Rashi Bhavishya: ದಿನಭವಿಷ್ಯ; ಈ ರಾಶಿಯವರು ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯಗಳು ಶಾಶ್ವತವಾಗದಂತೆ ನೋಡಿಕೊಳ್ಳಿ
ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 23) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 23) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಐಂದ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:35 ರಿಂದ 05:01ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:54 ರಿಂದ 11:19ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:44 ರಿಂದ 02:10ರ ವರೆಗೆ.
ಸಿಂಹ ರಾಶಿ: ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯಗಳು ಶಾಶ್ವತವಾಗದಂತೆ ನೋಡಿಕೊಳ್ಳಿ. ಇಷ್ಟವಿಲ್ಲದಿದ್ದರೂ ಮಾತನಾಡುವುದು ಅನಿವಾರ್ಯವಾದೀತು. ಒತ್ತಡವನ್ನು ತಣಿಸಿಕೊಳ್ಳಲು ದುರಭ್ಯಾಸವನ್ನು ರೂಢಿಸಿಕೊಳ್ಳಬೇಕಸದೀತು. ಇನ್ನೊಬ್ಬರ ಸ್ವತ್ತನ್ನು ಅಪೇಕ್ಷಿಸುವುದು ಬೇಡ. ಮೋಹದಿಂದ ಹೊರಬರುವುದು ಕಷ್ಟವಾದೀತು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು. ನಿಮ್ಮ ಶತ್ರುಗಳು ಬಲಗೊಳ್ಳುವ ಸಾಧ್ಯತೆ ಇದೆ. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಕುಶಲತೆಯಿಂದ ಕೆಲಸವನ್ನು ಮಾಡಿ. ಹೂಡಿಕೆಯ ವ್ಯವಹಾರವು ಕೆಲವರಲ್ಲಿ ಮಾತ್ರ ಇರಲಿ. ಸಹನೆಯನ್ನು ನೀವು ಪ್ರಯತ್ನದ ಮೂಲಕ ಬೆಳೆಸಿಕೊಳ್ಳಬೇಕಾದೀತು.
ಕನ್ಯಾ ರಾಶಿ: ಇಂದು ನಿಮ್ಮ ಕಾರ್ಯತತ್ಪರತೆಯು ಇತರರಿಗೆ ಮಾದರಿಯಾದೀತು. ಯಾರಿಗೂ ತಪ್ಪು ಸಂದೇಶಗಳನ್ನು ಕೊಡುವುದು ಬೇಡ. ನಿಮ್ಮ ಸಂಸ್ಥೆಗೆ ಹೆಚ್ಚಿನ ಮನ್ನಣೆಯು ಸಿಗುವುದು. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಹರಿದು ಹೋದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನಿರುವುದು. ಪ್ರಾಣಿಗಳಿಂದ ಅಧಿಕ ಭಯವುಂಟಾಗಬಹುದು.
ತುಲಾ ರಾಶಿ: ಸೌಕರ್ಯಗಳು ನಿಮಗೆ ಮತ್ತೇನನ್ನೋ ಬಗೆಯಬಹುದು. ಸಾಮಾಜಿಕ ಕಾರ್ಯವು ನಿಮಗೆ ಉದ್ಯಮಕ್ಕೆ ಸಹಾಯವಾಗಬಹುದು. ಆರೋಗ್ಯದ ಸಮತೋಲನವನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಕೃತಜ್ಞತೆ ಭಾವವನ್ನು ಪ್ರಕಟಿಸುವಿರಿ. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಸಿಗದ ಹಣದ ಬಗ್ಗೆ ನಿಮಗೆ ಬೇಸರವಿರದು. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಕೆಲವರನ್ನು ನೀವು ನಂಬಬೇಕಾಗುತ್ತದೆ. ಪ್ರೀತಿಯಿಂದ ಗೆಲ್ಲುವುದು ನಿಮಗೆ ಶುಭಕರವಾಗಬಹುದು.
ವೃಶ್ಚಿಕ ರಾಶಿ: ಸೇವೆಯಲ್ಲಿ ಇಂದು ನೀವು ತೃಪ್ತಿ ಕಾಣುವಿರಿ. ಹಣದಲ್ಲಿ ಖರ್ಚಿನ ಭಾಗವೇ ಹೆಚ್ಚಿರಲಿದೆ. ಕುಟುಂಬದ ಆಸ್ತಿಗಾಗಿ ಮಾತುಕತೆಗಳು ತಾರಕ್ಕೆ ಹೋಗಬಹುದು. ಅಧಿಕಾರವು ಕ್ಷಣಿಕ ಎಂಬ ಭಾವವು ನಿಮ್ಮೊಳಗೆ ಇರಲಿ. ರಹಸ್ಯವನ್ನು ಭೇದಿಸುವ ಕುತೂಹಲ ಇರಲಿದೆ. ಗಣ್ಯರ ಜೊತೆ ಮಾತುಕತೆ ನಡೆಸುವಿರಿ. ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಸಂಗಾತಿಯ ಬಗ್ಗೆ ಆರೋಗ್ಯದ ಕಾಳಜಿ ತೋರಿಸುವಿರಿ. ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದೀತು. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು. ಭವಿಷ್ಯದ ಕಾರಣಕ್ಕೆ ಹಣವನ್ನು ಯಾರಿಗೂ ಹೇಳದೇ ಗೌಪ್ಯವಾಗಿ ಇಡುವಿರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