Nitya Bhavishya: ಸಂಕ್ರಾಂತಿ ದಿನ ಯಾವ ರಾಶಿಗೆ ಸಿಹಿ? ಯಾವ ರಾಶಿಗೆ ಕಹಿ? ಜ.15ರ ದಿನಭವಿಷ್ಯ ಇಲ್ಲಿದೆ

ಮಕರ ಸಂಕ್ರಾಂತಿಯ ದಿನ ಯಾವ ರಾಶಿಗೆ ಸಿಹಿ? ಯಾವ ರಾಶಿಗೆ ಕಹಿ? ಎನ್ನುವುದನ್ನು ಜನವರಿ 15ರ ದಿನಭವಿಷ್ಯದಲ್ಲಿ ತಿಳಿದುಕೊಳ್ಳಿ.

Nitya Bhavishya: ಸಂಕ್ರಾಂತಿ ದಿನ ಯಾವ ರಾಶಿಗೆ ಸಿಹಿ? ಯಾವ ರಾಶಿಗೆ ಕಹಿ? ಜ.15ರ ದಿನಭವಿಷ್ಯ ಇಲ್ಲಿದೆ
ರಾಶಿ ಭವಿಷ್ಯ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 15, 2023 | 6:00 AM

ಮಕರ ಸಂಕ್ರಾಂತಿ (Makara Sankranti 2023)ಹಬ್ಬ ಸಂಭ್ರಮ ಮನೆ ಮಾಡಿದೆ.ಈ ಸಮಯದಲ್ಲಿ ಸೂರ್ಯ ರಾಶಿಯನ್ನು ಬದಲಾವಣೆ ಮಾಡುವುದರಿಂದ ಕೆಲವೊಂದು ರಾಶಿಗಳಿಗೆ (horoscope) ಒಳ್ಳೆಯದಾಗುತ್ತದೆ.  ಇಂದು(ಜನವರಿ 15) ಹಬ್ಬದ ದಿನ ಯಾವ ರಾಶಿಗೆ ಏನು ಫಲ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ : ಉತ್ತರಾಷಾಢ, ಮಾಸ : ಪೌಷ, ಪಕ್ಷ : ಕೃಷ್ಣ, ವಾರ : ಭಾನುವಾರ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಸುಕರ್ಮ, ಕರಣ : ಬಾಲವ, ಸೂರ್ಯೋದಯ – 07-02am, ಸೂರ್ಯಾಸ್ತ – 06-21pm, ಶುಭಾಶುಭಕಾಲ: ರಾಹು ಕಾಲ 16:57 – 18:22, ಯಮಘಂಡ ಕಾಲ 12:42 – 14:07 , ಗುಳಿಕ ಕಾಲ 15:32 – 16:57

ಮೇಷ: ಒತ್ತಡದ ನಡುವೆಯೂ ನಿಮ್ಮ ಕಾರ್ಯನಿರ್ವಹಣೆಗೆ ಪ್ರಂಶಸೆಗಳು ಸಿಗಲಿವೆ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ವೈದ್ಯವೃತ್ತಿಯನ್ನು ಆರಿಸಿಕೊಂಡ ನಿಮಗೆ ಗೌರವಾದರಗಳು ಸಿಗಲಿವೆ. ತಂದೆ, ತಾಯಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಕೃಷಿ ಉತ್ಪನ್ನಗಳ ಉದ್ಯಮದವರಿಗೆ ಹೆಚ್ಚು ಲಾಭವಾಗಲಿದೆ‌. ಉನ್ನತ ಉದ್ದೇಶಗಳು ಸಾಕಾರಗೊಳ್ಳುವ ದಿನವಾಗಿದೆ. ಹಬ್ಬದ ವಾತಾವರಣವು ಚೆನ್ನಾಗಿರಲಿದೆ‌.

