ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಅಕ್ಟೋಬರ್ 01 ರಿಂದ 07 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ ರಾಶಿ : ಅಕ್ಟೋಬರ್ ತಿಂಗಳ ಮೊದಲ ವಾರದ ಒಂದಿಷ್ಟು ಶುಭಫಲಗಳು ನಿಮಗೆ ಇರಲಿವೆ. ವಾರದ ಮಧ್ಯದಲ್ಲಿ ಕುಜನು ಮಿತ್ರಕ್ಷೇತ್ರಕ್ಕೆ ಬರಲಿದ್ದು ಸಪ್ತಮಕ್ಕೆ ಬರಲಿದ್ದಾನೆ. ಪ್ರೇಮಿಗಳಿಗೆ ಇದು ಸಕಾಲವಾಗಿದ್ದು. ಪ್ರೀತಿಯನ್ನು ಹೇಳಿಕೊಳ್ಳಭುದಾಗಿದೆ. ಈ ವಾರ ಏಕಾದಶದ ಶನಿಯಿಂದ ಶುಭವಾರ್ತೆಯನ್ನು ಪಡೆಯುವಿರಿ. ಈ ಸಮಯದಲ್ಲಿ ನೀವು ಸೂಕ್ತ ನಿರ್ಧಾರವನ್ನು ಪಡೆದು ಉತ್ತಮ ಗುರಿ ತಲುಪಬಹುದು. ಕೀರ್ತಿಯೂ ನಿಮ್ಮದಾಗಲಿದೆ. ಹಿತ ಶತ್ರುಗಳ ಮಾತಿಗೆ ಮರುಳಾಗಬಹುದು, ಸ್ವಲ್ಪ ಜಾಗರೂಕರಾಗಿರಿ. ಸುಬ್ರಹ್ಮಣ್ಯನ ಆರಾಧನೆಯಿಂದ ಮನೋಬಲವು ಹೆಚ್ಚುವುದು.
ವೃಷಭ ರಾಶಿ : ಅಕ್ಟೋಬರ್ ಮಾಸದ ಮೊದಲ ವಾರ ಶುಭವಿದೆ. ಕುಜನು ಷಷ್ಠಸ್ಥಾನವನ್ನು ವಾರದ ಮಧ್ಯದಲ್ಲಿ ಪ್ರವೇಶ ಮಾಡುವುದರಿಂದ ಶತುಗಳ ಬಾಧೆಯು ದೂರವಾಗುವುದು. ಆರೋಗ್ಯದ ವಿಚಾರದಲ್ಲಿ ಸುಧಾರಣೆ ಇರಲಿದೆ. ಮಾಡಿದ ಸಾಲವನ್ನು ತೀರಿಸುವ ಅವಕಾಶಗಳು ನಿಮ್ಮೆದುರು ಇರುವುದು. ಈ ವಾರ ನಿಮಗೆ ಹಣದ ಹರಿವು ನಿಧಾನವಾಗಿ ಇದ್ದರೂ ತೃಪ್ತಿ ಇರಲಿದೆ. ದೈವ ಕಾರ್ಯದ ಕಡೆ ಮನಸ್ಸು ಇರದು. ರಾಜಕಾರಣಿಗಳಿಗೆ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಈ ವಾರ ಅನುಕೂಲವಾಗಿ ಇದೆ. ಲಲಿತಾಂಬಿಕೆಯನ್ನು ಸ್ತೋತ್ರ ಮಾಡಿ.
ಮಿಥುನ ರಾಶಿ : ತಿಂಗಳ ಮೊದಲ ವಾರದಲ್ಲಿ ಗ್ರಹಗಳ ಚಲನೆಯಿಂದ ಸಾಧಾರಣ ಫಲವು ಸಿಗುವುದು. ಪಂಚಮಕ್ಕೆ ಕುಜನ ಪ್ರವೇಶವಾಗಲಿದ್ದು ಉನ್ನತ ಶಿಕ್ಷಣಕ್ಕೆ ತಡೆಗಳು ಬರಬಹುದು. ಮಕ್ಕಳ ವಿಚಾರದಲ್ಲಿ ನಿಮಗೆ ಅಸಮಾಧಾನವು ಹೆಚ್ಚಾಗುವುದು. ಈ ವಾರ ನೀವು ಹೊಸ ಸ್ಥಳಕ್ಕೆ ಬದಲಾವಣೆಯಾಗುವಿರಿ. ಗುರುವಿನ ದೃಷ್ಟಿಯು ಇರುವುದರಿಂದ ನಿಮ್ಮ ಎಲ್ಲ ಮನಃಕ್ಲೇಶವು ದೂರಾಗುವುದು. ಮುಂದಿನ ಆಲೋಚನೆ ಮಾಡಲೂ ಸಹಕಾರಿಯಾಗುವುದು. ಭೂ ವ್ಯವಹಾರ ಮಾಡುವವರಿಗೆ ಸಾಧಾರಣ ಲಾಭವಿದೆ.
