AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಹಣಕಾಸು, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ಸಂಬಂಧಗಳ ಕುರಿತು ಪ್ರತಿದಿನದ ಭವಿಷ್ಯವಾಣಿಗಳನ್ನು ಸಂಖ್ಯಾಶಾಸ್ತ್ರದ ಪ್ರಕಾರ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Dec 20, 2025 | 12:15 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಬಾಯಿ ಬಿಟ್ಟು ನಿಮ್ಮ ಮನಸ್ಸಲ್ಲಿ ಇರುವುದನ್ನು ಹೇಳದೆ ಇದ್ದಲ್ಲಿ ನಿಮ್ಮ ನಿರೀಕ್ಷೆ ಏನು ಎಂಬುದು ಇತರರಿಗೆ ತಿಳಿಯುವುದಾದರೂ ಹೇಗೆ? ಇವೆಲ್ಲ ಅರ್ಥ ಆಗಬೇಕಲ್ಲವಾ ಎಂದು ಅಂದುಕೊಳ್ಳುವ ಬದಲು ನಿಮ್ಮ ಅಪೇಕ್ಷೆ ಏನು ಅನ್ನುವುದನ್ನು ಹೇಳಿಬಿಡಿ. ವಿವಾಹಿತರಿಗೆ ಸಂಗಾತಿಯ ಜತೆಗೆ ಉತ್ತಮ ಸಮಯ ಕಳೆಯುವ ಯೋಗ ಇದೆ. ಕಾರು ಖರೀದಿ, ಮನೆ ನಿರ್ಮಾಣ, ಸೈಟು ಖರೀದಿ ಇಂಥ ವಿಷಯಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಒಂದೊಳ್ಳೆ ಸಮಯ ದೊರೆಯಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಈಗ ಕೆಲಸ ಮಾಡುತ್ತಾ ಇರುವ ಸಂಸ್ಥೆಯಲ್ಲಿಯೇ ಬೆಳವಣಿಗೆಗೆ ಅವಕಾಶ ಇರುವಂಥ ಹುದ್ದೆ, ವೇತನ ಹೆಚ್ಚಳ, ಬಡ್ತಿ ಇಂಥದ್ದು ದೊರೆಯುವ ಬಗ್ಗೆ ಮಾಹಿತಿ ಸಿಗಲಿದೆ. ದೃಷ್ಟಿಯಲ್ಲಿನ ದೋಷಕ್ಕಾಗಿ ಬಹಳ ವರ್ಷಗಳಿಂದ ಪರೀಕ್ಷೆ ಮಾಡಿಸದೆ ಒಂದೇ ಕನ್ನಡಕ ಬಳಸುತ್ತಾ ಬಂದಿದ್ದೀರಿ ಅಂತಾದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಕ್ಷೇಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕುಟುಂಬದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆಯೇ ಇತರ ಸದಸ್ಯರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ವ್ಯಾಪಾರ- ವ್ಯವಹಾರದಲ್ಲಿನ ಹೂಡಿಕೆ ವಿಚಾರಗಳಿಗೆ ಪ್ಲಾನಿಂಗ್, ಬಜೆಟ್ ಮಾಡಿಕೊಳ್ಳಲಿದ್ದೀರಿ. ಯಾರು ಉದ್ಯೋಗದಲ್ಲಿ ದೀರ್ಘ ಕಾಲದ ಅಂತರ ಬಂದು, ಈಗ ಕೆಲಸಕ್ಕೆ ಪ್ರಯತ್ನ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಿಂದ ಆಫರ್ ಬರುವಂಥ ಸೂಚನೆ ಇದೆ. ಅದರಲ್ಲಿಯೂ ನಿಮಗೆ ಅನುಕೂಲ ಆಗುವಂಥ ಪಾಳಿಯಲ್ಲಿಯೇ ಅಥವಾ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ದೊರೆಯುವಂಥ ಕೆಲಸ ಅದಾಗಿರುವ ಸಾಧ್ಯತೆ ಹೆಚ್ಚಿದೆ. ಮನೆ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಕೆಲವು ಸನ್ನಿವೇಶಗಳಿಂದ ಒತ್ತಡ ಸೃಷ್ಟಿ ಆಗಬಹುದು. ಮನೆ ಮಾಲೀಕರ ಮಾತುಗಳಿಂದ ಬಹಳ ಬೇಜಾರಾಗಿ, ಕೆಲವು ವಿಪರೀತದ ನಿರ್ಧಾರ ತೆಗೆದುಕೊಳ್ಳುವಂತೆ ಆಗಬಹುದು. ಇಂಥ ಸನ್ನಿವೇಶ ಉದ್ಭವಿಸಿದಲ್ಲಿ ಸರಿಯಾಗಿ ನಿಭಾಯಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಉದ್ಯೋಗ ಅಥವಾ ವ್ಯಾಸಂಗದ ಸಲುವಾಗಿ ವಿದೇಶದಲ್ಲಿ ವಾಸ ಆಗಿದ್ದೀರಿ ಅಂತಾದಲ್ಲಿ ಖರ್ಚು- ವೆಚ್ಚವನ್ನು ನಿಭಾಯಿಸುವುದು ಕಷ್ಟವಾಗಲಿದೆ. ಇಷ್ಟು ಸಮಯ ನಿಮಗೆ ನೆರವಾಗುತ್ತಿದ್ದ ಕೆಲವು ಪರಿಸ್ಥಿತಿ ಇನ್ನು ಮುಂದೆ ಹಾಗಿರುವುದಿಲ್ಲ ಎಂಬುದು ಗಮನಕ್ಕೆ ಬರಲಿದೆ. ಸ್ಥಳ ಬದಲಾವಣೆ ಅಥವಾ ನಿಮ್ಮ ನಿರ್ಧಾರದಲ್ಲಿಯೇ ಬದಲಾವಣೆ ಮಾಡಿಕೊಂಡು ಬಿಡುವ ಸಾಧ್ಯತೆ ಇದೆ. ಯಾವುದಾದರೂ ವಿಷಯ ಪೋಷಕರಿಂದ ಮುಚ್ಚಿಟ್ಟಿದ್ದೀರಿ ಅಂದರೆ ಅದನ್ನು ಹೇಳಿಕೊಂಡು ಬಿಡುವುದು ಒಳ್ಳೆಯದು. ಇನ್ನು ಯಾರಿಗೆ ಮಕ್ಕಳ ಅನಾರೋಗ್ಯ ಸಮಸ್ಯೆ ಚಿಂತೆಯಾಗಿ ಕಾಡುತ್ತಾ ಇದೆಯೋ ಅಂಥವರಿಗೆ ಸೂಕ್ತ ಔಷಧೋಪಚಾರ ಕೊಡಿಸಲು ಬಹಳ ಒಳ್ಳೆ ರೆಫರೆನ್ಸ್ ದೊರೆಯಲಿದೆ. ನಿಮ್ಮ ಅತಿಯಾದ ಶಿಸ್ತು ಬೇರೆಯವರ ಮೇಲೆ ಸಾಧ್ಯವಾದಷ್ಟೂ ಹೇರುವುದಕ್ಕೆ ಹೋಗಬೇಡಿ. ಇತರರಿಗೆ ಒತ್ತಡ ಆಗದಂತೆ ನಡೆಸಿಕೊಳ್ಳುವುದು ಒಳ್ಳೆಯದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಕ್ಕು ಹಗುರಾಗುವುದಕ್ಕೆ ಬೇಕಾದ ವಾತಾವರಣದಲ್ಲಿ ಈ ದಿನ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಸ್ನೇಹಿತರು- ಸಂಬಂಧಿಗಳು ಜತೆಗೂಡಿ ರೆಸಾರ್ಟ್, ಕಿರು ಪ್ರವಾಸ ಇಂಥವುಗಳಿಗೆ ಹೋಗುವ ಯೋಗ ಇದೆ. ಯಾವ ವ್ಯಕ್ತಿಯಿಂದ ನಿಮಗೇನೂ ಅನುಕೂಲ ಆಗುವುದಿಲ್ಲ ಎಂದುಕೊಂಡು ಬಿಟ್ಟಿರುತ್ತೀರೋ ಅಂಥವರಿಂದಲೇ ವೃತ್ತಿ- ವ್ಯವಹಾರ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಮಹತ್ತರವಾದ ಸಹಾಯ ಆಗಲಿದೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚು ಆಗಲಿದೆ. ಬ್ರ್ಯಾಂಡೆಡ್ ಉತ್ಪನ್ನಗಳನ್ನೇ ಖರೀದಿಸುವುದಕ್ಕೆ ಪಟ್ಟು ಹಿಡಿಯಲಿದ್ದೀರಿ. ಅಥವಾ ನಿಮ್ಮ ಜತೆಗೆ ಬಂದವರಿಂದ ಉತ್ತೇಜಿತರಾಗಿ, ಮೂಲ ನಿರ್ಧಾರವನ್ನೇ ಬದಲಿಸಿಕೊಂಡು ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಹೆಚ್ಚುವರಿ ಜವಾಬ್ದಾರಿಗಳು ವಹಿಸಿಕೊಳ್ಳುವ ಬಗ್ಗೆ ಆದೇಶ ಬಂದಿರುವ ಮಾಹಿತಿ ಸಿಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಮನಸ್ಸಿನಲ್ಲಿ ಒಂದು ಬಗೆ ತಲ್ಲಣ ಇರಲಿದೆ. ಹಣಕಾಸಿನ ವಿಚಾರಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಕ್ಕೆ ಸಾಧ್ಯ ಆಗುತ್ತದೋ ಇಲ್ಲವೋ ಎಂಬ ಕಾರಣವು ನಿಮ್ಮ ಸ್ಥಿತಿಗೆ ಕಾರಣ ಆಗಲಿದೆ. ಇದ್ದದ್ದನ್ನು ಇದ್ದಂತೆಯೇ ನೇರವಾಗಿ ಹೇಳುವುದಕ್ಕೆ ಸಂಕೋಚ ಪಟ್ಟುಕೊಂಡಿದ್ದರಿಂದಲೇ ಇಂಥ ಪರಿಸ್ಥಿತಿ ನಿರ್ಮಾಣ ಆಯಿತು ಎಂದು ನಾಲ್ಕಾರು ಬಾರಿ ಅಂದುಕೊಳ್ಳುತ್ತೀರಿ. ನಿಮ್ಮ ಜೊತೆಗೆ ಕೆಲಸ ಮಾಡುವವರು ಹೆಚ್ಚುವರಿಯಾಗಿ ಆದಾಯ ಬರುವಂತೆ ಕೆಲವು ಸಲಹೆಗಳನ್ನು ನೀಡಲಿದ್ದಾರೆ. ಭಾರವಾದ ವಸ್ತುಗಳನ್ನು ಸಾಗಿಸುವಾಗ ಜಾಗ್ರತೆಯಿಂದ ಇರಬೇಕು. ನಿಮ್ಮದೇ ಮನೆಯ ಕೆಲಸ ಆದರೂ ಭಾರವಾಗಿರುವ ಪದಾರ್ಥಗಳು, ವಸ್ತುಗಳನ್ನು ಎತ್ತುವಾಗ- ಇಳಿಸುವಾಗ ಜಾಗ್ರತೆಯಿಂದ ಇರಬೇಕು. ಸ್ಟೇಷನರಿ ಅಂಗಡಿಯನ್ನು ಇಟ್ಟುಕೊಂಡಿರುವವರಿಗೆ ಆದಾಯದಲ್ಲಿ ಏರಿಕೆ ಆಗುವಂಥ ಬೆಳವಣಿಗೆ ಆಗಲಿದೆ. ದೀರ್ಘಾವಧಿಯ ಆರ್ಡರ್ ಸಹ ದೊರೆಯುವ ಅವಕಾಶ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕೇಳಿದಷ್ಟು ಹಣವನ್ನು ನೀಡಿದ ಮೇಲೂ ಅಂದುಕೊಂಡಂಥ ಗುಣಮಟ್ಟ ಬರುತ್ತಿಲ್ಲ ಎಂಬುದು ನಿಮ್ಮ ಆಕ್ಷೇಪದ ಮೂಲ ಆಗಲಿದೆ. ಸಣ್ಣ- ಪುಟ್ಟ ಕೆಲಸ ಅಥವಾ ಜವಾಬ್ದಾರಿ ಎಂದು ನೋಡದೆ ನೀವೇ ಮುಂದೆ ನಿಂತು ಮಾಡಿದಂಥ ಕಾರ್ಯಗಳಿಗೆ ಹಲವು ಕಡೆಯಿಂದ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ನಿಮಗಾಗಿ ಖರೀದಿ ಮಾಡಿದ್ದಂಥ ಕೆಲವು ಎಲೆಕ್ಟ್ರಿಕ್ ವಸ್ತುವನ್ನು ಇತರರಿಗೆ ನೀಡುವ ಸನ್ನಿವೇಶ ಸೃಷ್ಟಿ ಆಗಲಿದೆ. ರಂಗಭೂಮಿ- ಸಿನಿಮಾ- ಧಾರಾವಾಹಿ- ಯಕ್ಷಗಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ತುಂಬ ಪಾಸಿಟಿವ್ ಆದಂಥ ಬೆಳವಣಿಗೆಗಳು ಆಗಲಿವೆ. ವಿದೇಶ ಪ್ರಯಾಣಕ್ಕೆ ಅವಕಾಶ ದೊರೆಯಲಿದ್ದು, ನೀವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀರಿ, ಆ ಸಲುವಾಗಿಯೇ ತೆರಳುವ ಸಂದರ್ಭ ಒದಗಿಬರಲಿದೆ. ವಯಸ್ಸಿನಲ್ಲಿ ಚಿಕ್ಕವರು ಆಡುವಂಥ ಮಾತುಗಳಿಂದ ಬೇಸರ ಆಗಬಹುದು. ಆದರೆ ಯಾಕೆ ಹಾಗೆ ಹೇಳಿದರು ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ದಿನವಿಡೀ ಪ್ರೊಡಕ್ಟಿವ್ ಆದಂಥ ಕೆಲಸ- ಕಾರ್ಯ, ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತೀರಿ. ಸಂಬಂಧ- ಸ್ನೇಹದಲ್ಲಿ ಈ ಹಿಂದೆ ಯಾರಿಗೆ ಸಮಯ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ನಿಮಗೆ ಅನಿಸಿರುತ್ತದೋ ಅಂಥವರ ಜತೆಗೆ ಕಾಲ ಕಳೆಯಲಿದ್ದೀರಿ. ಕೃಷಿ ಉತ್ಪನ್ನಗಳ ಮಾರ್ಕೆಟಿಂಗ್ ನಲ್ಲಿ ತೊಡಗಿಕೊಂಡಿದ್ದೀರಿ ಅಂತಾದಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಕೃಷಿಕರು ಕೆಲವು ಯಂತ್ರ- ಉಪಕರಣಗಳ ಖರೀದಿಗಾಗಿ ವಿಚಾರಣೆ ನಡೆಸಲಿದ್ದೀರಿ, ಅದಕ್ಕಾಗಿ ಕೊಟೇಷನ್ ಪಡೆದುಕೊಳ್ಳುವ ಸಾಧ್ಯತೆ ಸಹ ಇದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸೇವೆ ರೀತಿಯಲ್ಲಿ ಕೆಲವು ಕೆಲಸ- ಕಾರ್ಯ ಮಾಡಲಿದ್ದೀರಿ. ಇನ್ನೊಬ್ಬರ ಜವಾಬ್ದಾರಿ ನೀವು ನಿರ್ವಹಿಸುವ ಸಂದರ್ಭ ಬಂದಲ್ಲಿ ಫಲಿತಾಂಶದ ಬಗ್ಗೆ ಆಲೋಚಿಸಿದ ನಂತರದಲ್ಲಿ ಮುಂದಕ್ಕೆ ಹೆಜ್ಜೆಯನ್ನು ಇಡಿ. ಏಕೆಂದರೆ ಸಹಾಯ ಎಂಬ ಉದ್ದೇಶದಿಂದ ಆ ಕಾರ್ಯ ಮುಗಿಸಿದ ಮೇಲೆ ಆಕ್ಷೇಪಣೆಯ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗುತ್ತದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ಕಾರ್ಯ ವೈಖರಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಕೆಲಸ ಪೂರ್ತಿ ಆಗುವ ಮುನ್ನ ಅದರ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಬಾರದು ಎಂಬ ತೀರ್ಮಾನ ಕೈಗೊಳ್ಳಲಿದ್ದೀರಿ. ಯಾವುದಕ್ಕೂ ಇರಲಿ ಎಂದುಕೊಂಡು, ಕಳೆದ ಕೆಲ ಸಮಯದಿಂದ ಕೂಡಿಡುತ್ತಾ ಬಂದಿದ್ದ ಆಪತ್ ಕಾಲದ ಮೊತ್ತವೊಂದು ಈ ದಿನ ಸಹಾಯಕ್ಕೆ ಬರಲಿದೆ. ತಕ್ಷಣಕ್ಕೆ ಹೊಂದಾಣಿಕೆ ಮಾಡಬೇಕು ಎಂಬಂಥ ವಸ್ತು, ಹಣ ಅಥವಾ ವ್ಯಕ್ತಿಗಳನ್ನು ಶ್ರದ್ಧೆಯಿಂದ ಮಾಡಲಿದ್ದೀರಿ. ನಿಮ್ಮ ಪ್ರಭಾವವನ್ನು ಬಳಸಿ ಸರ್ಕಾರಿ ಕಾಂಟ್ರಾಕ್ಟ್ ಅಥವಾ ಕೆಲಸ- ಕಾರ್ಯಗಳನ್ನು ಇತರರಿಗೆ ಕೊಡಿಸುವ ಸಾಧ್ಯತೆ ಸಹ ಈ ದಿನ ಇದೆ. ತಾಳ್ಮೆ- ಸಂಯಮ ವಹಿಸಿ ಮಾಡಿದಂಥ ರಿಯಲ್ ಎಸ್ಟೇಟ್ ವ್ಯವಹಾರಗಳು ಒಳ್ಳೆ ಲಾಭವನ್ನು ತಂದುಕೊಡಲಿವೆ. ಇತರರು ಬೇಡ ಎಂದು ಹೇಳಿದ ನಂತರವೂ ಪಟ್ಟು ಬಿಡದೆ ಆ ಕೆಲಸ ಮಾಡಿ ಮುಗಿಸಿದ್ದರಿಂದ ಸಿಗುವಂಥ ರಿಟರ್ನ್ಸ್ ಇದಾಗಿರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ತಲೆಮಾರಿನ ಅಂತರ, ಅಂದರೆ ಜನರೇಷನ್ ಗ್ಯಾಪ್ ಅಂತಾರಲ್ಲ ಈ ದಿನ ನಿಮ್ಮ ಅನುಭವಕ್ಕೆ ಬರಲಿದೆ. ಹಣಕಾಸಿನ ನಿರ್ಧಾರದ ವಿಷಯಕ್ಕೆ ಯಾರಿಗೂ ಸಲಹೆ ನೀಡುವುದಕ್ಕೋ ಅಥವಾ ಹೀಗೇ ನಡೆದುಕೊಳ್ಳಿ ಎನ್ನುವುದಕ್ಕೋ ಹೋಗಬೇಡಿ. ನಿಮ್ಮ ಸಲಹೆಗಳು ಉಪಯುಕ್ತ ಅಲ್ಲ ಎಂಬುದನ್ನು ನೇರವಾಗಿಯೇ ಹೇಳಿ, ಅದನ್ನು ಸಾಬೀತು ಸಹ ಮಾಡಿಬಿಡುವ ಅಪಾಯ ಇದೆ. ಹೀಗಾದಲ್ಲಿ ನಿಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಸೀಸನಲ್ ವ್ಯವಹಾರದ ಅವಕಾಶವೊಂದು ದೊರೆಯಲಿದೆ. ಒಂದೆರಡು ತಿಂಗಳ ಮಟ್ಟಿಗೆ ಮಾತ್ರ ಆದಾಯ ತಂದುಕೊಡುವಂಥವು. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದಲ್ಲಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಒದಗಿ ಬರಲಿದೆ. ದಿನಸಿ ಅಂಗಡಿ ನಡೆಸುತ್ತಾ ಇರುವವರು ಹೊಸ ವ್ಯವಹಾರವನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಹಣದ ಹೊಂದಾಣಿಕೆ ಮಾಡುವುದಕ್ಕೆ ಸಹ ಪ್ರಯತ್ನ ಮಾಡಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