Weekly Horoscope: ವಾರ ಭವಿಷ್ಯ: ವಾರಭವಿಷ್ಯ, ಸೆಪ್ಟೆಂಬರ್ 03 ರಿಂದ 09 ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ

ವಾರಭವಿಷ್ಯ: 2023ರ ಸೆಪ್ಟೆಂಬರ್ 03 ರಿಂದ 09 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರ ಭವಿಷ್ಯ: ವಾರಭವಿಷ್ಯ, ಸೆಪ್ಟೆಂಬರ್ 03 ರಿಂದ 09 ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ
ವಾರ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 1:45 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಸೆಪ್ಟೆಂಬರ್ 03 ರಿಂದ 09 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : ಇದು ಸಪ್ಟೆಂಬರ್ ತಿಂಗಳ ಮೊದಲ ವಾರವಾಗಿದ್ದು ನಿಮಗೆ ಶುಭಾಶುಭಫಲಗಳು ಮಿಶ್ರವಾಗಿ ಸಿಗಲಿವೆ. ತೃತೀಯ ಹಾಗೂ ಷಷ್ಠಾಧಿಪತಿಯಾದ ಬುಧನು ಪಂಚಮದಲ್ಲಿ ಇದ್ದಾನೆ. ಸಹೋದರನ ವಿದ್ಯಾಭ್ಯಾಸಕ್ಕೆ ಧನ ಸಹಾಯವನ್ನು ಮಾಡುವಿರಿ. ದಶಮಾಧಿಪತಿಯೂ ದ್ವಾದಶಾಧಿಪತಿಯೂ ಆದ ಬೃಹಸ್ಪತಿ ನಿಮ್ಮದೇ ರಾಶಿಯಲ್ಲಿ ಇರಲಿದ್ದು ಶಿಕ್ಷಣಕ್ಷೇತ್ರದಲ್ಲಿ ಉತ್ತಮ ಸಾಧನೆ ಇರಲಿದೆ. ದ್ವಿತೀಯಾಧಿಪತಿಯೂ ಸಪ್ತಮಾಧಿಪತಿಯೂ ಆಗಿರುವ ಶುಕ್ರನು ಚತುರ್ಥದಲ್ಲಿ ಇದ್ದು ಪತ್ನಿಯ ಕಡೆಯಿಂದ ನಿಮಗೆ ಸಹಾವಾಗುವಂತೆ ಮಾಡುವನು. ಸ್ವಸ್ಥಾನಾಧಿಪತಿಯೂ ಹಾಗೂ ಅಷ್ಟಮಾಧಿಪತಿಯೂ ಆದ ಕುಜನು ಷಷ್ಠದಲ್ಲಿ ಇರುವುದರಿಂದ ಶತ್ರುಗಳು ಇಲ್ಲವಾಗಿ, ನೆಮ್ಮದಿಯಿಂದ ಜೀವಿಸುವಂತೆ ಆಗುವುದು.

ವೃಷಭ ರಾಶಿ : ಈ ತಿಂಗಳ ಮೊದಲ ವಾರವು ಅಶುಭದ ವಾರವೆಂದೇ ಹೇಳಬಹುದು. ದ್ವಿತೀಯ ಹಾಗೂ ಪಂಚಮಾಧಿಪತಿಯಾದ ಬುಧನು ಚತುರ್ಥದಲ್ಲಿ ಇದ್ದು ಬಂಧುಗಳಿಂದ ಸೌಖ್ಯವನ್ನು ನೀಡುವನು. ಮಕ್ಕಳ ಓದಿಗೆ ಬಂಧುಗಳ ಸಹಕಾರವು ಸಿಗುವುದು.‌ ದ್ವಾದಶ ಹಾಗೂ ಸಪ್ತಮಾಧಿಪತಿಯಾದ ಕುಜನು ಪಂಚಮದಲ್ಲಿ ಪ್ರತಿಭೆಯ ಅನಾವರಣಕ್ಕೆ ಪೂರ್ಣ ಸಹಕಾರ ಸಿಗದು. ಸ್ವಸ್ಥಾನಾಧಿಪನೂ ಹಾಗೂ ಷಷ್ಠಾಧಿಪತಿಯೂ ಆದ ಶುಕ್ರನು ತೃತೀಯದಲ್ಲಿ ಇದ್ದಾನೆ. ಸಹೋದರಿಯ ನಡುವೆ ವಾಗ್ವಾದವು ಕೆಲವು ವಿಚಾರಕ್ಕೆ ಆಗಬಹುದು. ಅಷ್ಟಮ‌ ಹಾಗೂ ಏಕಾದಶಾಧಿಪತಿಯಾದ ಗುರುವು ದ್ವಾದಶದಲ್ಲಿ ರಾಹುಯುಕ್ತನಾಗಿದ್ದು ಗೌರವಾದಿಗಳ ಹರಣವನ್ನು ಮಾಡಿಸುವನು.