ಕರ್ಕ ರಾಶಿ : ತಿಂಗಳ ಮೊದಲ ವಾರದಲ್ಲೇ ಗ್ರಹಗತಿಗಳ ಸಣ್ಣ ಬದಲಾವಣೆ ಆಗಲಿದ್ದು ಶುಕ್ರನು ದ್ವಿತೀಯ ಸ್ಥಾನವನ್ನು ಪ್ರವೇಶಿಸುವನು. ಮಾತನ್ನು ಚೆನ್ನಾಗಿ ಆಡಲಿದ್ದೀರಿ. ನಿಮ್ಮ ಮಾತಿಗೆ ಯಾರೂ ಸೋಲಬಹುದು. ಅನಿರೀಕ್ಷಿತ ಧನಾಗಮನವು ಇರುವುದು. ಕುಟುಂಬದಲ್ಲಿ ನೆಮ್ಮದಿಯು ಇರಲಿದೆ. ಚತುರ್ಥರಾಶಿಯನ್ನು ಪ್ರವೇಶಿಸುವ ಕುಜನು ನಿಮಗೆ ಭೂಲಾಭವನ್ನು ಮಾಡಿಕೊಡುವನು. ತಾಯಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗಬಹುದು. ಬಂಧುಗಳು ನಿಮಗೆ ಸ್ಪಂದಿಸದೇ ಇರಬಹುದು. ಕುಟುಂಬ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆ ಬಗ್ಗೆ ದೀರ್ಘವಾದ ಚಿಂತನೆ ನಡೆಸುವಿರಿ. ಸಾಹಸಮಯ ಕಾರ್ಯದಲ್ಲಿ ಭಾಗಿಯಾಗುವಿರಿ.
ಸಿಂಹ ರಾಶಿ : ಈ ವಾರವು ಶುಭಾಶುಭ ಮಿಶ್ರಫಲವನ್ನು ಉಣ್ಣುವಿರಿ. ಮನಸ್ಸಿನಲ್ಲಿ ನೆಮ್ಮದಿಯು ಅಧಿಕವಾಗಿ ಇರುವುದು. ಆರೋಗ್ಯವು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಇದೆಲ್ಲವೂ ಶುಕ್ರನು ನಿಮ್ಮ ರಾಶಿಗೆ ಬರುವುದರಿಂದ ಆಗುವುದು. ಇನ್ನು ಕುಜನು ತುಲಾರಾಶಿಯನ್ನು ಪ್ರವೇಶಿಸಲಿದ್ದು ನಿಮ್ಮ ಪ್ರತಿಭೆ, ಸಾಮರ್ಥ್ಯವನ್ನು ತೋರಿಸುವನು. ಸಣ್ಣ ತಪ್ಪಿಗೂ ಹೆಚ್ಚು ಸಿಟ್ಟಾಗುವಂತೆ ಮಾಡುವನು. ಅಹಂಕಾರದಿಂದ ನಿಮ್ಮ ಮಾತು ಕೂಡಿರುವುದು. ಈ ವಾರದಲ್ಲಿ ಬಂಧುಗಳ ನಕಾರಾತ್ಮಕ ಸನ್ನಿವೇಶದ ಕಾರಣ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯು ಕಡಿಮೆ ಇರಲಿದೆ. ಮನಸ್ಸಿನ ಚಾಂಚಲ್ಯಕ್ಕೆ ಧ್ಯಾನವನ್ನು ಮಾಡಿ.
