ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜನವರಿ 15ರಿಂದ 21ರ ತನಕ ವಾರಭವಿಷ್ಯ (Numerology Weekly Horoscope) ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
ನಿಮ್ಮ ಮೇಲಧಿಕಾರಿಗಳ ಜತೆಗೆ ಸಣ್ಣ- ಪುಟ್ಟ ವಿಚಾರವು ವ್ಯಾಜ್ಯ ರೂಪ ಪಡೆದುಕೊಳ್ಳುತ್ತದೆ. ನೀವು ಆಡದ ಮಾತುಗಳನ್ನು ನೀವೇ ಆಡಿದ್ದೀರಿ, ಇದು ನಾನೇ ಕೇಳಿಸಿಕೊಂಡಿದ್ದೀನೆಂದು ಕೆಲವರು ನಿಮ್ಮೊಂದಿಗೆ ವಾದಕ್ಕೆ ಇಳಿಯಬಹುದು. ನಂಬಲೇಬಾರದು ಎಂದು ನಿಶ್ಚಯಿಸಿದವರನ್ನು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಕೃಷಿಕರಿಗೆ ಭವಿಷ್ಯದ ಚಿಂತೆ ಬಹಳವಾಗಿ ಕಾಡಲಿದೆ. ಅದರಲ್ಲೂ ಹೆಣ್ಣುಮಕ್ಕಳು ಇರುವಂಥವರು ಮದುವೆಗೆ ಹಣ ಹೊಂದಿಸುವ ಬಗ್ಗೆ ತೀರಾ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನು ವೃತ್ತಿನಿರತರಿಗೆ ಪ್ರತಿಸ್ಪರ್ಧಿಗಳು ಹೆಚ್ಚಾಗುತ್ತಿದ್ದಾರೆ ಎಂಬ ಭಾವವು ಮನಸ್ಸಿನಲ್ಲಿ ಮೂಡುತ್ತದೆ. ನೀವು ವಿಧಿಸುವ ಶುಲ್ಕಕ್ಕಿಂತ ಬಹಳ ಕಡಿಮೆ ಮೊತ್ತಕ್ಕೆ ಕೆಲಸ ಮಾಡಿಕೊಡುತ್ತಾ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ಕೆಲವು ಮುಖ್ಯ ವಿಚಾರಗಳು ಮರೆತು ಹೋಗಿ, ಸ್ನೇಹಿತರ ಮಧ್ಯೆ ನಗೆಪಾಟಲಿಗೆ ಗುರಿ ಆಗಬೇಕಾಗುತ್ತದೆ. ಮಹಿಳೆಯರಿಗೆ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ಪ್ರಭಾ ವಲಯ ವಿಸ್ತರಿಸಲಿದೆ.
ನಾನು ಬೇರೆಯವರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತೇನೆಯೇ ವಿನಾ ನನ್ನ ಕಷ್ಟ- ಸುಖಗಳಿಗೆ ಯಾರೂ ಆಗುವುದಿಲ್ಲ ಎಂದು ಬಲವಾಗಿ ಅನಿಸುವುದಕ್ಕೆ ಶುರು ಆಗುತ್ತದೆ. ಹೂಡಿಕೆಗಾಗಿ ನಿಮ್ಮಲ್ಲಿ ಕೆಲವರು ಭೂಮಿ, ಸೈಟಿಗಾಗಿ ಹುಡುಕಾಟವನ್ನು ಶುರು ಮಾಡಲಿದ್ದೀರಿ. ಕೃಷಿ ಹಾಗೂ ಕೃಷಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರಿ ಕೆಲಸದಲ್ಲಿ ಭಾರೀ ನಿಧಾನ ಆಗಲಿದೆ. ಅಥವಾ ಈಗಾಗಲೇ ನೀವು ಸಲ್ಲಿಸಿದ ದಾಖಲಾತಿಗಳು ಕಳೆದುಹೋಗುವಂಥ ಸಾಧ್ಯತೆಗಳು ಹೆಚ್ಚಿಗೆ ಇವೆ. ವೃತ್ತಿನಿರತರು ಯಾವುದೋ ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಆದರೆ ಇದರಿಂದ ಆಗಬೇಕಾದ ಕೆಲಸವು ಪೂರ್ಣ ಪ್ರಮಾಣದಲ್ಲಿ ಆಗದೆ ಮತ್ತೊಮ್ಮೆ ಹೋಗಲೇಬೇಕಾದ ಸನ್ನಿವೇಶವು ಉದ್ಭವಿಸುತ್ತದೆ. ಆದ್ದರಿಂದ ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡು, ಸೂಕ್ತ ಸಿದ್ಧತೆ ಮಾಡಿಕೊಂಡು ಹೋಗಿ. ವಿದ್ಯಾರ್ಥಿಗಳಿಗೆ ಈ ವಾರ ಮಿಶ್ರ ಫಲಿತಾಂಶ ಕಾಣುವ ಯೋಗ ಇದೆ. ನಿಮ್ಮ ಜೀವನದ ಗುರಿಯನ್ನೇ ಬದಲಾಯಿಸುವಂಥ ವ್ಯಕ್ತಿಯೊಬ್ಬರನ್ನು ಭೇಟಿ ಆಗಲಿದ್ದೀರಿ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಹೊಟ್ಟೆನೋವು, ಬೆನ್ನು ಹುರಿ ಸಮಸ್ಯೆ ಕಾಡಬಹುದು.