ವೃಷಭ: ಸಂಪ್ರದಾಯದಲ್ಲಿ ಆಸಕ್ತಿಯನ್ನು ಹೊಂದುವಿರಿ. ಸ್ನೇಹಿತರೊಂದಿಗೆ ಸಮಾಲೋಚನೆಗಳನ್ನು ನಡೆಸುವಿರಿ. ಕಣ್ಣಿನ ತುರಿಕೆ, ಕಣ್ಣಿನಲ್ಲಿ ನೀರೂರುವ ಅಥವಾ ಕೆಂಗಣ್ಣಿನ ರೋಗವು ನಿಮ್ಮನ್ನು ಕಾಡಬಹುದು. ವೈದ್ಯರನ್ನು ಸಂಪರ್ಕಿಸಿ. ಹಿರಿಯ ಆಶೀರ್ವಾದವೇ ನಿಮ್ಮ ಕಾರ್ಯಗಳಿಗೆ ಬೆಂಬಲವಾಗಲಿದೆ. ಹಣದ ವ್ಯಯವು ನಿಮ್ಮನ್ನು ಆತಂಕಕ್ಕೆ ತಳ್ಳಬಹುದು. ವಿವೇಚನೆ ಇರಲಿ. ದಂಪತಿಗಳ ನಡುವೆ ನಡೆದ ಮಾತುಕತೆಗಳು ಮುಂದಿನ ಹಂತಕ್ಕೂ ಹೋಗಬಹುದು.

ಮಿಥುನ: ಬೆಲೆಬಾಳುವ ವಸ್ತುಗಳನ್ನು ಆಸೆಪಟ್ಟು ಖರೀದಿಸುವಿರಿ. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ಅಸೂಯಾಗುಣದಿಂದ ನಿಮಗೇ ತೊಂದರೆಯಾದೀತು. ಹಿರಿಯರ ಅನಾರೋಗ್ಯದಲ್ಲಾಗುವ ವ್ಯತ್ಯಾಸದಿಂದ ಆತಂಕವು ಸೃಷ್ಟಿಯಾದೀತು.

ಕರ್ಕ: ದಾಂಪತ್ಯದಲ್ಲಿ ಉಂಟಾದ ವಿರಸವು ನ್ಯಾಯಾಲಯದ ಮೆಟ್ಟಿಲೇರಲೂಬಹುದು. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ಸ್ನೇಹಿತರೊಂದಿಗೆ ಇಂದು ಕಾಲವನ್ನು ಕಳೆಯುವಿರಿ. ದೂರದ ಪ್ರಯಾಣದಿಂದ ನಿಮಗೆ ಸುಖವಿಲ್ಲ. ಆರ್ಥಿಕಸ್ಥಿತಿಯ ಸುಧಾರಣಯಾಗಲಿದೆ. ಸಂಗಾತಿಯ ಯೋಚನೆಗಳಿಗೆ ಪ್ರತಿಸ್ಪಂದನೆಯು ಸಿಗಲಿದೆ. ಹಳೆಯ ನೋವುಗಳು ಕಾಡಬಹುದು.

ಸಿಂಹ: ಸಮಾಜಿಕವಾಗಿ ಮನ್ನಣೆಯನ್ನು ಪಡೆದ ನಿಮ್ಮನ್ನು ಹತ್ತಾರು ಜನರು ನೋಡಲಿದ್ದಾರೆ. ಬಂಗಾರದ ವ್ಯಾಪರಿಗಳಿಗೆ ಲಾಭವಾಗಲಿದೆ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಕುಟುಂಬದಿಂದ ಅಶುಭವಾದ ಸುದ್ದಿಯು ನಿಮಗೆ ತಿಳಿಯಲಿದೆ‌. ಪ್ರಾಮಾಣಿಕತೆಯು ಇಂದು ನಿಮಗೆ ವರವಾಗಿ ಅನೇಕರ ಪ್ರಶಂಸೆಗೆ ಕಾರಣವಾಗಲಿದೆ. ಪ್ರೀತಿಪಾತ್ರರ ಆಗಮನದಿಂದ ಮನಸ್ಸು ಸಂತೋಷಗೊಳ್ಳಲಿದೆ‌.

