Nitya Bhavishya: ಈ ರಾಶಿಯವರು ಅಂದುಕೊಂಡಂತೆ ಆಗದೆ ಇರಬಹುದು, ಬೇಸರ ಬೇಡ

| Updated By: ಗಂಗಾಧರ​ ಬ. ಸಾಬೋಜಿ

Updated on: May 26, 2023 | 12:02 AM

ಇಂದಿನ (2023 ಮೇ​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರು ಅಂದುಕೊಂಡಂತೆ ಆಗದೆ ಇರಬಹುದು, ಬೇಸರ ಬೇಡ
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಸುಕರ್ಮ, ಕರಣ: ಗರಜ , ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ 10:53 ರಿಂದ 12:29ರ ವರೆಗೆ, ಯಮಘಂಡ ಕಾಲ 03:42 ರಿಂದ 05:17ರ ವರೆಗೆ, ಗುಳಿಕ ಕಾಲ 07:40 ರಿಂದ 09:17ರ ವರೆಗೆ.

ಮೇಷ: ನಿಮ್ಮದೇ ಮನಸ್ಸಾದರೂ ನಿಮ್ಮ ಮಾತನ್ನು ಕೇಳದೇ ಇದ್ದೀತು. ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಲಕ್ಷ್ಯವನ್ನು ವಹಿಸುವಿರಿ. ನೀವು ಅಂದು ಕೊಂಡ ವಿಚಾರಗಳು ನಿಮ್ಮಿಂದ ಆಗಿಲ್ಲ ಎಂಬ ಬೇಸರವು ಉಂಟಾದೀತು. ‌ಹಣಕಾಸಿನ ವಿಚಾರದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಇದ್ದು ಸಂತಸವಿರಲಿದೆ. ಯಂತ್ರಾಗಾರದಲ್ಲಿ ಕೆಲಸವು ಇಂದು ಅತಿಯಾಗಬಹುದು. ಲಲಿತಕಲೆಯಲ್ಲಿ ಆಸಕ್ತಿಯನ್ನು ಹೆಚ್ಚು ಬೆಳೆಸಿಕೊಂಡಿದ್ದರೆ ಸರಿಯಾದ ಮಾರ್ಗವು ಇಂದು ಸಿಗಬಹುದು. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆಯಬಹುದು. ಅನೇಕ ದಿನಗಳ ಅನಂತರ ಸಂತೋಷದಿಂದ ಇರುವ ದಿನವಾಗಿದೆ.

ವೃಷಭ: ಬಯಕೆಯನ್ನು ಬಹಳ ಬಲವಾಗಿ ಹಿಡಿದಿಟ್ಟುಕೊಳ್ಳುವಿರಿ. ತೊಂದರೆಯನ್ನು ತೆಗೆದುಕೊಳ್ಳದೇ ಕೆಲಸವನ್ನು ಮುಗಿಸುವ ಮಾನಸಿಕ ಸ್ಥಿತಿಯನ್ನು ಹೊಂದಿದ್ದೀರಿ ಇಂದು. ಇಂದು ನಿಮ್ಮ ಪರೀಕ್ಷೆಯ ಕಾಲವಾಗಿದ್ದು ಬಹಳ ಅಸ್ಥೈರ್ಯವು ಕಾಡುವುದು. ಮನೆಯ ಬಗ್ಗೆ ಚಿಂತೆಯೂ ಕಾಡಬಹುದು. ನಿಮ್ಮ ಜೀವನದ ಬಗ್ಗೆ ನಿಮಗೆ ವಿಧವಾದ ಕನಸುಗಳು ಇರಬಹುದು. ಒಂಟಿಯಾಗಿದ್ದಷ್ಟೂ ಬೇರೆ ಬೇರೆ ಯೋಚನೆಗಳು ಬರಬಹುದು. ಯಾರನ್ನಾದರೂ ಜೊತೆ ಮಾಡಿಕೊಳ್ಳುವುದು ಉತ್ತಮ. ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬಹುದು.

