ಇಪ್ಪತ್ತೇಳು ನಕ್ಷತ್ರಗಳಲ್ಲಿ ರೋಹಿಣೀ ಮೂರನೇ ನಕ್ಷತ್ರ. ಇದರ ದೇವತೆ ಬ್ರಹ್ಮಾ. ಈ ನಕ್ಷತ್ರವನ್ನು ಚಂದ್ರನ ಅತ್ಯಂತ ಪ್ರೀತಿಯ ಪತ್ನಿ ಎಂದು ಪರಿಗಣಿಸುತ್ತಾರೆ. ಇದು ವೃಷಭ ರಾಶಿಯಲ್ಲಿ ಬರುವ ಪೂರ್ಣ ನಕ್ಷತ್ರ. ನಕ್ಷತ್ರ ಸಮೂಹಗಳಿಂದ ಕೂಡಿರುವ ನಕ್ಷತ್ರವಿದು. ಶ್ರೀಕೃಷ್ಣನ ನಕ್ಷತ್ರವೂ ಇದೇ ಆಗಿದೆ.
ಈ ನಕ್ಷತ್ರದಲ್ಲಿ ಜನಿಸಿದರು ಹೇಗಿರುತ್ತಾರೆ? ಯಾವ ಅಂಶಗಳನ್ನು ಹೆಚ್ಚು ರೂಢಿಸಿಕೊಳ್ಳುತ್ತಾರೆ? ಇವುದು ಇಷ್ಟ? ಎನ್ನುವುದನ್ನು ನೋಡೋಣ.
ಧಾರ್ಮಿಕ ಆಚರಣೆಯನ್ನು ಹೇಗೆ ಮಾಡಬೇಕು ಎನ್ನುವ ಕೌಶಲವು ಇವರಿಗೆ ತಿಳಿದಿದೆ. ದೇವರಿಗೆ ಹಿರಿಯರಿಗೆ ಪ್ರಿಯವಾದುದನ್ನು ಮಾಡಲು ಇವರು ತಿಳಿದಿರುತ್ತಾರೆ.
ಇವರು ಯಾವುದೋ ಸಾಮಾನ್ಯ ಕುಲದಲ್ಲಿ ಜನಿಸದೇ, ಇವರ ತಂದೆ, ತಾಯಿ, ಅಜ್ಜ ಅಥವಾ ಇವರ ತಲೆಮಾರಿನಲ್ಲಿ ಯಾರಾದರೂ ಶ್ರೇಷ್ಠರು ಜನಿಸಿದವರಾಗಿರುತ್ತಾರೆ. ಅಂತಹ ಗೌರವಯುತವಾದ ಕುಟುಂಬದಲ್ಲಿ ಜನಿಸುವರು.
ಇವರ ದೇಹವೂ ಆತ್ಯಂತ ಆಕರ್ಷಕವಾಗಿ ಇರುತ್ತದೆ. ದೊಡ್ಡದಾದ, ಕೃಶವೂ ಸ್ಥೂಲವೂ ಅಲ್ಲದ ಶರೀರ, ಕಾಂತಿಯಿಂದಲೂ ಕೂಡಿರುತ್ತದೆ. ನೃತ್ಯ, ನಾಟಕ ಮುಂತಾದ ಕಲೆಗಳಿಗೆ ಯೋಗ್ಯವಾದ ಕಡೆ ಹೆಚ್ಚು ಆಸಕ್ತಿ ಇರುತ್ತದೆ.
ಇವರ ಬಳಿ ಅಧಿಕ ಧನವಿರುತ್ತದೆ. ಸ್ಥಿತಿವಂತರಾಗಿ ಬಾಳುವರು. ಧನ, ಆಸ್ತಿಗಳು, ವಿದ್ಯೆ ಇವುಗಳು ಸಂಪತ್ತೇ ಆಗಿರುತ್ತದೆ.
ಇವರು ಎಲ್ಲ ಕಡೆಗಳಿಂದ, ಎಲ್ಲರಿಂದ ಗೌರವವನ್ನು ಪಡೆದುಕೊಳ್ಳುವರು. ಅಂತಹ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ.
ಇವರು ಅಂತರಂಗದಲ್ಲಿ ಏನೇ ಇದ್ದರು ಅದನ್ನು ಹೊರಹಾಕದೇ ಎಲ್ಲರ ಜೊತೆಯೂ ಪ್ರೀತಿಯಿಂದ ಸಂತೋಷವಾಗುವಂತೆ ಮಾತನಾಡುತ್ತಾರೆ.
ಇವರ ಇನ್ನೊಂದು ಗುಣ ಶುಚಿಯಾಗಿರುವುದು. ಮನಸ್ಸಿಗೆ ಹಾಗೂ ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವರು. ತಮ್ಮ ವಸ್ತುಗಳ ಬಗ್ಗೆಯೂ ಶುಚಿತ್ವವು ಇರುವುದು.
ಈ ನಕ್ಷತ್ರದ ಗುಣ ಹಾಗೂ ಶ್ರೀಕೃಷ್ಣನ ನಡೆವಳಿಕೆಗೆ ಎರಡಕ್ಕೂ ಕೂಡ ಹೆಚ್ಚು ಹೋಲಿಕೆ ಇದೆ. ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಅಲ್ಪ ಪ್ರಮಾಣದ ಲಕ್ಷಣಗಳು ಬಂದೇ ಬರುತ್ತವೆ.
– ಲೋಹಿತ ಹೆಬ್ಬಾರ್ – 8762924271