Horoscope: ಎಲ್ಲವನ್ನೂ ದಾನ ಮಾಡುವ ಮನಃಸ್ಥಿತಿ, ಸಮಯ ನಿಮಗೆ ಎಲ್ಲವನ್ನೂ ತಿಳಿಸುವುದು
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 3 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಏಪ್ರಿಲ್ 3) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶಿವ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:36 ರಿಂದ 02:08ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:59 ರಿಂದ 09:32ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:04 ರಿಂದ ಮಧ್ಯಾಹ್ನ 12:36ರ ವರೆಗೆ.
ಸಿಂಹ ರಾಶಿ: ಇಂದು ಸಾಮಾಜಿಕ ಕೂಟಗಳಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ಹಣವನ್ನು ಉಳಿಸುವ ನಿಮ್ಮ ಪ್ರಯತ್ನಕ್ಕೆ ಇಂದು ಅಡೆತಡೆಗಳನ್ನು ಬರಬಹುದು. ಯಾವುದೇ ಅನ್ಯ ಆಲೋಚನೆಗೆ ಅವಕಾಶವಿಲ್ಲದೇ ಇರಬಹುದು. ಒಂದೊಂದೇ ಕೆಲಸಗಳು ನಿಮಗೆ ಹೊರೆಯಾಗುತ್ತಾ ಹೋಗಬಹುದು. ಬೇರೆಯವರ ಮಾತು ನಿಮಗೆ ಮನಸ್ಸಿಗೆ ನಾಟದೇ ನಿಮ್ಮದೇ ಆದ ವರ್ತನೆಯನ್ನು ಮುಂದುವರಿಸುವಿರಿ. ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಷ್ಠೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು.
ಕನ್ಯಾ ರಾಶಿ: ಇಂದು ನಿಮ್ಮ ಸಂತೋಷಕರ ನಡವಳಿಕೆಯು ಜನರ ಗಮನವನ್ನು ಸೆಳೆಯುವುದು. ಭೂಮಿ ಮಾರಾಟದ ಬಗ್ಗೆ ಯೋಚಿಸುತ್ತಿದ್ದರೆ ಇಂದು ಉತ್ತಮವಾಗಿರುವುದು. ನಿಮ್ಮ ಪ್ರೀತಿಪಾತ್ರರ ಭಾವನೆ ಜೊತೆ ಸಹಾನುಭೂತಿ ಹೊಂದುವಿರಿ. ನೀವು ಎಲ್ಲವನ್ನೂ ದಾನ ಮಾಡುವ ಮನಃಸ್ಥಿತಿಯನ್ನು ಹಿಂದಿರುವಿರಿ. ನಿಮ್ಮನ್ನು ಯಾರೂ ಏನನ್ನೂ ಪ್ರಶ್ನಿಸಲಾರರು ಎಂಬ ಮನೋಭಾವವು ನಿಮ್ಮಲ್ಲಿ ಇರುವುದು. ಯಾರನ್ನೂ ನಕಾರಾತ್ಮಕವಾಗಿ ತಿಳಿಯುವುದು ಬೇಡ. ಸಮಯವು ನಿಮಗೆ ಎಲ್ಲವನ್ನೂ ತಿಳಿಸುವುದು. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಅತಿಯಾದ ಕೋಪದಿಂದ ನಿಮ್ಮ ವ್ಯವಹಾರವು ಬುಡಮೇಲಾದೀತು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು.
ತುಲಾ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುವುದು. ನಿಮ್ಮ ನಿರ್ಧಾರಗಳು ಇಂದು ಹೆಚ್ಚುವರಿ ಹಣಕಾಸಿನ ಲಾಭವನ್ನು ತರಬಹುದು. ನಿಮ್ಮ ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯಲು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ದೊರೆಯಲಿದೆ. ಇಂದು ನಿಮ್ಮ ಸೃಜನಶೀಲತೆಗೆ ಸರಿಯಾದ ಸ್ಥಾನವು ಸಿಗಲಿದೆ. ಇಂದು ಯಾವುದನ್ನೂ ಪರೀಕ್ಷಿಸದೇ ನೀವು ಒಪ್ಪುವುದು ಕಷ್ಟವಾಗುವುದು. ಕೈ ಸುಟ್ಟುಕೊಂಡ ಕಾರ್ಯದಲ್ಲಿ ಮತ್ತೆ ಮನಸ್ಸು ಇರಲಾರದು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು.
ವೃಶ್ಚಿಕ ರಾಶಿ: ನಿಮ್ಮ ಅತ್ಯಾಕರ್ಷಕ ಅವಕಾಶಗಳು ಲಭ್ಯವಾಗಬಹುದು. ನಿಮ್ಮ ಸಂಗಾತಿಯಿಂದ ನಿಮಗೆ ಸಂತೋಷವು ಲಭ್ಯವಾಗುವುದು. ಇಂದು ಎದುರಾಗುವ ಸವಾಲುಗಳು ನಿಮಗೆ ಉದ್ಯೋಗದಲ್ಲಿ ಸ್ಥಿರತೆಯನ್ನು ತೋರಿಸುತ್ತದೆ. ನಿಮ್ಮ ಪಾಲುದಾರಿಕೆಯ ವ್ಯವಹಾರದಲ್ಲಿ ಯಾರಾದರೂ ಅನಗತ್ಯ ಗೊಂದಲವನ್ನು ಸೃಷ್ಟಿಸಬಹುದು. ಪ್ರೋತ್ಸಾಹದಿಂದ ನೀವು ನಿಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವಿರಿ. ಭೂಮಿಯ ವ್ಯವಹಾರವು ನಿಮಗೆ ಶಕ್ತಿಯನ್ನು ತಂದೀತು. ಬೇಕಾದಷ್ಟು ಇದ್ದರೂ ಅದನ್ನು ಉಳಿಸಿಕೊಳ್ಳಲಾಗದು. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು.