ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Numerology weekly horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ನವೆಂಬರ್ 20ರಿಂದ 26ರ ತನಕ ವಾರಭವಿಷ್ಯ (weekly horoscope) ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇನ್ನು ಹೆಚ್ಚು ಪೀಠಿಕೆ ಬೇಡ, ಜನ್ಮಸಂಖ್ಯೆಯನ್ನು (date of birth) ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮಸಂಖ್ಯೆ, ಗುಣ- ಸ್ವಭಾವ ತಿಳಿಯಿರಿ
ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1
ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2
ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3
ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4
ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5
ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6
ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7
ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8
ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9
ಜನ್ಮಸಂಖ್ಯೆ 1
ಉದ್ಯೋಗ ವಿಚಾರ ಪ್ರಾಶಸ್ತ್ಯ ಪಡೆಯುತ್ತಿದೆ. ಎಷ್ಟು ಖರ್ಚೆಂದರೆ ಬರುವ ಸಂಬಳ ಏನೇನೂ ಸಾಕಾಗುತ್ತಿಲ್ಲ. ಏನಾದರೂ ಹೊಸ ವ್ಯವಹಾರ ಶುರು ಮಾಡುವುದು ಉತ್ತಮವಾ ಎಂಬ ಆಲೋಚನೆ ಬರುತ್ತದೆ. ನೆನಪಿರಲಿ, ಯಾವ ಕಾರಣಕ್ಕೂ ಮೂನ್‌ಲೈಟಿಂಗ್ (ಒಂದಕ್ಕಿಂತ ಹೆಚ್ಚು ಕಡೆ ಕೆಲಸ) ಬೇಡ. ಜನವರಿ ತನಕ ನೀವು ಕೆಲಸ ಮಾಡುವ ಸ್ಥಳದಲ್ಲೇ ಶತ್ರುಗಳ ಕಾಟ ಇದೆ. ಮೂಳೆ ಆರೋಗ್ಯದ ಕಡೆ ಗಮನ ನೀಡಿ, ಸುಖಾಸುಮ್ಮನೆ ತಿರುಗಾಟದಿಂದ ಖರ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಕಡೆಗೆ ನಿಗಾ ಜಾಸ್ತಿ ಆಗಿ, ವ್ಯಾಸಂಗದಲ್ಲಿ ಹಿನ್ನಡೆ ಇದೆ.
ಜನ್ಮಸಂಖ್ಯೆ 2
ಹಿಂದೆ ಯಾವಾಗಲೋ ಕೊಟ್ಟ ಮಾತಿಗೆ ಈಗ ಪಶ್ಚಾತ್ತಾಪ ಪಡುವಂತಾಗುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಿ, ಇನ್ನೇನು ಕೆಲಸ ಕಳೆದುಕೊಂಡು ಬಿಟ್ಟೆ ಎಂಬ ಆತಂಕಕ್ಕೆ ಗುರಿ ಆಗುತ್ತೀರಿ. ಬಿಪಿ- ಶುಗರ್ ಇರುವಂಥವರಿಗೆ ಭುಜ, ಮೀನಖಂಡ, ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಪಾರ್ಟಿಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ವೇಗ ದೊರೆಯುತ್ತದೆ. ಮನೆಗೆ ಹೊಸ ವಸ್ತುಗಳನ್ನು ತರಲಿದ್ದೀರಿ. ಕೃಷಿಕರಿಗೆ ಹೊಸ ವಿಚಾರಗಳನ್ನು ಕಲಿಯುವ ಯೋಗ ಇದೆ.
ಜನ್ಮಸಂಖ್ಯೆ 3
ಯಾವುದು ಮೊದಲು ಯಾವುದು ನಂತರ ಎಂಬ ಸ್ಪಷ್ಟತೆ ಇರಲಿ. ಬಿಡುವು ಸಿಗದಷ್ಟು ಮೇಲಿಂದ ಮೇಲೆ ಕೆಲಸ ಬರಲಿದೆ. ನಾಲ್ಕಾರು ಜನರಿಗೆ ಸಹಾಯ ಆಗುವಂಥ ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುವವರಿಗೆ ಹೊಸ ಹೊಸ ಜನರ ಪರಿಚಯ ಆಗುತ್ತದೆ. ಅಡ್ವರ್ಟೈಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ದೀರ್ಘ ಕಾಲದ ಪ್ರಾಜೆಕ್ಟ್ ದೊರೆಯುವ ಅವಕಾಶಗಳಿವೆ. ಡೇ ಕೇರ್, ಕಿಂಟರ್‌ಗಾರ್ಡನ್‌ನಂಥದ್ದನ್ನು ನಡೆಸುತ್ತಿರುವವರಿಗೆ ಭವಿಷ್ಯದ ಯೋಜನೆಗಳು ಸಾಕಾರಗೊಳ್ಳಲಿವೆ. ಹಣಕಾಸು ಉಳಿತಾಯದ ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದೀರಿ.
