Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಕನ್ಯಾ ರಾಶಿ ಮೇಲೆ ಏನು ಪ್ರಭಾವ?
ಈ ಸಂಚಾರದೊಂದಿಗೆ ಕನ್ಯಾ ರಾಶಿಯವರಿಗೆ ಏಳನೇ ಸ‌್ಥಾನಕ್ಕೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಇಷ್ಟು ಸಮಯ ಆರನೇ ಮನೆಯಲ್ಲಿನ ಶನಿ ಸಂಚಾರದ ಶುಭ ಫಲಗಳನ್ನು ಅನುಭವಿಸಿದ್ದ ಕನ್ಯಾ ರಾಶಿಯವರಿಗೆ ಇನ್ನು ಮುಂದೆ ಅಷ್ಟು ಶುಭ ಫಲಗಳು ದೊರೆಯುವುದಿಲ್ಲ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ.

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಕನ್ಯಾ ರಾಶಿಯವರಿಗೆ ಏಳನೇ ಸ‌್ಥಾನಕ್ಕೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಇಷ್ಟು ಸಮಯ ಆರನೇ ಮನೆಯಲ್ಲಿನ ಶನಿ ಸಂಚಾರದ ಶುಭ ಫಲಗಳನ್ನು ಅನುಭವಿಸಿದ್ದ ಕನ್ಯಾ ರಾಶಿಯವರಿಗೆ ಇನ್ನು ಮುಂದೆ ಅಷ್ಟು ಶುಭ ಫಲಗಳು ದೊರೆಯುವುದಿಲ್ಲ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಇದೀಗ ಕನ್ಯಾ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.
ನಿಮ್ಮ ರಾಶಿಗೆ ಸುತ- ಪೂರ್ವ ಪುಣ್ಯ ಸ್ಥಾನ ಹಾಗೂ ರಿಪು (ರೋಗ) ಸ್ಥಾನದ ಅಧಿಪತಿಯಾದ ಶನಿಯು ಏಳನೇ ಮನೆಯಲ್ಲಿ ಸಂಚರಿಸುತ್ತದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರು ಲೆಕ್ಕಪತ್ರ- ದಾಖಲಾತಿ ಇತ್ಯಾದಿ ವಿಚಾರಗಳಿಗೆ ಜಗಳ- ಕಲಹಗಳನ್ನು ಮಾಡಿಕೊಳ್ಳುತ್ತೀರಿ. ನಿಮಗೆ ಯಾರಾದರೂ ಸಹಾಯ ಮಾಡುವುದಾಗಿ ಮಾತು ನೀಡಿದರು ಎಂಬುದನ್ನೇ ನೆಚ್ಚಿಕೊಂಡು, ಮುಖ್ಯವಾದ ಕೆಲಸ- ಕಾರ್ಯಗಳನ್ನೆಲ್ಲ ಬದಿಗಿಟ್ಟು, ಇತರರನ್ನು ಅವಲಂಬಿಸಿದ ಕಾರ್ಯಗಳ ಮೇಲೆ ವಿಪರೀತ ಶ್ರಮ- ಹಣ ಹಾಕಿದಿರೋ ಆ ನಂತರ ಪರಿತಪಿಸುವಂತೆ ಆಗುತ್ತದೆ.
