Astrology: ಕರ್ತವ್ಯ ನಿಷ್ಠೆ, ಹಿರಿಯರ ದಿನವನ್ನ ಶ್ರದ್ಧೆಯಿಂದ ಮಾಡಿದ್ರೆ ಈ ರಾಶಿಯವರಿಗೆ ಅನೇಕ ಲಾಭಗಳು

|

Updated on: Jun 29, 2024 | 12:02 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 29 ಜೂನ್​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Astrology: ಕರ್ತವ್ಯ ನಿಷ್ಠೆ, ಹಿರಿಯರ ದಿನವನ್ನ ಶ್ರದ್ಧೆಯಿಂದ ಮಾಡಿದ್ರೆ ಈ ರಾಶಿಯವರಿಗೆ ಅನೇಕ ಲಾಭಗಳು
ನಿತ್ಯ ಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜೂನ್. 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಸೌಭಾಗ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:50ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:08 ರಿಂದ 07:45ರ ವರೆಗೆ.

ಮೇಷ ರಾಶಿ: ಇಂದು ಶ್ರಮಪಟ್ಟು ಮಾಡಿದ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗಬಹುದು. ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ. ಹಿರಿಯರ ದಿನವನ್ನು ಶ್ರದ್ಧೆಯಿಂದ ಮಾಡಿ.‌ ಅನೇಕ ಲಾಭಗಳು ನಿಮಗಾಗಲಿವೆ. ಬುದ್ಧಿಪೂರ್ವಕವಾಗಿ ನೀವಿಂದು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.‌ ನಿಮ್ಮ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರಬಹುದು. ನಿಮಗಿರುವ ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳು ಇರಲಿವೆ. ಹಿರಿಯರ ಉಪದೇಶವನ್ನು ಕೇಳುವಿರಿ. ದೇವತಾದರ್ಶನವನ್ನು ಪಡೆಯುವುದು ಉತ್ತಮ. ದಾಂಪತ್ಯದಲ್ಲಿ ಕಲಹವಿದ್ದರೂ ತಣ್ಣಗಾಗಿ ಹೊಂದಾಣಿಕೆಯಿಂದ ಮುಂದುವರಿಯುವಿರಿ. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಭಿನ್ನಾಭಿಪ್ರಾಯಗಳಿಗೆ ಅತಿಯಾದ ಮಹತ್ತ್ವ ಕೊಡುವುದು ಬೇಡ.

ವೃಷಭ ರಾಶಿ: ಇಂದು ನಿಮ್ಮ ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಜಾರಿ ಬಿದ್ದು ನೋವನ್ನು ಅನುಭವಿಸುವಿರಿ. ನೀವಂದುಕೊಂಡ ಉದ್ಯೋಗವು ಸಿಗದೇ ಹೋಗಬಹದು. ಅತ್ತ ಕಡೆ ನಿಮ್ಮ ಗಮನವಿರಲಿ. ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ಮಕ್ಕಳಿಂದ ಸಂತೋಷವಾಗಲಿದೆ. ತಿರುಗಾಟದಿಂದ‌ ಏನಾದರೂ ಅನಾಹುತವಾಗಬಹದು. ಮಾತುಗಳನ್ನು ಆಡಿವಾಗ ಎಚ್ಚರವಿರಲಿ. ಕಾಲ್ನಡೆಗೆಯಲ್ಲಿಯೇ ಬಹಳ ದೂರ ಕ್ರಮಿಸಬೇಕಾಗಬಹುದು. ನಡೆದಾಡುವ ಹಾದಿಗಳು ಒಂದೇ ರೀತಿ ಇರದು ಎನ್ನುವುದು ಗಮನದಲ್ಲಿಟ್ಟುಕೊಳ್ಳಿ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಹೆಜ್ಜೆಗಳೆಲ್ಲ ಗುರುತಾಗಬೇಕು ಎಂದರೆ ಸಾಧ್ಯವಾಗದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಬಂಧುಗಳ ಬಗ್ಗೆ ಸಮಾಧಾನವಿರದು.

