Horoscope: ದಿನಭವಿಷ್ಯ: ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.12 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 12, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜೂನ್. 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 00 ನಿಮಿಷಕ್ಕೆ, ರಾಹು ಕಾಲ 2:33 ರಿಂದ 14:10ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:42 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:33ರ ವರೆಗೆ.

ಸಿಂಹ ರಾಶಿ :ಆಕಾಶಕ್ಕೆ ಏಣಿ ಹಾಕಲು ಹೋಗುವುದು ಬೇಡ. ಕೈಲಾಗುವಷಗಟನ್ನು ಇಷ್ಟು ದಿನ ಮನಸ್ಸಿನಲ್ಲಯೇ ಇಟ್ಟುಕೊಂಡ ಬಯಕೆಯನ್ನು ಹೊರ ಹಾಕುವಿರಿ. ನಿಮ್ಮ ಸ್ವಭಾವವು ನಿಮ್ಮವರಿಗೆ ತಿಲಕಿಯುವುದು. ಅನಿರೀಕ್ಷಿತವಾಗಿ ಬಂಧುಗಳ ಭೇಟಿಯಾಗಲಿದೆ. ಆದರೂ ನಿಮ್ಮ ಯೋಜಿತವಾದ ಕಾರ್ಯಗಳು ನಿರ್ಬಿಡೆಯಿಂದ ಸಾಗುವುದು. ಆಭರಣವನ್ನು ಖರೀದಿಸಲು ಇಚ್ಛೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸಿದವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮಿಂದ ಆಗದ್ದನ್ನು ಮತ್ಯಾರೋ ಮಾಡಬಹುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯವಾಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಅರಗಿಸಿಕೊಳ್ಳಲಾರಿರಿ.

ಕನ್ಯಾ ರಾಶಿ :ನಿಮ್ಮ ಬೆಂಬಲಕ್ಕೆ ಯಾರೂ ಬಾರದೇ ಇಂದು ವಾದವು ವ್ಯರ್ಥವಾಗುವುದು. ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ತಂದೆ-ತಾಯಿಯರು ಒತ್ತಾಯ ಮಾಡಿದರೂ ಅವರ ಮಾತಿಗೆ ಬೆಲೆ ಕೊಡದೇ ಮನೆಯಿಂದ ದೂರಾಗುವಿರಿ. ವ್ಯಸನಿಗಳಾಗುವ ಸಾಧ್ಯತೆ ಇದೆ. ಆರೋಗ್ಯದ ವ್ಯತ್ಯಾಸದಿಂದ ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಸೌಂದರ್ಯಕ್ಕೆ ಮರುಳಾಗುವಿರಿ. ಅನಾಮಧೇಯ ಕರೆಗಳಿಂದ ತೊಂದರೆಯಾಗಬಹುದು‌. ಅವುಗಳಿಂದ ದೂರವಿರುವುದು ಉಚಿತ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು.

ತುಲಾ ರಾಶಿ :ಇಂದು ಬಹಳ ದಿನಗಳ ಅನಂತರ ಶತ್ರುವಿನ ಮುಖಾಮುಖಿಯಾಗಲಿದೆ. ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸಿ, ಮುಂಬರುವ ಸಂಕಟದಿಂದ ಬಚಾವಾಗುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮನಸ್ಸಿದ್ದರೂ ದೇಹವು ಅದಕ್ಕೆ ಸಹಕರಿಸದೇ ಇರಬಹುದು. ಆಗಿರುವುದನ್ನು ನೆನಪಿಸಿಕೊಂಡು ಸಂಕಟಪಡುವ, ದುಃಖಿಸುವ ಅಗತ್ಯವಿಲ್ಲ. ದೇವರ ಸೃಷ್ಟಿಯಲ್ಲಿ ಎಲ್ಲವೂ ಸಹಜವೇ ಎಂಬ ಸಂಗತಿಯನ್ನು ತಿಳಿಯಿರಿ. ವಾಹನವನ್ನು ಖರೀದಿಸಲಿದ್ದು ತಂದೆಯಿಂದ ಸಾಲವನ್ನು ಪಡೆಯುವಿರಿ. ಯಾರನ್ನಾದರೂ ಪ್ರೀತಿಸಬೇಕಿತ್ತು ಎಂಬ ಭಾವ ನಿಮಗೆ ಬರಲಿದೆ. ಯಾರಮೇಲಾದರೂ ಪ್ರೀತಿಯು ಉಂಟಾಗಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ.

ವೃಶ್ಚಿಕ ರಾಶಿ :ಇಂದು ಸಹನಯೇ ನಿಮ್ಮ ಎಲ್ಲ ಕಾರ್ಯಗಳನ್ನು ಸಕ್ಷಮವಾಗಿ ಕರೆದೊಯ್ಯುವುದು. ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನವು ವ್ಯರ್ಥವೇ ಸರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿ. ಯಾರಿಗೂ ಭರವಸೆಯನ್ನು ನೀಡಲು ಹೋಗಬೇಡಿ. ಮನೆಗೆ ಬಂದವರ ಎದುರು ಜಗಳವಾಡುವಿರಿ. ಅವರೇ ನಿಮ್ಮನ್ನು ಸಮಾಧಾನ ಮಾಡಬೇಕಾದೀತು. ನಿಮ್ಮ ಮಾತನ್ನು ಎಲ್ಲರೂ ಕೇಳರು. ಕೇಳುವ ಹಾಗೆ ನಿಮ್ಮ ಮಾತಿರಲಿ. ಓಡಾಟ ಬೇಡವೆಂದು ಕುಳಿತ ನಿಮಗೆ ಅನಿವಾರ್ಯದ ಪ್ರಯಾಣವು ಬರಲಿದೆ. ಅಪರಿಚಿತರ ವ್ಯವಹಾರವನ್ನು ಜಾಣ್ಮೆಯಿಂದ ಮಾಡಿ. ಅದು ನಿಮ್ಮನ್ನು ಹೈರಾಣ ಮಾಡುವುದು. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು.

ತಾಜಾ ಸುದ್ದಿ
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!
ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು
ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು
ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ
‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​