Weekly Horoscope: ವಾರ ಭವಿಷ್ಯ; ವಾರಭವಿಷ್ಯ, ಸೆಪ್ಟೆಂಬರ್ 17 ರಿಂದ 23 ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 17, 2023 | 12:10 AM

ವಾರಭವಿಷ್ಯ: 2023ರ ಸೆಪ್ಟೆಂಬರ್ 17 ರಿಂದ 23 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರ ಭವಿಷ್ಯ; ವಾರಭವಿಷ್ಯ, ಸೆಪ್ಟೆಂಬರ್ 17 ರಿಂದ 23 ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಸೆಪ್ಟೆಂಬರ್ 17 ರಿಂದ 23 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : ಸಪ್ಟೆಂಬರ್ ತಿಂಗಳ ಮೂರನೇ ವಾರವು ಇದಾಗಿದ್ದು ಮಧ್ಯಮ‌ಫಲವು ಇರಲಿದೆ. ಸೂರ್ಯನು ವಾರಾಂತ್ಯದಲ್ಲಿ ತುಲಾ ರಾಶಿಗೆ ಬರಲಿದ್ದು, ಅದು ಸಪ್ತಮಸ್ಥಾನವಾಗಲಿದೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ಅಗತ್ಯ. ಈ ವಾರವು ಕೆಲವು ಸಂಗತಿಗಳು ನಿಮಗೆ ಅನಿರೀಕ್ಷಿತವಾಗಿ ಎದುರಾಗಬಹುದು. ಅದನ್ನು ನೀವು ಸ್ವೀಕರಿಸಲೇಬೇಕಾದೀತು. ಈ ವಾರ ನಿಮ್ಮ ಪ್ರೇಮವನ್ನು ಭೇಟಿಯಾಗುವಿರಿ. ಈ ವಾರ ನೀವು ರೋಮಾಂಚಕಾರಿ ಪ್ರಯಾಣವನ್ನು ಮಾಡಲಿದ್ದೀರಿ. ಇತರರ ಜೊತೆ ಉತ್ತಮ ಸಂಬಂಧವನ್ನು ಪಡೆದುಕೊಳ್ಳಿ. ವಾರದ ಮಧ್ಯದಲ್ಲಿ ಆತ್ಮೀಯರ ಜೊತೆ ಭೋಜನಕೂಟದಲ್ಲಿ ಭಾಗಿಯಾಗುವಿರಿ.

ವೃಷಭ ರಾಶಿ : ಇದು ಸಪ್ಟೆಂಬರ್ ಮಾಸದ ಮೂರನೇ ವಾರವಾಗಿದ್ದು ಸೂರ್ಯನು ಷಷ್ಠಸ್ಥಾನಕ್ಕೆ ಹೋಗಲಿದ್ದಾನೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಅಗತ್ಯ. ತೃತೀಯದಲ್ಲಿ ಶುಕ್ರನಿರುವ ಕಾರಣ ಸಹೋದರಿಯ ಸಹಾಯವು ನಿಮಗೆ ಪ್ರಾಪ್ತವಾಗಬಹುದು. ‌ನಿಮ್ಮ ತೊಂದರೆಗೆ ಅವರು ಸಹಕರಿಸುವರು. ಉತ್ತಮ ಫಲಿತಾಂಶದ ವಿದ್ಯಾರ್ಥಿಗಳಿಗೆ ಪುರಸ್ಕಾರಗಳು ಸಿಗುವುದು. ನಿಮ್ಮ ಜ್ಞಾನವು ಸಾಮಾನ್ಯವಾಗಿ ತೋರಬಹುದು. ದಶಮದಲ್ಲಿ ಶನಿ ಇರುವ ಕಾರಣ ವೃತ್ತಿಯಲ್ಲಿ ಅನಾಸಕ್ತಿ ಇರುವುದು. ಯಾವುದಕ್ಕೂ ಆಸಕ್ತಿಯು ಇರದೇ ನಿರುತ್ಸಾಹದಿಂದ ಎಲ್ಲವನ್ನೂ ಮಾಡುವಿರಿ.

