
ಆಕಾಶದಲ್ಲಿ ಕಾಣಿಸುವ ಅನೇಕ ನಕ್ಷತ್ರಗಳಲ್ಲಿ ಮಘಾ ಕೂಡ ಒಂದು ನಕ್ಷತ್ರ. ಬಾಲದಂತೆ ಸಾಲಾಗಿ ಕಾಣಿಸುವ ಐದು ನಕ್ಷತ್ರಗಳೇ ಮಘಾ ನಕ್ಷತ್ರದ ಚಿಹ್ನೆ. ಇದರ ದೇವತೆ ಪಿತೃಗಣಗಳು. ಈ ನಕ್ಷತ್ರದಲ್ಲಿ ಜ್ವರ ಕಾಣಿಸಿಕೊಂಡರೆ ಉಳಿಯುವುದಿಲ್ಲ ಎಂಬ ಮಾತಿದೆ. ಹಾಗೆಯೇ ಈ ನಕ್ಷತ್ರದಲ್ಲಿ ಪಿಂಡಪ್ರದಾನ ಮಾಡಿದರೆ ಹಿರಿಯ ಮಗನ ಮರಣವಾಗುತ್ತದೆ ಎನ್ನುತ್ತದೆ ಶಾಸ್ತ್ರ. ಒಟ್ಟಿನಲ್ಲಿ ಮಂಗಲ ಕಾರ್ಯಕ್ಕೆ ಪ್ರಶಸ್ತವಾದ ನಕ್ಷತ್ರ ಇದಲ್ಲ. ಈ ನಕ್ಷತ್ರವು ಪೂರ್ಣವಾಗಿ ಸಿಂಹ ರಾಶಿಯಲ್ಲಿಯೇ ಇರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ?
ಯಾರ ಮಾತಿಗೂ ಮನಸ್ಸು ಕರಗದು. ನಿಮ್ಮದೇ ಆದ ಮಾರ್ಗದಲ್ಲಿ ಹೋಗುವಿರಿ. ಸರ ತಪ್ಪುಗಳನ್ನು ಬೇರೆಯವರಿಂದ ಕೇಳಲು ಬಯಸಲಾರಿರಿ.
ಇವರಿಗೆ ತಂದೆ ಹಾಗೂ ತಾಯಿಯರ ಮೇಲೆ ಪ್ರೀತಿ ಹೆಚ್ಚು. ಅವರ ಸೇವೆಯನ್ನು ಮಾಡುವ ಬುದ್ಧಿ ಬರುವುದು.
ಯಾವುದನ್ನೇ ಆದರು ಪಡೆಯಲೇಬೇಕು ಎನ್ನುವ ಆತುರ. ಅನಿಸಿದ್ದನ್ನು ಮಾಡಿಯೇ ಸಮಾಧಾನ. ಕೂಡಲೇ ಎಲ್ಲವೂ ಆಗಬೇಕು ಎಂಬ ತೀವ್ರತೆ ಹೆಚ್ಚು.
ವಿದ್ಯಾಭ್ಯಾಸದಲ್ಲಿ ಒಲವು. ಹೊಸತನ್ನು ತಿಳಿಯಬೇಕು ಹಾಗೂ ಹೆಚ್ಚು ತಿಳಿಯಬೇಕು ಎಂಬ ಹಂಬಲವಿರುವುದು.
ಸಂಪತ್ತು ಸ್ವಯಾರ್ಜಿತವಾಗಿಯೂ ಅಥವಾ ಪಿತ್ರಾರ್ಜಿತವಾಗಿಯೂ ಸಿಗಲಿದೆ. ಪಿತ್ರಾರ್ಜಿತ ಸಂಪತ್ತನ್ನು ಅನುಭವಿಸುವ ಅವಕಾಶ ಈ ನಕ್ಷತ್ರದವರಿಗೆ ಇದೆ.
ಇವರ ಸೇವಕ ವರ್ಗ ತುಂಬ ದೊಡ್ಡದಿದೆ. ಹೆಚ್ಚು ಕಾರ್ಯ ಮಾಡುವಂತಹವರನ್ನು ಜೋಡಿಸಿಕೊಳ್ಳುವಿರಿ. ನಿಮ್ಮದೊಂದು ಪಡೆಯಾಗಿ ಇರಲಿದೆ.
ಭೋಗದ ವಸ್ತುಗಳನ್ನು ಬಳಸಲು ಹೆಚ್ಚು ಇಷ್ಟಪಡುವಿರಿ. ಅದರಲ್ಲಿ ನಿಮಗೆ ಸಂತೋಷ ಅಧಿಕ.
ದೇವತೆಗಳ ಹಾಗೂ ಪಿತೃಗಳ ಕರ್ಮದವನ್ನು ಶ್ರದ್ಧೆಯಿಂದ ನಿಷ್ಠೆಯಿಂದ ಮಾಡುವಿರಿ. ಪಿತೃಗಳಿಗೆ ಕಾಲ ಕಾಲಕ್ಕೆ ಕೊಡುವ ಪಿಂಡವನ್ನು ಪ್ರದಾನಮಾಡುವಿರಿ. ಪಿತೃದೇವತೆಗಳ ಅನುಗ್ರಹವೂ ನಿಮಗಾಗಲಿದೆ.
ಎಲ್ಲ ಕಾರ್ಯಗಳಲ್ಲಿಯೂ ನಿಮಗೆ ಉತ್ಸಾಹ ಇದ್ದು, ಖುಷಿಯಿಂದ ಅದನ್ನು ಮಾಡುವಿರಿ. ಯಾವುದೇ ನಕಾರಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡಲಾರಿರಿ.
– ಲೋಹಿತ ಹೆಬ್ಬಾರ್ – 8762924271