AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಲ್ಕು ರಾಶಿಯವರು ಕೆಲಸದ ವಿಷಯದಲ್ಲಿ ತೀವ್ರಗಾಮಿಗಳು! ವೈಯಕ್ತಿಕ ಜೀವನಕ್ಕಿಂತ ವೃತ್ತಿಜೀವನ ಹೆಚ್ಚು ಅಪ್ಪಿಕೊಂಡಿರುತ್ತಾರೆ!

ಹನ್ನೆರಡು ರಾಶಿಗಳ ಪೈಕಿನಿರ್ದಿಷ್ಟವಾಗಿ ನಾಲ್ಕು ರಾಶಿಯ ಜನ ತಾವು ಮಾಡುವ ಕೆಲಸದ ವಿಷಯದಲ್ಲಿ ತೀವ್ರಗಾಮಿಗಳು! ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನವನ್ನು ಹೆಚ್ಚು ಅಪ್ಪಿಕೊಂಡಿರುತ್ತಾರೆ, ಒಪ್ಪಿಕೊಂಡಿರುತ್ತಾರೆ! ಕೆಲವರಿಗೆ ತಮ್ಮ ವೈಯಕ್ತಿಕ ಜೀವನವೆಂದರೆ ಸರ್ವಸ್ವವಾಗಿರುತ್ತದೆ. ಆದರೆ ಈ ನಾಲ್ಕು ರಾಶಿಯ ಜನರಿಗೆ ವೃತ್ತಿಪರ ಜೀವನದ ಮುಂದೆ ಉಳಿದೆಲ್ಲವೂ ಗೌಣವಾಗಿರುತ್ತದೆ.

ಈ ನಾಲ್ಕು ರಾಶಿಯವರು ಕೆಲಸದ ವಿಷಯದಲ್ಲಿ ತೀವ್ರಗಾಮಿಗಳು! ವೈಯಕ್ತಿಕ ಜೀವನಕ್ಕಿಂತ ವೃತ್ತಿಜೀವನ ಹೆಚ್ಚು ಅಪ್ಪಿಕೊಂಡಿರುತ್ತಾರೆ!
ಈ 4 ರಾಶಿಯವರು ಕೆಲಸದ ವಿಷಯದಲ್ಲಿ ತೀವ್ರಗಾಮಿಗಳು! ವೈಯಕ್ತಿಕ ಜೀವನಕ್ಕಿಂತ ವೃತ್ತಿಜೀವನ ಹೆಚ್ಚು ಅಪ್ಪಿಕೊಂಡಿರುತ್ತಾರೆ!
TV9 Web
| Updated By: ಆಯೇಷಾ ಬಾನು|

Updated on: Aug 19, 2021 | 7:35 AM

Share

ಹನ್ನೆರಡು ರಾಶಿಗಳ ಪೈಕಿ ನಿರ್ದಿಷ್ಟವಾಗಿ ನಾಲ್ಕು ರಾಶಿಯ ಜನ ತಾವು ಮಾಡುವ ಕೆಲಸದ ವಿಷಯದಲ್ಲಿ ತೀವ್ರಗಾಮಿಗಳು! ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನವನ್ನು ಹೆಚ್ಚು ಅಪ್ಪಿಕೊಂಡಿರುತ್ತಾರೆ, ಒಪ್ಪಿಕೊಂಡಿರುತ್ತಾರೆ! ಕೆಲವರಿಗೆ ತಮ್ಮ ವೈಯಕ್ತಿಕ ಜೀವನವೆಂದರೆ ಸರ್ವಸ್ವವಾಗಿರುತ್ತದೆ. ಇನ್ನು ಕೆಲವರಿಗೆ ವೃತ್ತಿಬದುಕೇ ಸರ್ವಸ್ವವಾಗಿಬಿಟ್ಟಿರುತ್ತದೆ. ಈಗ ತಿಳಿಯೋಣ ನಾಲ್ಕು ರಾಶಿಯ ಜನರನ್ನು, ಇವರಿಗೆ ವೃತ್ತಿಪರ ಜೀವನದ ಮುಂದೆ ಉಳಿದೆಲ್ಲವೂ ಗೌಣವಾಗಿರುತ್ತದೆ.