ಮಿಥುನ ರಾಶಿ : ಈ ವಾರದಲ್ಲಿ ಗ್ರಹಗಳು ಸ್ವಲ್ಪಮಟ್ಟಿನ ಪ್ರತಿಕೂಲವನ್ನು ಮಾಡುವರು. ಪಂಚಮಕ್ಕೆ ಹೋಗು ಸೂರ್ಯನು ಮಕ್ಕಳ ಆರೋಗ್ಯದ ವಿಚಾರದಲ್ಲಿ ತೊಂದರೆ ಮಾಡುವನು. ಬರಬೇಕಾದ ಹಣವು ತಾನಾಗಿಯೇ ಬರುವುದು. ಕಲಾವಿದರು ಪ್ರಸಿದ್ಧಿಯನ್ನು ಪಡೆಯುವರು. ಹೊಸ ಉದ್ಯಮಕ್ಕೆ ಮಾನಸಿಕ ತಯಾರಿಯನ್ನು ಮಾಡಿಕೊಳ್ಳುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆಯು ಬರಬಹುದು. ಏಕಾದಶದ ಗುರುಬು ನಿಮ್ಮ ಎಲ್ಲ ಕಾರ್ಯಗಳಿಗೂ ಬಲವನ್ನು ಕೊಡುವನು. ಸೂರ್ಯನ ಆರಾಧನೆಯಿಂದ ಆರೋಗ್ಯವು ಲಭಿಸುವುದು.

ಕರ್ಕ ರಾಶಿ : ಈ ವಾರ ತಿಂಗಳ ಮೂರನೇ ವಾರವಾಗಿದ್ದು ಅಷ್ಟಮದ ಶನಿಯು ನಿಮ್ಮ ಅನಾರೋಗ್ಯವನ್ನು ಕಡಿಮೆ ಮಾಡುವವನಾದರೂ ಮಾನಸಿಕ ಕಿರಿಕಿರಿಯು ಇರಲಿದೆ‌. ಸೂರ್ಯನು ತುಲಾ ರಾಶಿಗೆ ಬರುವ ಕಾರಣ ಕುಟುಂಬದ ವೈಮನಸ್ಯ, ಅನಾರೋಗ್ಯವು ಇರುವುದು. ತೃತೀಯದಲ್ಲಿ ಕುಜನಿದ್ದು ನಿಮ್ಮ ಸಾಮರ್ಥಕ್ಕೆ ಪುಷ್ಟಿ ಸಿಗುವುದು. ಕವಿಗಳಿಗೆ, ಸಾಹಿತಿಗಳಿಗೆ ಹೆಚ್ಚು ಶುಭವಿರಲಿದ್ದು ಯಶಸ್ಸನ್ನು ಗಳಿಸುವರು. ದಶಮದಲ್ಲಿ ಇರುವ ಗುರುವು ಉದ್ಯೋಗದಲ್ಲಿ ಸಮಸ್ಯೆಯನ್ನು ಕೊಡಬಹುದು. ಶಿವಸ್ತೋತ್ರವನ್ನು ಸೋಮವಾರದಂದು ಪಠಿಸಿ.

ಸಿಂಹ ರಾಶಿ : ಈ ವಾರವು ಸಹಕಾರದಿಂದ ಎಲ್ಲ ಸಾಮರ್ಥ್ಯವನ್ನು ಏಕೀಕರಿಸಿದರೂ ಪೂರ್ಣಫಲವು ಸಿಗುವುದು ಕಷ್ಟವಾಗಬಹುದು. ನಿಮ್ಮ ಸಾಮರ್ಥ್ಯವು ಅಪ್ರಕಾಶಮಾನವಾಗಬಹುದು. ಸಭೆ ಸಮಾರಂಭಗಳಿಗೆ ಈ ವಾರ ಹೆಚ್ಚು ತೆರಳುವಿರಿ. ಪತಿಯ ಕಡೆಯಿಂದ ನಿಮಗೆ ಸಹಕಾರವು ಸಿಗಲಿದ್ದು ಸಿಟ್ಟು ಮಾಡಿಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳ ಜೊತೆ ಒಡನಾಟು ಇರುವುದು. ವಾಹನದಿಂದ ಈ ವಾರ ತೊಂದರೆಯಾಗಬಹುದು. ಧಾರ್ಮಿಕ ಆಚರಣೆಯಿಂದ ಮನಸ್ಸು ಶಾಂತಿಯನ್ನು ಹೊಂದಬಹುದು. ಭೂಮಿಯ ವ್ಯವಹಾರದಿಂದ ಲಾಭವು ಸಿಗಲಿದೆ.

