AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction:ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನ.21ರ ನಿಮ್ಮ ದಿನ ಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 21ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.

Numerology Prediction:ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನ.21ರ ನಿಮ್ಮ ದಿನ ಭವಿಷ್ಯ
daily horoscope
TV9 Web
| Edited By: |

Updated on: Nov 21, 2022 | 5:50 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 21ರ ಸೋಮವಾರದ ದಿನ ಭವಿಷ್ಯ (Numerology daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Weekly Horoscope: ಸಂಖ್ಯಾಶಾಸ್ತ್ರ ಪ್ರಕಾರ ನ. 20ರಿಂದ 26ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಜನ್ಮಸಂಖ್ಯೆ 1

ನಿಮ್ಮ ಉದ್ಯೋಗ ಸ್ಥಳದಲ್ಲಿ ಬೆನ್ನಿಗೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಮೂಡುತ್ತದೆ. ಅಥವಾ ಅದನ್ನು ಇನ್ನೊಬ್ಬರು ಹೇಳಬಹುದು. ಮನೆಯಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಬಳಸುವಾಗ ಎಚ್ಚರ ಇರಲಿ. ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳಿಗೆ ಚಕ್ಕರ್ ಹಾಕುವ ಆಲೋಚನೆ ಇದ್ದರೆ ಈ ಬಗ್ಗೆ ಮನೆಯಲ್ಲಿ ತಿಳಿಸಿಬಿಡಿ.

ಜನ್ಮಸಂಖ್ಯೆ 2

ನೀವು ಭಾವನಾತ್ಮಕವಾಗಿದ್ದ ಸಂದರ್ಭದಲ್ಲಿ ಕೊಟ್ಟ ಮಾತು ನಿಮ್ಮ ಪಾಲಿಗೆ ಮಗ್ಗುಲ ಮುಳ್ಳಾಗಿ ಚುಚ್ಚಲಿದೆ. ಇದು ಕನಿಷ್ಠ ಪಕ್ಷ ಇವತ್ತಿಗೆ ನಿಮಗೆ ಅನಿಸದಿರಬಹುದು. ಆದರೆ ಈ ಬಗ್ಗೆ ಮುಂದೊಂದು ದಿನ ಭಾರೀ ಬೇಜಾರು ಮಾಡಿಕೊಳ್ಳಲಿದ್ದೀರಿ. ವಾಹನದ ಪಾರ್ಕಿಂಗ್ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಿ, ದಂಡ ಕಟ್ಟುವ ಪ್ರಸಂಗ ಎದುರಾದೀತು.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮಸಂಖ್ಯೆ, ಗುಣ- ಸ್ವಭಾವ ತಿಳಿಯಿರಿ

ಜನ್ಮಸಂಖ್ಯೆ 3

ನೀವು ಇಲ್ಲಿಯ ತನಕ ಎಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿರಬಹುದು, ನಿಮ್ಮ ಕಾಳಜಿ ಬಗ್ಗೆ ಎಲ್ಲರಿಗೂ ಗೊತ್ತು ಅಂತ ನೀವು ಅಂದುಕೊಂಡರೂ ಇವತ್ತು ಮಾತ್ರ ಅವರಿವರ ಪಾಲಿಗೆ ನೀವೇ ಗುರಿ ಆಗಲಿದ್ದೀರಿ. ಇದರಲ್ಲಿ ಒಂದು ಸಂತೋಷ ಏನೆಂದರೆ, ಹಳೆಯ ಹಣದ ಬಾಕಿ, ಅದರಲ್ಲೂ ಸರ್ಕಾರದ ಸ್ಕೀಮ್‌ಗಳು, ಸೋಷಿಯಲ್ ಸೆಕ್ಯೂರಿಟಿ ಯೋಜನೆಗಳಿಂದ ಬರಬೇಕಿದ್ದ ಹಣ ಇದ್ದಲ್ಲಿ ಆ ಬಗ್ಗೆ ಮಾಹಿತಿ ಸಿಗುತ್ತದೆ.