ಜಗತ್ತಿನ ನಾನಾ ತರಹದ ಜನ ಇರುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ನಿರ್ದಿಷ್ಟ ಆದರೆ ಭಿನ್ನ ರೀತಿಯ ಆದ್ಯತೆ ಇರುತ್ತದೆ. ಕೆಲವರು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವರು ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಭಾದ್ಯತೆಯನ್ನು ತಾವೇ ನಿಭಾಯಿಸುತ್ತಾರೆ. ಇವರಿಗೆ ಜೀವನದಲ್ಲಿ ಬೇಗಬೇಗನೇ ಮೇಲಕ್ಕೆ ಬರುಬೇಕು ಎಂಬ ಆಶೆಯಿರುತ್ತದೆ. ಅದನ್ನುಪೂರೈಸಿಕೊಳ್ಳಲು ತನುಮನ ಶ್ರದ್ಧೆಯಿಂದ ಕೆಲಸ ಮಗ್ನರಾಗುತ್ತಾರೆ. ಬನ್ನೀ, ಆ ನಾಲ್ಕು ರಾಶಿಯ ಜನ ಕೆಲಸಕ್ಕೆ ಹೆಚ್ಚು ಒತ್ತು ನೀಡುವ ಜೀವನದಲ್ಲಿ ಮುಂದೆ ಬರಬೇಕು ಎಂದು ಸದಾ ತುಡಿಯುತ್ತಿರುವ ಜನ ಯಾರು ಎಂಬುದನ್ನು ತಿಳಿಯೋಣ

1. ಮೇಷ ರಾಶಿ Aries: ಮೇಷ ರಾಶಿಯ ಜನರಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿರುತ್ತದೆ. ಮೇಷ ರಾಶಿಯ ಜನ ನಿರ್ಭೀತರು, ಸಾಹಸಿಗಳೂ ಆಗಿರುತ್ತಾರೆ. ಇವರಿಗೆ ವೃತ್ತಿ ಬದುಕಿನಲ್ಲಿ ಶಿಖರ ತಲುಪುವುದಕ್ಕೆ ಸದಾ ಹಾತೊರೆಯುತ್ತಾರೆ. ಯಥೇಚ್ಛ ಕನಸು ಕಂಡು ಅದನ್ನು ನನಸಾಗಿಸಿಕೊಳ್ಳಲು ಯಾವುದೇ ಸಾಹಸಕ್ಕಾದರೂ ಮುಂದಾಗುತ್ತಾರೆ. ಇಂತಹವರಿಗೆ ತಮ್ಮ ಪರಿವಾರದ ಬಗ್ಗೆಯೂ ಕಾಳಜಿ ಇರುತ್ತದೆ. ಆದರೆ ಕೆಲಸದ ವಿಷಯ ಬಂದಾಗ ಯಾವುದನ್ನೂ ನೋಡುವುದಿಲ್ಲ. ಒಮ್ಮೆ ಯಾವುದೇ ವಿಷಯದ ಬಗ್ಗೆ ಗಮನ ಹರಿಸಿದರೆ ಅದನ್ನು ಸಾಕಾರಗೊಳಿಸಿದ ಬಳಿಕವಷ್ಟೇ ನೆಮ್ಮದಿಯಿಂದ ಇರಬಲ್ಲರು.ಅದುವರೆಗೂ ಅವರ ಜೀವ ಚಡಪಡಿಸುತ್ತಾ ಇರುತ್ತದೆ.