ಕನ್ಯಾ: ರಾಜಕಾರಣವನ್ನು ಮಾಡುವವರಿಗೆ ಇಂದು ಶುಭದಿನವಿರಲಿದೆ. ನಿಮ್ಮ ಕಾರ್ಯದಕ್ಷತೆಗೆ ಉನ್ನತವಾದ ಸ್ಥಾನಮಾನಗಳು ಪ್ರಾಪ್ತವಾಗುವುವು. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅನಾರೋಗ್ಯದಿಂದ ಪೀಡಿತರಾಗುವಿರಿ. ಪರೀಕ್ಷೆಯ ಭಯವು ನಿಮ್ಮನ್ನು ಅತಿಯಾಗಿ ಕಾಡುವುದು. ಭೂವ್ಯವಹಾರದಲ್ಲಿ ನಷ್ಟವಾಗುವುದು.

ತುಲಾ: ನಿಮ್ಮ ಸ್ವಂತ ಉದ್ಯೋಗದಲ್ಲಿ ಲಾಭವನ್ನು ಕಾಣುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಕಾರಣಾಂತರಗಳಿಂದ ಧನವ್ಯಯವಾದೀತು. ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬೇಕಾದೀತು. ಉತ್ತಮರ ಸಹವಾಸ ನಿಮ್ಮ ಜೀವನಕ್ಕೆ ತಿರುವನ್ನು ಕೊಟ್ಟೀತು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಿಮ್ಮನ್ನು ಮಾರ್ಗಭ್ರಷ್ಟರನ್ನಾಗಿ ಮಾಡುವ ಕೆಲಸವು ನಿಮಗೆ ಗೊತ್ತಿಲ್ಲದೇ ನಡೆಯುತ್ತಿರುತ್ತದೆ.

ವೃಶ್ಚಿಕ: ದಾಯದಿ ಕಲಹಗಳು ಉಂಟಾಗಬಹುದು. ಪಿರ್ತಾರ್ಜಿತ ಆಸ್ತಿಯನ್ನು ಅನುಭವಿಸುವ ಕ್ಷಣ ನಿಮ್ಮದಾಗಿದೆ. ಶತ್ರುಗಳು ನಿಮ್ಮ ಚಲನವಲನಗಳನ್ನು ಗಮನಿಸುತ್ತ ಇರುವರು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಪವಾದಗಳು ಬರಬಹುದು.‌ ಜಾಣ್ಮೆಯಿಂದ ಅದನ್ನು ದೂರಮಾಡಿಕೊಳ್ಳಿ. ಪ್ರತ್ಯಕ್ಷವಾಗಿ ಕಂಡಿದ್ದು ಪ್ರಮಾಣೀಕರಿಸಿ ನೋಡುವುದು ಉತ್ತಮ. ಪ್ರಯಾಣವನ್ನು ಅನಿವಾರ್ಯ ಮಾಡಿಕೊಳ್ಳಬೇಡಿ.

ಧನುಸ್ಸು: ವಿವಾಹಕ್ಕೆ ಸಂಬಂಧಿಸಿದಂತೆ ನಿಮಗೆ ಹತ್ತಾರು ವಿಘ್ನಗಳು ಬರಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಸೈನ್ಯ ಮುಂತಾದ ರಕ್ಷಣಾವಲಯದಲ್ಲಿ ಕಾರ್ಯವನ್ನು ಮಾಡಲು ಆಸಕ್ತಿಯುಳ್ಳವರಿಗೆ ಉತ್ತಮ ಮಾರ್ಗಗಳು ಸಿಗಲಿವೆ. ಸಂಗಾತಿಗಳ ಕಲಹವು ಮಕ್ಕಳ ಕಾರಣದಿಂದ ತಣ್ಣಗಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಸಂಪತ್ತು ಬಳಕೆಯಾಗಲಿದೆ. ಅಪರೂಪದ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ.

