Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 15ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 15ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 15ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವು ಬಹಳ ಇಷ್ಟ ಪಡುವಂಥವರು, ನಂಬುವಂಥವರೇ ನಿಮಗೆ ಹೆಚ್ಚು ನೋವನ್ನು ನೀಡುತ್ತಾರೆ. ದಿಢೀರನೆ ಯಾರ ಸಹವಾಸವೂ ಬೇಡ ಎನಿಸುವುದಕ್ಕೆ ಶುರು ಆಗುತ್ತದೆ. ಸಂಗೀತ, ಯೋಗ, ಧ್ಯಾನ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಅಡುಗೆ, ಜಿಮ್ ಏನಾದರೂ ಹೊಸದನ್ನು ಮಾಡುವುದಕ್ಕೆ ತೊಡಗಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವ ಯೋಗ ಇದೆ. ಹಣಕಾಸನ್ನು ಹೊಂದಿಸಿಕೊಳ್ಳಯವುದಕ್ಕೆ ದಾರಿ ತೋಚಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಎಂಬ ಬಗ್ಗೆ ಗಮನ ಕೊಡಿ. ಯಾರ ಬಗ್ಗೆಯಾದರೂ ಮಾತನಾಡುವಾಗ, ಅಭಿಪ್ರಾಯ ಹೇಳುವಾಗ ಸ್ವಲ್ಪ ಎಚ್ಚರ ವಹಿಸಿ. ಗಾರ್ಡನಿಂಗ್ ಮಾಡುವಂಥ ಅಭ್ಯಾಸ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ರೂಢಿಸಿಕೊಳ್ಳಿ. ಏಕಾಗ್ರತೆ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯ ಇದು. ಬೇರೆಯವರ ಟೀಕೆಯನ್ನು ಪಾಸಿಟಿವ್ ಆಗಿ ಸ್ವೀಕರಿಸಿ. ಈ ದಿನ ಮನರಂಜನೆಗಾಗಿ ಹಣ ಖರ್ಚು ಮಾಡಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೆ ಅನಾರೋಗ್ಯದ ಸಾಧ್ಯತೆ ಇದೆ. ಇನ್ನು ಊಟ- ತಿಂಡಿ, ಪಾನೀಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ, ಜತೆಗೆ ಅದು ನಿಮ್ಮ ದೇಹಕ್ಕೆ ಒಗ್ಗುತ್ತಿದೆಯಾ ಎಂಬ ಕಡೆ ಲಕ್ಷ್ಯ ಕೊಡಿ. ವಿದ್ಯಾರ್ಥಿಗಳು ನಿಮ್ಮ ವೈಫಲ್ಯವಿದ್ದಲ್ಲಿ ಬೇರೆಯವರನ್ನು ದೂರಬೇಡಿ. ಮಹಿಳೆಯರಿಗೆ ಹಳೆ ಸ್ನೇಹಿತ- ಸ್ನೇಹಿತೆಯರನ್ನು ಭೇಟಿ ಆಗುವ ಯೋಗ ಇದೆ. ದೇಹದ ತೂಕದ ಕಡೆಗೆ ಗಮನವನ್ನು ನೀಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮೊಬೈಲ್ ಫೋನ್, ಗ್ಯಾಜೆಟ್‌ಗಳು, ಲ್ಯಾಪ್‌ಟಾಪ್ ಇಂಥದ್ದನ್ನು ಖರೀದಿಸುವ ಯೋಗ ಇದೆ. ಇನ್ನು ಅಂಗಡಿಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಯುಪಿಐ ಅಥವಾ ಗೂಗಲ್ ಪೇ- ಫೋನ್‌ಪೇ ಮೂಲಕ ಎಲ್ಲೇ ಹಣ ಪಾವತಿಸುವಾಗ ಮೊತ್ತವನ್ನು ಒಂದಕ್ಕೆ ಎರಡು ಸಲ ಪರೀಕ್ಷಿಸಿಕೊಳ್ಳಿ. ಒಮ್ಮೆ ಪೇಮೆಂಟ್ ಆಗಿಲ್ಲ ಎಂದು ಮತ್ತೊಮ್ಮೆ ಮಾಡಿ, ನಷ್ಟ ಆಗುವ ಸಾಧ್ಯತೆಗಳಿವೆ. ಭರ್ಜರಿ ಪಾರ್ಟಿ ಮಾಡುವ ಸಾಧ್ಯತೆ ಕಾಣಿಸುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಒಂದಿಷ್ಟು ಶುಭ ಬೆಳವಣಿಗೆಗಳು ಇವೆ, ಹೊಸ ಬಟ್ಟೆ, ಸ್ಮಾರ್ಟ್ ವಾಚ್, ಬ್ರ್ಯಾಂಡೆಡ್ ಶೂಗಳಿಗೆ ಹಣ ಖರ್ಚಾಗಲಿವೆ. ಇನ್ನು ಮದುವೆ ಆದವರು ಒಂದೆರಡು ದಿನದ ಮಟ್ಟಿಗೆ ನೀವಿರುವ ಸ್ಥಳದಿಂದ ಹೊರಗೆ, ಕನಿಷ್ಠ ಪಕ್ಷ ಸಿನಿಮಾ, ಮಾಲ್‌ಗಾದರೂ ಹೋಗಿಬರುವ ಯೋಗ ಇದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಸ್ವಂತವಾಗಿ ವ್ಯವಹಾರ ಆರಂಭಿಸುವ ಬಗ್ಗೆ ಸ್ನೇಹಿತರ ಜತೆ ಚರ್ಚೆ ನಡೆಸಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮನಸ್ಸಿನಲ್ಲಿ ಇರುವ ಪ್ರೇಮ ವಿಚಾರವನ್ನು ನಿವೇದನೆ ಮಾಡಬೇಕು ಅಂದುಕೊಳ್ಳುತ್ತಿರುವವರು ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ಇರುವ ಕೆಲಸದಲ್ಲೇ ಮುಂದುವರಿಯಬೇಕಾ ಅಥವಾ ಹೊಸ ವ್ಯಾಪಾರ ಶುರು ಮಾಡಬೇಕಾ ಎಂಬ ಸಂಗತಿ ಬಹಳವಾಗಿ ಕಾಡುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದವರಿಗೆ ಖರೀದಿಗಾಗಿ ಹೊಸ ಹೊಸ ಜನರು ವಿಚಾರಣೆಗೆ ಬರುತ್ತಾರೆ. ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಯಾವುದು ಮೊದಲು ಯಾವುದು ನಂತರ ಎಂಬ ಸ್ಪಷ್ಟತೆ ಇರಲಿ. ಬಿಡುವು ಸಿಗದಷ್ಟು ಮೇಲಿಂದ ಮೇಲೆ ಕೆಲಸ ಬರಲಿದೆ. ನಾಲ್ಕಾರು ಜನರಿಗೆ ಸಹಾಯ ಆಗುವಂಥ ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುವವರಿಗೆ ಹೊಸ ಹೊಸ ಜನರ ಪರಿಚಯ ಆಗುತ್ತದೆ. ಭವಿಷ್ಯದ ಯೋಜನೆಗಳು ಸಾಕಾರಗೊಳ್ಳಲಿವೆ. ಹಣಕಾಸು ಉಳಿತಾಯದ ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದೀರಿ. ಸ್ವಾಭಿಮಾನಕ್ಕೆ ಪೆಟ್ಟು ನೀಡುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಹಿಂದೆ ಯಾವಾಗಲೋ ಕೊಟ್ಟ ಮಾತಿಗೆ ಈಗ ಪಶ್ಚಾತ್ತಾಪ ಪಡುವಂತಾಗುತ್ತದೆ. ಬಿಪಿ- ಶುಗರ್ ಇರುವಂಥವರಿಗೆ ಭುಜ, ಮೀನಖಂಡ, ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಪಾರ್ಟಿಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ವೇಗ ದೊರೆಯುತ್ತದೆ. ಮನೆಗೆ ಹೊಸ ವಸ್ತುಗಳನ್ನು ತರಲಿದ್ದೀರಿ. ಕೃಷಿಕರಿಗೆ ಹೊಸ ವಿಚಾರಗಳನ್ನು ಕಲಿಯುವ ಯೋಗ ಇದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಮೂಳೆ ಆರೋಗ್ಯದ ಕಡೆ ಗಮನ ನೀಡಿ, ಸುಖಾಸುಮ್ಮನೆ ತಿರುಗಾಟದಿಂದ ಖರ್ಚಾಗುತ್ತದೆ. ಏನಾದರೂ ಹೊಸ ವ್ಯವಹಾರ ಶುರು ಮಾಡುವುದು ಉತ್ತಮವಾ ಎಂಬ ಆಲೋಚನೆ ಬರುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಕಡೆಗೆ ನಿಗಾ ಜಾಸ್ತಿ ಆಗಿ, ವ್ಯಾಸಂಗದಲ್ಲಿ ಹಿನ್ನಡೆ ಇದೆ. ನೀವು ಕೆಲಸ ಮಾಡುವ ಸ್ಥಳದಲ್ಲೇ ಶತ್ರುಗಳ ಕಾಟ ಇದೆ ಎಂಬ ವಿಚಾರ ಮೂರನೇ ವ್ಯಕ್ತಿಗಳಿಂದ ತಿಳಿದುಬರುತ್ತದೆ.
ಲೇಖನ- ಎನ್.ಕೆ.ಸ್ವಾತಿ