2. ವೃಷಭ ರಾಶಿ Taurus: ವೃಷಭ ರಾಶಿ ಜನ ಸಹ ತಮ್ಮ ಕೆಲಸದಲ್ಲಿ ಸದಾ ಮಗ್ನರಾಗುತ್ತಾರೆ. ತುಂಬಾ ಗಂಭೀರವಾಗಿ ಕೆಲಸದಲ್ಲಿ ತಲ್ಲೀನರಾಗುತ್ತಾರೆ. ತುಸು ಹೆಚ್ಚೇ ಕಷ್ಟ ಪಟ್ಟು ಸಾಧಿಸುತ್ತಾರೆ. ಇದು ಅವರ ಮೇಲಾಧಿಕಾರಿಗಳ ಗಮನಸೆಳೆಯುತ್ತದೆ. ಮೇಷ ರಾಶಿಯ ಉದ್ಯೋಗಿಗಳನ್ನು ಮೇಲಾಧಿಕಾರಿಗಳು ಭರವಸೆಯ ಕೆಲಸಗಾರ ಎಂದು ಭಾವಿಸುತ್ತಾರೆ; ಅವರಿಗೆ ಮನ್ನಣೆ ಹಾಕುತ್ತಾರೆ. ಇವರು ತಮ್ಮ ಕೆಲಸದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಾ ತುಂಬಾ ಪ್ರೊಫೆಷನಲ್​​ ಎಂದು ಗುರುತಿಸಿಕೊಳ್ಳುತ್ತಾರೆ. ಹೀಗಾಗಿ ಅವರ ಪರಿವಾರದವರು ಮತ್ತು ಆಪ್ತರು ಅವರ ಮೇಲೆ ಸ್ವಾರ್ಥಿಗಳು ಎಂದು ಮುನಿಸಿಕೊಳ್ಳುತ್ತಾರೆ.

3. ಸಿಂಹ ರಾಶಿ Leo: ಸಿಂಹ ರಾಶಿ ಜನರಿಗೆ ಆಸೆ ಆಕಾಂಕ್ಷೆಗಳು ಬಹಳ ಇರುತ್ತದೆ. ಅದನ್ನುಸಾಧಿಸಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ. ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಪೂರ್ತಿ ಮನಸ್ಸಿಂದ ತೊಡಗಿಸಿಕೊಳುತ್ತಾರೆ. ಈ ರಾಶಿಯವರು ತಮ್ಮ ವೈಯಕ್ತಿಕ ಬದುಕಿಗಿಂತ ವೃತ್ತಿಪರ ಜೀವನ ಬಹು ಮುಖ್ಯ ಭಾವಿಸುತ್ತಾರೆ. ಆದರೂ ವೈಯಕ್ತಿಕ ಬದುಕನ್ನು ಸಮತೋಲನದಲ್ಲಿಟ್ಟುಕೊಂಡು, ವೃತ್ತಿ ಜೀವನವನ್ನೂ ಚೆನ್ನಾಗಿ ನಿಭಾಯಿಸುತ್ತಾರೆ.

4. ವೃಶ್ಚಿಕ ರಾಶಿ Scorpio: ಈ ವೃಶ್ಚಿಕ ರಾಶಿಯ ಜನ ಬುದ್ಧಿವಂತರು, ಕುಶಾಗ್ರಮತಿಗಳು ಆಗಿರುತ್ತಾರೆ. ಈ ರಾಶಿಯ ಜನ ಯಾವುದೇ ಕ್ಷೇತ್ರ ಪ್ರವೇಶಿಸಿದರೂ ಆ ಕೆಲಸದಲ್ಲಿಯೇ ಮುಳುಗಿಬಿಡುತ್ತಾರೆ. ಇವರಿಗೆ ತಮಗೂ ಒಂದು ವೈಯಕ್ತಿಕ ಜೀವನವಿದೆ ಎಂಬುದನ್ನೇ ಮರೆತುಬಿಡುತ್ತಾರೆ. ಆದರೆ ಇವರು ವೃತ್ತಿ ಬದುಕಿನಲ್ಲಿ ಅಗಾಧವಾದುದನ್ನು ಸಾಧಿಸಿ, ವೈಯಕ್ತಿಕ ಬದುಕನ್ನು ವರ್ಣಮಯಗೊಳಿಸಿಕೊಳ್ಳುತ್ತಾರೆ. ಇಂತಹವರು ತಮ್ಮ ವೈಯಕ್ತಿಕ ಬದುಕಿನಲ್ಲಿಯೇ ಆಗಲಿ ಅಥವಾ ವೃತ್ತಿ ಜೀವನದಲ್ಲಿಯೇ ಆಗಲಿ ಯಾವುದೇ ಕಳಂಕ ಅಂಟಿಸಿಕೊಳ್ಳಲು ಇಚ್ಚಿಸುವುದಿಲ್ಲ.

(these 4 zodiac people give more importance to professional life than personal life)