Rich Zodiac Sign: ಯಾವ ರಾಶಿಯವರು ಹೆಚ್ಚು ಶ್ರೀಮಂತರಾಗ್ತಾರೆ, ಕಾರಣ ಏನು? ಇಲ್ಲಿದೆ ಇಂಟರೆಸ್ಟಿಂಗ್ ಡೀಟೇಲ್ಸ್

ಜ್ಯೋತಿಷ್ಯ ಪ್ರಕಾರ ಯಾವ ರಾಶಿಯವರು ಹೆಚ್ಚು ಶ್ರೀಮಂತರಾಗುತ್ತಾರೆ? ಯಾರ್ಯಾರ ಪಾಲಿಗೆ ಯಾವುದು ದೌರ್ಬಲ್ಯವಾಗುತ್ತದೆ ಎಂಬ ವಿವರ ಈ ಲೇಖನದಲ್ಲಿದೆ.

TV9 Web
| Updated By: ganapathi bhat

Updated on: Aug 20, 2021 | 6:57 AM

ಪ್ರತಿಯೊಬ್ಬರೂ ಸಿಕ್ಕಾಪಟ್ಟೆ ಶ್ರೀಮಂತರಾಗಲು ಬಯಸುತ್ತಾರೆ. ದೀರ್ಘಕಾಲದಿಂದ ಬಯಸಿದ್ದನ್ನು ಅಂತಿಮವಾಗಿ ಖರೀದಿಸುವ ಸಾಮರ್ಥ್ಯ ಬರಲಿ. ದೂರದ ದೇಶಗಳಿಗೆ ತೆರಳಿ, ಆರ್ಥಿಕವಾಗಿ ಯಶಸ್ವಿಯಾಗಲಿ ಎಂಬಿತ್ಯಾದಿ ಗುರಿಗಳನ್ನು ಪೂರ್ತಿ ಮಾಡುವುದಕ್ಕೆ ಸಹ ಬಯಸುತ್ತಾರೆ. ಆದರೆ ಎಲ್ಲರಿಂದಲೂ ಇದು ಸಾಧ್ಯವಾಗಲ್ಲ. ಕೆಲವರು ಮಾತ್ರ ತಮ್ಮ ಸಂಕಲ್ಪ, ಕಠಿಣ ಪರಿಶ್ರಮದಿಂದ ಯಶಸ್ವಿಯಾಗುತ್ತಾರೆ. ಜ್ಯೋತಿಷವು ಹನ್ನೆರಡು ರಾಶಿಗಳನ್ನು ಆಧರಿಸಿ ಜನರ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತದೆ. ಈ ಕಾರಣದಿಂದಾಗಿ, ಯಾವ ರಾಶಿಯವರು ಆರ್ಥಿಕವಾಗಿ ಹೆಚ್ಚು ಯಶಸ್ವಿ ಆಗುತ್ತಾರೆ ಎಂಬುದನ್ನು ಮೊದಲಿಂದ ಕೊನೆಯದು ಎಂಬ ಲೆಕ್ಕದಲ್ಲಿ ನೀಡಲಾಗುತ್ತದೆ. ಅಂದರೆ ಮೊದಲಿಗೆ ನೀಡಿದ ರಾಶಿಯು ಆರ್ಥಿಕವಾಗಿ ಬಹಳ ಯಶಸ್ವಿ ಅಂತಾದರೆ, ಕೊನೆಯಲ್ಲಿ ನೀಡಿದ್ದು ಯಶಸ್ಸಿನ ರುಚಿಯನ್ನು ಕಡಿಮೆ ನೋಡುವಂಥದ್ದು ಎಂದರ್ಥ.

1 / 13
ಮಕರ ರಾಶಿ
ಮಕರ ರಾಶಿಯವರು ಕೆಲಸ ಮಾಡಲು ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸ್ವತಃ ತಮಗೆ ತಾವೇ ಪ್ರೇರಣೆ ಆಗಿರುತ್ತಾರೆ. ಏಕೆಂದರೆ ಅವರಿಗೆ ವೃತ್ತಿ ಮತ್ತು ಕೆಲಸವೇ ಎಲ್ಲವೂ ಆಗಿರುತ್ತದೆ. ಅವರು ತಮ್ಮ ಗುರಿಯನ್ನು ತಲುಪುತ್ತಾರೆ ಎಂಬ ಬಗ್ಗೆ ಅಪರಿಮಿತವಾದ ವಿಶ್ವಾಸವಿರುತ್ತದೆ ಮತ್ತು ಆ ಗುರಿಗಳನ್ನು ಸಾಧಿಸಲು ಇನ್ನೂ ಹೆಚ್ಚು ಶ್ರಮ ವಹಿಸುತ್ತಾರೆ. ಪ್ರಯತ್ನದ ವಿಚಾರಕ್ಕೆ ಬಂದಲ್ಲಿ ಎಡೆಬಿಡದೆ ನಿರಂತರವಾಗಿ ತೊಡಗಿರುತ್ತಾರೆ.