ನಿಮ್ಮ ಆತ್ಮವಿಶ್ವಾಸವೇ ನಿಮ್ಮನ್ನು ಕಾಪಾಡಲಿದೆ. ನಿಮಗೆ ಸರಿ ಎಂದು ಗೊತ್ತಿದ್ದ ವಿಚಾರವನ್ನು ಹೇಳುವುದಕ್ಕೆ ಹಿಂದೆ ಮುಂದೆ ಆಲೋಚಿಸಬೇಡಿ. ಮೇಲಧಿಕಾರಿಗಳ ಜತೆಗೆ ಮುಖ್ಯವಾದ ಚರ್ಚೆಗಳು ಏರ್ಪಾಡಾಗಬಹುದು. ಈ ವೇಳೆ ನೀವು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂಥ ಸಮಯ. ಇದಕ್ಕಾಗಿ ಹಣ, ಸಮಯ ಮೀಸಲಿಡಲಿದ್ದೀರಿ. ವೃತ್ತಿ ನಿರತರಿಗೆ ಬಿಡುವಿಲ್ಲದಷ್ಟು ಕೆಲಸ ಇರುತ್ತದೆ. ಕುಟುಂಬ ಸದಸ್ಯರ ಜತೆಗೆ ಸ್ವಲ್ಪ ಸಮಯ ಕಳೆಯೋಣ ಅಂದುಕೊಂಡರೂ ಸಾಧ್ಯ ಇರದ ಮಟ್ಟಿಗೆ ನಿಮ್ಮ ಹೆಗಲ ಮೇಲೆ ಕೆಲಸಗಳು ಬೀಳುತ್ತವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಅಂಕ, ಸ್ನೇಹಿತರ ಮಧ್ಯೆ ನಿಮ್ಮ ಬಗ್ಗೆ ಉತ್ತಮವಾದ ಗೌರವ ದೊರೆಯಲಿದೆ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಿಗೆ ಹೆಚ್ಚಿನ ಹುದ್ದೆ, ಜವಾಬ್ದಾರಿಗಳು ದೊರೆಯಲಿವೆ. ಅನಿರೀಕ್ಷಿತವಾಗಿ ದೊಡ್ಡ ಮೊತ್ತ ಸಹ ನಿಮ್ಮ ಕೈ ಸೇರುವಂತಹ ಯೋಗ ಕಂಡು ಬಡುತ್ತಿದೆ.
ಏಕಾಏಕಿ ಹಲವರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರುತ್ತದೆ. ನಿಮಗೇ ಅಚ್ಚರಿ ಆಗುವ ರೀತಿಯಲ್ಲಿ ಯಾರ್ಯಾರೋ ನಿಮ್ಮನ್ನು ಭೇಟಿ ಮಾಡುವುದಕ್ಕೆ, ಕರೆ ಮಾಡುವುದಕ್ಕೆ ಆರಂಭಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ನೆಲದ ಮೇಲೆಯೇ ನಿಂತ ಕಾಲು ಹಾಗೇ ನೆಟ್ಟಿರಲಿ. ಅಹಂಕಾರ ಪಡದಿರಿ. ಕೃಷಿಕರಿಗೆ ಅಧ್ಯಯನಕ್ಕಾಗಿ ಹೊಸ ಪ್ರದೇಶಗಳಿಗೆ ಪ್ರಯಾಣಕ್ಕೆ ತೆರಳುವಂಥ ಯೋಗ ಇದೆ. ಇದರ ಜತೆಗೆ ಮನೆಗೆ ಹೊಸ ಹೊಸ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ವೃತ್ತಿ ನಿರತರಿಗೆ ಬಹಳ ಸಮಯದಿಂದ ಎದುರು ನೋಡುತ್ತಿದ್ದ ಹುದ್ದೆ ಅಥವಾ ಜವಾಬ್ದಾರಿ ದೊರೆಯಲಿದೆ. ಇಷ್ಟು ಕಾಲ ಯಾರು ನಿಮ್ಮನ್ನು ತಿರಸ್ಕಾರದಿಂದ ನೋಡುತ್ತಿದ್ದರೋ ಅವರೇ ತಮ್ಮದೊಂದು ಕೆಲಸ ಆಗಬೇಕು ಎಂದು ಹುಡುಕಿಕೊಂಡು ಬರಲಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಆಹಾರ- ನೀರಿನಲ್ಲಿ ಏರುಪೇರಾಗಿಒ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು. ಆದ್ದರಿಂದ ಶುಚಿಯಾದ ಆಹಾರ- ಶುದ್ಧವಾದ ನೀರಿನ ಸೇವನೆ ಕಡೆಗೆ ಗಮನವನ್ನು ನೀಡಿ. ಮಹಿಳೆಯರು ಇತರರ ಮದುವೆ ವಿಚಾರಕ್ಕೆ ಮಾತುಕತೆ ಆಡುವುದಕ್ಕೆ ತೆರಳುವಂಥ ಯೋಗ ಇದೆ.
ನೀವಾಡಿದ ಮಾತು ನಿಮಗೇ ಬೂಮ್ ರಾಂಗ್ ಆಗುವ ಸಾಧ್ಯತೆಗಳಿವೆ. ಕಷ್ಟಪಟ್ಟು ಬೆಳೆಸಿಕೊಂಡಿದ್ದ ವರ್ಚಸ್ಸು, ರೂಢಿಸಿಕೊಂಡಿದ್ದ ಸಂಪರ್ಕ ಎಲ್ಲವೂ ಏಕಾಏಕಿ ಕಡಿತ ಆಗುವ ಸಾಧ್ಯತೆ ಇದೆ. ಆದ್ದರಿಂದ ಪಾರದರ್ಶಕವಾಗಿ ನಡೆದುಕೊಳ್ಳುವುದಕ್ಕೆ ಪ್ರಯತ್ನಿಸಿ. ಕ್ಷಮೆ ಕೇಳಿದರೆ ಸಮಸ್ಯೆಗಳು ಬಗೆಹರಿಯುತ್ತದೆ ಎಂದಾದಲ್ಲಿ ಯಾವುದೇ ಅಹಂಕಾರ ಇಟ್ಟುಕೊಳ್ಳದೆ ಕ್ಷಮೆ ಕೇಳಿಬಿಡಿ. ಇನ್ನು ಕೃಷಿಕರಿಗೆ ಫಸಲು ನಷ್ಟ, ಮಾಡಿದ್ದ ಹೂಡಿಕೆಯಲ್ಲಿ ನಷ್ಟ, ಇತರರ ಚಾಡಿ ಮಾತಿನಿಂದ ಮನಸ್ಸಿಗೆ ಘಾಸಿ ಇತ್ಯಾದಿ ಅಶುಭ ಫಲಗಳು ಇವೆ. ವೃತ್ತಿ ನಿರತರಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಸವಾಲೊಂದು ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಒದಗಿ ಬರುತ್ತದೆ. ಅನುಭವಿಗಳು, ನೀವು ಗೌರವಿಸುವಂಥ ವ್ಯಕ್ತಿಗಳು ಏನಾದರೂ ಸಲಹೆ ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ. ಮಹಿಳೆಯರು ಚಿನ್ನಾಭರಣ, ವಸ್ತ್ರ ಇತ್ಯಾದಿಗಳನ್ನು ಖರೀದಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇದಕ್ಕಾಗಿ ನಿಮ್ಮ ಸಂಗಾತಿಯಿಂದ ಹಣ ಪಡೆದುಕೊಳ್ಳಲಿದ್ದೀರಿ. ಉದ್ದೋಗಸ್ಥ ಮಹಿಳೆಯರಿಗೆ ಸಾಲ ಜಾಸ್ತಿ ಆಗಲಿದೆ.
