Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 13ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 13ರ ಬುಧವಾರದ ದಿನ ಭವಿಷ್ಯ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 13ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಶ್ರಮದ ಅತಿ ದೊಡ್ಡ ಪಾಲು ಇತರರಿಗೆ ಬಳಕೆ ಆಗುತ್ತಿದೆ ಎಂದು ಈ ದಿನ ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಸ್ವಂತ ವಾಹನದಲ್ಲಿ ಪ್ರಯಾಣ ಮಾಡುತ್ತಿರುವವರು ಅಥವಾ ವಾಹನ ಚಾಲನೆಯನ್ನೇ ವೃತ್ತಿ ಮಾಡಿಕೊಂಡಿರುವವರು ಈ ದಿನ ಹೆಚ್ಚು ಜಾಗ್ರತೆ ವಹಿಸಬೇಕು. ಹಣಕಾಸಿನ ವಿಚಾರಕ್ಕೆ ತಂದೆಯ ಜೊತೆಗೆ ಅಥವಾ ತಂದೆಯ ಸಮಾನರಾದವರ ಜೊತೆಗೆ ಅಭಿಪ್ರಾಯ ಭೇದಗಳು ಸೃಷ್ಟಿಯಾಗಲಿವೆ. ನಿಮಗೆ ಕೆಲಸ ಮಾಡಿಯೇ ಕೊಡುತ್ತೇನೆ ಅಥವಾ ಹಣದ ವ್ಯವಸ್ಥೆ ಮಾಡಿಕೊಡುವುದಾಗಿ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳಿವೆ. ಕಾಲು ಉಳುಕುವುದು, ಉಗುರು ಸುತ್ತು ಈ ರೀತಿಯ ಸಮಸ್ಯೆಗಳು ಈ ದಿನ ನಿಮ್ಮನ್ನು ಕಾಡಲಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸಂಬಂಧಿಗಳು, ಅದರಲ್ಲೂ ಸೋದರ ಸಂಬಂಧಿಗಳು ಮನೆಗೆ ಬರುವುದರಿಂದ ಮನಸ್ಸಿಗೆ ಬಹಳ ಸಂತೋಷ ದೊರೆಯಲಿದೆ. ಪಿತ್ರಾರ್ಜಿತ ಆಸ್ತಿ ಏನಾದರೂ ಬರಬೇಕಿದ್ದಲ್ಲಿ ಹಾಗೂ ಅದಕ್ಕಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಶುಭ ಸುದ್ದಿ ಕೇಳಿ ಬರಲಿದೆ. ದಂಪತಿ ಅಥವಾ ಪ್ರೇಮಿಗಳ ಮಧ್ಯೆ ಇರುವಂತಹ ಅಭಿಪ್ರಾಯ ಭೇದಗಳು ಅಥವಾ ಮನಸ್ತಾಪಗಳನ್ನು ದೂರ ಮಾಡುವುದಕ್ಕೆ ಬೇಕಾದಂತಹ ವೇದಿಕೆ ದೊರೆಯಲಿದೆ. ಯಾರ ಬಳಿ ಬಂಡವಾಳ ಇದೆಯೋ ಹಾಗೂ ಎಲ್ಲಿ ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಿರುವಿರೋ ಅಂತಹವರಿಗೆ ಸೂಕ್ತ ಮಾರ್ಗದರ್ಶನ, ಸಲಹೆ ದೊರೆಯಲಿದೆ. ಮುಖ್ಯವಾಗಿ ಈ ದಿನ ವಿರೋಧಿಗಳು ಅಥವಾ ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಹಠಮಾರಿತನ ಧೋರಣೆಯಿಂದ ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ. ಆದ್ದರಿಂದ ಈ ದಿನ ನಾನು ಹೇಳಿದ್ದೇ ಆಗಬೇಕು ಎಂಬ ಮೊಂಡುತನ ಬೇಡ. ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಷೇರು, ಮ್ಯೂಚುವಲ್ ಫಂಡ್ ಅಥವಾ ಬೇರೆ ಯಾವುದೇ ಹೂಡಿಕೆಯಾದರೂ ಈ ದಿನ ಮಾಡದಿರುವುದು ಉತ್ತಮ. ಮಕ್ಕಳ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿವೆ. ಒಂದು ವೇಳೆ ಈಗಾಗಲೇ ಸಾಲ ಇದ್ದಲ್ಲಿ, ಅದರಲ್ಲೂ ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಪಡೆದುಕೊಂಡಿದ್ದಲ್ಲಿ ತಕ್ಷಣದಲ್ಲೇ ಹಣ ಬೇಕು ಎಂದು ಕೇಳಿ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಇತರರ ವೈಯಕ್ತಿಕ ವಿಚಾರಗಳಲ್ಲಿ ವಿಪರೀತವಾದ ಆಸಕ್ತಿಯನ್ನು ತೋರಿಸಿ ನೀವಾಗಿಯೇ ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳಲಿದ್ದೀರಿ. ತಮಾಷೆಗೆ ಎಂದು ನೀವು ಯಾವಾಗಲೋ ಆಡಿದ ಮಾತು ಈಗ ನಿಮಗೆ ಸಮಸ್ಯೆಯನ್ನು ತಂದೊಡ್ಡಲಿದೆ. ಮೇಲಧಿಕಾರಿಗಳು, ಈ ತನಕ ನಿಮ್ಮ ಮೇಲೆ ಬಹಳ ವಿಶ್ವಾಸವನ್ನು ತೋರಿದವರೇ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡುವಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಮಧುಮೇಹ, ರಕ್ತದೊತ್ತಡ ಇಂತಹ ಸಮಸ್ಯೆಗಳು ಇರುವಂತವರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಬರಿಗಾಲಿನಲ್ಲಿ ಓಡಾಡಬೇಡಿ, ಮುಖ್ಯವಾಗಿ ಪಾದಗಳ ರಕ್ಷಣೆ ಕಡೆಗೆ ಗಮನ ನೀಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಕಮಿಷನ್ ಆಧಾರದಲ್ಲಿ ವ್ಯವಹಾರ ಮಾಡುವಂಥವರಿಗೆ ಆದಾಯದ ಪ್ರಮಾಣ ಜಾಸ್ತಿಯಾಗಲಿದೆ. ನೀವು ಈ ಹಿಂದೆ ಯಾವಾಗಲೋ ಮಾಡಿಕೊಟ್ಟಂತಹ ಕೆಲಸದ ಬಗ್ಗೆ ಬಹಳ ತೃಪ್ತಿಯಾಗಿ ಈ ದಿನ ನಿಮ್ಮನ್ನು ಮತ್ತೆ ಹುಡುಕಿಕೊಂಡು ಬರಲಿದ್ದಾರೆ. ವಿದೇಶಗಳಲ್ಲಿ ಉದ್ಯೋಗಕ್ಕೆ ಅಥವಾ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ಈತನಕ ಅಡ್ಡಿ- ಆತಂಕಗಳು ಏನಾದರೂ ಎದುರಾಗಿದ್ದಲ್ಲಿ ಅವು ನಿವಾರಣೆಯಾಗಲಿವೆ. ಇನ್ನು ಬರಲಾರದು ಎಂದುಕೊಂಡಿದ್ದ ಮೊತ್ತ ಒಂದು ಈ ದಿನ ಸ್ವಲ್ಪ ಪ್ರಯತ್ನ ಪಟ್ಟರೂ ನಿಮ್ಮ ಕೈಸೇರುವ ಸಾಧ್ಯತೆಗಳು ಜಾಸ್ತಿ ಇವೆ. ಒಟ್ಟಿನಲ್ಲಿ ಯಾವುದಾದರೂ ಮುಖ್ಯವಾದ ಕೆಲಸಗಳೇನಾದರೂ ಇದ್ದರೆ ಈ ದಿನ ಅದಕ್ಕಾಗಿ ಪ್ರಯತ್ನಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಏನಾದರೂ ಆಗಲಿ ಪರವಾಗಿಲ್ಲ ಎಂದುಕೊಂಡು ಭಂಡತನದಿಂದ ಮಾಡಿದ ಕೆಲಸಗಳು ಫಲ ನೀಡಲು ಆರಂಭಿಸುತ್ತವೆ. ಪೊಲೀಸ್ ಸ್ಟೇಷನ್, ಕೋರ್ಟು- ಕಚೇರಿ ಇಂತಹ ಕಡೆ ಕೆಲಸಗಳಿಗೆ ಓಡಾಡುತ್ತಾ ಇರುವವರಿಗೆ ರಾಜಿ- ಸಂಧಾನದ ಮೂಲಕ ಕೆಲಸಗಳು ಆಗುವಂಥ ಅವಕಾಶಗಳು ಹೆಚ್ಚಿವೆ. ಉದ್ಯೋಗ ಸ್ಥಳದಲ್ಲಿ ಅಥವಾ ನೀವು ವೃತ್ತಿ ಮಾಡುತ್ತಿರುವ ಕಡೆಗಳಲ್ಲಿ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡುತ್ತಿರುವವರು ಬೆರಗು ಮೂಡುವಂತೆ ಅದ್ಭುತವಾಗಿ ಸಾಧನೆ ಮಾಡಲಿದ್ದೀರಿ. ಬೆಂಕಿಯ ಮುಂದೆ ಕೆಲಸ ಮಾಡುವಂಥವರು ಮಾಮೂಲಿ ದಿನಕ್ಕಿಂತ ಹೆಚ್ಚು ಗಮನವಿಟ್ಟು ಕೆಲಸ ಮಾಡುವುದು ಅಗತ್ಯ. ಸಣ್ಣ ಪುಟ್ಟದಾದರೂ ಅಗ್ನಿ ಅವಘಡಗಳು ಆಗುವ ಸಾಧ್ಯತೆಗಳಿವೆ, ಎಚ್ಚರಿಕೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನೀವು ಯಾವ ಕೆಲಸವನ್ನು ಮಾಡಬೇಕು ಎಂದು ಬಹಳ ಸಲ ಪ್ರಯತ್ನಪಟ್ಟು ಅರ್ಧಕ್ಕೆ ನಿಂತಿರುತ್ತದೋ ಅಥವಾ ಆರಂಭವನ್ನೇ ಕಂಡಿರುವುದಿಲ್ಲವೋ ಅಂತಹದ್ದು ಈ ದಿನ ಚಾಲನೆ ಪಡೆದುಕೊಳ್ಳಲಿದೆ. ನೀವು ತುಂಬಾ ದೊಡ್ಡ ಮೊತ್ತ ಖರ್ಚಾಗಬಹುದು ಎಂದುಕೊಂಡಿದ್ದ ಕೆಲಸ ಒಂದರಲ್ಲಿ ತುಂಬಾ ಹಣ ಉಳಿಸಲಿದ್ದೀರಿ. ವೃತ್ತಿ ಅಥವಾ ವ್ಯಾಪಾರಗಳನ್ನು ಮಾಡಿಕೊಂಡಿದ್ದು, ಅದರ ವಿಸ್ತರಣೆಗಾಗಿ ಪ್ರಯತ್ನ ಪಡಬೇಕು ಎಂದುಕೊಳ್ಳುತ್ತಿರುವವರಿಗೆ ಸೂಕ್ತ ಅನುಕೂಲಗಳು ಒದಗಿ ಬರಲಿವೆ. ಕುಟುಂಬ ಸದಸ್ಯರಿಗಾಗಿ ವಸ್ತ್ರಾಭರಣಗಳನ್ನು ಖರೀದಿಸುವಂತಹ ಯೋಗ ಈ ದಿನ ಇದೆ. ನಿಮ್ಮಲ್ಲಿ ಕೆಲವರಿಗೆ ಬಡ್ತಿ ಅಥವಾ ವೇತನ ಹೆಚ್ಚಳದ ಸುಳಿವು ಸಿಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮಗೆ ಈ ದಿನ ದೊರೆಯುವ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸರಿಯಾಗಿ ಆಲೋಚನೆ ಮಾಡುವುದಕ್ಕೆ ಹೆಚ್ಚು ಸಮಯ ಮೀಸಲಿಡಿ. ಒಂದು ವೇಳೆ ನಿಮಗೆ ಈಗ ದೊರೆಯುತ್ತಿರುವ ಜವಾಬ್ದಾರಿ ಸಾಮರ್ಥ್ಯಕ್ಕೆ ಮೀರಿದ್ದು ಎಂದೇನಾದರೂ ಎನಿಸಿದಲ್ಲಿ ನಿಮಗಿಂತ ಹಿರಿಯರು ಹಾಗೂ ಅನುಭವಿಗಳಲ್ಲಿ ಸಲಹೆಯನ್ನು ಪಡೆದುಕೊಳ್ಳಿ. ಸೈಟು ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದು ಆಲೋಚನೆ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂತಹದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿನ ಆಸೆ ಈಡೇರಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣವಾಗಲಿದೆ. ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂಬ ನಿಮ್ಮ ಪ್ರಯತ್ನಗಳು ಅಂದುಕೊಂಡಂತೆ ಫಲ ನೀಡದೆ ಗೊಂದಲಕ್ಕೆ ಗುರಿಯಾಗಲಿದ್ದೀರಿ. ಇತರರು ನಿಮಗೆ ಸಹಾಯ ಮಾಡುತ್ತಾರೆ ಎಂದುಕೊಂಡು ಯಾವುದೇ ದೊಡ್ಡ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಡಿ. ಇನ್ನೂ ನಿಮ್ಮ ಕೈಗೆ ಸೇರದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ಕೊಡಲು ಹೋಗಬೇಡಿ. ಸಂಗಾತಿಯ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಉದ್ದೇಶದ ಉದ್ದೇಶದ ಬಗ್ಗೆ ಸ್ನೇಹಿತರು, ಸಂಬಂಧಿಕರಲ್ಲಿ ನಾನಾ ಅನುಮಾನಗಳು ಮೂಡಲಿವೆ. ನಿಮಗೆ ಬಹಳ ಆಪ್ತರಾದವರ ಜೊತೆಗೆ ಮನಸ್ತಾಪಗಳು ಏರ್ಪಡಬಹುದು. ಆದ್ದರಿಂದ ಈ ದಿನ ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ.