Daily Horoscope: ಈ ರಾಶಿಯವರಿಗೆ ಇಂದು ವಿವಿಧ ಮೂಲಗಳಿಂದ ಧನಾಗಮನವಾಗುವುದು
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಆಗಸ್ಟ್ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 16 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ವರೀಯಾನ್, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ರಿಂದ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:37 ರಿಂದ 02:11ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:37ರ ವರೆಗೆ.
ಮೇಷ ರಾಶಿ: ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ತೆಗೆದುಕೊಳ್ಳುವಿರಿ. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವನ್ನು ಮಾಡಬೇಕಾದೀತು. ಅಪರಿಚಿತರು ಆಪ್ತರಾಗಬಹುದು ಮಾತುಕತೆಯಿಂದ. ದುರಭ್ಯಾಸಕ್ಕೆ ಅವಕಾಶಗಳು ಬರಬಹುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ವರ್ತನೆಯನ್ನು ಯಾರಾದರೂ ಕಂಡು ನಕ್ಕಾರು. ನಿಮ್ಮವೇಷಭೂಷಣದ ಬಗ್ಗೆ ಟೀಕೆಗಳನ್ನು ಮಾಡಬಹುದು. ಯಾವುದನ್ನೂ ನೀವು ಮನಸ್ಸಿಗೆ ತೆಗೆದುಕೊಳ್ಳದೇ ಇರುವಿರಿ. ಆರ್ಥಿಕತೆಯು ಬಲವನ್ನು ಪಡೆದುಕೊಂಡಿದ್ದು ನಿಮಗೆ ಸಂತೋಷವನ್ನು ತರುವುದು. ವಿವಿಧ ಮೂಲಗಳಿಂದ ಧನಾಗಮನವಾಗುವುದು. ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಸಲಹೆಯನ್ನು ಪಡೆಯುವಿರಿ.
ವೃಷಭ ರಾಶಿ: ಇಂದು ಹೆಚ್ಚು ಮಾನಸಿಕ ಒತ್ತಡವು ಇರದಿದ್ದರೂ ಕೆಲಸವು ಬಹಳ ಇರಲಿದೆ. ಒಂದು ಕ್ಷಣವೂ ವಿರಾವಿಲ್ಲದಂತೆ ಕಾರ್ಯವನ್ನು ಮಾಡುವಿರಿ. ಇಷ್ಟವಿಲ್ಲದ ಕಾರ್ಯಕ್ಕೆ ಎಷ್ಟೇ ಒತ್ತಾಯ ಮಾಡಿದರೂ ನೀವು ಒಪ್ಪುವುದಿಲ್ಲ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಲು ನೀವು ಬಯಸುವಿರಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಅಪರಿಚಿತರ ನಿಮಗೆ ಕೆಲವು ತೊಂದರೆಗಳು ಬರಬಹುದು. ಸೌಂದರ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ನಿಮ್ಮ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸುವಿರಿ. ಉನ್ನತ ವಿದ್ಯಾಭ್ಯಾಸವನ್ನು ಮಾಡುವ ಇಚ್ಛೆಯನ್ನು ಉಳಿಸಿಕೊಳ್ಳುವಿರಿ.
ಮಿಥುನ ರಾಶಿ: ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ನಿಮ್ಮ ಮಾತಿನ ಹಾಸ್ಯವು ಇನ್ನೊಬ್ಬರಿಗೆ ನೋವನ್ನು ಮಾಡೀತು. ಆಕಸ್ಮಿಕ ಧನಲಾಭದ ನಿರೀಕ್ಷೆಯಲ್ಲಿ ಇರುವಿರಿ. ಇನ್ನೊಬ್ಬರ ಮೇಲಿಟ್ಟ ನಂಬಿಕಯು ಕಳೆದುಹೋಗಬಹುದು. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆದುಷ್ಪರಿಣಾಮವನ್ನು ಉಂಟುಮಾಡಬಹುದು. ಉದ್ಯೋಗದ ಕಾರಣ ಹೊರಗಡೆ ಹೋಗಬೇಕಾಗಬಹುದು. ನಿಷ್ಠುರ ನಡತೆಯ ಕಾರಣ ನೀವು ಎಲ್ಲರಿಂದ ದೂರವಿರಬೇಕಾಗಬಹುದು. ನಿಮ್ಮದೇ ಕೆಲಸಗಳನ್ನು ಮಾಡುತ್ತ ಆರಾಮಾಗಿ ದಿನವನ್ನು ಕಳೆಯುವಿರಿ. ವ್ಯಾಪಾರಸ್ಥರು ಬಹುಮಟ್ಟಿಗೆ ಲಾಭವನ್ನೇ ಪಡೆಯುವರು.
ಕರ್ಕ ರಾಶಿ: ನಿಮ್ಮ ಕಾರ್ಯಕ್ಕೆ ಹೆಚ್ಚಿನ ವೇತನವು ಸಿಗಬಹುದು. ಅನಗತ್ಯ ಖರ್ಚನ್ನು ಮಾಡಬೇಕಾಗಬಹುದು. ದೂರದ ಬಂಧುಗಳ ಭೇಟಿಯು ಸಂತಸವನ್ನು ಕೊಡಬಹುದು. ಎದುರಿನವರ ಜೊತೆ ನಿಮ್ಮದೇ ಸರಿ ಎಂಬಂತೆ ತಪ್ಪಿದ್ದರೂ ವಾದಿಸುವಿರಿ. ಶತ್ರುಗಳನ್ನು ತಿಳಿದುಕೊಳ್ಳುವ ಅಶಕ್ತಿಯು ನಿಮಗೆ ಇರುವುದು. ಆತುರದಿಂದ ಯಾವ ವ್ಯವಹಾರವನ್ನೂ ಮಾಡುವುದು ಬೇಡ. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಹಾಕಿಕೊಳ್ಳಿ. ಅಹಂಕಾರದಿಂದ ಬೀಗುವ ಅವಶ್ಯಕತೆ ಇಲ್ಲ. ಸಮಾಧಾನದಿಂದ ನೀವು ಮುಂದುವರಿಯುವುದು ಸೂಕ್ತ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೋವ್ಯಥೆಯ ಕಾರಣ ಎಲ್ಲರ ಮೇಲೂ ಸಿಟ್ಟಾಗುವಿರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