ಮಕರ ರಾಶಿ ಮಕರ ರಾಶಿಯವರು ಕೆಲಸ ಮಾಡಲು ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸ್ವತಃ ತಮಗೆ ತಾವೇ ಪ್ರೇರಣೆ ಆಗಿರುತ್ತಾರೆ. ಏಕೆಂದರೆ ಅವರಿಗೆ ವೃತ್ತಿ ಮತ್ತು ಕೆಲಸವೇ ಎಲ್ಲವೂ ಆಗಿರುತ್ತದೆ. ಅವರು ತಮ್ಮ ಗುರಿಯನ್ನು ತಲುಪುತ್ತಾರೆ ಎಂಬ ಬಗ್ಗೆ ಅಪರಿಮಿತವಾದ ವಿಶ್ವಾಸವಿರುತ್ತದೆ ಮತ್ತು ಆ ಗುರಿಗಳನ್ನು ಸಾಧಿಸಲು ಇನ್ನೂ ಹೆಚ್ಚು ಶ್ರಮ ವಹಿಸುತ್ತಾರೆ. ಪ್ರಯತ್ನದ ವಿಚಾರಕ್ಕೆ ಬಂದಲ್ಲಿ ಎಡೆಬಿಡದೆ ನಿರಂತರವಾಗಿ ತೊಡಗಿರುತ್ತಾರೆ.

2 / 13
ವೃಶ್ಚಿಕ

ಇವರು ಸಹಜವಾಗಿಯೇ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ತಮ್ಮ ವೃತ್ತಿಪರ ಪ್ರೊಫೈಲ್ ಅನ್ನು ನಿರ್ಮಿಸಿಕೊಳ್ಳುವಾಗ ಬಹಳ ಬದ್ಧತೆಯಿಂದ ಇರುತ್ತಾರೆ. ಇವರ ಕೆಲಸ ಆರಂಭಿಸಿದ ಶುರುವಿನ ವರ್ಷಗಳಲ್ಲಿ ಆರ್ಥಿಕವಾಗಿ ಸ್ಥಿರವಾಗಲು ಸಾಕಾಗುತ್ತದೆ. ವೃಶ್ಚಿಕದ ಜನರು ಯಾವುದೇ ಕೆಲಸವನ್ನು ಉತ್ಕಟವಾಗಿ ಪ್ರೀತಿಸಿ, ಮಾಡುತ್ತಾರೆ. ತಮ್ಮ ಬುದ್ಧಿವಂತಿಕೆಯಿಂದ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

3 / 13
ಕನ್ಯಾ

ಕನ್ಯಾ ರಾಶಿಯವರು ಬುದ್ಧಿವಂತರು, ಪ್ರತಿಭಾವಂತರು ಮತ್ತು ಸ್ವಾಭಾವಿಕವಾಗಿ ಯಶಸ್ಸಿನ ಕಡೆಗೆ ಆಕರ್ಷಿತರಾಗುತ್ತಾರೆ. ಇವರು ಪರ್ಫೆಕ್ಷನಿಸ್ಟ್​ಗಳು. ಪ್ರತಿ ವಿವರವೂ ಅಮೋಘವಾಗಿಯೇ ಇರಬೇಕೆಂದು ಬಯಸುತ್ತಾರೆ. ಮತ್ತು ಈ ಗುಣವು ಇವರ ಉದ್ಯೋಗದ ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪಿಸುತ್ತದೆ. ಇದು ಆರ್ಥಿಕ ಯಶಸ್ಸಿಗೆ ಕಾರಣವಾಗುತ್ತದೆ.

4 / 13
ಮೀನ

ಮೀನ ರಾಶಿಯವರು ಯಾವುದೇ ಪರಿಸರಕ್ಕೆ ಹೊಂದಿಕೊಳ್ಳಬಲ್ಲಂಥ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಗುಣಲಕ್ಷಣವು ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸಲು ಸಹಾಯ ಮಾಡುತ್ತದೆ. ಇವರು ಸೃಜನಶೀಲ ವ್ಯಕ್ತಿಗಳಾಗಿದ್ದು, ಸ್ವಂತವಾಗಿ ಕೆಲಸ ಮಾಡಲು ಒಲವು ತೋರುತ್ತಾರೆ. ಅಂದರೆ ಸೃಜನಶೀಲ ವ್ಯವಹಾರಗಳಲ್ಲಿ ಉದ್ಯಮಿಗಳಾಗಿ ಪ್ರಾರಂಭಿಸಿ, ಆ ಉದ್ಯಮ ಯಶಸ್ವಿಯಾಗಬಹುದು!