ಕೈಗೆ ಬಂದಿದ್ದು ಹಾಗೇ ಜಾರಿ ಹೋಯಿತು ಎಂಬ ಅನುಭವ ನಿಮಗಾಗಲಿದೆ. ಇನ್ನೇನು ಎಲ್ಲ ಮಾತುಕತೆ ಆಗಿಹೋಗಿದೆ, ಒಪ್ಪಂದ ಆಗಬೇಕಷ್ಟೇ ಅಂದುಕೊಂಡಿದ್ದ ವ್ಯವಹಾರ ಕೊನೆ ಕ್ಷಣದಲ್ಲಿ ಕೈ ತಪ್ಪಿ ಹೋಗಲಿದೆ. ಆದ್ದರಿಂದ ನಿಮ್ಮ ಕೈಗೆ ಬಾರದ ಹಣಕ್ಕೆ ಮುಂಚಿತವಾಗಿ ಏನಾದರೂ ಖರ್ಚನ್ನು ಲೆಕ್ಕ ಹಾಕಿಟ್ಟುಕೊಳ್ಳಬೇಡಿ. ಕೃಷಿಕ ವರ್ಗದವರು ಉಳಿತಾಯಕ್ಕೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹತ್ವವಾದ ನಿರ್ಧಾರವೊಂದನ್ನು ಕೈಗೊಳ್ಳಬೇಕಾಗುತ್ತದೆ. ಇನ್ನು ಇನ್ಷೂರೆನ್ಸ್ ಬಗ್ಗೆ ಕೂಡ ಕುಟುಂಬ ಸದಸ್ಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಹೊಸಬರೊಂದಿಗೆ ವ್ಯವಹಾರ ಮಾಡುವಾಗ ಜಾಗ್ರತೆಯಿಂದ ಇರಿ. ವೃತ್ತಿ ನಿರತರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದ ಸ್ನೇಹಿತರು- ಹಿತೈಶಿಗಳು ಈಗ ತಮಗೆ ನೆರವು ನೀಡುವಂತೆ ಹುಡುಕಿಕೊಂಡು ಬರಬಹುದು. ನಿಮ್ಮಿಂದ ಅವರಿಗೆ ಸಹಾಯ ಮಾಡುವುದಕ್ಕೆ ಸಾಧ್ಯವಾದಲ್ಲಿ ಖಂಡಿತವಾಗಿ ನೆರವಾಗಿ. ಇನ್ನು ವಿದ್ಯಾರ್ಥಿಗಳು ಸೈಕಲ್, ಮೊಪೆಡ್ ಇತ್ಯಾದಿ ವಾಹನಗಳನ್ನು ಖರೀದಿ ಮಾಡುವುದಕ್ಕೆ ಮನೆಯಲ್ಲಿ ಪೋಷಕರ ಬಳಿ ದುಂಬಾಲು ಬೀಳಲಿದ್ದಾರೆ. ಒಂದು ವೇಳೆ ಮನೆಯಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದಲ್ಲಿ ಮತ್ತೆ ಮತ್ತೆ ಒತ್ತಾಯಿಸಬೇಡಿ. ಮಹಿಳೆಯರು ಸಂಸಾರದ ವಿಷಯಗಳನ್ನು, ಅಂತರಂಗದ ವಿಚಾರವನ್ನು ಮೂರನೇ ವ್ಯಕ್ತಿಯ ಜತೆಗೆ ಚರ್ಚಿಸಬೇಡಿ, ಇದರಿಂದ ಅವಮಾನದ ಪಾಲಾಗುತ್ತೀರಿ.