ಜನ್ಮಸಂಖ್ಯೆ 4

ಬಹಳ ಸಮಯದಿಂದ ನೀವು ಅಂದುಕೊಳ್ಳುತ್ತಿದ್ದ ವಿಚಾರ ಈ ದಿನ ಹೇಳೇ ಬಿಡುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇಲ್ಲೊಂದು ಟ್ರಿಕ್ ಇದೆ. ಇದರಿಂದ ನಿಮಗೆ ಶೇಕಡಾ ಐವತ್ತರಷ್ಟು ಒಳ್ಳೆಯದು, ಇನ್ನು ಐವತ್ತರಷ್ಟು ಕೆಟ್ಟದ್ದಿದೆ. ಇನ್ನು ನಿಮ್ಮ ಮರೆವಿನಿಂದ ದೊಡ್ಡ ಅನುಕೂಲವೊಂದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 5

ಮಕ್ಕಳ ಸಲುವಾಗಿಯೇ ಹೆಚ್ಚಿನ ಸಮಯ, ಹಣ ಮೀಸಲಿಡುವ ದಿನ ಇದಾಗಿರಲಿದೆ. ನಿಮ್ಮ ತ್ಯಾಗ ಹಾಗೂ ಶ್ರಮಕ್ಕೆ ಫಲ ದೊರೆಯಲಿದೆ. ನೀವು ಮಾಡಬೇಕಾದ್ದೇನೆಂದರೆ, ನೀವು ಯಾವುದೇ ದೇವರನ್ನು ಆರಾಧನೆ ಮಾಡಿದರೂ ಪರವಾಗಿಲ್ಲ, ಅದಕ್ಕೆ ಸಿಹಿ ನೈವೇದ್ಯ ಮಾಡಿ, ಮನೆಯ ಮಹಡಿಯೋ ಅಥವಾ ಎತ್ತರದ ಸ್ಥಳದಲ್ಲಿ ಇಟ್ಟುಬನ್ನಿ. ಸಿಹಿ ಅಂದರೆ, ಕನಿಷ್ಠ ಸಕ್ಕರೆ ಆದರೂ ಪರವಾಗಿಲ್ಲ.

ಜನ್ಮಸಂಖ್ಯೆ 6

ಎಷ್ಟು ಪ್ರಯತ್ನ ಪಟ್ಟರೂ ನನ್ನ ಕೆಲಸ ತುದಿ ಮುಟ್ಟುತ್ತಿಲ್ಲ ಅಂದುಕೊಳ್ಳುತ್ತಿರುವವರಿಗೆ ಇವತ್ತು ಒಂದಿಷ್ಟು ಸಮಾಧಾನ ದೊರೆಯುತ್ತದೆ. ಕಣ್ಣು- ಕಿವಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಆ ಬಗ್ಗೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರಲ್ಲಿ ತೋರಿಸಿ. ಇನ್ನು ಸಾಧ್ಯವಾದಲ್ಲಿ ತುಳಸೀ ಗಿಡಕ್ಕೆ ಒಂದು ತಂಬಿಗೆಯಷ್ಟು ನೀರನ್ನು ಹಾಕಿ. ಯಾವುದಾದರೂ ಕಾರಣಕ್ಕೆ ನೀವು ಹಾಕುವಂತಿಲ್ಲ ಅಂತಾದರೆ ಬೇರೆಯವರಿಂದಲಾದರೂ ಹಾಕಿಸಿ.

