿರಿ. ಏಕೆಂದರೆ ಇದು ತಾತ್ಕಾಲಿಕ ಅಷ್ಟೇ. ಇಂದು ಸಾಧ್ಯವಾದಲ್ಲಿ ನೀವು ಇಚ್ಛೆ ಅಥವಾ ನಂಬಿಕೆಯಂತೆ ಭಗವದ್ಗೀತೆ, ಕುರ್‌ಆನ್ ಅಥವಾ ಬೈಬಲ್ ಹೀಗೆ ಯಾವುದಾದರೂ ಪ್ರವಚನವನ್ನು ಸ್ವಲ್ಪ ಸಮಯ ಕೇಳಿಸಿಕೊಳ್ಳಿ.
ಇದನ್ನೂ ಓದಿ: Yearly Horoscope 2023: 12 ರಾಶಿಗಳ ವರ್ಷ ಭವಿಷ್ಯ ಹೇಗಿದೆ? ಯಾರಿಗಿದೆ ಅದೃಷ್ಟ?
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಷೇರು ಮಾರುಕಟ್ಟೆ, ಲೋಹದ ವ್ಯಾಪಾರ, ಎಲೆಕ್ಟ್ರಿಕಲ್ ವಸ್ತುಗಳ ಮಾರಾಟ ಮಾಡುವವರಿಗೆ ಈ ದಿನ ಮಿಶ್ರ ಫಲ ಇದೆ. ನೀವೇ ಮಾಡಬೇಕಾದ ಕೆಲಸವನ್ನು ಇನ್ನೊಬ್ಬರಿಗೆ ವಹಿಸುವುದಕ್ಕೆ ಹೋಗಬೇಡಿ. ಇನ್ನು ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಸಣ್ಣ- ಪುಟ್ಟ ಅನಾರೋಗ್ಯ ಆಗಬಹುದು. ಇನ್ನು ವಿದ್ಯಾರ್ಥಿಗಳು ಪ್ರಯಾಣದ ಮೂಲಕ ಹೊಸದನ್ನು ಕಲಿಯಲಿದ್ದಾರೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮಗೆ ಕೌನ್ಸೆಲಿಂಗ್‌ನ ಅಗತ್ಯ ಇದೆ, ಸಣ್ಣ- ಪುಟ್ಟ ವಿಚಾರಗಳಿಗೂ ವಿಪರೀತ ರಿಯಾಕ್ಟ್ ಮಾಡುತ್ತಿದ್ದೀರಿ ಎಂದು ಯಾರಾದರೂ ನಿಮಗೆ ಹೇಳಿದಲ್ಲಿ ಅದನ್ನು ಗಂಭೀರವಾಗಿ ಆಲೋಚಿಸಿ. ಮನಸ್ಸು ಪ್ರಶಾಂತವಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಿ. ನನ್ನಿಂದ ಎಲ್ಲರೂ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ, ನನ್ನ ಸಾಮರ್ಥ್ಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತ ನಿಮಗೆ ಅನಿಸುವ ಸಾಧ್ಯತೆ ಇದೆ. ನಿಮ್ಮ ಕಣ್ಣಿಗೆ ಇರುವೆಗಳ ಗುಂಪು ಕಂಡರೆ ಅವುಗಳಿಗೆ ಸಕ್ಕರೆ ಹಾಕಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಎಲ್ಲ ಟೀಕೆಗಳಿಗೂ ಉತ್ತರಿಸಲೇಬೇಕು ಅಂತಿಲ್ಲ. ನಿಮ್ಮ ಉದ್ದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಸಾಬೀತು ಮಾಡುವುದಕ್ಕೆ ಜಾಸ್ತಿ ಸಮಯ ಕೊಡದಿರಿ. ಇನ್ನು ಮನರಂಜನೆಯ ದಿನವಾಗಿರಲಿದೆ, ನೀವು ಮುಕ್ತವಾಗಿ ಆಲೋಚಿಸಬೇಕು ಅಷ್ಟೇ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಅಂದುಕೊಳ್ಳುವವರು ಈ ದಿನ ಸೂಕ್ತ ವ್ಯಕ್ತಿಯನ್ನು ಭೇಟಿ ಆಗಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಬುದ್ಧಿ ಬಹಳ ಚುರುಕಾಗಿ ಹಾಗೂ ಸಮಯೋಚಿತವಾಗಿ ಬಳಸಿ, ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಬ್ಯಾಂಕ್ ಕೆಲಸಗಳನ್ನು ಬೇಗ ಬೇಗ ಮುಗಿಸುವುದಕ್ಕೆ ಮಾಡುವ ಪ್ರಯತ್ನಗಳು ಸಫಲವಾಗಲಿವೆ. ರೈಲು ಪ್ರಯಾಣ ಮಾಡುವಂಥವರು ಈ ದಿನ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಗಿ ನಿಮ್ಮ ವಸ್ತುಗಳನ್ನು ಜೋಪಾನ ಮಾಡಿಟ್ಟುಕೊಳ್ಳಿ. ಸಾಧ್ಯವಾದಲ್ಲಿ ಪ್ರಯಾಣವನ್ನು ಮುಂದೂಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ದಿನ ಮನಸ್ಸಿನಲ್ಲಿ ಒಂದು ಬಗೆಯ ಉತ್ಸಾಹ, ಉಲ್ಲಾಸ ಇರುತ್ತದೆ. ಮನಸ್ಸಿನಲ್ಲಿನ ಪ್ರೀತಿಯನ್ನು ಸಂಗಾತಿ ಜತೆಗೆ ಮುಕ್ತವಾಗಿ ಹಂಚಿಕೊಳ್ಳಿ. ಜತೆಯಾಗಿ ವಾಕಿಂಗ್ ಹೋಗಿಬನ್ನಿ. ಒಂದು ವೇಳೆ ಪರಸ್ಪರ ಪ್ರೇಮಿಗಳಾದರೂ ಸರಿ, ಇವತ್ತು ಸ್ವಲ್ಪ ಸಮಯ ಜತೆಗೆಯಾಗಿ ಇರಿ. ನಿಮ್ಮ ಭವಿಷ್ಯದ ಅತಿ ದೊಡ್ಡ ಕನಸು ರೂಪುಗೊಳ್ಳಬಹುದಾದ ದಿನ ಇದು. ನಿಮ್ಮ ಮೊಬೈಲ್‌ನಲ್ಲಿ ಅವಕಾಶ ಇದ್ದರೆ ಲಕ್ಷ್ಮೀ ಚಿತ್ರವನ್ನು ಸ್ಕ್ರೀನ್ ಸೇವರ್ ಮಾಡಿಕೊಳ್ಳಿ ಅಥವಾ ವಾಟ್ಸ್ ಆಪ್ ಡಿಪಿ ಆಗಿಯಾದರೂ ಮಾಡಿಟ್ಟುಕೊಳ್ಳಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಹೋಮ್ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್ ಅಥವಾ ವ್ಯಾಪಾರದ ಸಲುವಾಗಿ ಸಾಲ ಹೀಗೆ ಯಾವುದಾದರೂ ಸಾಲಕ್ಕೆ ಪ್ರಯತ್ನಿಸುವ ಅಥವಾ ಆ ಬಗ್ಗೆ ವಿಚಾರಿಸುವ ಸಾಧ್ಯತೆ ಇದೆ. ನಿಮ್ಮ ಅಗತ್ಯ ಅಥವಾ ಆ ಪ್ರಾಜೆಕ್ಟ್‌ಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಸಾಲ ಮಾಡಿ. ಬಡ್ಡಿ ಕಡಿಮೆ ಅಥವಾ ಇಎಂಐ ಕಡಿಮೆ ಅಂತ ಜಾಸ್ತಿ ಸಾಲಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ವಿದೇಶ ವ್ಯಾಸಂಗಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಹಣಕಾಸು ನೆರವು, ಮಾರ್ಗದರ್ಶನ ದೊರೆಯಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸವಾಲಿನ ದಿನವಾಗಿರುತ್ತದೆ. ಬೆಳ್ಳಿ- ಬಂಗಾರ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಲಿದ್ದೀರಿ. ನಿಮ್ಮ ಕೈ ಕೆಳಗೆ ನಿಷ್ಠೆಯಿಂದ ದುಡಿಯುತ್ತಿರುವವರ ಬಗ್ಗೆ ಅನುಮಾನ ಪಡುವಂತಾಗುತ್ತದೆ. ಇದರಿಂದ ನೀವು ಇಷ್ಟು ಸಮಯ ಬೆಳೆಸಿಕೊಂಡಿರುವ ವಿಶ್ವಾಸಕ್ಕೆ ಧಕ್ಕೆ ಆಗಲಿದೆ.
ಲೇಖನ- ಎನ್.ಕೆ.ಸ್ವಾತಿ
Published On - 6:07 am, Thu, 12 January 23