ಕನ್ಯಾ ರಾಶಿ : ಈ ವಾರವು ತಿಂಗಳ ಮೊದಲ ವಾರವಾಗಿದ್ದು ಗ್ರಹಗತಿಗಳ ಬದಲಾವಣೆಯಿಂದ ನಿಮಗೆ ಅಶುಭವು ಹೆಚ್ಚಿರುವುದು. ದ್ವಿತೀಯಕ್ಕೆ ಚಲಿಸಲಿರುವ ಕುಜನಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡೆತಡೆಗಳು ಬರುವುದು. ಮಾತಿನಲ್ಲಿ ಅಸ್ಪಷ್ಟತೆ ಇರುವುದು. ಕುಟುಂಬದ ವಾತಾವರಣವು ನಿಮಗೆ ಪೂರಕವಾಗಿ ಇರದು. ಪ್ರೇಮವು ಆರಂಭವಾಗುವ ಲಕ್ಷಣವು ನಿಮ್ಮಲ್ಲಿ ಗೋಚರಿಸುವುದು. ದ್ವಾದಶದಲ್ಲಿ ಶುಕ್ರನಿರುವ ಕಾರಣ ನಿಮಗೆ ಭೋಗ ವಸ್ತುಗಳಿಂದ ಧನವು ನಷ್ಟವಾಗುವುದು. ಪಾಪ ಕಾರ್ಯಕ್ಕೆ ಪ್ರೇರಣೆ ಸಿಗುವುದು. ಈ ವಾರ ನಿಮಗೆ ಸಮಾಜದಲ್ಲಿ ಅಗೌರವವನ್ನು ಕಾಣುವಿರಿ. ಅಲ್ಲದೇ ಸಜ್ಜನರ ಸಹವಾಸ ಸಿಗುವುದು. ನಿಮ್ಮ ನಿಃಸ್ವಾರ್ಥಸೇವೆಗೆ ದೈವವೇ ಅನುಕೂಲ ಮಾಡಿಕೊಡುವುದು.
ತುಲಾ ರಾಶಿ : ನಿಮಗೆ ಈ ವಾರ ಬದಲಾದ ಗ್ರಹಗತಿಗಳ ಕಾರಣದಿಂದ ಮಧ್ಯಮಫಲವು ಇರವುದು. ನಿಮ್ಮ ರಾಶಿಗೆ ಕುಜನ ಪ್ರವೇಶವಾಗಲಿದ್ದು ದೇಹಕ್ಕೆ ಹೊರಗಿನಿಂದ ಪೀಡೆಯು ಬರುವುದು. ಮಾನಸಿಕ ಅಶಾಂತಿಯಿಂದ ತೊಳಲಾಡುವಿರಿ. ದ್ವಾದಶದಲ್ಲಿ ಸೂರ್ಯ ಹಾಗು ಬುಧರು ಇದ್ದು ಬಂಧುಗಳಿಂದ ಅಪಮಾನವಾಗಬಹುದು. ರಹಸ್ಯ ವಿಷಯಗಳನ್ನು ಬಯಲು ಮಾಡುವಿರಿ. ಈ ವಾರ ಉದ್ಯೋಗದ ಕುರಿತು ಚರ್ಚೆಗಳನ್ನು ಮಾಡುವಿರಿ. ನಿಮ್ಮ ಮೇಲಿನ ಗೌರವ ವೃದ್ಧಿಸಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಮಾಡುವಿರಿ. ಲಲಿತಾಂಬಿಕೆಯ ಆರಾಧನೆಯಿಂದ ಇಷ್ಟಾರ್ಥವವನ್ನು ಪಡೆಯುವಿರಿ.