ಮಿಥುನ: ಮಕ್ಕಳ ಜೊತೆ ಸಂತೋಷವನ್ನು ಅನುಭವಿಸುವಿರಿ. ಅರ್ಥವಿಲ್ಲದ ವ್ಯರ್ಥ ಮಾತುಗಳನ್ನು ನಿಲ್ಲಿಸುವುದು ಉತ್ತಮ‌. ನೀವು ಬಯಸಿದ ವಸ್ತುವು ಅನಾಯಾಸವಾಗಿ ದೊರೆಯುವುದು. ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಕಡಿಮೆ‌ ಆದೀತು. ವಿದ್ಯಾರ್ಥಿಗಳು ಆಗಿ ಹೋದರ ಬಗ್ಗೆ ಹೆಮ್ಮೆಯಿಂದ‌ ಬೀಗುವ ಅವಶ್ಯಕತೆಯಿಲ್ಲ. ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ತ್ವವನ್ನು ಕೊಡಿ. ಒಬ್ಬರೇ ಎಲ್ಲಿಯಾದರೂ ಸುತ್ತಾಟ ಮಾಡಬಹುದು. ಎಲ್ಲವನ್ನೂ ಪರೀಕ್ಷಿಸಿ ಪಡೆದುಕೊಳ್ಳುವಿರಿ. ಸಾಧರಣಕ್ಕೆ ಒಪ್ಪುದಿಲ್ಲ. ನೀವು ಮಾಡುವ ತಮಾಷೆಯಿಂದ ನಿಮ್ಮನ್ನೇ ನೋಡಿ ನಕ್ಕಾರು. ಅಪಮಾನದಂತೆ ಅನ್ನಿಸೀತು ನಿಮಗೆ.

ಕಟಕ: ಸಂಗಾತಿಯ ಜೊತೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ಸ್ನೇಹಿತರಿಂದ ಹಣವನ್ನು ಸಾಲವಾಗಿಯೂ ಒಡೆಯಬಹುದು. ಸುವ್ಯವಸ್ಥಿತ ಭವಿಷ್ಯದ ಕನಸು ಕಾಣುವಿರಿ. ಮಕ್ಕಳಿಲ್ಲ ಎಂಬ ಕೊರಗು ಅತಿಯಾಗಬಹುದು. ನಿಮ್ಮನ್ನು ಸಮ್ಮಾನಿಸಲು ಆಹ್ವಾನ ಬರಬಹುದು. ಅಸ್ಥಿರವಾದ ವ್ಯವಸ್ಥೆಯು ಕಿರಿಕಿರಿಯನ್ನು ಉಂಟುಮಾಡಬಹುದು. ಕೋಪಗೊಳ್ಳಬೇಕಾದ ಪರಿಸ್ಥಿತಿ ಇದ್ದರೂ ಅದನ್ನು ನಿಯಂತ್ರಿಸಿಕೊಳ್ಳಬೇಕಾಗಿದೆ. ಸಹೋದರನ ಬಗ್ಗೆ ಪ್ರೀತಿ ಅತಿಯಾದೀತು. ನೀವು ಭರವಸೆ ಕೊಡಲು ಪ್ರಸಿದ್ಧರು ಎಂಬ ಬಿರುದು ಬರದಂತೆ ನೋಡಿಕೊಳ್ಳಿ.

ಸಿಂಹ: ಅತಿಯಾಗಿ ದೇಹವನ್ನು ದಂಡಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ನೋಡಿಕೊಳ್ಳಿ. ಹಣವಿದ್ದರೂ ವಾಹನವನ್ನು ಕೊಳ್ಳುವ ಯೋಗ ದೂರವಿದೆ. ವಸ್ತುಗಳ ಕಳ್ಳತನವಾಗಬಹುದು ಅಥವಾ ಕಣ್ಮರಡಲೆಯಾದೀತು. ಬಟ್ಟೆಯ ವ್ಯವಹಾರವು ಲಾಭದಾಯಕವೆನಿಸಯವುದು. ಭೋಗ್ಯವಸ್ತುಗಳನ್ನು ಖರೀದಿಸುವಿರಿ. ಹಣಕಾಸಿನ ಸ್ಥಿತಿಯನ್ನು ಅನುಸರಿಸಿ ವ್ಯವಹಾರವನ್ನು ಮಾಡಿ. ಇದೇ ವಿಚಾರಕ್ಕೆ ಮನೆಯಲ್ಲಿ ಕಲಹವಾದೀತು. ರಾಜಕೀಯ ವ್ಯಕ್ತಿಗಳ ಸಹಾಯದಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ನಿಮ್ಮ ಬಗ್ಗೆ ನಿಮಗೆ ಕೀಳರಿಮೆ ಬರಬಹುದು. ಪ್ರೀತಿಯ ಮಾತುಗಳಿಂದ ಇಂದಿನ ಕೆಲಸವನ್ನು ಮಾಡಿಸಿಕೊಳ್ಳುವಿರಿ.