ಕನ್ಯಾ ರಾಶಿ : ಈ ವಾರವು ನಿಮಗೆ ಸಾಮಾನ್ಯ ವಾರವಾಗಿ ಇರಲಿದೆ. ಶನಿಯು ಅಷ್ಟಮದಲ್ಲಿ ಇದ್ದು ಆರೋಗ್ಯದ ಸಮಸ್ಯೆಯನ್ನು ನಿವಾರಿಸಿದರೂ ಅಷ್ಟಮದಲ್ಲಿ ಇರುವ ಗುರು ಹಾಗೂ ರಾಹುಗಳ ಸಮಾಗಮದಿಂದ ನಿಮಗೆ ನಾನಾ ಪ್ರಕಾರದ ತೊಂದರೆ ಆಗಬಹುದು. ನಿಮ್ಮ ಗುರಿಯನ್ನು ಸಾಕಾರಗೊಳಿಸಿಸಲು ಹೊಸ ವೃತ್ತಿಯನ್ನು ಅವಲಂಬಿಸುವಿರಿ. ಹೊರಗೆ ನಿಮ್ಮ ಬಗ್ಗೆ ಏನೇ ನಕಾರಾತ್ಮಕ ಮಾತುಗಳು ಕೇಳಿಬಂದರೂ ಹತಾಶರಾಗದೇ ಮನೋಬಲವನ್ನು ಗಟ್ಟಿಯಾಗಿಸಿಕೊಳ್ಳುವಿರಿ. ಒಂದು ಕಡೆ ಅದೃಷ್ಟವು ಇದ್ದರೂ ಅದನ್ನು ಅನುಭವಿಸುವ ಸ್ಥಿತಿ ಇಲ್ಲವಾಗುವುದು. ರಾಶ್ಯಧಿಪತಿಯೂ ದ್ವಾದಶದಲ್ಲಿ ಇದ್ದು ಬಂಧುಗಳ ಸಹಕಾರವನ್ನು ತಿಳಿಸುವುದು. ಮಹಾವಿಷ್ಣುವಿನ ಆರಾಧನೆ ಅತ್ಯಗತ್ಯ.

ತುಲಾ ರಾಶಿ : ಸೂರ್ಯನ ಸಂಕ್ರಮಣವು ಈ ರಾಶಿಗೇ ಆಗಲಿದ್ದು ದೇಹಾರೋಗ್ಯ ಕುಗ್ಗುವುದು. ಜೊತೆಯಲ್ಲಿ ಕೇತುವೂ ಇರುವ ಕಾರಣ ನೋವುಗಳೂ ಆಗಬಹುದು. ಗುರುಕೃಪೆಯನ್ನು ಪಡೆದುಕೊಳ್ಳುವ ಅಗ್ಯವಿದೆ. ಪ್ರೇಯಸಿಯ ಜೊತೆ ದೂರದ ಊರಿಗೆ ಪ್ರಯಾಣವನ್ನು ಮಾಡುವಿರಿ. ಬಂಧುಗಳ ವ್ಯವಸ್ಥೆಯು ನಿಮಗೆ ಅಸಮಾಧಾನವನ್ನು ಉಂಟುಮಾಡುವುದು. ಉತ್ತಮ ಸಮಯದ ಆಗಮನಕ್ಕೆ ನೀವು ಭರವಸೆಯನ್ನು ಹಿರಿಯರಿಂದ ಪಡೆಯುವಿರಿ. ಭೂ ವ್ಯವಹಾರವೂ ನಿಮಗೆ ಲಾಭದಾಯಕವಾಗದು. ಪ್ರೇಮದಲ್ಲಿ ವೈಮನಸ್ಯವು ಬರಬಹುದು. ಶಿವಾರಾಧನೆಯನ್ನು ಸೋಮವಾರದಂದು ವಿಶೇಷವಾಗಿ ಮಾಡಿ.