ವೃಶ್ಚಿಕ ರಾಶಿ : ಅಕ್ಟೋಬರ್ ತಿಂಗಳ ಗ್ರಹಗಳ ಬದಲಾವಣೆಯು ನಿಮ್ಮ ಮೇಲೆ ಪರಿಣಾಮವನ್ನು ಬೀರಲಿದೆ. ಶುಕ್ರನು ದಶಮಸ್ಥಾನಕ್ಕೆ ಬರಲಿದ್ದು ಕಲಾವೃತ್ತಿಯಲ್ಲಿ ಇರುವವರು, ವಿನ್ಯಾಸಕಾರರಿಗೆ ಹೆಚ್ಚಿನ ಅನುಕೂಲವಿರುವುದು. ಕಲಾವಿದರು ಅಧಿಕ ಆದಾಯವನ್ನು ಗಳಿಸುವರು. ಆದರೆ ಕುಜನು ದ್ವಾದಶಕ್ಕೆ ಬಂದ ಕಾರಣ ಭೂಮಿಯ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇರುವುದು. ವಾಹನದಿಂದ ಸ್ವಲ್ಪ ಜಾಗರೂಕತೆ ಇರಲಿ. ಈ ಮೊದಲ ವಾರ ನಿಮಗೆ ನಿಮ್ಮಲ್ಲಿನ ಅತಿಯಾದ ಆತ್ಮವಿಶ್ವಾಸವು ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯಕವಾಗುವುದು. ಪರಿಣಾಮಕಾರಿ ನಿರ್ಧಾರಗಳಿಂದ ಮೆಚ್ಚುಗೆ ಸಿಗುವುದು. ಔದ್ಯೋಗಿಕವಾಗಿ ಸಹೋದ್ಯೋಗಿಗಳ ಬೆಂಬಲವು ಸಿಗುವುದು. ಕೃಷಿಕರ ಹೆಚ್ಚಿನ ಪ್ರಯತ್ನಕ್ಕೆ ಫಲವು ಸಿಗುವುದು.
ಧನು ರಾಶಿ : ನಿಮಗೆ ಈ ವಾರ ಶುಭ ಫಲವು ಹೆಚ್ಚು ಇರಲಿದೆ. ಶುಕ್ರನು ನವಮಕ್ಕೆ ಬರಲಿದ್ದು ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಪೂರ್ವಜನ್ಮದ ಸುಕೃತದಿಂದ ನಿಮಗೆ ಸಂಪತ್ತು ಪ್ರಾಪ್ತವಾಗುವುದು. ಏಕಾದಶ ಸ್ಥಾನಕ್ಕೆ ಕುಜನ ಪ್ರವೇಶವು ಆಗಲಿದ್ದು ವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ, ಉನ್ನತಸ್ಥಾನಮಾನ ಪ್ರಾಪ್ತಿಗಳು ಆಗಲಿವೆ. ಈ ವಾರ ನೀವು ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಬೇಕಾಗುವುದು. ಮಹತ್ತ್ವದ ಕಾರ್ಯಕ್ಕೆ ದುಡುಕಿನ ಹೆಜ್ಜೆಯೇ ಮುಳುವಾಗಬಹುದು. ನ್ಯಾಯದಲ್ಲಿ ನಿಮ್ಮ ಪರವಾಗಿ ಬೆಳವಣಿಗೆ ಕಾಣುವಿರಿ. ಇದರಿಂದ ನಿಮ್ಮ ವಿರೋಧಿಗಳ ಪ್ರಾಬಲ್ಯ ಕುಸಿಯುವುದು.
ಮಕರ ರಾಶಿ : ಈ ವಾರ ಶುಕ್ರ ಮತ್ತು ಕುಜರ ಬದಲಾವಣೆಯಿಂದ ಸಾಮಾನ್ಯ ಫಲವು ಸಿಗುವುದು. ಶುಕ್ರನು ಅಷ್ಟಮಸ್ಥಾನಕ್ಕೆ ಬಂದ ಕಾರಣ ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಅಪಮಾನವನ್ನು ಎದುರಿಸಿಬೇಕಾದ ಸಂದರ್ಭವು ಈ ವಾರ ಬರಲಿದೆ. ದಶಮದಲ್ಲಿ ಕುಜನಿರುವ ಕಾರಣ ದೈಹಿಕ ಸಾಮರ್ಥ್ಯದಿಂದ ಮಾಡುವ ಕೆಲಸಕ್ಕೆ ಹೆಚ್ಚು ಒತ್ತು ಇರುವುದು. ಈ ವಾರ ನಿಮಗೆ ಹಳೆಯ ವಿವಾದಗಳು ಇತ್ಯರ್ಥ ಆಗುವ ಲಕ್ಷಣವಿದೆ. ವಿವಾಹ ಮಾತುಕತೆಗೆ ಹಿರಿಯರ ಬೆಂಬಲ ಸಿಕ್ಕಿ ಬೇಗ ಎಲ್ಲವೂ ತೀರ್ಮಾನವಾಗುವುದು. ಭಾವುಕರಾಗುವ ಸಂದರ್ಭವು ಬರಬಹುದು.