ಜನ್ಮಸಂಖ್ಯೆ 4
ಮನಸ್ಸಿನಲ್ಲಿ ಇರುವ ಪ್ರೇಮ ವಿಚಾರವನ್ನು ನಿವೇದನೆ ಮಾಡಬೇಕು ಅಂದುಕೊಳ್ಳುತ್ತಿರುವವರು ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ಇರುವ ಕೆಲಸದಲ್ಲೇ ಮುಂದುವರಿಯಬೇಕಾ ಅಥವಾ ಹೊಸ ವ್ಯಾಪಾರ ಶುರು ಮಾಡಬೇಕಾ ಎಂಬ ಸಂಗತಿ ಬಹಳವಾಗಿ ಕಾಡುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದವರಿಗೆ ಖರೀದಿಗಾಗಿ ಹೊಸ ಹೊಸ ಜನರು ವಿಚಾರಣೆಗೆ ಬರುತ್ತಾರೆ. ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಸೌಂದರ್ಯವರ್ಧಕಗಳನ್ನು ಬಳಸುವವರಿಗೆ ಈ ಎಚ್ಚರಿಕೆ ಮಾತು ಹೆಚ್ಚು ಅನ್ವಯಿಸುತ್ತದೆ.
ಜನ್ಮಸಂಖ್ಯೆ 5
ನೀವು ಬಹಳ ಇಷ್ಟ ಪಡುವಂಥವರು, ನಂಬುವಂಥವರೇ ನಿಮಗೆ ಹೆಚ್ಚು ನೋವನ್ನು ನೀಡುತ್ತಾರೆ. ದಿಢೀರನೆ ಯಾರ ಸಹವಾಸವೂ ಬೇಡ ಎನಿಸುವುದಕ್ಕೆ ಶುರು ಆಗುತ್ತದೆ. ಸಂಗೀತ, ಯೋಗ, ಧ್ಯಾನ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಅಡುಗೆ, ಜಿಮ್ ಏನಾದರೂ ಹೊಸದನ್ನು ಮಾಡುವುದಕ್ಕೆ ತೊಡಗಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವ ಯೋಗ ಇದೆ. ಒಂದು ವೇಳೆ ಅದಕ್ಕೆ ಅಗತ್ಯ ಇರುವಷ್ಟು ಹಣ ಇಲ್ಲದಿದ್ದಲ್ಲಿ ಕನಿಷ್ಠ ಪಕ್ಷ ಷೋ ರೂಮ್‌ಗೆ ತೆರಳಿ, ನೋಡಿಕೊಂಡಾದರೂ ಬರುತ್ತೀರಿ.
ಜನ್ಮಸಂಖ್ಯೆ 6
ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಎಂಬ ಬಗ್ಗೆ ಗಮನ ಕೊಡಿ. ಯಾರ ಬಗ್ಗೆಯಾದರೂ ಮಾತನಾಡುವಾಗ, ಅಭಿಪ್ರಾಯ ಹೇಳುವಾಗ ಸ್ವಲ್ಪ ಎಚ್ಚರ ವಹಿಸಿ. ಈ ವಾರದಲ್ಲಿ ಒಂದು ದಿನ ಕನಿಷ್ಠ ನಾಲ್ಕು ಗಂಟೆ ಕಾಲ ಮೌನವಾಗಿರುವುದಕ್ಕೆ ಪ್ರಯತ್ನಿಸಿ, ಇದರಿಂದ ನಿಮಗೆ ಅನುಕೂಲ ಇದೆ. ಗಾರ್ಡನಿಂಗ್ ಮಾಡುವಂಥ ಅಭ್ಯಾಸ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ರೂಢಿಸಿಕೊಳ್ಳಿ. ಏಕಾಗ್ರತೆ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯ ಇದು. ಬೇರೆಯವರ ಟೀಕೆಯನ್ನು ಪಾಸಿಟಿವ್ ಆಗಿ ಸ್ವೀಕರಿಸಿ.