ನಿಮ್ಮಲ್ಲಿ ಯಾರು ಉದ್ಯೋಗ, ವ್ಯಾಸಂಗದ ಕಾರಣಕ್ಕೆ ವಿದೇಶಕ್ಕೆ ತೆರಳಬೇಕು ಎಂದುಕೊಂಡಿದ್ದೀರೋ ಅಂಥವರು ಬಹಳ ಜಾಗ್ರತೆಯಿಂದ ಇರಬೇಕು. ಏಕೆಂದರೆ ನಿಮಗೆ ಎಲ್ಲ ಅನುಕೂಲವನ್ನು ಮಾಡಿಕೊಡುವುದಾಗಿ ಭರವಸೆ ನೀಡಿ, ನಿಮ್ಮಿಂದ ಹಣವನ್ನೂ ಪಡೆದುಕೊಂಡ ನಂತರದಲ್ಲಿ ಮೋಸ ಮಾಡಿಬಿಡುವ ಅವಕಾಶಗಳು ಹೆಚ್ಚಿವೆ. ಇನ್ನು ಅದೇ ರೀತಿ ಆಲಸ್ಯದ ಕಾರಣಕ್ಕೋ ಅಥವಾ ಮಾಹಿತಿ ಕೊರತೆಯ ಕಾರಣಕ್ಕೋ ನೀವಾಗಿಯೇ ಕೈಯಾರೆ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇವೆ. ಇದರಲ್ಲಿ ಸಾಮಾನ್ಯ ವಿಚಾರ ಏನೆಂದರೆ ಅವಕಾಶಗಳನ್ನು ಕಳೆದುಕೊಳ್ಳುವುದಾಗಿದೆ.
ನಿಮ್ಮ ಕೈ ಸೇರದ ಹಣವನ್ನು ನೆಚ್ಚಿಕೊಂಡು ದೊಡ್ಡ ದೊಡ್ಡ ಸಾಹಸಕ್ಕೆ ಕೈ ಹಾಕುವುದಕ್ಕೆ ಹೋಗಬೇಡಿ. ಇನ್ನು ನಿಮ್ಮ ವ್ಯವಹಾರ- ವ್ಯಾಪಾರ, ಉದ್ಯಮದ ರಹಸ್ಯವನ್ನು ಬಿಟ್ಟುಕೊಡಬೇಡಿ. ವಿವಾಹಿತರಿಗೆ ಸಂಗಾತಿಯೊಂದಿಗೆ ಒಂದಲ್ಲ ಒಂದು ವಿಚಾರಕ್ಕೆ ಕಿರಿಕಿರಿ ಇರುತ್ತದೆ. ಮುಖ್ಯವಾಗಿ ಮಕ್ಕಳ ಭವಿಷ್ಯದ ವಿಚಾರಕ್ಕೆ ಹೆಚ್ಚು ಜಗಳ- ಕಲಹಗಳು ಆಗಲಿವೆ. ಇನ್ನು ನಿಮ್ಮ ಹಿತಶತ್ರುಗಳು ಯಾರು, ಕೆಲಸ- ಕಾರ್ಯಗಳಿಗೆ ಅಡೆ-ತಡೆ ಆಗುತ್ತಿರುವವು ಯಾರು ಎಂಬ ಬಗ್ಗೆ ನಿಮ್ಮ ಸಂಗಾತಿ ಎಚ್ಚರಿಕೆಯನ್ನು ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ಇದೇ ವಿಷಯಕ್ಕೆ ಸಹ ಅಭಿಪ್ರಾಯ ಭೇದ- ಮಾತು ಬಿಡುವ ತನಕ ಸನ್ನಿವೇಶ ಹೋಗಬಹುದು.
ಸುಲಭವಾದ ಪ್ರಚಾರ, ಜನಪ್ರಿಯತೆ ಸಿಗುತ್ತದೆ ಎಂಬುದರ ಬೆನ್ನು ಬೀಳಬೇಡಿ. ನಿಮ್ಮನ್ನು ಮುಂದೆ ಮಾಡಿಕೊಂಡು, ಸಮಸ್ಯೆಯಲ್ಲಿ ಸಿಲುಕಿಸಿ, ಬೇರೆಯವರು ತಾವು ಹಣ ಮಾಡಿಕೊಂಡು ಹೋಗಿಬಿಡುತ್ತಾರೆ. ನೀವು ಇಷ್ಟು ಸಮಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದ ವೈದ್ಯರು ಅಥವಾ ವೈದ್ಯಕೀಯ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತೀರಿ ಎಂದಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ನಿರ್ಧಾರ ಕೈಗೊಳ್ಳಿ.
-ಸ್ವಾತಿ ಎನ್.ಕೆ.




