Scorpio Yearly Horoscope 2024: ವೃಶ್ಚಿಕ ರಾಶಿ ವರ್ಷ ಭವಿಷ್ಯ; ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು ವಾರ್ಷಿಕ ಭವಿಷ್ಯ ಇಲ್ಲಿದೆ

ವೃಶ್ಚಿಕ ರಾಶಿ ವರ್ಷ ಭವಿಷ್ಯ 2024: ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮನ್ನು ನೀವು ಬಹಳ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯ.‌ ದುಡುಕುವ ಸಂದರ್ಭಗಳು ಹೆಚ್ಚು ಕಾಣಿಸುವುದು. ಸಾವಧಾನತೆಯನ್ನು ಇಟ್ಟುಕೊಳ್ಳುವುದು ನಿಮಗೆ ಸವಾಲಾಗಬಹುದು. ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು, ಅಧಿಕಾರದಲ್ಲಿ ಒತ್ತಡ, ಉದ್ಯೋಗದಲ್ಲಿ ಹಿನ್ನಡೆಗಳನ್ನು ಕಾಣುವಿರಿ.

Scorpio Yearly Horoscope 2024: ವೃಶ್ಚಿಕ ರಾಶಿ ವರ್ಷ ಭವಿಷ್ಯ; ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
Edited By:

Updated on: Dec 15, 2023 | 6:54 PM

ರಾಶಿಚಕ್ರದ ಎಂಟನೇ ರಾಶಿ ಇದಾಗಿದೆ. ರಾಶಿ ಅಧಿಪತಿಯು ಕುಜನು. ಗುರುವು ವರ್ಷಾರಂಭದಲ್ಲಿ ಷಷ್ಠದಲ್ಲಿ ಇರುವುದರಿಂದ ಗುರುಬಲವಿಲ್ಲ. ದೈವಾನುಗ್ರಹವೂ ಇಲ್ಲ.‌ ನಿಮ್ಮ ಆಗಬೇಕಾದ ಕಾರ್ಯಗಳೂ ಆಗದೇ ತೊಂದರೆಗೆ ಸಿಕ್ಕಿಕೊಳ್ಳುವಿರಿ. ಶನಿಯು ಚತುರ್ಥದಲ್ಲಿ ಇದ್ದು ಕುಟುಂಬ, ಮಿತ್ರರನ್ನು ಕಳೆದುಕೊಳ್ಳುವ ಅಥವಾ ವಿಯೋಗವನ್ನೂ ಕೊಡಿಸುವನು.

2024ರ ವೃಶ್ಚಿಕ ರಾಶಿಯ ಭವಿಷ್ಯ

ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮನ್ನು ನೀವು ಬಹಳ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯ.‌ ದುಡುಕುವ ಸಂದರ್ಭಗಳು ಹೆಚ್ಚು ಕಾಣಿಸುವುದು. ಸಾವಧಾನತೆಯನ್ನು ಇಟ್ಟುಕೊಳ್ಳುವುದು ನಿಮಗೆ ಸವಾಲಾಗಬಹುದು. ಅಪಮಾನ, ಧನನಷ್ಟ, ಸಂಬಂಧಗಳು ದೂರವಾಗುವುದು, ಅಧಿಕಾರದಲ್ಲಿ ಒತ್ತಡ, ಉದ್ಯೋಗದಲ್ಲಿ ಹಿನ್ನಡೆಗಳನ್ನು ಕಾಣುವಿರಿ.

ಧನಾಗಮನ :

ಸಂಪತ್ತನ್ನು ಕಳೆದುಕೊಂಡಿದ್ದ ನಿಮಗೆ ಮತ್ತೆ ಸಂಪತ್ತುಗಳು ಬಂದು ಸೇರಲಿವೆ. ಗುರುವು ಸಪ್ತಮಸ್ಥಾನಕ್ಕೆ ಬಂದ ಅನಂತರ ಆದಾಯವನ್ನು ಹೆಚ್ವಿಸಿ ನಿಮಗೆ ಸಂತೋಷವನ್ನು ಕೊಡುವನು.

ಪ್ರೀತಿ ಮತ್ತು ವಿವಾಹ :

ವಿವಾಹವನ್ನು ಮಾಡಿಕೊಳ್ಳಬೇಕು ಎನ್ನುವ ಮನಸ್ಸು ಇರುವವರಿಗೆ ಅವಕಾಶಗಳು ತಾನಾಗಿಯೇ ಕೂಡಿಬರುವುದು. ಉತ್ತಮ‌ಕುಲದ ಸ್ತ್ರೀಯ ಜೊತೆ ವಿವಾಹವು ಆಗಲಿದೆ. ಏಪ್ರಿಲ್ ನ ಅನಂತರ ನಿಮ್ಮ ಪ್ರೇಮವು ಇನ್ನಷ್ಟು ಗಟ್ಟಿಯಾಗುವುದು. ಮನೆಯಿಂದ ಅನುಮತಿಯೂ ಸಿಗುವುದು.

ವೃತ್ತಿ :

ವೃತ್ತಿಯು ಸಾಧಾರಣವಾಗಿ ಸಾಗುತ್ತಿದ್ದರೂ ಆಗಷ್ಟ್ ಮಾಸದ ಸಂದರ್ಭದಲ್ಲಿ ನಿಮ್ಮ ವೃತ್ತಿಯಲ್ಲಿ ಬದಲಾವಣೆ ಇರುವುದು.‌ ಸರ್ಕಾರೀ ಕಛೇರಿಯಲ್ಲಿ ಕೆಲಸ ಮಾಡುವವರಿಗೆ ಅಂದುಕೊಂಡಂತೆ ವರ್ಗಾವಣೆ, ಭಡ್ತಿ ಸಿಕ್ಕಿ ಸಂತೋಷಪಡುವಿರಿ.

ಆರೋಗ್ಯ ಸ್ಥಿತಿ :

ಮಾರ್ಚ್ ತಿಂಗಳ ಸಮಯದಲ್ಲಿ ನಿಮ್ಮ ಆರೋಗ್ಯ ಅಥವಾ ಮಕ್ಕಳ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸಗಳು ಆಗುವ ಸಾಧ್ಯತೆ ಇದೆ. ಹಣವನ್ನು ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ವರ್ಷದ ಕೊನೆಯಲ್ಲೂ ನೀವು ಆರೋಗ್ಯವು ಕೆಡಬಹುದು.

ಸುಬ್ರಹ್ಮಣ್ಯನ‌ ಆರಾಧನೆಯನ್ನು ಮಾಡಿ.‌ ಬರುವ ಕಷ್ಟಗಳನ್ನು ಎದುರಿಸಲು ಶಕ್ತಿಯನ್ನು ಕೊಡುವನು. ಕಷ್ಟದ ನಿವಾರಣೆಯ ಮಾರ್ಗವನ್ನೂ ತೋರಿಸುವನು.

ಲೋಹಿತ ಹೆಬ್ಬಾರ್, ಇಡುವಾಣಿ

Published On - 6:52 pm, Fri, 15 December 23

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us