ಕನ್ಯಾ: ಬಹಳ ಆಯಾಸವಾದಂತೆ ಎನಿಸಬಹುದು. ನಿನ್ನೆಯ ಸುಸ್ತಿನಿಂದ ಹೊರಬರಲು ವಿಶ್ರಾಂತಿ ಪಡೆಯುವಿರಿ. ಆಹಾರ ಸೇವೆಯನ್ನು ಮಾಡಲು ನಿಮ್ಮ ಕ್ರಮವನ್ನು ರೂಢಿಸಿಕೊಳ್ಳುವಿರಿ. ಯಾವ‌ ನಿರ್ಧಾರವನ್ನೂ ವಿವೇಚನೆ ಇಲ್ಲದೇ ತೆಗೆದುಕೊಳ್ಳುವಿರಿ‌. ಎಲ್ಲ ಕೆಲಸಕ್ಕೂ ಲಾಭವನ್ನೇ ನಿರೀಕ್ಷಿಸಬಹುದು. ವಿದ್ಯಾಭ್ಯಾಸದ ಬಗ್ಗೆ ಸ್ನೇಹಿತರ ಮಾರ್ಗದರ್ಶನವನ್ನು ಪಡೆಯುವಿರಿ. ತಾಯಿಯ ಜೊತೆ ಇಂದು ನಿಮ್ಮ ಎಲ್ಲ ವಿಷಯವನ್ನು ಹೇಳಿಕೊಳ್ಳುವಿರಿ. ಮನೆಯನ್ನು ನಿರ್ಮಿಸಲು ಹೊಸ ಜಾಗವನ್ನು ಖರೀದಿಸಬಹುದು. ಮೋಜು ಮಾಡಲು ಹೋಗಿ ಹಣವನ್ನು ಕಳೆದುಕೊಳ್ಳುವ ಸಂಭವವಿದೆ.

ತುಲಾ: ಮನೋರಂಜನೆಗೆ ಹೆಚ್ಚಿನ ಒತ್ತು ಕೊಡಬಹುದು. ಕಲಾವಿದರು ಹೆಚ್ಚಿನ ಒತ್ತಡದಲ್ಲಿ ಇರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವ ಚಿಂತೆ ಇರಲಿದೆ. ಇಂದು ನೀವು ಸ್ವಲ್ಪ ಉತ್ಸಾಹದಿಂದ ಇರುವಂತೆ ಕಾಣುತ್ತದೆ. ನಿಮ್ಮ ವೃತ್ತಿಯಲ್ಲಿ ನೀವು ಗುರುತಿಸುವ ವ್ಯಕ್ತಿಯಾಗುವಿರಿ. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮ ಹಿಡಿತದಲ್ಲಿ ಇರಬೇಕು ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ಜೊತೆ ಮಾತನಾಡಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮಗೆ ಸಿಗುವ ಹಣವು ಮಧ್ಯವರ್ತಿಗಳ ಕಾರಣದಿಂದ ಕೈತಪ್ಪಬಹುದು. ವಿಷಯ ತಿಳಿದು ಮನಸ್ಸು ಕುಗ್ಗಬಹುದು.