ಮಿಥುನ ರಾಶಿ : ಸಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಶುಭ ಫಲವು ಹೆಚ್ಚು ಇರಲಿದೆ. ಸ್ವಸ್ಥಾನ ಹಾಗೂ ಚತುರ್ಥಾಧಿಪತಿಯಾದ ಬುಧನು ತೃತೀಯದಲ್ಲಿದ್ದು ಬಂಧುಗಳ ಸಹಕಾರವು ನಿಮ್ಮ ಸಾಮರ್ಥ್ಯಕ್ಕೆ ಸಿಗಲಿದೆ. ದ್ವಾದಶಾಧಿಪತಿಯೂ ಹಾಗೂ ಪಂಚಮಾಧಿಪತಿಯೂ ಆಗಿರುವ ಶುಕ್ರನು ದ್ವಿತೀಯದಲ್ಲಿ ಇದ್ದು ನಿಮಗೆ ಕುಟುಂಬದಲ್ಲಿ ನೆಮ್ಮದಿ ಇರಲಿದ್ದು ಆರ್ಥಿಕವ್ಯಯವೂ ಆಗಲಿದೆ. ದಶಮಾಧಿಪತಿಯೂ ಸಪ್ತಪಾಧಿಪತಿಯೂ ಆಗಿರುವ ಗುರುವು ಏಕಾದಶಾಧಿಪತಿಯಾಗಿದ್ದು ವಿವಾಹಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿಮಗೆ ಜಯವಾಗುವುದು. ಏಕಾದಶ ಹಾಗೂ ಅಷ್ಟಮಾಧಿಪತಿಯಾದ ಕುಜನು ಚತುರ್ಥದಲ್ಲಿ ಇರುವುದಿಂದ ಮನೆಯಲ್ಲಿ ಕಲಹವಾಗಬಹುದು.

ಕರ್ಕ ರಾಶಿ : ಇದು ಸಪ್ಟೆಂಬರ್ ಮಾಸದ ಮೊದಲ ವಾರವು ಇದಾಗಿದ್ದು ಮಿಶ್ರಫಲವು ಇರಲಿದೆ. ದ್ವಿತೀಯಾಧಿಪತಿಯೂ ಆಗಿ ರವಿಯು ಸ್ವಕ್ಷೇತ್ರದಲ್ಲಿ ವಾಸಿಸುತ್ತಿದ್ದು ನಿಮಗೆ ಬರಬೇಕಾದ ಸಂಪತ್ತು ಸಿಗಲಿದೆ. ತಂದೆಯಿಂದ ಸುಖವು ಪ್ರಾಪ್ತವಾಗಬಹುದು. ತೃತೀಯಾಧಿಪತಿಯೂ ದ್ವಾದಶಾಧಿಪತಿಯೂ ಆಗಿರುವ ಬುಧನು ದ್ವಿತೀಯದಲ್ಲಿ ಇದ್ದು ಸಂಪತ್ತಿನ ಸಾಹಿತ್ಯಾಸಕ್ತರಿಗೆ ಲಾಭವಾಗಲಿದೆ. ನಿಮ್ಮ ಸ್ಥಾನದಲ್ಲಿ ಇರುವ ಶುಕ್ರನು ದೇಹವು ಲವಲವಿಕೆಯಿಂದ ಇರುವಂತೆ ಮಾಡುವನು. ಶನಿಯು ಅಷ್ಟಮದಲ್ಲಿ ಇದ್ದು ಮಾನಸಿಕ ಕಿರಿಕಿರಿಯು ಇರುವುದು. ಶಿವನ ಆರಾಧನೆಯಿಂದ ನಿಮಗೆ ಶುಭವಾಗಲಿದೆ.

