Horoscope: ರಾಶಿಭವಿಷ್ಯ, ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ತುಂಬಾ ಮೋಜಿನಿಂದ ಇರುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ತುಂಬಾ ಮೋಜಿನಿಂದ ಇರುವಿರಿ
ಪ್ರಾತಿನಿಧಿಕ ಚಿತ್ರ
Follow us
| Edited By: Kiran Hanumant Madar

Updated on: Sep 17, 2023 | 12:20 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧ್ರುವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:49 ರಿಂದ 09:26 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:02 ರಿಂದ 12:38ರವರೆಗೆ, ಗುಳಿಕ ಕಾಲ ಸಂಜೆ 14:15 ರಿಂದ 03:51ರ ವರೆಗೆ.

ಸಿಂಹ ರಾಶಿ : ಬಿಡುವಿಲ್ಲದ ಕೆಲಸದ ನಡುವೆ ಸಿಕ್ಕ ವಿರಾಮವು ಬಹಳ ಆನಂದವನ್ನು ಕೊಡುವುದು. ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ತುಂಬಾ ಮೋಜಿನಿಂದ ಇರುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರುವುದು. ಆರ್ಥಿಕತೆಯಿಂದ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ದುಡಿಯುವವು ತಮ್ಮ ಶ್ರಮಕ್ಕೆ ಉಚಿತ ಫಲಿತಾಂಶವನ್ನು ನಿರೀಕ್ಷಿಸುವರು. ನಿಮ್ಮ ಆಸೆಯನ್ನು ಇನ್ನೊಬ್ಬರ ಎದುರು ಪ್ರಕಟಪಡಿಸಲು ಮುಜುಗರ ಆಗಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ದ್ವೇಷದಿಂದ ನಿಮ್ಮ ಜೀವನವು ನ್ನು ಮಾರ್ಗಭ್ರಷ್ಟವಾಗಬಹುದು. ಧನಾತ್ಮಕ ಚಿಂತನೆಯಿಂದ ಕಳೆದುಕೊಂಡ ಉತ್ಸಾಹವು ಬರುವುದು. ಪ್ರಭಾವೀ ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ. ಭೂಮಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡಿನಿಂದ ಅನುಕೂಲವಾಗಲಿದೆ.

ಕನ್ಯಾ ರಾಶಿ : ಇಂದು ನೀವು ಹೆಚ್ಚಿನ ಗೌರವವು ಸಿಗಲಿ ಎಂಬ ನಿರೀಕ್ಷೆಯು ಇರಲಿದೆ. ಇದರಿಂದ ನಿರಾಸೆಯೂ ಆಗಿ ಮನಸ್ಸನಲ್ಲಿಯೇ ಸಂಕಟಪಡುವಿರಿ. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ವ್ಯಾಪಾರಸ್ಥರಾದ ನೀವು ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವಿರಿ. ಮಗುವಿನ ಆರೋಗ್ಯದ ಚಿಂತೆ ಇಂದು ಕಾಡಬಹುದು. ನಿಮ್ಮ ಆರೋಗ್ಯವೂ ವ್ಯತ್ಯಾಸವಾಗಿದ್ದು ಶೀತ, ಜ್ವರ, ಕೆಮ್ಮು ಮುಂತಾದವುಗಳಿಂದ ಬಾಧೆಪಡುವಿರಿ. ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಇತರರ ಬೆಂಬಲವು ನಿಮಗೆ ಕಡಿಮೆ ಆಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು. ಪ್ರಯತ್ನವು ಫಲಿಸುವ ತನಕ ಸಹನೆ ಅತ್ಯವಶ್ಯಕ. ನಡೆದಾಡುವಾಗ ಜಾಗರೂಕತೆ ಬೇಕು.

ತುಲಾ ರಾಶಿ : ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿಯು ಕಂಡುಬರುವುದು. ಹಣವನ್ನು ಕ್ರಮಬದ್ಧವಾಗಿ ಬಳಸಿಕೊಳ್ಳಿ. ಇಂದಿನ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಮನೆಯಲ್ಲಿ ಸಂತೋಷದ ವಾತಾವರಣವನ್ನು ನೀವೇ ಸೃಷ್ಟಿಸುವಿರಿ. ಬಂಧುಗಳು ನಿಮ್ಮ ಸಹಾಯವನ್ನು ಕೇಳಿ ಬರಬಹುದು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡುವುದು ಒಳ್ಳೆಯದು. ವಿಳಂಬವಾದರೂ ಮಾರ್ಗ ಸರಿಯಾಗಿರಲಿದೆ. ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವರು. ಬೆನ್ನಿನ ನೋವು ಮತ್ತೆ ಕಾಣಿಕೊಂಡು ಸಂಕಟಪಡುವಿರಿ. ಇಂದಿನ ಕಾರ್ಯವು ಪೂರ್ಣವಾಗುವ ತನಕ ನಿಮಗೆ ಮಾನಸಿಕ ವಿಶ್ರಾಂತಿಯು ಇರದು. ನಿಮ್ಮ ಮಾತು ವಿವಾದವನ್ನು ಹುಟ್ಟುಹಾಕಬಹುದು. ನಿತ್ಯ ಬಳಕೆಯ ವಸ್ತುವಿನ ವ್ಯಾಪಾರದಿಂದ ಲಾಭ ಗಳಿಸುವಿರಿ. ಸಂಗಾತಿಯ ಬಯಕೆಯನ್ನು ಪೂರ್ಣವಾಗಿ ಈಡೇರಿಸಲಾರಿರಿ. ನಿಮ್ಮ ಬೆಳವಣಿಗೆಯನ್ನು ಆಪ್ತ ಬಂಧುಗಳು ಕಂಡು ಇಷ್ಟಪಡುವರು.

ವೃಶ್ಚಿಕ ರಾಶಿ : ಪ್ರೇಮಿಗಳು ಇಂದು ಸ್ವತಂತ್ರವಾಗಿ ಇರಲು ಬಯಸುವರು. ವಿವಾಹಿತರ ಜೀವನವೂ ಕೂಡ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿದ್ದು ಹತಾಶೆಯು ಕಾಡಬಹುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಅದನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಿ. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನಬೇಕು. ವ್ಯಾಪಾರಸ್ಥರಿಗೆ ಮಿಶ್ರ ಲಾಭವಿದೆ. ನಿಮಗೆ ಇಂದು ಕಾರ್ಯದಲ್ಲಿ ಅನಿರೀಕ್ಷಿತ ಜಯವಿರಲಿದೆ. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆ ಇರುವುದು. ಯುಕ್ತಿಯಿಂದ ಕೆಲಸವನ್ನು ಸಾಧಿಸಿದ ಎಲ್ಲವೂ ಕ್ಷೇಮ. ನಿಮ್ಮ ನಡವಳಿಕೆಯು ಕೆಲವರಿಗೆ ಇಷ್ಟವಾಗದೇ ಇರಬಹುದು. ಯೋಗ ಹಾಗೂ ಧ್ಯಾನವನ್ನು ಮಾಡಿ ಮನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಿ.‌ ನಿಮ್ಮವರ ಕೆಲವು ಸ್ವಭಾವವು ನಿಮಗೆ ಮೆಚ್ಚುಗೆಯಾಗದು.

ತಾಜಾ ಸುದ್ದಿ
ಕಾಂಗ್ರೆಸ್​​ ಸರ್ಕಾರ ಪತನದ ಭವಿಷ್ಯ ನುಡಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್
ಕಾಂಗ್ರೆಸ್​​ ಸರ್ಕಾರ ಪತನದ ಭವಿಷ್ಯ ನುಡಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್