Horoscope: ದಿನಭವಿಷ್ಯ: ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು-ಎಚ್ಚರ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಏಪ್ರಿಲ್ 28 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು-ಎಚ್ಚರ
ರಾಶಿ ಭವಿಷ್ಯ
Updated By: ಕಿರಣ್ ಹನುಮಂತ್​ ಮಾದಾರ್

Updated on: Apr 28, 2024 | 12:45 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶಿವ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:13 ರಿಂದ 06:48 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:05 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:13 ರ ವರೆಗೆ

ಧನು ರಾಶಿ: ನಿಮಗೆ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಹೆಚ್ಚಿನ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಈ ಕೆಲಸವನ್ನು ಮಾಡಬೇಕಾಗುತ್ತದೆ. ಯಾವುದೇ ಆಕ್ಷೇಪ ಮಾಡಬೇಡಿ. ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಬಹುದು. ಬಹಳ ಸಮಯದ ನಂತರ ಹಳೇ ಗೆಳೆಯರ ಭೇಟಿ ಅಥವಾ ಮಾತುಕತೆ ಸಾಧ್ಯತೆ ಇದೆ. ಉದ್ಯೋಗದಲ್ಲಿ ಒತ್ತಡಗಳು ಇರುವುದುರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ಬಂಗಾರದ ಮೇಲೆ ಹೂಡಿಕೆ ಮಾಡುವಿರಿ. ಶಿಸ್ತಿನಿಂದ ನೀವು ವ್ಯವಹಾರವನ್ನು ಇಟ್ಟುಕೊಳ್ಳುವಿರಿ. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಹಿರಿಯರ ಆಶೀರ್ವಾದವು ನಿಮಗೆ ಖುಷಿ ಕೊಡುವುದು.

ಮಕರ ರಾಶಿ: ನಿಮ್ಮವರು ಎಂದು ಯಾರನ್ನು ನೀವು ಭಾವಿಸಿದ್ದೀರೋ ಅವರಿಂದಲೋ ಬಹಳ ನೋವು ಪಡುತ್ತೀರಿ. ನಿಮ್ಮಿಂದಾ ಸಾಧ್ಯವಾದಲ್ಲಿ ಅಗತ್ಯ ಇರುವ ಒಬ್ಬರಿಗೆ ಊಟದ ವ್ಯವಸ್ಥೆ ಮಾಡಿ. ಸಂಗಾತಿ ಮಕ್ಕಳ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ವಿದ್ಯಾಭ್ಯಾಸದ ಗಮನವು ಬೇರೆ ಕಡೆಗೆ ಹೋಗಬಹುದು. ಆತುರದ ನಡಿಗೆಯಿಂದ ನೀವು ಎಡವುವಿರಿ. ದೀರ್ಘಕಾಲದ ರೋಗದಿಂದ ಬಳಲಿಕೆಯು ನಿಮಗೆ ಅಭ್ಯಾಸವಾಗಲಿದೆ. ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಸಂಗಾತಿಯ ಎದುರು ಏನನ್ನೂ ಹೇಳದೇ ಸುಮ್ಮನಿರುವಿರಿ.

ಕುಂಭ ರಾಶಿ: ನಿಮ್ಮ ಸ್ವತಂತ್ರ ಆಲೋಚನೆಯು ಇತರರಿಗೆ ಮಾದರಿ ಆಗಬಹುದು. ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗಿ ಬರುವುದು. ಸ್ವಂತ ವ್ಯಾಪಾರ, ವ್ಯವಹಾರ ಮಾಡುವವರಿಗೆ ಅಲ್ಪ ಹಿನ್ನಡೆ. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರುವ ಕಾರಣ ಮನಸ್ಸಿಗೆ ಸಿಗಬೇಕಾದ ಶಾಂತಿಯ ಕೊರೆತೆಯೂ ಇರಲಿದೆ. ದಾಂಪತ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ಹೂಡಿಕೆಯ ಕಡೆ ಸರಿಯಾಗಿ ಇರಲಿ. ಮನಸ್ಸಿಗೆ ಹಿಡಸದ್ದನ್ನು ನೀವು ಮಾಡಲಾರಿರಿ. ಪಾಲುದಾರಿಕೆಯಲ್ಲಿ ಸಮಸ್ಯೆ ಕಾಣಿಸುವುದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ನಂಬಿಕೆಯು ಹುಸಿಯಾಗುವುದು. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು. ಮಕ್ಕಳ ಜೊತೆ ಸೌಹಾರ್ದ ಇರಲಿದೆ.

ಮೀನ ರಾಶಿ: ನಿಮ್ಮ ಮಾತಿನ ಮೋಡಿಗೆ ಇತರರು ಒಳಗಾಗುವರು. ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವು ನೀಡಲು ಪ್ರಯತ್ನಿಸುತ್ತೀರಿ. ಹಳೆಯ ವಾಹನಗಳ ಮಾರಾಟ ಮಾಡುವ ಬಗ್ಗೆ ಆಲೋಚನೆ ಬರುತ್ತದೆ. ಈ ಹಿಂದೆ ಷೇರು ಪೇಟೆಯಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲಿದ್ದೀರಿ. ಮಾನಸಿಕ ನೆಮ್ಮದಿಯು ನಿಮ್ಮ ಹಲವು ಕೆಲಸಗಳನ್ನು ಮಾಡಲು ಸಹಾಯ ಆಗುವುದು. ವಾಹನದ ತೊಂದರೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು‌. ಹೇಗಾದರೂ ಮಾಡಿ ಭಯವನ್ನು ದೂರ ಮಾಡಿಕೊಳ್ಳುವಿರಿ. ತೆಗಳಿಕೆಯನ್ನು ಛಲವಾಗಿ ತೆಗೆದುಕೊಳ್ಳುವಿರಿ. ಯಾರ ಮೇಲೂ ಅವಮಾನ ಬೇಡ. ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು.‌ ಹಿಂದಿನ ತಪ್ಪುಗಳು ಪಾಠವಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಹಳೆಯ ಸ್ನೇಹವು ಮತ್ತೆ ಒಂದಾಗುವುದು.

ಲೋಹಿತ ಹೆಬ್ಬಾರ್ – 8762924271 (what’s app only)