ಸಿಂಹ ರಾಶಿ : ಈ ತಿಂಗಳ ಮೊದಲ ವಾರವು ಇದಾಗಿದ್ದು ಮಿಶ್ರಫಲವು ಇರಲಿದೆ‌. ದೇಹಾರೋಗ್ಯವು ಚೆನ್ನಾಗಿ ಇರಲಿದೆ. ದ್ವಿತೀಯದಲ್ಲಿ ಕುಜನು ಇದ್ದುದರಿಂದ ಮಾತಿನ ಮೇಲೆ ಹಿಡಿತ ಅವಶ್ಯಕ. ತೃತೀಯದಲ್ಲಿ ಕೇತುವು ನಿಮ್ಮ ಸಾಮರ್ಥ್ಯಕ್ಕೆ ಪುಷ್ಟಿಯನ್ನು ಕೊಡುವುದಿಲ್ಲ. ಅಷ್ಟಮದ ಶನಿಯು ನಿಮಗೆ ಮನಸ್ಸಿಗೆ ಹಾಸ್ಯವನ್ನು ಉಂಟುಮಾಡುವನು. ನವಮದ ಗುರುವು ನಿಮಗೆ ಗೌರವವನ್ನು, ದೇವರಲ್ಲಿ ಶ್ರದ್ಧೆಯು ಬರುವಂತೆ ನೋಡಿಕೊಳ್ಳುವನು. ದ್ವಾದಶದಲ್ಲಿ ಶುಕ್ರನಿದ್ದು ಕಲಾವಿದರೆ ನಷ್ಟವಾಗಬಹುದು. ಸ್ತ್ರೀವಿಷಯದಿಂದ ನಷ್ಟವೂ ಆಗುವ ಸಾಧ್ಯತೆ ಇದೆ.

ಕನ್ಯಾ ರಾಶಿ : ಈ ತಿಂಗಳು ಅಶುಭಫಲವೇ ಹೆಚ್ಚಿರುವಂತೆ ತೋರುತ್ತದೆ. ಅಷ್ಟಮದಲ್ಲಿ ಗುರುವುದು ರಾಹುಯುಕ್ತನಾಗಿದ್ದಾನೆ. ಆರೋಗ್ಯವು ಕೆಡುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಬಹುದು. ಶುಕ್ರನು ಏಕಾದಶದಲ್ಲಿ ಇದ್ದು ಸ್ವಲ್ಪ ಮಟ್ಟಿನ ಲಾಭವನ್ನು ನಿರೀಕ್ಷಿಸಬಹುದು. ನೀರಿಗೆ ಸಂಬಂಧಪಟ್ಟ ಉದ್ಯೋಗದಲ್ಲಿ ಲಾಭವು ಅಧಿಕವಾಗಿ ಇರುವುದು. ಒಂದು ಕಡೆ ಧನಾಗಮನವಾದರೆ ಮತ್ತೊಂದು ಕಡೆಯಿಂದ ಹಣವು ಹೋಗುವುದು. ಬಂಧುಗಳಿಗೆ ಸಹಾಯ ಮಾಡುವ ಸ್ಥಿತಿಯು ಬರಬಹುದು. ವಿಷ್ಣುವಿನ ಆರಾಧನೆಯನ್ನು ಮಾಡಿ.

ತುಲಾ ರಾಶಿ : ಸಪ್ಟೆಂಬರ್ ತಿಂಗಳು ನಿಮಗೆ ಹೆಚ್ಚು ಶುಭವಿದ್ದರೂ ಕೆಲವು ಗ್ರಹಗಳಿಂದ ಪ್ರತಿಕೂಲವೂ ಇರಲಿದೆ. ಕುಜನು ದ್ವಾದಶದಲ್ಲಿ ಇದ್ದುಕೊಂಡು ನಾನಾ‌ಪ್ರಕರವಾಗಿ ಧನವ್ಯಯವನ್ನು ಮಾಡಿಸುವನು. ಅನಗತ್ಯ ಖರ್ಚಿಗೆ ನಿಮಗೆ ಪ್ರೇರಣೆಯನ್ನು ಕೊಡಬಹುದು. ಸಪ್ತಮದಲ್ಲಿ ಗುರುವಿದ್ದು ಸಕಾರಾತ್ಮಕ ಚಿಂತನೆಯನ್ನು ಮಾಡಿದರೂ ರಾಹುವಿನಿಂದ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟವಾದೀತು. ದಶಮದಲ್ಲಿ ಶುಕ್ರನಿದ್ದು ಕಲಾವಿದರಾಗುವ ಕನಸನ್ನು ನನಸುಮಾಡಿಕೊಳ್ಳುವಿರಿ. ಸರ್ಕಾರದ ಉದ್ಯೋಗದಲ್ಲಿ ಇರುವವರಿಗೆ ಆಧಿಕಾರಪ್ರಾಪ್ತಿಯಾಗಬಹುದು.