5 / 13
ವೃಷಭ

ವೃಷಭ ರಾಶಿಯವರು ಯಾವುದೇ ಅನಗತ್ಯ ಒತ್ತಡ ನೆಮ್ಮದಿಯ ಜೀವನವನ್ನು ಬಯಸುವಂಥವರು. ತುಂಬಾ ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ಯಾವುದೇ ವ್ಯಾಪಾರ ಅಥವಾ ಯೋಜನೆಯಲ್ಲಿ ಟಾಪ್​ನಲ್ಲಿ ಇರುವಂತೆ ಆಗುತ್ತಾರೆ. ಆದರೂ ವೃಷಭ ರಾಶಿಯವರು ಕೆಲವೊಮ್ಮೆ ಸುಲಭವಾಗಿ ವಿಚಲಿತರಾಗಬಹುದು. ಆದರೆ ಮತ್ತೊಮ್ಮೆ, ಯಶಸ್ಸಿನ ಹಾದಿಯಲ್ಲಿ ವೇಗವಾಗಿ ಪುಟಿಯುವ ಸಾಧ್ಯತೆ ಇರುತ್ತದೆ.

6 / 13
ಮೇಷ

ಸಿಟ್ಟಿನ ಸ್ವಭಾವದ, ಬೆಂಕಿಯುಗುಳುವ, ಬಲಶಾಲಿಗಳಾದ ಇವರು ಜೀವನದ ಎಲ್ಲ ಅಂಶಗಳಲ್ಲೂ ಮುಂಚೂಣಿಯಲ್ಲೇ ಇರುತ್ತಾರೆ. ತಮ್ಮ ಬಗ್ಗೆ ಗಮನ ಕೇಂದ್ರೀಕರಿಸುವಲ್ಲಿಯೇ ಆಸಕ್ತಿ ಹೆಚ್ಚಾಗಿ ಹೊಂದಿರುತ್ತಾರೆ. ವಿನೋದ, ಉತ್ಸಾಹ ಮತ್ತು ಸೌಕರ್ಯಗಳಿಂದ ತುಂಬಿದ ಉತ್ತಮ ಭವಿಷ್ಯವನ್ನು ಪಡೆಯುವ ಸಲುವಾಗಿ ನಿರಂತರವಾಗಿ ಕೆಲಸ ಮಾಡುತ್ತಾರೆ. ಆದರೂ ಆರ್ಥಿಕ ಯಶಸ್ಸನ್ನು ಸಾಧಿಸುವಲ್ಲಿ ಸ್ಪಷ್ಟತೆಯ ಕೊರತೆ ಎದುರಿಸುತ್ತಾರೆ.

7 / 13
ಕುಂಭ

ಕುಂಭ ರಾಶಿಯವರು ಸೃಜನಶೀಲರು, ಕಲ್ಪನಾಶೀಲರು ಮತ್ತು ಶ್ರಮಜೀವಿಗಳು. ಹೇರಳವಾದ ಹಣದೊಂದಿಗೆ ನೆಮ್ಮದಿಯ ಜೀವನವನ್ನು ಇಷ್ಟಪಡುತ್ತಾರೆ. ಆದರೆ ಒಂದು ವೃತ್ತಿ ಮಾರ್ಗವು ಅವರನ್ನು ಸಂತೋಷಪಡಿಸದಿದ್ದರೆ ಅಥವಾ ಭಾವನಾತ್ಮಕವಾಗಿ ಇಷ್ಟವಾಗದಿದ್ದರೆ ಬದಲಾವಣೆ ಮಾಡುತ್ತಲೇ ಸಾಗುತ್ತಾರೆ. ಇವರು ನಿಜವಾಗಿಯೂ ಸಂತೋಷವನ್ನು ಬಯಸುತ್ತಾರೆ ವಿನಾ ಹಣದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದಿಲ್ಲ.

8 / 13
ಸಿಂಹ

ಸಿಂಹ ರಾಶಿಯವರು ಅಗತ್ಯವಿದ್ದಾಗ ನಿಜವಾಗಿಯೂ ಲೆಕ್ಕಾಚಾರ ಹಾಕಿಕೊಂಡು ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರು ಕೂಡ ಸ್ವಾಭಾವಿಕವಾಗಿ ಜನ್ಮತಃ ನಾಯಕತ್ವ ಸ್ವಭಾವ ಹೊಂದಿರುತ್ತಾರೆ. ಆದರೆ ಹಣವು ಅವರನ್ನು ಆಕರ್ಷಿಸುವುದಿಲ್ಲ. ಇತರರಿಂದ ಪಡೆಯುವ ಗಮನ ಮತ್ತು ಪ್ರೀತಿಯಿಂದ ಸಂತೋಷಗೊಳ್ಳುತ್ತಾರೆ.

