ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?: ಹಾಸನದಲ್ಲೊಂದು ಡೆಡ್ಲಿ ಮರ್ಡರ್
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಪತಿ ಕುಮಾರ್ ತನ್ನ ಮೊದಲ ಪತ್ನಿ ರಾಧಾ (40) ರನ್ನು ಹತ್ಯೆ ಮಾಡಿದ್ದಾನೆ. ಎರಡನೇ ಮದುವೆಯನ್ನು ಪ್ರಶ್ನಿಸಿದ್ದಕ್ಕೆ, ಶಬರಿಮಲೆಗೆ ಹೋಗಿ ಬಂದ ದಿನವೇ ಪತ್ನಿಯನ್ನು ಕಂದಿದ್ದಾನೆ. ಹತ್ಯೆಗೈದ ನಂತರ ರಾಧಮ್ಮಳ ಶವವನ್ನು ಯಗಚಿ ನದಿಗೆ ಎಸೆಯಲಾಗಿದೆ. ಈ ಘಟನೆ ಜನವರಿ 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಾಸನ, ಜನವರಿ 13: ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಪತಿ ಕುಮಾರ್ ತನ್ನ ಮೊದಲ ಪತ್ನಿ ರಾಧಮ್ಮಳನ್ನು ಹತ್ಯೆ ಮಾಡಿರುವ ಘಟನೆ ಸಂಬಂಧ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಬರಿಮಲೆ ಯಾತ್ರೆ ಮುಗಿಸಿ ಬಂದ ದಿನವೇ ಕುಮಾರ್, ಎರಡನೇ ಮದುವೆಯನ್ನು ಪ್ರಶ್ನಿಸಿದ್ದಕ್ಕೆ ರಾಧಾಳನ್ನು ಕೊಲೆ ಮಾಡಿದ್ದ. ಕುಮಾರ್ ಮತ್ತು ರಾಧಾ ದಂಪತಿಗೆ ವಿಶ್ವಾಸ್ ಎಂಬ ಮಗನಿದ್ದಾನೆ. ಕಳೆದ ಕೆಲ ವರ್ಷಗಳಿಂದ ಪತಿ ಕುಮಾರ್‌ನಿಂದ ರಾಧಾ ಪತ್ಯೇಕ ವಾಸವಿದ್ದು, ಹಾಸನದಲ್ಲಿ ಕೆಲಸ ಮಾಡಿಕೊಂಡು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಳು. ಕುಮಾರ್ ತನ್ನ ಎರಡನೇ ಮದುವೆಯಿಂದ ಹುಟ್ಟಿದ ಮಗನ ಫೋಟೋವನ್ನು ವಿಶ್ವಾಸ್‌ಗೆ ಕಳುಹಿಸಿದ್ದ. ಈ ಫೋಟೋವನ್ನು ನೋಡಿದ ರಾಧಾ, ಕುಮಾರ್‌ನ ಎರಡನೇ ಸಂಬಂಧದ ಬಗ್ಗೆ ತಿಳಿದು ಯಡೂರು ಗ್ರಾಮಕ್ಕೆ ಹೋಗಿ ಜಗಳವಾಡಿದ್ದಾಳೆ. ಯಡೂರಿಗೆ ಹೋಗದಂತೆ ರಾಧಾಗೆ ತಾಯಿ ಹೇಳಿದ್ದರು. ಆದರೂ ಕೇಳದೆ ಆಕೆ ಹೋಗಿದ್ದಳು ಎನ್ನಲಾಗಿದೆ.
ಕುಮಾರ್‌ನ ತಾಯಿ ಲಕ್ಷ್ಮಮ್ಮ ಮತ್ತು ಮಗ ವಿಶ್ವಾಸ್ ಸಹ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