ಮಿಥುನ ರಾಶಿ: ನೀವು ನಾಲ್ಕು ಜನರನ್ನು ಕೇಳಿಯಾದರೂ ತೊಂದರೆಯಿಲ್ಲ, ನಿಮ್ಮ ಹೆಜ್ಜೆಗಳು ಸರಿಯಾಗಿರಿಲಿ. ಉನ್ನತ ಚಿಂತನೆಗಳು ನಿಮ್ಮನ್ನು ಉತ್ತಮ ಸ್ತರಕ್ಕೆ ಕೊಂಡೊಯ್ಯುವುದು. ಇಂದು ನಿಮಗೆ ಭವಿಷ್ಯದ ಬಗ್ಗೆ ಬಹಳ ಆಲೋಚನೆ ಇರಲಿದೆ‌. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆನಿಸುವುದು. ಎಲ್ಲದಕ್ಕೂ ಇನ್ನೊಬ್ಬರ ತಪ್ಪನ್ನೇ ತೋರಿಸುವುದು ಬೇಡ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು. ದೂರಪ್ರಯಾಣದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ದೊಡ್ಡ ಅಪಾಯವೊಂದು ತಪ್ಪಿಹೋಗಿವುದು. ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಹಂಬಲ ಇರಲಿದೆ. ಸಂಗಾತಿಯ ಜೊತೆ ಕಾಲಕಳೆಯುವಿರಿ. ತಂದೆಯಿಂದ ಅಸಮಾಧನಾವಾದೀತು. ದೈವವೇ ನಿಮ್ಮನ್ನು ಅನುಕೂಲ ವಾತಾವರಣದ ಕಡೆ ಒಯ್ಯಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ನಿಮ್ಮ ಸಿಟ್ಟಿನಿಂದ ಯಾರೂ ಮಾತನಾಡಿಸದೇ ಇರಬಹುದು.

ಕಟಕ ರಾಶಿ: ಇಂದು ನಿಮ್ಮ ಮನೆಯ ಹಿರಿಯರ ಸೇವೆಯಿಂದ ನೆಮ್ಮದಿ ಸಿಗುವುದು. ತಂತ್ರಜ್ಞರು ಉನ್ನತ ಸ್ಥಾನದ ಬಯಕೆಯಿಂದ ಕಛೇರಿಯನ್ನು ಬಿಡಬಹುದು. ನೂತನ ಉದ್ಯೋಗವನ್ನು ಪ್ರಾರಂಭಿಸುವ ಅಲೋಚನೆ ಇದ್ದರೆ ಸದ್ಯ ಕೈಬಿಡಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಗೊಂದಲಗಳನ್ನು ಪೂರ್ಣವಾಗಿ ಸರಿ ಮಾಡಿಕೊಳ್ಳಿ. ಮಕ್ಕಳ ವಿಚಾರದಲ್ಲಿ ನಿಮಗೆ ಹೆಮ್ಮೆ ಎನಿಸಬಹುದು. ಸುಂದರವಾದ ಪುರುಷನ ಬಲೆಗೆ ಬೀಳುವಿರಿ. ಮೋಜಿನಲ್ಲಿ ಜಾಗರೂಕತೆ ಇರಲಿ. ಸಕಾರಾತ್ಮಕ ಚಿಂತನೆಗಳು ಇರಲಿ. ಅತಿಯಾದ ಆಲೋಚನೆಯಿಂದ ಪ್ರಯೋಜನವಾಗದು. ನಿಮ್ಮದಾದ ಜನರನ್ನು ಸಂಪಾದಿಸಿಕೊಳ್ಳಿ. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಅನಿರೀಕ್ಷಿತ ತಿರುವುಗಳಲ್ಲಿ ನಿಮ್ಮ ನಡತೆ ಸಹಜವಾಗಿರಲಿ.