ಎಲ್ಲವನ್ನೂ ಅಚ್ಚುಕಟ್ಟಾಗಿ ಯೋಜನೆ ಮಾಡಿಕೊಳ್ಳದ ಹೊರತು ಅಸ್ತವ್ಯಸ್ತ ಆಗುತ್ತದೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಇದಕ್ಕಾಗಿ ಕೆಲವು ಸ್ನೇಹಿತರ ನೆರವು- ಮಾರ್ಗದರ್ಶನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಸ್ವಂತ ವ್ಯವಹಾರ ಮಾಡುವವರಿಗೆ ಒತ್ತಡದ ದಿನಗಳು ಇದಾಗಿರುತ್ತವೆ. ನಿಮ್ಮಿಂದ ಯಾವುದೇ ಮಾತು ನೀಡುವ ಮುನ್ನ ಅದು ಸಾಧ್ಯವೇ ಎಂಬುದನ್ನು ಆಲೋಚಿಸಿ, ಆ ನಂತರ ಮಾತನ್ನು ನೀಡಿ. ಕೃಷಿಕರು ರಾಜಕಾರಣದ ವಿಷಯಗಳಿಗೆ ಸಮಯ ವ್ಯರ್ಥ ಮಾಡಿಕೊಳ್ಳಲಿದ್ದೀರಿ. ಆದ್ದರಿಂದ ನಿಮ್ಮ ಅಭಿಮಾನ, ಗೌರವ ಏನಿದ್ದರೂ ಮನಸ್ಸಿನಲ್ಲಿ ಇರಲಿ. ಅದನ್ನು ಸಾರ್ವಜನಿಕವಾಗಿ ತೋರಿಸಬೇಕು, ಯಾರೊಂದಿಗೋ ವಾದ ಮಾಡಬೇಕು ಎಂದೇನಿಲ್ಲ. ಇನ್ನು ವೃತ್ತಿ ನಿರತರಿಗೆ ದಿಢೀರನೇ ಆದಾಯದಲ್ಲಿ ಇಳಿಕೆ ಆಗಲಿದೆ. ಆ ಮೇಲೆ ಯಾವುದಾದರೂ ಪ್ರಾಣಿಗಳಿಂದ ದಾಳಿ ಅಥವಾ ಕಡಿತಕ್ಕೆ ಗುರಿ ಆಗಬಹುದು. ಆದ್ದರಿಂದ ಸಾಕು ಪ್ರಾಣಿಗಳಿಂದ ಕೂಡ ಬಹಳ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಸಣ್ಣ ನಿರ್ಲಕ್ಷ್ಯಕ್ಕೂ ದೊಡ್ಡ ಬೆಲೆ ತೆರಬೇಕಾದಂಥ ಪರಿಸ್ಥಿತಿ ಬರುತ್ತದೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲಿದ್ದೀರಿ. ಅದಕ್ಕಾಗಿ ಆನ್ ಲೈನ್ ಕೋರ್ಸ್ ಸೇರ್ಪಡೆ ಆಗುವಂಥ ಯೋಗ ಇದೆ. ಮಹಿಳೆಯರಿಗೆ ಈ ಹಿಂದೆ ತಾವು ಮಾಡಿದ ತ್ಯಾಗ ಹಾಗೂ ಪಟ್ಟ ಶ್ರಮಕ್ಕೆ ಗೌರವಾದರಗಳು ದೊರೆಯಲಿವೆ.
ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಿದ್ದೀರಿ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬೇಕೆಂದು ಇರುವವರು ಅಥವಾ ಪರ್ಸನಲ್ ಲೋನ್ ಮಾಡಬೇಕು ಎಂದು ಇರುವವರಿಗೆ ಹಣಕಾಸಿನ ವ್ಯವಸ್ಥೆ ಸುಲಭವಾಗಿ ಆಗುತ್ತದೆ. ಶಾಪಿಂಗ್ ಮಾಡುವ ಸಲುವಾಗಿ ನೀವಿರುವ ಸ್ಥಳದಿಂದ ಬೇರೆಡೆಗೆ ತೆರಳುವಂಥ ಸಾಧ್ಯತೆ ಇದೆ. ಕಾರು- ಬೈಕ್ ಚಲಾಯಿಸುವಾಗ ಬಹಳ ಜಾಗ್ರತೆಯಿಂದ ಇರಬೇಕು. ಕೃಷಿಕರಿಗೆ ದೇವತಾರಾಧನೆ, ಹೋಮ- ಹವನ, ಪೂಜೆಗಳಿಗೆ ಹಣ ಖರ್ಚು ಮಾಡುವಂಥ ಯೋಗ ಇದೆ. ಮನೆಗೆ ಸಂಬಂಧಿಕರು ಸಹ ಭೇಟಿ ನೀಡಲಿದ್ದು, ಇದರಿಂದ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ವೃತ್ತಿನಿರತರಿಗೆ ನಿಶ್ಚಿತ ಖರ್ಚುಗಳ ಹೊರೆ ಜಾಸ್ತಿ ಆಗಲಿದೆ. ಬಾಡಿಗೆ ಜಾಸ್ತಿ ಮಾಡಬಹುದು, ಈಗಾಗಲೇ ನಿಮ್ಮ ಬಳಿ ಕೆಲಸ ಮಾಡುತ್ತಿರುವವರು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟು, ಅದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಒತ್ತಡ ಸೃಷ್ಟಿ ಆಗುತ್ತದೆ. ಕೆಲವು ವಿಷಯಗಳ ವ್ಯಾಸಂಗ ಕಷ್ಟ ಎಂದು ಬಹಳ ಅನಿಸತೊಡಗುತ್ತದೆ. ಮಹಿಳೆಯರಿಗೆ ತವರು ಮನೆ ಕಡೆಯಿಂದ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ.
ನೀವು ಬಹಳ ಕಾಲದಿಂದ ಮನಸ್ಸಿನಲ್ಲಿ ಯಾರನ್ನಾದರೂ ಇಷ್ಟ ಪಡುತ್ತಿದ್ದಲ್ಲಿ ಅವರ ಬಳಿ ಹೇಳಿಕೊಳ್ಳುವ ಸಾಧ್ಯತೆ ಇದೆ. ವಿಪರೀತ ನಿರೀಕ್ಷೆ ಇಟ್ಟುಕೊಂಡು, ಈ ಕೆಲಸ ಮಾಡಬೇಡಿ. ಈ ಹಿಂದೆ ನಿರ್ದಿಷ್ಟ ಸಮಯದಲ್ಲಿ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡ ಕೆಲಸವನ್ನು ಮಾಡಿಕೊಡಲು ಸಾಧ್ಯವಾಗದೆ ನಿಮ್ಮ ಹೆಸರನ್ನು ಹಾಳು ಮಾಡಿಕೊಡಲಿದ್ದೀರಿ. ಆದ್ದರಿಂದ ವಹಿಸಿಕೊಂಡ ಕೆಲಸವನ್ನು ಹೇಳಿದ ಸಮಯದೊಳಗೆ ಮಾಡಿಕೊಡುವ ಕಡೆಗೆ ಗಮನ ನೀಡಿ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಿಗೆ ಮನೆಗೆ ಪಶುಗಳನ್ನು ತರುವ ಸಾಧ್ಯತೆ ಇದೆ. ವೃತ್ತಿನಿರತರಿಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ನಿರ್ಧಾರ ಮಾಡುವಾಗ ಇತರರು ಹೇಳುವ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಅವಕಾಶಗಳನ್ನು ಚೆನ್ನಾಗಿ ಬಳಸುವ ಕಡೆಗೆ ಗಮನವನ್ನು ನೀಡಿ. ವಿದ್ಯಾರ್ಥಿಗಳು ಹೊಸದಾಗಿ ಆಗುವ ಸ್ನೇಹಿತರ ಬಗ್ಗೆ ಜಾಗರೂಕತೆಯಿಂದ ಇರಿ. ಹೊಸಬರ ಜತೆಗೆ ನಿಮ್ಮ ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳಬೇಡಿ. ಮಹಿಳೆಯರಿಗೆ ಹೊಸ ಆದಾಯ ಮೂಲ ಮಾಡಿಕೊಳ್ಳುವುದಕ್ಕೆ ಅವಕಾಶಗಳು ಹುಡುಕಿಕೊಂಡು ಬರಲಿವೆ.
ಲೇಖನ- ಎನ್.ಕೆ.ಸ್ವಾತಿ