ಕುಂಭ ರಾಶಿ : ಈ ವಾರವು ತಿಂಗಳ ಮೊದಲ ವಾರವಾಗಿದ್ದು ಗ್ರಹಗತಿಗಳ ಚಲನೆಯಿಂದ ಶುಭವು ಇರುಬುದು. ಈ ವಾರ ಶುಕ್ರನು ಷಷ್ಠಸ್ಥಾನದಿಂದ ಸಪ್ತಮಕ್ಕೆ ಬರಲಿದ್ದು ನಿಮ್ಮ ವಿವಾಹ ಸಂಬಂಧವಾದ ತೊಡಕುಗಳನ್ನು ನಿವಾರಿಸಿವನು. ಮಾನಸಿಕ ನೆಮ್ಮದಿಯನ್ನು ಕೊಡುವನು. ಸ್ತ್ರೀಸುಖವನ್ನು ಕೊಡಲಿದ್ದಾನೆ. ನವಮಕ್ಕೆ ಬರುವ ಕುಜನು ಧಾರ್ಮಿಕ ಕಾರ್ಯಗಳ ಕಡೆ ಗಮನವನ್ನು ಕಡಿಮೆ ಮಾಡುವನು. ಹಿರಿಯರ ಮೇಲೆ ಗೌರವವು ಕಡಿಮೆ ಆಗುವುದು. ಯಾರನ್ನೂ ನೀವು ಗೌರವಿಸುವುದಿಲ್ಲ. ಈ ವಾರ ನಿಮಗೆ ಹೊಸ ಕಾರ್ಯಗಳ ಆರಂಭಕ್ಕೆ ಒಪ್ಪಂದ ಮಾಡಿಕೊಳ್ಳುವಿರಿ. ನಿಮಗಿಂತ ಚಿಕ್ಕವರಿಗೆ ಸಹಾಯ, ಸಹಕಾರ ನೀಡುವುದರಿಂದ ಸಂತೃಪ್ತಿ ಸಿಗುವುದು. ನೀವು ಅಂದುಕೊಂಡಂತೆ ನಿಮಗೆ ಸಮಾಜದಲ್ಲಿ ಮಾನ್ಯತೆ ಪ್ರಾಪ್ತವಾಗುವುದು.
ಮೀನ ರಾಶಿ : ಆಕ್ಟೋಬರ್ ಮಾಸದ ಮೊದಲನೇ ವಾರವು ಇದಾಗಿದ್ದು ಮಿಶ್ರಫಲವು ಸಿಗಲಿದೆ. ಷಷ್ಠಕ್ಕೆ ಶುಕ್ರನು ಪ್ರವೇಶ ಮಾಡಲಿದ್ದು ಅನಾರೋಗ್ಯವು ಹೆಚ್ಚಾಗಬಹುದು. ಕಫ ಹಾಗೂ ವಾತ ಸಂಬಂಧವಾದ ರೋಗವು ಕಾಣಿಸಿಕೊಳ್ಳುವುದು. ಅಷ್ಟಮಕ್ಕೆ ಕುಜನೂ ಪ್ರವೇಶ ಮಾಡಲಿದ್ದು ಅಪಘಾತ ಮುಂತಾದುದು ಆಗಬಹುದು. ಸಪ್ತಮದಲ್ಲಿ ಸೂರ್ಯನಿರುವ ಕಾರಣ ವಿವಾಹವು ಆಗುವುದಾದರೂ ಹೆಚ್ಚು ಸಮಸ್ಯೆಯು ಇರುವುದು. ಈ ವಾರ ಅಧಿಕ ಸುತ್ತಾಟದಿಂದ ಆಯಾಸವಿರುವುದು. ಯೋಜನೆಯು ನಿಮ್ಮ ನಿರೀಕ್ಷೆಯನ್ನು ಮೀರುವುದು.
-ಲೋಹಿತಶರ್ಮಾ – 8762924271 (what’s app only)