ಜನ್ಮಸಂಖ್ಯೆ 7
ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೆ ಅನಾರೋಗ್ಯದ ಸಾಧ್ಯತೆ ಇದೆ. ಇನ್ನು ಊಟ- ತಿಂಡಿ, ಪಾನೀಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ, ಜತೆಗೆ ಅದು ನಿಮ್ಮ ದೇಹಕ್ಕೆ ಒಗ್ಗುತ್ತಿದೆಯಾ ಎಂಬ ಕಡೆ ಲಕ್ಷ್ಯ ಕೊಡಿ. ಶುಕ್ರವಾರ ಅಥವಾ ಶನಿವಾರದಂದು ರಾಮಕೃಷ್ಣಾಶ್ರಮ, ಅಥವಾ ಚರ್ಚ್‌ಗೆ ಹೋಗುವಂಥವರು ಚರ್ಚ್‌ಗೆ ಅಥವಾ ಆಯಾ ಧಾರ್ಮಿಕ ಕೇಂದ್ರಕ್ಕೆ ಹೋಗುವಂಥವರು ಅಂಥಲ್ಲಿಗೆ ಹೋಗಿಬನ್ನಿ. ವಿದ್ಯಾರ್ಥಿಗಳು ನಿಮ್ಮ ವೈಫಲ್ಯವಿದ್ದಲ್ಲಿ ಬೇರೆಯವರನ್ನು ದೂರಬೇಡಿ. ಮಹಿಳೆಯರಿಗೆ ಹಳೆ ಸ್ನೇಹಿತ- ಸ್ನೇಹಿತೆಯರನ್ನು ಭೇಟಿ ಆಗುವ ಯೋಗ ಇದೆ.
ಜನ್ಮಸಂಖ್ಯೆ 8
ಮೊಬೈಲ್ ಫೋನ್, ಗ್ಯಾಜೆಟ್‌ಗಳು, ಲ್ಯಾಪ್‌ಟಾಪ್ ಇಂಥದ್ದನ್ನು ಖರೀದಿಸುವ ಯೋಗ ಇದೆ. ಇನ್ನು ಅಂಗಡಿಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಯುಪಿಐ ಅಥವಾ ಗೂಗಲ್ ಪೇ- ಫೋನ್‌ಪೇ ಮೂಲಕ ಎಲ್ಲೇ ಹಣ ಪಾವತಿಸುವಾಗ ಮೊತ್ತವನ್ನು ಒಂದಕ್ಕೆ ಎರಡು ಸಲ ಪರೀಕ್ಷಿಸಿಕೊಳ್ಳಿ. ಒಮ್ಮೆ ಪೇಮೆಂಟ್ ಆಗಿಲ್ಲ ಎಂದು ಮತ್ತೊಮ್ಮೆ ಮಾಡಿ, ನಷ್ಟ ಆಗುವ ಸಾಧ್ಯತೆಗಳಿವೆ. ವೀಕೆಂಡ್‌ಗಳಲ್ಲಿ ಭರ್ಜರಿ ಪಾರ್ಟಿ ಮಾಡುವ ಸಾಧ್ಯತೆ ಕಾಣಿಸುತ್ತದೆ. ದ್ರವವೋ ಘನವೋ ಅತಿಯಾಗದಂತೆ ಎಚ್ಚರಿಕೆ ವಹಿಸಿ, ಉಳಿದಂತೆ ಹ್ಯಾಪಿ ವೀಕೆಂಡ್.
ಜನ್ಮಸಂಖ್ಯೆ 9
ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಒಂದಿಷ್ಟು ಶುಭ ಬೆಳವಣಿಗೆಗಳು ಇವೆ, ಹೊಸ ಬಟ್ಟೆ, ಸ್ಮಾರ್ಟ್ ವಾಚ್, ಬ್ರ್ಯಾಂಡೆಡ್ ಶೂಗಳಿಗೆ ಹಣ ಖರ್ಚಾಗಲಿವೆ. ಇನ್ನು ಮದುವೆ ಆದವರು ಒಂದೆರಡು ದಿನದ ಮಟ್ಟಿಗೆ ನೀವಿರುವ ಸ್ಥಳದಿಂದ ಹೊರಗೆ, ಕನಿಷ್ಠ ಪಕ್ಷ ಸಿನಿಮಾ, ಮಾಲ್‌ಗಾದರೂ ಹೋಗಿಬರುವ ಯೋಗ ಇದೆ. ಹೊಸದಾಗಿ ಕೆರಿಯರ್ ಡೆವಲಪ್‌ಮೆಂಟ್ ಕ್ಲಾಸ್‌ಗಳಿಗೆ ಜಾಯಿನ್ ಆಗುವುದಕ್ಕೆ ಮನಸ್ಸು ಮಾಡಲಿದ್ದೀರಿ. ಸೈಟು- ಮನೆ ಖರೀದಿ ಮಾಡಬೇಕೆಂದು ಇರುವವರು ಅದನ್ನು ಮುಂದಕ್ಕೆ ಹಾಕುವುದು ಉತ್ತಮ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