Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಪತ್ನಿಯ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 6) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಪತ್ನಿಯ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ
ಇಂದಿನ ರಾಶಿಭವಿಷ್ಯImage Credit source: istock
Follow us
Rakesh Nayak Manchi
|

Updated on: Jun 06, 2023 | 12:45 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ 03:45 ರಿಂದ 05:21ರ ವರೆಗೆ, ಯಮಘಂಡ ಕಾಲ 09:17 ರಿಂದ 10:54ರ ವರೆಗೆ, ಗುಳಿಕ ಕಾಲ 12:30 ರಿಂದ 02:08ರ ವರೆಗೆ.

ಧನು: ಇಂದು ನಿಮಗೆ ಬೆಳಗ್ಗೆಯಿಂದ ಮನಸ್ಸು ಜಾಡ್ಯದಿಂದ ಇರಲಿದೆ. ಸ್ವಾಭಿಮಾನದ ವಿಚಾರಕ್ಕೆ ಬಂದರೆ ನೀವು ಬಹಳ ನಿಷ್ಠುರರು.‌ ಯಾರ ಸಹಾಯವನ್ನೂ ಬಾಯೊಡೆದು ಕೇಳುವ ಜಾಯಮಾನವಲ್ಲ. ಅತಿಯಾದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ತಳ್ಳಬಹುದು. ವಿವಾಹವು ನಿಮಗೆ ವಿಳಂಬ ಎಂದು ಕೇಳುವುದು ಬೇಸರ ತರಿಸಬಹುದು. ಶತ್ರುಗಳನ್ನು ನೀವೇ ಸೃಷ್ಟಿ ಮಾಡಿಕೊಳ್ಳುವುದು ಸರಿಯಲ್ಲ. ಈ ದಿನ ಬೇಸರ ಎನಿಸಿದರೆ ಹೊರಗೆ ಒಂಟಿಯಾಗಿ ಸುತ್ತಾಡಿ ಬನ್ನಿ.‌ ಮನಸ್ಸಿಗೂ ದೇಹಕ್ಕೂ ಹಿತವೆನಿಸಬಹುದು. ಆರೋಗ್ಯವನ್ನು ಆಹಾರದ ಮೂಲಕವೇ ಸರಿಯಾಗಿ‌ ಇಟ್ಟುಕೊಳ್ಳಿ.

ಮಕರ: ನಿಯಮಗಳು ನಿಮಗೆ ತೊಂದರೆಯಾದೀತು. ಅದನ್ನು ಮುರಿಯಲು ನೀವು ಪ್ರಯತ್ನಿಸಬಹುದು.‌ ನಿಮಗೆ ಮಾರ್ಗದರ್ಶನ ಮಾಡಲು ಯಾರಾದರೂ ಬರಬಹುದು. ನಿಮ್ಮ ವೃತ್ತಿಯನ್ನು ಬಹಳ ಇಷ್ಟಪಟ್ಟ ಮಾಡುವಿರಿ. ಸಹೋದರರು ನಿಮಗೆ ಇಂದು ಬೇಕಾದ ಸಹಾಯ ಮಾಡಬಹುದು. ನೀವಿಂದು ಬಹಳ ಗಂಭೀರವಾಗಿ ಇದ್ದು ನಿಮ್ಮ ಜೊತೆ ಮಾತನಾಡಲು ಭಯಪಡುವರು. ಮಕ್ಕಳನ್ನು ಬಹಳ ಪ್ರೀತಿಸುವಿರಿ. ಅವರಿಗೆ ಬೇಕಾದುದನ್ನು ಕೊಡುವಿರಿ. ದೂರಪ್ರಯಾಣವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ವ್ಯವಹಾರವನ್ನು ಮಾಡುವಾಗ ಜಾಗರೂಕತೆ ಇರಲಿ.

ಕುಂಭ: ನಿಮಗೆ ಬರುವ ಅಪವಾದವನ್ನು ನೀವು ನುಂಗಿಕೊಂಡರೂ ನಿಮ್ಮವರು ಅದನ್ನು ಸಹಿಸಲಾರರು.‌ ನಿಮ್ಮ ಸಮಾಜ ಸೇವೆಗೆ ಇಂದು ಫಲಿತಾಂಶ ಬರಬಬಹುದು. ಆಕಸ್ಮಿಕ ಧನದಿಂದ ಸಂತೋಷವಾಗಲಿದೆ. ಕಛೇರಿಯಲ್ಲಿ ನಿಮ್ಮ ಕೆಲಸಗಳು ವಿಳಂಬವಾಗಬಹುದು. ಆಧಿಕೃತ ಮಾಹಿತಿಯನ್ನು ಪಡೆಯದೇ ನೀವು ಯಾವ ನಿರ್ಧಾರಕ್ಕೂ ಬರುವುದು ಬೇಡ. ನಿಮ್ಮ ಹಣವು ಮೋಜಿಗೋಸ್ಕರ ಖಾಲಿಯಾಗಬಹುದು.‌ ಕೃಷಿಯಲ್ಲಿ ನೀವು ನಿರೀಕ್ಷಿತ ಲಾಭವನ್ನು ಗಳಿಸಲು ಅಸಾಧ್ಯ. ಸಂಗಾತಿಯ ಮಾತನ್ನು ನೀವು ನಿರಾಕರಿಸಿದ ಕಾರಣ ಸಿಟ್ಟಾಗುವ ಸಾಧ್ಯತೆ ಇದೆ. ನೀವು ಇಂದು ಮಿತ ಬಳಕೆಯನ್ನು ಇಷ್ಟೊಡವಹುದು.

ಮೀನ: ನಿಮ್ಮ ಹಣವು ಹೋಗಬೇಕಾದ ವ್ಯಕ್ತಿಗೆ ಹೋಗದೇ ತಪ್ಪಿ ಇನ್ನೊಬ್ಬರಿಗೆ ಹೋಗಿ ನಿಮಗೆ ತೊಂದರೆ ಆದೀತು. ಹಿರಿಯರ ಮಾತಿಗೆ ಅಗೌರವ ಬೇಡ.‌ ಒಂದು ಉದ್ಯೋಗದಲ್ಲಿ ಮನವು ಸ್ಥಿರವಾಗಿರಲಿ. ಅವಮಾನದಂತೆ ಕಂಡರೆ ಅಲ್ಲಿಂದ ದೂರನಡೆಯಿರಿ.‌ ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಬಹುದು. ಸ್ನೇಹಕ್ಕೆ ಅನುಗುಣವಾಗಿ ನಿಮ್ಮ ಪ್ರತ್ಯುಪಕಾರವಿರಲಿದೆ. ಧನಾಗಮನದ ನಿರೀಕ್ಷೆಯಲ್ಲಿ ನೀವಿರುವಿರಿ. ಸತ್ಯಾಸತ್ಯತೆಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಸಿಗದೇ ಇದ್ದೀತು. ಪತ್ನಿಯ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ.

-ಲೋಹಿತಶರ್ಮಾ ಇಡುವಾಣಿ

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್