ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ ಅವರು ಶ್ರಿಮಂತನಾ ಅಥವಾ ಬಡವನಾ ಎಂಬ ಅನುಮಾನ ಹಲವರಿಗೆ ಇದೆ. ಆ ಬಗ್ಗೆ ಅವರ ಕುಟುಂಬದ ಸದಸ್ಯರಾದ ಬಸವರಾಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ.
ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ (Gilli Nata) ಅವರು ಶ್ರಿಮಂತನಾ ಅಥವಾ ಬಡವನಾ ಎಂಬ ಅನುಮಾನ ಹಲವರಿಗೆ ಇದೆ. ಆ ಬಗ್ಗೆ ಅವರ ಕುಟುಂಬದ ಸದಸ್ಯರಾದ ಬಸವರಾಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ. ‘ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ ಎಂಬ ಬಗ್ಗೆ ಗೊಂದಲ ನಿರ್ಮಾಣ ಆಗಿದೆ. ಗಿಲ್ಲಿಯದ್ದು ಮಿಡಲ್ ಕ್ಲಾಸ್ ಕುಟುಂಬ. ಇಂದಿಗೂ ಅವರ ತಂದೆ-ತಾಯಿ ವ್ಯವಸಾಯ ಮಾಡಿಕೊಂಡಿದ್ದಾರೆ. ಮಧ್ಯಮವರ್ಗದ ಕುಟುಂಬ ಆದ್ದರಿಂದ ಹೊಟ್ಟೆಗೆ ಬಟ್ಟೆಗೆ ಶಿಕ್ಷಣಕ್ಕೆ ಕೊರತೆ ಇಲ್ಲ. ಪಿಆರ್ ನೇಮಿಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಾನೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ತಂದೆ-ತಾಯಿಗೆ ಪಿಆರ್ ಎಂದರೆ ಏನು ಎಂಬುದೇ ಗೊತ್ತಿಲ್ಲ. ನಿನ್ನೆ ಭತ್ತ ಕೊಯ್ದಿದ್ದಾರೆ. ಮಳೆ ಬಂದು ಎಲ್ಲವೂ ನೆನೆದು ಹೋಗಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಗಿಲ್ಲಿ ಏನೇ ಸಂಪಾದನೆ ಮಾಡಿದರೂ ಅವರ ತಂದೆ-ತಾಯಿ ತಮ್ಮ ಕಾಯಕ ಮುಂದುವರಿಸುತ್ತಿದ್ದಾರೆ. ಅವರು ಹಳ್ಳಿ ಜನ. ಪಿಆರ್, ಫೇಸ್ ಬುಕ್ ಇತ್ಯಾದಿ ಅವರಿಗೆ ಗೊತ್ತಿಲ್ಲ’ ಎಂದು ಬಸವರಾಜು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