ವೃಶ್ಚಿಕ: ನೀವು ಚೆನ್ನಾಗಿ ಇರುವುದು, ಸಂತೋಷದಿಂದ ಮಾತನಾಡುವುದು, ಎಲ್ಲರ ಜೊತೆ ಬೆರೆಯುವುದು ನಿಮ್ಮ ಬಂಧುಗಳಿಗೆ ಅಸಹ್ಯವಾದೀತು. ತುಂಬಾ ಕಷ್ಟದಿಂದ ಗಳಿಸಿದ ಹಣವನ್ನು ಖರ್ಚುಮಾಡಲು ಮನಸ್ಸುಬಾರದು. ಸ್ನೇಹಿತರ ಉದ್ಯಮಕ್ಕೆ ಹಣ ಹಾಕಲು ಒತ್ತಾಯ ಬರಬಹುದು. ಶರತ್ತುಗಳ ಮೇಲೆ ಇದನ್ನು ಕೊಡಿ. ರಹಸ್ಯವಾಗಿ ಪ್ರೀತಿಸುವಿರಿ. ಅವರ ಜೊತೆ ದಿನಗಳನ್ನು ಕಳೆಯಬಹುದು. ಹೊರಗಡೆ ಸುತ್ತಾಡಲು ಹೋಗಬಹುದು. ಇನ್ನೊಬ್ಬರನ್ನು ಅನುಕರಿಸುವ ನಿಮ್ಮ ಸ್ವಭಾವವನ್ನು ಬಿಡುವುದು ಒಳ್ಳೆಯದು. ಕೆಲವು ವಿಚಾರದಲ್ಲಿ ಧೈರ್ಯದ ಕೊರೆತೆ ಕಾಣುವುದು. ಹಳೆಯ ಸ್ನೇಹಿತೆಯು ಬಹಳ ಕಾಡಬಹುದು.

ಧನು: ಅನಾರೋಗ್ಯ ಕಾರಣದಿಂದ ನಿಮ್ಮ ಬಗ್ಗೆಯೇ ನಿಮಗೆ ಜುಗುಪ್ಸೆ ಬರಬಹುದು. ಹಣವನ್ನು ಗಳಿಸುವ ಹಂಬಲವು ಅತಿಯಾಗಿದ್ದರೂ ದಾರಿಗಳು ಮಾತ್ರ ಕಾಣಿಸದೇ ಇದ್ದೀತು. ವಿದ್ಯಾರ್ಥಿಗಳು ಮನೆಯ ಸ್ಥಿತಿಯನ್ನು ಕಂಡುಕೊಂಡು ನಿಮ್ಮ ವಿದ್ಯಾಭ್ಯಾಸದ ನಿರ್ಧಾರವನ್ನು ಮಾಡಿ. ವಾಹನ‌ಸವಾರರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಮರಣಭೀತಿಯು ನಿಮ್ಮನ್ನು ಕಾಡಬಹುದು.‌ ಕೆಟ್ಟ ಆಲೋಚನೆಗಳನ್ನು ಬಿಟ್ಟು ಸರಿಯಾದುದರ ಬಗ್ಗೆ ಗಮನವಿರಲಿ. ಸಂಗಾತಿಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ. ಮೇಲ್ನೋಟಕ್ಕೆ ಒಪ್ಪಿ ಅನಂತರ ಕಷ್ಟವಾದೀತು. ಮನೆಯ ಜವಾಬ್ದಾರಿಗಳು ಬರಬಹದು. ಅತ್ಯಾಪ್ತರ ಗುರುತೇ ಸಿಗದಾಗಬಹುದು.

ಮಕರ: ಭೋಗವಸ್ತುವಿನ ಜೊತೆ ಹೆಚ್ಚು ಕಾಲಕಳೆಯಲು ಬಯಸುವಿರಿ. ನಿಮ್ಮ ಗುರಿಯ ಬಗ್ಗೆ ಬಲ್ಲವರು ತಿಳಿಸಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಹೇಳಿಬಿಡಬಹುದು. ದೈವದ ಸಾಹಾಯವು ಕಡಿಮೆ‌ಇದ್ದರೂ ಮಾನುಷ ಪ್ರಯತ್ನದಿಂದ ಸಾಧಿಸುವ ಉತ್ಸಾಹವಿರಲಿದೆ. ಪುಣ್ಯಕ್ಷೇತ್ರಗಳ ಭೇಟಿಯಿಂದ ನಿಮಗೆ ದಿವ್ಯವಾದ ಅನುಭೂತಿಯಾದೀತು. ವಿದ್ಯಾರ್ಥಿಗಳು ಶಿಕ್ಷಕರಾದ ನಿಮಗೆ ಅನಿರೀಕ್ಷಿತ ಉಡುಗೊರೆಯನ್ನು ಕೊಟ್ಟಾರು. ವೈವಾಹಿಕ‌ಜೀವನವು ಬಹಳ‌ ಕಷ್ಟ ಎನಿಸಬಹುದು. ಸಂತೋಷದಿಂದ ಇರುಲು ಕಷ್ಟಪಡಬೇಕಾದ ಸ್ಥಿತಿ ಇದೆ. ಕೊರತೆಗಳ ಬಗ್ಗೆ ಹೆಚ್ಚು ನೀವು ಕೊರಗಬಹುದು.