ವೃಶ್ಚಿಕ ರಾಶಿ : ಸಪ್ಟೆಂಬರ್ ನ ಮೊದಲ ವಾರದಲ್ಲಿ ನಿಮಗೆ ಮಿಶ್ರಫಲವು ಇರಲಿದೆ. ಚತುರ್ಥದಲ್ಲಿ ಶನಿಯು ಇರುವ ಕಾರಣ ಬಂಧುಗಳು ನಿಮಗೆ ಅಸಹಕಾರವನ್ನು ತೋರಿಸಬಹುದು. ಅಷ್ಟಮದಲ್ಲಿ ರಾಹುವಿದ್ದು ಶತ್ರುಗಳು ಇಲ್ಲದಂತೆ ಮಾಡಿದರೂ ಮತ್ತೆ ಹುಟ್ಟಿಕೊಳ್ಳಬಹುದು. ಏಕಾದಶಕ್ಕೆ ಕುಜನು ಬಂದ ಕಾರಣ ತಂತ್ರಜ್ಞರಿಗೆ ವಿದೇಶ ಪ್ರವಾಸ, ಭಡ್ತಿ, ಅಧಿಕಾರಿಗಳ ಪ್ರಾಪ್ತಿಯೂ ಆಗುವುದು. ತಾಯಿಯ ಸೇವೆಯನ್ನು ಹೆಚ್ಚು ಮಾಡಲಿದ್ದೀರಿ. ಬುಧ ಹಾಗೂ ಸೂರ್ಯರು ಏಕಾದಶದಲ್ಲಿ ಸಾಮಾಜಿಕ ಕಾರ್ಯದಿಂದ‌ ಮನ್ನಣೆ ಸಿಗಬಹುದು. ನಿಮಗೆ ಕೆಲವು ಜವಾಬ್ದಾರಿಗಳೂ ಬರುವ ಸಾಧ್ಯತೆ ಇದೆ.

ಧನು ರಾಶಿ : ಈ ತಿಂಗಳ ಮೊದಲ ವಾರವು ಇದಾಗಿದ್ದು ಮಿಶ್ರ ಶುಭಪ್ರದವಾಗಿದೆ. ಗುರು ಹಾಗೂ ರಾಹುವಿನಿಂದ ನಿಮ್ಮ ಬುದ್ಧಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರಬಹುದು. ತೃತೀಯದಲ್ಲಿ ಶನಿಯು ಇರುವುದರಿಂದ ಸಹೋದರನ ನಡುವ ಸಣ್ಣ ಕಲಹಗಳು ಆಗಬಹುದು. ಅಷ್ಟಮದಲ್ಲಿ ಶುಕ್ರನು ಇರುವ ಕಾರಣ ಸಂಗಾತಿಯ ಆರೋಗ್ಯದ ಕೆಡಬಹುದು. ನವಮದಲ್ಲಿ ಸೂರ್ಯ ಹಾಗೂ ಬುಧರ ಕಾರಣ ಹಿರಿಯರಿಂದ ಭವಿಷ್ಯಕ್ಕೆ ಬಗ್ಗೆ ಮಾರ್ಗದರ್ಶನ ಸಿಗಲಿದೆ. ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿಯು ಹೆಚ್ಚಿರವುದು. ಬುದ್ಧಿಯ ತೀಕ್ಷ್ಣತೆ ಹೆಚ್ಚಿರಲಿದೆ. ದಶಮದಲ್ಲಿ ಕುಜನಿರುವ ಕಾರಣ ಭೂಸಂಬದ್ಧವಾದ ದ್ರವ್ಯಗಳಿಂದ ಆದಾಯವು ಸಿಗಬಹುದು. ಮಹಾಲಕ್ಷ್ಮಿಯ ಆರಾಧನೆಯನ್ನು ಮಾಡಿ.