9 / 13
ಮಿಥುನ

ದ್ವಿಸ್ವಭಾವ ವ್ಯಕ್ತಿತ್ವದ ಮಿಥುನ ರಾಶಿಯವರು ಆರ್ಥಿಕವಾಗಿ ಯಶಸ್ವಿಯಾದಾಗ ಬಹಳ ಬುದ್ಧಿವಂತರಾಗಿರುತ್ತಾರೆ. ಇವರು ತಮ್ಮ ಆಲೋಚನೆಗಳನ್ನು ಕ್ಷಣಗಳಲ್ಲಿ ಬದಲಾಯಿಸಿಕೊಳ್ಳುತ್ತಾರೆ. ಇದರಿಂದಾಗಿ ವ್ಯಾಪಾರವನ್ನು ಮುನ್ನೆಲೆಗೆ ತರಬಹುದು. ಆದರೆ ಅವುಗಳಲ್ಲಿರುವ ಏಕೈಕ ಋಣಾತ್ಮಕ ಸಂಗತಿ ಅಂದರೆ, ಇವರು ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದು ಅಂತಿಮವಾಗಿ ಅವನತಿಗೆ ಕಾರಣವಾಗುತ್ತದೆ.

10 / 13
ತುಲಾ

ತುಲಾ ರಾಶಿಯವರು ಹಣದ ವಿಚಾರದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಆಲೋಚನೆಗಳನ್ನು ಜಾರಿಗೆ ತರುತ್ತಾರೆ. ಏಕೆಂದರೆ ಇವರು ತುಂಬಾ ತರ್ಕಬದ್ಧವಾಗಿ ಯೋಚಿಸುತ್ತಾರೆ. ಆದರೆ ಸತ್ಯ ಏನೆಂದರೆ, ಹಣ ಅಥವಾ ಆರ್ಥಿಕ ಸ್ಥಿತಿಗತಿಯಲ್ಲಿ ಮೇಲ್ಮಟ್ಟ ತಲುಪಬೇಕು ಎಂಬ ಸಂಗತಿ ಕಡೆಗೆ ಹೆಚ್ಚು ಆಕರ್ಷಿತರಾಗುವುದಿಲ್ಲ. ಇವರಿಗೆ ಬೇಕಾಗಿರುವುದು ಯಾರಾದರೂ ತಮ್ಮ ಕೌಶಲಗಳನ್ನು ಪ್ರಶಂಸಿಸುವುದು ಮತ್ತು ಹೊಗಳುವುದು.

11 / 13
ಕರ್ಕಾಟಕ

ಕರ್ಕಾಟಕ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು. ಇವರು ಸಾಕಷ್ಟು ಶ್ರೀಮಂತರಾಗಿರುವುದಿಲ್ಲ. ಏಕೆಂದರೆ ಇವರು ತುಂಬಾ ಮೃದು ಹೃದಯದವರಾಗಿದ್ದು, ವ್ಯಾಪಾರದ ಮಧ್ಯೆ ಸ್ಪರ್ಧೆಗಳಲ್ಲಿ ಬಲವಾದ ಮನಸ್ಸಿನವರಾಗಿ ಇರುವುದಿಲ್ಲ. ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷವನ್ನು ಕಂಡುಕೊಳ್ಳುವ ಇವರು, ಮನೆಯಲ್ಲಿ ತಮ್ಮ ಪಾಡಿಗೆ ತಾವಿರುವುದಕ್ಕೆ ಹೆಚ್ಚು ಸೂಕ್ತ.

12 / 13
ಧನು

ಧನು ರಾಶಿಯವರಿಗೆ ಹಣವು ಎಂದಿಗೂ ಆಲೋಚನೆ ಮಾಡುವ, ಚಿಂತಿಸುವ ವಿಷಯವಾಗಿರುವುದಿಲ್ಲ. ಇವರು ಸಂಪತ್ತು ಮತ್ತು ಯಶಸ್ಸಿನ ಹಿಂದೆ ಓಡಲು ಇಷ್ಟಪಡುವುದಿಲ್ಲ. ಏಕೆಂದರೆ ಜೀವನವನ್ನು ಇವರಿಗೆ ಬಂದ ರೀತಿಯಲ್ಲಿ ಆನಂದಿಸಲು ಇಷ್ಟಪಡುತ್ತಾರೆ. ಸ್ವಲ್ಪ ಸಮಯದವರೆಗೆ ತಮ್ಮ ಸ್ವಾತಂತ್ರ್ಯ ಮತ್ತು ಸಾಹಸ ಮನೋಭಾವವನ್ನು ಅನುಭವಿಸಲು ಬಯಸುತ್ತಾರೆ.

13 / 13
Follow us
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್