ರಾಹುವಿನ ಸ್ಥಾನ ಬದಲಾವಣೆ ಯಾವ ರಾಶಿಗೆ ಅಶುಭ? ಪರಿಹಾರವೇನು?
ಸಿಂಹಿಕೆಯ ಗರ್ಭದಿಂದ ಜನಿಸಿದ ರಾಕ್ಷಸನೇ ರಾಹು ಕೇತುವಾಗಿ ಗ್ರಹಗಳ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಅಶುಭಗ್ರಹರೆಂದೇ ಪ್ರಸಿದ್ಧರಾಗಿದ್ದು, ಪಾಪಕರ್ಮಗಳನ್ನು ಸೂಚಿಸುವ ಗ್ರಹಗಳಾಗಿವೆ. ಚಂದ್ರ ಮತ್ತು ರವಿಯರಿಗೆ ಸದಾಕಾಲ ತೊಂದರೆ ಕೊಡವವರು ಇವರೇ. ಈ ಎರಡೂ ಗ್ರಹರಿಂದ ಮಾತ್ರ ಸೂರ್ಯ ಚಂದ್ರರಿಗೆ ಗ್ರಹಣವಾಗುತ್ತದೆ.
ಸದ್ಯ ಮೀನ ರಾಶಿ ಇರುವ ರಾಹುವುದು ಅಪ್ರದಕ್ಷಿಣ ಕ್ರಮದಲ್ಲಿ ಸುತ್ತುವನು. ಹಾಗಾಗಿ ರೇವತೀ ನಕ್ಷತ್ರದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ವಾಸಮಾಡಿ ಅನಂತರ ಉತ್ತರಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿಯಾಗಿದೆ. ಈ ನಕ್ಷತ್ರಗಳ ಅಧಿಪತಿ ಶನಿ. ಶನಿ ರಾಹು ಇಬ್ಬರೂ ನೋಡಲು ಬೇರೆಬೇರೆಯಾದರೂ ಸ್ವಭಾವದಲ್ಲಿ ಹೋಲಿಕೆ ಹೆಚ್ಚು. ಹಾಗಾಗಿ ಶನಿಗೆ ಹೇಳಿದ ಫಲಗಳು ರಾಹುವಿಗೂ ಬರುತ್ತದೆ. ಇನ್ನು ಪರಿವರ್ತನೆಯಿಂದ ಅಶುಭಫಲವನ್ನು ರಾಹುವು ಯಾವ ರಾಶಿಯವರಿಗೆ ಕೊಡುತ್ತಾನೆ ಎನ್ನುವುದನ್ನು ನೋಡಬೇಕಿದೆ.
ಮೇಷ ರಾಶಿ :ಈ ರಾಶಿಯಲ್ಲಿ ಜನಿಸಿದ ಎಲ್ಲರಿಗೂ ಅಶುಭವಲ್ಲ. ಕೃತ್ತಿಕಾ ನಕ್ಷತ್ರದವರಿಗೆ ಮಾತ್ರ ರಾಹುವಿನ ಕೆಟ್ಟ ದೃಷ್ಟಿ ಬೀಳಲಿದೆ. ಕುಟುಂಬದಲ್ಲಿ ಮನಸ್ತಾಪಗಳು ಸಣ್ಣ ವಿಚಾರಕ್ಕೂ ಬರುತ್ತವೆ. ತಂದೆ ಹಾಗೂ ಮಕ್ಕಳಿಗೆ ಹೊಂದಾಣಿಕೆ ಕಷ್ಟ.
ವೃಷಭ ರಾಶಿ :ಈ ರಾಶಿಯಲ್ಲಿ ಜನಿಸಿದವರಿಗೆ ರಾಹುವಿನ ಅಶುಭ ದೃಷ್ಟಿ ಇರಲಿದೆ. ಮನಸ್ಸು ಚಂಚಲವಾಗಿ ಯಾವ ಕಾರ್ಯಕ್ಕೂ ಸ್ಥಿರವಾಗದು. ಒಂದನ್ನು ಮಾಡಲು ಹೋದರೆ, ಮತ್ತೊಂದು ಚೆನ್ನಾಗಿ ಕಾಣಿಸುವುದು. ಹೀಗೆ ಪ್ರತಿಯೊಂದು ಕಾರ್ಯದಲ್ಲಿಯೂ ಪೂರ್ಣವಾಗಿ ತೊಡಗಲು ಆಗದು.