ಜನ್ಮಸಂಖ್ಯೆ 7

ಕೃಷಿತೋ ನಾಸ್ತಿ ದುರ್ಭಿಕ್ಷಂ. ಎಲ್ಲ ಕೆಲಸಗಳನ್ನು ನನ್ನ ತಲೆ ಮೇಲೆ ಹಾಕುತ್ತಿದ್ದಾರೆ ಅಂತನ್ನಿಸಿದಲ್ಲಿ ಸಿಟ್ಟಾಗಬೇಡಿ. ಭವಿಷ್ಯದಲ್ಲಿ ನಿಮ್ಮ ಒಳತಿಗೆ ಏನೋ ಸಿದ್ಧತೆ ನಡೆಯುತ್ತಿದೆ. ಸ್ವಾನುಕಂಪವನ್ನು ಬಿಟ್ಟು, ಕೆಲಸಗಳನ್ನು ಮಾಡಿ. ಇನ್ವೆಸ್ಟ್‌ಮೆಂಟ್ ವಿಚಾರದಲ್ಲಿ ದಿಢೀರ್ ನಿರ್ಧಾರಗಳನ್ನು ಮಾಡಬೇಡಿ. ಮನೆಯಿಂದ ಹೊರಡುವ ಮುನ್ನ ಸ್ವಲ್ಪ ಮೊಸರು ಮತ್ತು ಅವಲಕ್ಕಿ ತಿನ್ನಿ.

ಜನ್ಮಸಂಖ್ಯೆ 8

ನಿಮ್ಮ ಸಾಲದ ಬಗ್ಗೆ ಒಂದಿಷ್ಟು ಕ್ಯಾಲ್ಕುಲೇಟರ್ ಹಿಡಿದು, ಲೆಕ್ಕ ಹಾಕಿಕೊಳ್ಳುವ ಸಮಯ. ಸಂಗಾತಿ ಏನಾದರೂ ಹೇಳುತ್ತಿದ್ದಾರೆ ಅಂದರೆ ಸ್ವಲ್ಪ ಕೇಳಿಸಿಕೊಳ್ಳಿ. ಇದರಿಂದ ತುಂಬ ದೊಡ್ಡ ಸಹಾಯ ಆಗುತ್ತದೆ ಅಂತಲ್ಲ, ಸಂಬಂಧ ಸುಧಾರಿಸುತ್ತದೆ. ನೆಮ್ಮದಿ ವಾತಾವರಣ ಸೃಷ್ಟಿ ಆಗುತ್ತದೆ. ನಿಮ್ಮಿಂದ ಸಾಧ್ಯವಾದಲ್ಲಿ, ಅನುಕೂಲ ಇದ್ದಲ್ಲಿ ಪಾರಿವಾಳಗಳಿಗೆ ಕೈಲಾದಷ್ಟು ಆಹಾರ ಹಾಕಿ.

ಜನ್ಮಸಂಖ್ಯೆ 9

ನಿನ್ನೆ ತನಕ ಒಂದು ಲೆಕ್ಕ, ಇವತ್ತಿಂದ ಬೇರೆ ಲೆಕ್ಕ ಎನ್ನುವಂತೆ ಬದುಕುವುದಕ್ಕೆ ಆಲೋಚಿಸುತ್ತೀರಿ. ಖಂಡಿತಾ ಇದರಲ್ಲಿ ತಪ್ಪಿಲ್ಲ. ಆದರೆ ಇದನ್ನೇ ಮುಂದು ಮಾಡಿಕೊಂಡು ಯಾರನ್ನೂ ನೋಯಿಸಬೇಡಿ. ಚಿನ್ನ ಖರೀದಿ ಮಾಡಬೇಕು ಅಂದುಕೊಳ್ಳು ಸಾಧ್ಯತೆ ಇದೆ. ಇನ್ನು ಕುಟುಂಬದ ಖರ್ಚಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಮಾಡುತ್ತೀರಿ. ಸೂರ್ಯಾಸ್ತದ ಹೊತ್ತಿಗೆ ಪಶ್ಚಿಮ ದಿಕ್ಕಿಗೆ ತಿರುಗಿ ನಿಂತು ಒಂದೆರಡು ನಿಮಿಷ ಧ್ಯಾನ ಮಾಡಿ.

ಲೇಖನ – ಎನ್ ಕೆ ಸ್ವಾತಿ 

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