ವೃಶ್ಚಿಕ ರಾಶಿ : ಈ ತಿಂಗಳ ಮೂರನೇ ವಾರವು ಅಶುಭ ಪ್ರದವಾದುದಾಗಿದೆ. ಸೂರ್ಯನು ದ್ವಾದಶಕ್ಕೆ ಅದರಲ್ಲೂ ನೀಚ ಸ್ಥಾನಕ್ಕೆ ಬರಲಿದ್ದು ಜೀವನವು ಸಾಕೋ ಸಾಕು ಎನಿಸುವಷ್ಟು ಆಗಲಿದೆ. ಆರೋಗ್ಯದ ಸ್ಥಿತಿಯು ಇನ್ನಿಲ್ಲದಂತೆ ಹದಗೆಡಬಹುದು. ಈ ವಾರ ಅನಿರೀಕ್ಷಿತವಾಗಿ ಭೇಟಿಯಾದ ಆಪ್ತ ಸ್ನೇಹಿರಿಂದ ನೆನಪು ಇಂದು ಸ್ವಲ್ಪ ಸಮಯ ಕಾಡುವುದು. ಇ ವಾರ ಹಳೆಯ ಘಟನೆಗಳು ನಿಮ್ಮ ಮನಸ್ಸನ್ನು ವಿಚಲಿತ ಗೊಳಿಸುವುವು. ಔದ್ಯೋಗಿಕ ಸಮಸ್ಯೆಯು ನಿಮ್ಮನ್ನು ಮತ್ತಷ್ಟು ಕುಗ್ಗಿಸಬಹುದು. ಸಂಗಾತಿಯ ಅವಲಂಬನೆಯನ್ನು ನೀವು ಈ ವಾರ ಮಾಡುವಿರಿ. ಆದಿತ್ಯಹೃದಯ ಸ್ತೋತ್ರವನ್ನು ಪಠಣ ಮಾಡುವುದರಿಂದ ಆರೋಗ್ಯದ ವೃದ್ಧಿಯಾಗಲಿದೆ.

ಧನು ರಾಶಿ : ಸಪ್ಟೆಂಬರ್ ತಿಂಗಳ ಮೂರನೇ ವಾರ ಗ್ರಹಗತಿಗಳ ಸಣ್ಣ ಬದಲಾವಣೆಯಾಗಲಿದ್ದು ನಿಮ್ಮ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟುಮಾಡಬಹುದು. ವಿಶೇಷವಾಗಿ ರವಿಯು ಏಕಾದಶ ಸ್ಥಾನಕ್ಕೆ ಬರಲಿದ್ದು ಸರ್ಕಾರದಿಂದ ಬರುವ ಸಂಪತ್ತಿನಲ್ಲಿ ತೊಂದರೆ ಆಗಬಹುದು. ಸಂಗಾತಿ ಕಡೆಯವರಿಂದ ನಿಮಗೆ ಸಹಕಾರವು ಸಿಗಬಹುದು. ಪರಿಚಿತ ವ್ಯಕ್ತಿ ಅಥವಾ ಸ್ನೇಹಿತರ ಜೊತೆ ಕಾರ್ಯದ ನಿಮಿತ್ತ ಓಡಾಟ ಮಾಡುವಿರಿ. ಈ ವಾರ ಉತ್ತಮ ಸಮಯವನ್ನು ಕಳೆಯುವಿರಿ. ಸಂಗಾತಿಯ ಜೊತೆ ಸ್ವಲ್ಪ ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿಯು ಇಬ್ಬರಲ್ಲಿಯೂ ಇರುವುದು.