ಕುಂಭ: ನಿಮ್ಮ ವಿಚಾರದಲ್ಲಿ ಬೇರೆಯವರು ಮಧ್ಯಪ್ರವೇಶ ಮಾಡುವರು. ಇದು ನಿಮಗೆ ಬಹಳ ಸಿಟ್ಟನ್ನು ತರಿಸೀತು. ಅದನ್ನು ವ್ಯಕ್ತಪಡಿಸಲು ನೀವು ಸೂಕ್ತ ಸಂದರ್ಭವನ್ನು ಹುಡುಕುವಿರಿ. ನಿಮಗೆ ಇಂದು ಕೆಲವು ಜವಾಬ್ದಾರಿಗಳು ಬರುವ ಸಾಧ್ಯತೆ ಇದೆ. ನಿಮಗೆ ಬರುವ ಹಣವನ್ನು ನಿರೀಕ್ಷಿಸಿ. ಅಪರಿಚಿತ ದೂರವಾಣಿಯು ನಿಮ್ಮ ಬಳಿ ಹಣ ಹೂಡುವಂತೆ ಮಾಡಿಸೀತು. ನಿಮ್ಮ ಮಾತುಗಳು ಉನ್ನತಸ್ತರದಲ್ಲಿ ನಡೆಯಬಹುದು. ಜಗಳವಾಗುವ ಸ್ಥಿತಿ‌ದ್ದರೂ ಸುಮ್ನನಿರುವುದು ಇತರರಿಗೆ ಆಶ್ಚರ್ಯವನ್ನು ಕೊಟ್ಟೀತು. ನಿಮ್ಮವರು ನಿಮ್ಮ ಪ್ರೀತಿಗೆ ಸೋಲಬಹುದು. ಕಳೆದುಕೊಂಡ ಸಂಬಂದವು ಮತ್ತೆ ಚಿಗುರಬಹುದು.

ಮೀನ: ಸಕಾರಾತ್ಮಕ ಚಿಂತನೆಗಳನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಿದೆ. ಮನೆಯಿಂದ ದೂರವಿರುವ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ನಿಮ್ಮ ಮಾತಗಳು ತಂದೆ-ತಾಯಿಯವರಿಗೆ ಬೇಸರ ತರಿಸೀತು. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಇಂದು ನೀವು ಸಂಗಾತಿಯನ್ನು ಉದಾಸೀನ ಭಾವದಿಂದ ಕಾಣುವಿರಿ. ಇಂದು ತಿಳಿದು ಕೂಗಾಡಬಹುದು.‌ ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಿ ಹೊಸತನ್ನು ಹುಡುಕಲು ಇಚ್ಛಿಸಬಹುದು. ನಡವಳಿಕೆಯಿಂದ ಕೆಲವಷ್ಟು ಅಂಶಗಳನ್ನು ಕಲಿತಾರು. ಸಾಮಾಜಿಕ ಕೆಲಸಗಳು ನಿಮಗೆ ಇಷ್ಟವಾಗುವ ಕೆಲಸವೇ ಆಗಿದ್ದು ಬಿಡುವಿನ ವೇಳೆಯಲ್ಲಿ ಮಾಡುವಿರಿ.

ಲೋಹಿತಶರ್ಮಾ – 8762924271 (what’s app only)