ಮಕರ ರಾಶಿ : ಈ ತಿಂಗಳ ಮೊದಲ ವಾರದಲ್ಲಿ ಶುಭಾಶುಭಫಲವು ಎರಡೂ ಇರಲಿದೆ. ದ್ವಿತೀಯದಲ್ಲಿ ಶನಿ ಇರುವ ಕಾರಣ ಆರ್ಥಿಕತೆಯ ಮೇಲೆ‌ ದುಷ್ಪರಿಣಾಮವನ್ನು ಬೀರಲಿದೆ. ನೀವು ಸ್ವಾಭಿಮಾನದಿಂದ ಇರಲು ಇಚ್ಛಿಸುವಿರಿ. ಸಪ್ತಮದಲ್ಲಿ ಶುಕ್ರನು ನಿಮ್ಮ ವಿವಾಹವನ್ನು ಸುಗಮಗೊಳಿಸುವನು. ಅಷ್ಟಮದಲ್ಲಿ ಬುಧ ಹಾಗೂ ಸೂರ್ಯರು ನಿಮಗೆ ಬೌದ್ಧಿಕ‌ ವಿಚಾರದಲ್ಲಿ ಹಿನ್ನಡೆ ನೀಡಬಹುದು. ನವಮದಲ್ಲಿ ಇರುವ ಕುಜನು ಹಿರಿಯರಿಗೆ ಅಗೌರವವನ್ನು ತೋರಿಸುವನು. ದಶಮದಲ್ಲಿ ಕೇತುವಿದ್ದು ನೀಚ ಕಾರ್ಯಕ್ಕೆ ನಿಮ್ಮನ್ನು ಪ್ರೇರಿಸುವನು.

ಕುಂಭ ರಾಶಿ : ಈ ವಾರವು ದೇಹಾಲಸ್ಯದಿಂದ‌ ಇರುವಿರಿ. ಯಾವದೇ ಕಾರ್ಯದಲ್ಲಿ ಆಸಕ್ತಿಯು ಕಡಿಮೆ ಇರುವುದು. ಸಹೋದರನ ಜೊತೆ ಕಲಹವಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಬಂಧುಗಳ ಕಡೆಯಿಂದ ನಿಮಗೆ ವಿವಾಹವು ಆಗಬಹುದು. ತಂದೆಯ‌ ಸಹಕಾರವೂ ಇರಲಿದೆ. ಸರ್ಕಾರಿ ವಿಚಾರದಲ್ಲಿ ನಿಮ್ಮ ಕೆಲಸವು ಆಗುವುದು. ರೋಗಬಾಧೆಯು ಕಡಿಮೆ‌ ಆಗುವುದು. ಉದ್ಯೋಗವು ಯಥಾ ಸ್ಥಿತಿಯಲ್ಲಿ ನಡೆಯುವುದು. ದುರ್ಗಾದೇವಿಯ ಅನುಗ್ರಹದಿಂದ ನಿಮ್ಮ ಮನಃಕಾಮನೆಗಳು ಪೂರ್ಣವಾಗುವುದು.

ಮೀನ ರಾಶಿ : ಮೊದಲ ವಾರದಲ್ಲಿ ಅಶುಭವೇ ಹೆಚ್ಚು ಇರಲಿದೆ‌. ಬರಬೇಕಾದ ಸಂಪತ್ತು ನಿಮಗೆ ಸಿಗದೇ ಕನ್ನಡಿಯ ಗಂಟಿನಂತೆ‌‌ ಆಗುವುದು. ಬಂದ ಹಣವೂ ಖರ್ಚಿನ ರಹದಾರಿಯಲ್ಲಿ ಹೋಗುವುದು. ಹೆಣ್ಣು ಮಕ್ಕಳಿಂದ ಸಂತೋಷವನ್ನು ನೀವು ಪಡೆಯುವಿರಿ. ಹಿತಶತ್ರುಗಳ‌ ಬಾಧೆಯ ಬಹಳ ಇರಲಿದ್ದು ನೆಮ್ಮದಿಯೂ ಇರದಾಗಿದೆ. ವಿವಾಹವನ್ನು ಮುಂದೂಡಬೇಕಾದ ಸ್ಥಿತಿಯು ಬರಬಹುದು. ಆತ್ಮವಿಶ್ವಾಸದ ಕೊರತೆಯು ಅತಿಯಾಗಿ ಇರುವುದು. ಕುಲದೇವರ ಉಪಾಸನೆಯನ್ನು ಮಾಡುವುದು ಉತ್ತಮ.

-ಲೋಹಿತಶರ್ಮಾ 8762924271 (what’s app only)

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