Horoscope: ನಿತ್ಯಭವಿಷ್ಯ, ಇಂದು ನಿಮ್ಮ ಮುಂದಾಳುತ್ವದಲ್ಲಿ ಹೊಸ ಕೆಲಸಗಳು ನಡೆಯಬಹುದು
ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 20) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 20) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಪೂರ್ವಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶುಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:53 ರಿಂದ 11:18ರ ವರೆಗೆ, ಯಮಘಂಡ ಕಾಲ 14:09 ರಿಂದ 15:34ರ ವರೆಗೆ, ಗುಳಿಕ ಕಾಲ ಬೆಳಗ್ಗೆ 7:03 ರಿಂದ 08:28ರ ವರೆಗೆ.
ಸಿಂಹ ರಾಶಿ: ಪ್ರಭಾವೀ ವ್ಯಕ್ತಿಗಳ ಸಂಪರ್ಕದಿಂದ ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳುವಿರಿ. ಆರ್ಥಿಕ ಪ್ರಗತಿಯು ಮಧ್ಯಮವಾಗಲಿದೆ. ನ್ಯಾಯಾಲಯದಲ್ಲಿ ನಿರೀಕ್ಷಿತ ಗೆಲವು ಕಷ್ಟವಾದೀತು. ಇಂದು ನೀವು ಕೆಲಸವನ್ನು ಹೆಚ್ಚು ಪ್ರಯತ್ನದಿಂದ ಪೂರ್ಣ ಮಾಡುವಿರಿ. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಣ ಮಾಡಲು ವಿಧಾನಗಳನ್ನು ಬಳಸುವಿರಿ. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ನಿಮ್ಮ ಗೌಪ್ಯತೆಯನ್ನು ಯಾರ ಜೊತೆಯೂ ಹೇಳಿಕೊಳ್ಳುವುದು ಬೇಡ. ನಿಯಮ ಪಾಲನೆಯಲ್ಲಿ ತಪ್ಪಬಹುದು. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ.
ಕನ್ಯಾ ರಾಶಿ: ಇಂದಿನ ಶುಭವಾರ್ತೆಯು ನಿಮ್ಮ ಹಲವು ದಿನದ ಮನಸ್ಸಿನ ದುಗುಡಕ್ಕೆ ಶಾಂತಿಯನ್ನು ಕೊಡಬಹುದು. ವೃತ್ತಿಯ ಸ್ಥಳದಲ್ಲಿ ಕಲಹವಾಗಬಹುದು. ಅವಶ್ಯಕ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ ಮಾಡಿಸುವಿರಿ. ರಕ್ಷಣೆಯ ವಿಚಾರದಲ್ಲಿ ನೀವು ಸೋಲಬಹುದು. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು.
ತುಲಾ ರಾಶಿ: ಇಂದು ನೀವು ಮಾಡಿದ ಉದ್ಯಮದ ತಂತ್ರಗಳು ಫಲಿಸಬಹುದು. ವಿದ್ಯಾರ್ಥಿಗಳು ಪ್ರಗತಿಯಿಂದ ಖುಷಿಪಡುವರು. ಪ್ರೀತಿಯನ್ನು ಅವಶ್ಯಕತೆಯ ಪೂರೈಕೆಗಷ್ಟೇ ಬಳಸಿಕೊಳ್ಳುವಿರಿ. ಹಣದ ವ್ಯವಹಾರದಲ್ಲಿ ಮುಜುಗರ ಬೇಡ. ಅನ್ಯರ ಕಾರಣದಿಂದ ವಿದೇಶದ ವ್ಯಾಮೋಹವು ಹೆಚ್ಚಾದೀತು. ಇಂದು ಕೌಶಲ್ಯದ ಕಾರ್ಯಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಸ್ವಪ್ನದ ಚಿಂತೆಯಲ್ಲಿಯೇ ಇರಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ದಾಂಪತ್ಯದ ಗುಟ್ಟನ್ನು ಹೊರಗೆ ಹಾಕುವುದು ಬೇಡ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು.
ವೃಶ್ಚಿಕ ರಾಶಿ: ಇಂದು ನಿಮ್ಮ ಮುಂದಾಳುತ್ವದಲ್ಲಿ ಹೊಸ ಕೆಲಸಗಳು ನಡೆಯಬಹುದು. ಪೂರ್ಣ ಅದೃಷ್ಟವನ್ನೇ ನಂಬಿ ಕಾರ್ಯದಲ್ಲಿ ತೊಡಗುವುದು ಬೇಡ. ಪೂರ್ಣ ಮನಸ್ಸಿನಿಂದ ನಿಮ್ಮ ಎಲ್ಲ ಶಕ್ತಿಯನ್ನು ಹಾಕಿ ಕೆಲಸ ಮಾಡಿದರೂ ಅಂದುಕೊಂಡಷ್ಟು ಜಯವು ಸಿಗದು. ನಿಮಗೆ ಇಷ್ಟವಾದವರ ಬಗ್ಗೆ ನಿಮಗೆ ಅನುಕಂಪ ಬರಬಹುದು. ಒಡಹುಟ್ಟಿದವರ ಜೊತೆಗಿನ ನಿಮ್ಮ ವ್ಯವಹಾರಕ್ಕೆ ಮತ್ತೊಬ್ಬರು ಪ್ರವೇಶಿಸಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಸಹೋದರಿಯರ ಜೊತೆ ವಾಗ್ವಾದವನ್ನು ಮಾಡುವಿರಿ. ದೃಷ್ಟಿಯನ್ನು ಸಂಕುಚಿತ ಮಾಡುವುದು ಬೇಡ.