ಮಕರ: ಎಲ್ಲ ಸಮಸ್ಯೆಗಳೂ ಕೂಡ ಕಲಹಕ್ಕೆ ಬರಬೇಕೆಂದೇನಿಲ್ಲ. ಮೌನದಲ್ಲಿಯೂ ಅದು ಬಗೆಹರಿಯಬಹುದು ಎನ್ನುವ ಚಿಂತನೆಯನ್ನು ಮೊದಲು ಮಾಡಿಕೊಂಡು ಕಲಹಾದಿಗಳು ಬೇಕೇ ಎನ್ನುವ ತೀರ್ಮಾನಕ್ಕೆ ಬನ್ನಿ. ಪ್ರಯಾಣದ ಆಯಾಸವು ನಿಮ್ಮನ್ನು ದುರ್ಬಲಗೊಳಿಸುತ್ತದೆ‌. ನಿಮ್ಮ ಯೋಜನೆಗೆಳಿಗೆ ಪುರಸ್ಕಾರಗಳು ಸಿಗಬಹುದು. ಸರ್ಕಾರೀ ಕಾರ್ಯಗಳು ವಿಳಂಬವಾಗಲಿದೆ. ಚಿತ್ರಕಾರರಿಗೆ ಅವಕಾಶಗಳು ಬರಬಹುದು.

ಕುಂಭ: ಲೆಕ್ಕ ಪರಿಶೋಧಕರಿಗೆ ಉತ್ತಮವಾದ ಆದಾಯಗಳು ಸಿಗಲಿವೆ. ರಕ್ಷಣಾಕಾರ್ಯದಲ್ಲಿ ಇರುವವರಿಗೆ ಸ್ಥಾನ, ಮಾನ ಪ್ರಾಪ್ತಿಯಾಗಲಿದೆ‌. ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮುಂಗೋಪಿಯಾಗಿ ಕಾರ್ಯಗಳನ್ನು ಮಾಡಬೇಡಿ.‌ ಸ್ನೇಹಿತರ ಮನೆಯಲ್ಲಿ ಭೋಜನಕ್ಕೆ ಆಹ್ವಾನ ಬಂದರೆ, ಆಗದು ಎಂದನ್ನಬೇಡಿ. ಪ್ರೀತಿಗೆ ಬೆಲೆಯನ್ನು ಕೊಡುವ ನಿಮ್ಮ ಹವ್ಯಾಸವು ಮುಂದುವರಿಯಲಿ. ಯಾರದೋ ಸಂಕಟದಲ್ಲಿ ನೀವು ಭಾಗಿಗಳಾಗುವಿರಿ.

ಮೀನ: ನಿಮ್ಮ ಮನಸ್ಸು ಅಧ್ಯಾತ್ಮದತ್ತ ಸಾಗುತ್ತದೆ. ಶೀಘ್ರದಲ್ಲೇ ಹಣವನ್ನು ಪಡೆಯುವ ವಿಧಾ‌ನಕ್ಕೆ ಕೈ ಹಾಕುವ ಮೊದಲು ಆಪ್ತರ ಸಲಹೆಯನ್ನು ಪಡೆತಿರಿ. ನಿಮ್ಮಿಂದ ಕುಟುಂಬಕ್ಕೆ ಉತ್ತಮವಾದ ಹೆಸರು ಬರಲಿದೆ. ಇಂದು ನಿಮ್ಮನ್ನು ಹುಡುಕಿಕೊಂಡು ಬರುವರಿಂದ ನಿಮ್ಮ ವಿವಾಹವು ನಿಶ್ಚಯವಾಗಲಿದೆ. ನಿಮ್ಮ‌‌ ಸ್ನೇಹವನ್ನು ಬಯಸಲು ಇಂದು ಅನೇಕರು ಇರಲಿದ್ದಾರೆ. ಅಮುಖ್ಯವಾದ ಕಾರ್ಯಗಳಿಗೆ ಓಡಾಟವನ್ನು ಮಾಡಬೇಕಾದೀತು.

ಲೋಹಿತಶರ್ಮಾ, ಇಡುವಾಣಿ

ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