ಮಕರ ರಾಶಿ : ಈ ವಾರ ಕೆಲವು ಅನಿರೀಕ್ಷಿತ ಬದಲಾವಣೆಯನ್ನು ಕಾಣಬಹುದಾಗಿದೆ. ಸಪ್ತಮದಲ್ಲಿ ಶುಕ್ರನು ಸ್ಥಿತನಾಗಿದ್ದು ಮಂಗಲ ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ಮಾಡುವನು. ಸೂರ್ಯನು ವಾರಾಂತ್ಯದಲ್ಲಿ ದಶಮ ಸ್ಥಾನಕ್ಕೆ ಬರಲಿದ್ದು ವೃತ್ತಿಯಲ್ಲಿ ಅಡೆತಡೆಗಳು ಕಾಣಿಸುವುದು. ಈ ವಾರ ಹೆಚ್ಚು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಿ. ಸಂಗಾತಿಯ ಜೊತೆ ಪ್ರಯಾಣ, ಬಂಧುಗಳ ಭೇಟಿಗಳನ್ನು‌ಮಾಡಲಿದ್ದೀರಿ. ನಿಮ್ಮ ಆಸಕ್ತಿಗೆ ಪೂರಕವಾದ ಯೋಜನೆಯು ಪ್ರಗತಿಯನ್ನು ಕಾಣುವುದು. ಹೊಸ ಸ್ನೇಹಿತರನ್ನು ಜೀವನಕ್ಕೆ ಬರಲಿದ್ದಾರೆ. ಸಾಧನೆಗೆ ಬೇಕಾದ ವಾತಾವರಣವು ಸೃಷ್ಟಿಯಾಗಬಹುದು.

ಕುಂಭ ರಾಶಿ : ಕಂಡರೂ ಕೈಗೆ ಸಿಗದ ಸ್ಥಿತಿಯು ಈ ವಾರ ಇರಲಿದೆ. ಅಶುಭವೇ ಈ ವಾರ ಹೆಚ್ಚು ಇರಲಿದೆ. ಸೂರ್ಯನ‌ಸಂವಾರದಿಂದ ಸ್ವ ಅನುಕೂಲ‌ ಎಂದು ತಿಳಿದರೂ ನೀಚಸ್ಥಾನದಲ್ಲಿ ಇರುವ ಕಾರಣ ಕಷ್ಡವಾದೀತು. ಈ ವಾರ ಸ್ನೇಹಿತರ ಸಹಾಯದಿಂದ ನಿಮ್ಮ ಕಲೆಗೆ ದೂರದ ಊರಿನಿಂದ ಆಹ್ವಾನ ಬರಬಹುದು. ಈ ವಾರದಲ್ಲಿ ಆದಷ್ಟು ಓಡಾಟವನ್ನು ಕಡಿಮೆ‌ ಮಾಡಿ. ತೀರ್ಥಕ್ಷೇತ್ರಗಳ‌ ದರ್ಶನವನ್ನು ಪಡೆಯುವಿರಿ. ಒತ್ತಡದಿಂದ ಈ ವಾರ ಮಧ್ಯದಲ್ಲಿದಲ್ಲಿಯೇ ವಿರಾಮವನ್ನು ಪಡೆಯುವಿರಿ.

ಮೀನ ರಾಶಿ : ಈ ತಿಂಗಳ ಮೂರನೆಯ ವಾರ ಶುಭವು ಕಡಿಮೆ‌ ಇರಲಿದೆ. ವಾರದ ಅಂತ್ಯದಲ್ಲಿ ಸೂರ್ಯನು ಅಷ್ಟಮಸ್ಥಾನಕ್ಕೆ ಬರಲಿದ್ದಾನೆ. ಇದು ಸೂರ್ಯನ ನೀಚಸ್ಥಾನವಾದ ಕಾರಣ ಆರೋಗ್ಯದ ಮೇಲೆ ಹೆಚ್ಚು ಗಮನ ಅಗತ್ಯ. ಈ ವಾರ ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ನಿಮಗೆ ಈ ವಾರ ಸೌಂದರ್ಯ ಪ್ರಜ್ಞೆ ಹೆಚ್ಚಿರುವುದು. ನಿಮ್ಮ ಆಸಕ್ತಿಯು ಉತ್ತಮ‌ ವಿಚಾರದಲ್ಲಿ ಇರಲಿದೆ. ಈ ವಾರ ಹೆಚ್ಚು ವಾಕ್‌ ಸಂಘರ್ಷಗಳು ಹೆಚ್ಚು ಇರುವುದು. ವಿಲಾಸಿ ಜೀವನಕ್ಕೆ ಹೆಚ್ಚು ಒತ್ತನ್ನು ಕೊಡುವಿರಿ.

ಲೋಹಿತಶರ್ಮಾ -8762924271 (what’s app only)