ಮಿಥುನ ರಾಶಿ :ಮೃಗಶಿರ ರಾಶಿಯಲ್ಲಿ ಜನಿಸಿದವರಿಗೆ ಅಶುಭಯೋಗ. ಕೈ ಹಾಕಿದ ಕಾರ್ಯದಿಂದ ಕೈ ಸುಟ್ಟುಕೊಳ್ಳುವಿರಿ. ಯಂತ್ರಜ್ಞರು ಮಹಳ ಸಂಕಟಪಡಬೇಕಾದ ಸ್ಥಿತಿ ಬದಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭಕ್ಕೆ ತೃಪ್ತಿಪಡಬೇಕಾಗುವುದು.
ಸಿಂಹ ರಾಶಿ :ಈ ರಾಶಿಯವರಿಗೆ ತಂದೆಯಿಂದ ಯಾವುದೇ ಸಹಕಾರ ಸಿಗುವುದು ಅಸಾಧ್ಯ. ಉತ್ತರಾ ನಕ್ಷತ್ರದಲ್ಲಿ ಜನಿಸಿದವರು ತಂದೆಯ ಜೊತೆ ನಿರಂತರ ವೈಮನಸ್ಸಿಂದ ಇರುಬೇಕಾಗುತ್ತದೆ. ಸರ್ಕಾರ ಕಾರ್ಯದಲ್ಲಿ ಹಿನ್ನಡೆಯಾಗಲಿದೆ.
ಕನ್ಯಾ ರಾಶಿ :ಸಂಗಾತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ಅನುಮಾನದ ಸ್ವಭಾವ ಹೆಚ್ಚಾಗುವುದು. ನಂಬಿಕೆಯನ್ನು ಗಳಿಸಲು, ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲೂ ಕಷ್ಟವಾಗುವುದು.
ತುಲಾ ರಾಶಿ :ಸ್ವಂತ ಉದ್ಯೋವನ್ನು ಇಟ್ಟವರಿಗೆ ಯಂತ್ರಕ್ಕೆ ಸಂಬಂಧಿಸಿದ ಕಾರ್ಯವನ್ನು ಮಾಡುವವರು ಎಚ್ಚರಿಕೆಯಿಂದ ಇರಬೇಕು. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಔಚಿತ್ಯಕ್ಕೆ ಭಂಗ ಬರುವುದು.
ಧನು ರಾಶಿ :ಈ ರಾಶಿಯವರಿಗೆ ತೊಂದರೆಗಳಿದ್ದರೂ ಯಾರದೋ ಮೂಲಕ ಅದರ ನಿವಾರಣೆಯಾಗುತ್ತದೆ. ಕಷ್ಟ ಪಕ್ಕಾ ಚಿಂತೆಗೆಡಬಾರದು.
ಮಕರ ರಾಶಿ : ಈ ರಾಶಿಯವರಿಗೆ ಬರಬೇಕಾದ ಹಣವು ಸಕಾಲಕ್ಕೆ ಸಿಗದೇ ಕಷ್ಟವಾಗುವುದು. ಇದರಿಂದ ಮಾನಸಿಕ ಒತ್ತಡ ಬೇಸರ, ಕೆಲಸ ಆಗಿಲ್ಲ ಎಂಬ ಸಿಟ್ಟು ನಿಮ್ಮನ್ನು ಬಾಧಿಸುವುದು. ನಿಮ್ಮ ಶ್ರಮಕ್ಕೆ ಪೂರ್ಣಫಲ ಸಿಗದು. ದಾರಿಯನ್ನು ಬದಲಿಸುವ ತೀರ್ಮಾನಕ್ಕೆ ಬರುವಿರಿ.
ಕುಂಭ ರಾಶಿ : ಇದು ಶನಿಯ ಮೂಲತ್ರಿಕೋಣವು ಆದುದರಿಂದ ರಾಹುವಿನ ಬಾಧದೆ ತಟ್ಟದು. ಆದರೆ ಧನಿಷ್ಠಾ ನಕ್ಷತ್ರದವರಿಗೆ ಸಣ್ಣ ಧನನಷ್ಟದ ನೋವನ್ನೂ ಸಹಿಸುವುದು ಕಷ್ಟವಾಗುವುದು. ರಾಹುವಿನಿಂದ ಪ್ರತಿಕೂಲವನ್ನು ಅನುಭವಿಸುವವರು ನಾಗಾರಾಧನೆ, ಪಿತೃಗಳ ಆರಾಧನೆ, ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ, ಬರುವ ಸಂಕಷ್ಟವನ್ನು ದೂರ ಮಾಡಿಕೊಳ್ಳಬಹುದು.
ಲೋಹಿತ ಹೆಬ್ಬಾರ್ – 8762924271
Published On - 10:39 pm, Wed, 10 July 24