October 2021: ಶನಿ ಮಹಾತ್ಮನ ದಯೆಯಿಂದ ಈ ಆರು ರಾಶಿಯ ಜನರಿಗೆ ಅಕ್ಟೋಬರ್ ತುಂಬಾ ಅದೃಷ್ಟದ ತಿಂಗಳು

| Updated By: Vinay Bhat

Updated on: Sep 30, 2021 | 6:46 AM

zodiac signs: ನಾಳೆ ಶುಕ್ರವಾರದಿಂದ ಅಕ್ಟೋಬರ್ ತಿಂಗಳು ಕಾಲಿಡಲಿದೆ. ಈ ತಿಂಗಳು ಅನೇಕ ರಾಶಿಯವರಿಗೆ ಖುಷಿ ತರಲಿದೆ. ಅದರಲ್ಲೂ ಅಕ್ಟೋಬರ್ 11ರಂದು ಶನಿದೇವರು ತಮ್ಮದೇ ಗ್ರಹ ಪಥದಲ್ಲಿ ಸಂಚರಿಸಲಿದ್ದು ಇದು ಬಹುತೇಕ ಎಲ್ಲರಿಗೂ ಮಂಗಳಕರವಾಗಲಿದೆ.

October 2021: ಶನಿ ಮಹಾತ್ಮನ ದಯೆಯಿಂದ ಈ ಆರು ರಾಶಿಯ ಜನರಿಗೆ ಅಕ್ಟೋಬರ್ ತುಂಬಾ ಅದೃಷ್ಟದ ತಿಂಗಳು
October 2021: ಶನಿ ಮಹಾತ್ಮನ ದಯೆಯಿಂದ ಈ 6 ರಾಶಿಯ ಜನರಿಗೆ ಅಕ್ಟೋಬರ್ ತುಂಬಾ ಅದೃಷ್ಟದ ತಿಂಗಳು
Follow us on

ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳು ಶನಿ ಮಹಾತ್ಮನ ಕೃಪೆಯಿಂದ ಈ 6 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರಯಲಿದೆ. ಶನಿ ಮಹಾತ್ಮ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ತನ್ನದೇ ರಾಶಿಯಲ್ಲಿ ಸಂಚರಿಸುತ್ತಾನೆ. ಹಾಗಾಗಿ ಶನಿ ಮಹಾತ್ಮನಿಂದ ಕಷ್ಟಕಾರ್ಪಣ್ಯ ಅನುಭವಿಸುತ್ತಿದ್ದ ಮಂದಿಗೆ ಅಕ್ಟೋಬರ್ ತಿಂಗಳು ಶುಭಪ್ರದವಾಗಲಿದೆ.

ನಾಳೆ ಶುಕ್ರವಾರದಿಂದ ಅಕ್ಟೋಬರ್ ತಿಂಗಳು ಕಾಲಿಡಲಿದೆ. ಈ ತಿಂಗಳು ಅನೇಕ ರಾಶಿಯವರಿಗೆ ಖುಷಿ ತರಲಿದೆ. ಅದರಲ್ಲೂ ಅಕ್ಟೋಬರ್ 11ರಂದು ಶನಿದೇವರು ತಮ್ಮದೇ ಗ್ರಹ ಪಥದಲ್ಲಿ ಸಂಚರಿಸಲಿದ್ದು ಇದು ಬಹುತೇಕ ಎಲ್ಲರಿಗೂ ಮಂಗಳಕರವಾಗಲಿದೆ.

ಶನಿ ತನ್ನರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ತೆಗೆದುಕೊಳ್ಳುವ ಕಾಲ ಎರಡೂವರೆ ವರ್ಷ. ಏಕೆಂದರೆ ಶನಿ ಗ್ರಹ ಅತ್ಯಂತ ನಿಧಾನವಾಗಿ ಸಂಚರಿಸುತ್ತದೆ. ಜ್ಯೋತಿಷಿಗಳ ಪ್ರಕಾರ ಶನಿ ತನ್ನದೇ ರಾಶಿಯಲ್ಲಿ ಸಂಚರಿಸುವುದರ ಅರ್ಥ ಏನೆಂದರೆ ಅದುವರೆಗೂ ಯಾವೆಲ್ಲ ರಾಶಿಯವರು ಶನಿಯಿಂದ ಬಾಧೆಗೊಳಗಾಗಿರುತ್ತಾರೋ ಅವರ ಜೀವನಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ಇದರಿಂದ ಅವರ ಜೀವನದಲ್ಲಿ ಧನಾತ್ಮಕತೆ ಕಾಣಿಸಿಕೊಳ್ಳಲಿದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಶನಿ ಕೃಪೆಯಿಂದ ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಸಿಗಲಿದೆ ನೋಡೋಣ…

1. ಮೇಷ ರಾಶಿ Aries:

ಮೇಷ ರಾಶಿಯ ಜನರಿಗೆ ಅಕ್ಟೋಬರ್ ತಿಂಗಳು ಶನಿ ಕೃಪೆಯಿಂದ ಏರಿಳಿತದ ಜೀವನ ದೂರವಾಗಲಿದೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಯಶಸ್ಸು ಹುಡುಕಿಬರಲಿದೆ. ಉದ್ಯೋಗದಲ್ಲಿ ಪ್ರಮೋಶನ್ ಸಿಗಲಿದೆ. ಇನ್ನು ನೀವು ಯಾವುದಾದರೂ ವ್ಯಾಪಾರ ಶುರು ಮಾಡುವಿರಾದರೆ ಅದು ಯಶಸ್ಸು ತಂದುಕೊಡಲಿದೆ.

2. ಮಿಥುನ ರಾಶಿ Gemini:

ಮಿಥುನ ರಾಶಿಯವರಿಗೆ ಶನಿ ಮಹಾತ್ಮನ ಕೃಪೆಯಿಂದ ಅನೇಕ ಪ್ರಯೋಜನಗಳು ಒದಗಿಬರಲಿವೆ. ಉದ್ಯೋಗದಲ್ಲಿ ಸಕಾರಾತ್ಮಕ ಪರಿಣಾಮಗಳು ಗೋಚರಿಸಲಿವೆ. ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಯಾವುದೇ ಕೆಲಸವನ್ನು ಮಿಥುನ ರಾಶಿಯವರು ಮನಸ್ಸಿಟ್ಟು ಮಾಡಿದರೆ ಯಶಸ್ಸು ಖಚಿತ. ಇನ್ನು ಆರೋಗ್ಯ ಸಂಬಂಧೀ ತೊಂದರೆಗಳು ನಿವಾರಣೆಯಾಗಲಿವೆ.

3. ತುಲಾ ರಾಶಿ Libra:

ತುಲಾ ರಾಶಿಯವರಿಗೆ ಅರ್ಧಕ್ಕೆ ನಿಂತುಹೋಗಿರುವ ಕೆಲಸಗಳು ಪೂರ್ಣವಾಗಲಿವೆ. ಹಳೆಯ ಕಾಯಿಲೆಗಳಿಂದ ಗುಣಮುಖವಾಗಲಿದ್ದೀರಿ. ಕುಟುಂಬದಲ್ಲಿಯೂ ಸುಖ ಶಾಂತಿ ನೆಲೆಸಲಿದೆ. ಶನಿ ದಯೆಯಿಂದ ಪ್ರತಿಕೂಲ ಪ್ರಭಾವ ಕ್ಷೀಣಿಸಲಿದೆ. ವಿದ್ಯಾರ್ಥಿಗಳಿಗೆ ಈ ತಿಂಗಳಲ್ಲಿ ಹೆಚ್ಚು ಯಶಸ್ಸು ಸಿಗಲಿದೆ. ಇನ್ನು ಹೊಸ ಸಂಬಂಧಗಳು ದೃಢಗೊಂಡು, ಉತ್ತಮಗೊಳ್ಳಲಿವೆ. ಪರಿವಾರ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಣಬರಲಿದೆ.

4. ಧನು ರಾಶಿ Sagittarius:

ಧನು ರಾಶಿಯವರಿಗೆ ಯಾವುದಾದರೂ ಹೊಸ ಸಂತೋಷದ ಸುದ್ದಿ ಹುಡುಕಿಬರಲಿದೆ. ಪರಿವಾರದಲ್ಲಿ ನಿಮ್ಮ ಮಾನ-ಸಮ್ಮಾನ ವೃದ್ಧಿಯಾಗಲಿದೆ. ನಿಮ್ಮ ಕುಟುಂಬದವರಿಗೂ ಸಾಫಲ್ಯತೆ ಸಿಗಲಿದೆ. ಇದರಿಂದ ನಿಮಗೆ ಸಂತೋಷವಾಗಲಿದೆ. ನಿಮ್ಮ ಮೇಲಿನ ಹೊರೆಯೂ ಕಡಿಮೆಯಾಗಲಿದೆ. ಇದುವರೆಗೆ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳು ಮಂಜಿನಂತೆ ಕರಗಲಿವೆ.

5. ಮಕರ ರಾಶಿ Capricorn:

ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳು ಶನಿ ಕೃಪೆಯಿಂದ ತುಂಬಾ ಶುಭ ಫಲದಾಯಕವೆಂದು ಸಾಬೀತಾಗಲಿದೆ. ಮಕರ ರಾಶಿಯವರು ಹೆಚ್ಚು ಧನ ಲಾಭ ಕಾಣಲಿದ್ದಾರೆ. ಆರೋಗ್ಯವೂ ಸುಧಾರಿಸಲಿದೆ. ನಿಮ್ಮ ಗುರಿ ತಲುಪಲು ಶನಿ ಮಹಾತ್ಮನ ದಯೆ ಕೂಡಿಬರಲಿದೆ. ಒತ್ತಡದ ಜೀವನ ತಿಳಿಯಾಗಲಿದೆ. ಇನ್ನು ವ್ಯಾಪಾರಿಗಳಾಗಿದ್ದರೆ ಅದರಲ್ಲಿ ಅಭಿವೃದ್ಧಿ ಕಂಡುಬರಲಿದೆ.

6. ಕುಂಭ ರಾಶಿ Aquarius:

ಕುಂಭ ರಾಶಿಯರಿಗೆ ಅಕ್ಟೋಬರ್ ತಿಂಗಳಲ್ಲಿ ಶನಿ ದಯೆ ಪ್ರಾಪ್ತಿಯಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ಸಂಚರಿಸಲು ಅನುವಾಗುತ್ತದೆ. ಮದುವೆ ಜೀವನ ಸುಧಾರಿಸಲಿದೆ. ಉದ್ಯೋಗದಲ್ಲಿ ಸಹಚರರು ಸಕಾರಾತ್ಮಕವಾಗಿ ನಿಮಗೆ ಸ್ಪಂದಿಸಲಿದ್ದಾರೆ. ಇದರಿಂದ ನಿಮಗೆ ಯಶಸ್ಸು ಕಾಣಲಿದೆ. ವ್ಯಾಪಾರಿಗಳಾಗಿದ್ದರೆ ಫಲ ಕಾಣಲಿದ್ದೀರಿ.

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾ ಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)

Published On - 6:45 am, Thu, 30 September 21