AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?

ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ. ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಇದಲ್ಲದೇ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?
ಸಿಂಹರಾಶಿಯಲ್ಲಿ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi|

Updated on: Aug 15, 2023 | 8:38 PM

Share

ಇದೇ ತಿಂಗಳ ಹದಿನಾರರಂದು ಸೂರ್ಯನು ಸ್ವಸ್ಥಾನವಾದ ಸಿಂಹರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಸೇರಿ ಒಟ್ಟು ನಾಲ್ಕು ಗ್ರಹಗಳು (Planets) ಇರಲಿದೆ. ಸರಿಸುಮಾರು ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಬುದ್ಧಿವಂತರೂ, ಎಲ್ಲ ಕಾರ್ಯಗಳಲ್ಲಿ ನಿಪುಣರೂ, ರಾಜಸಮಾನರಿಂದ ಪೂಜಿತರೂ ಆಗುವರು. ಈ ರಾಶಿಯ (Rashi) ಮೇಲೆ ಗುರುವಿನ ಪೂರ್ಣದೃಷ್ಟಿಯು ಇರಲಿದೆ.

ಇದಲ್ಲದೇ ಈ ಸಂದರ್ಭದಲ್ಲಿ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಮೇಷ ರಾಶಿ:

ರಾಶ್ಯಧಿಪತಿಯಾದ ಕುಜನು ಮಿತ್ರನಾದ ಸೂರ್ಯನ‌ ಜೊತೆ ಇರುವನು. ಮೇಷವು ಸೂರ್ಯನ ಉಚ್ಚಕ್ಷೇತ್ರವೂ ಆಗಿರುವ ಕಾರಣ ಮಾನ ಸಮ್ಮಾನಗಳು ಹೆಚ್ಚು ಸಿಗಲಿವೆ. ಈ ರಾಶಿಯವರ ವರ್ಚಸ್ಸು ಎಲ್ಲ ಕಡೆಗೂ ಇರಲಿದೆ. ಪ್ರತಿಭೆಗೆ ಸಂಬಂಧಿಸಿದಂತೆ ಯಶಸ್ಸನ್ನು ಗಳಿಸುವಿರಿ. ನಿಮ್ಮ ಇಷ್ಟವನ್ನು ಪೂರ್ಣಗೊಳಿಸಿಕೊಳ್ಳುವಿರಿ. ಉನ್ನತ ಅಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ.

ಮಿಥುನ ರಾಶಿ:

ರಾಶ್ಯಧಿಪತಿಯಾದ ಬುಧನು ಸೂರ್ಯನ ಜೊತೆ ಇರುವುದು ಬಹಳ ಶುಭ. ಬುಧನು ಬುದ್ಧಿಯನ್ನು ತೀಕ್ಷ್ಣ ಮಾಡಿದರೆ, ರವಿಯು ಅದನ್ನು ಪ್ರಕಾಶಗೊಳಿಸಲು ಸಹಾಯ ಮಾಡುವನು. ಬುಧಾದಿತ್ಯ ಯೋಗವು ಉತ್ತಮವಾದುದಾಗಿದೆ. ತೃತೀಯದಲ್ಲಿ ಬುಧನು ರವಿಯ‌ ಜೊತೆ ಇರುವ ಕಾರಣ ನಿಮ್ಮ ಪ್ರತಿಭೆಯ ಬೃಹದ್ರೂಪದ ದರ್ಶನವು ಆಗುವುದು.

ತುಲಾ ರಾಶಿ:

ಈ ರಾಶಿಗೆ ಸೂರ್ಯನು ಏಕಾದಶಕ್ಕೆ ಬರುವ ಕಾರಣ ಸರ್ಕಾರಿ ಉದ್ಯೋಗಪ್ರಾಪ್ತಿಯಾಗುವುದು. ತಂದೆಯಿಂದ ಅಥವಾ ಹಿರಿಯರಿಂದ ಧನಲಾಭವಾಗುವುದು. ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುವ ಯೋಗವು ಬರುವುದು.

ವೃಶ್ಚಿಕ ರಾಶಿ:

ರಾಶ್ಯಧಿಪತಿಯು ದಶಮಸ್ಥಾನದಲ್ಲಿ ಇರುವುದರಿಂದ ತಂತ್ರಜ್ಞರು ಹೆಚ್ಚಿನ ಲಾಭವನ್ನು ಗಳಿಸುವರು. ಯಂತ್ರೋಪಕರಣ ಮಾರಾಟಗಾರರಿಗೆ ಆರ್ಥಿಕ ವ್ಯವಸ್ಥೆ ವ್ಯವಹಾರವು ಬಹಳ ಚುರುಕಿನಿಂದ ಆಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!