Daily Horoscope: ಸಾಧನೆಗೆ ಸದಾ ತುಡಿತ, ಕೂಡಲೇ ಎಲ್ಲವೂ ಆಗದು ಎಂಬುವುದನ್ನ ನೆನಪಿಡಿ
7 ಫೆಬ್ರವರಿ 2025: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವ ಕಡೆ ನಿಮ್ಮ ಗಮನವಿರುವುದು. ಕೂಡಲೇ ಎಲ್ಲವೂ ಆಗದು. ಹಾಗಾದರೆ ಫೆಬ್ರವರಿ 7 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಬ್ರಹ್ಮ, ಕರಣ : ಕೌಲವ, ಸೂರ್ಯೋದಯ – 07 – 00 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:20 – 12:47, ಯಮಘಂಡ ಕಾಲ 15:40 – 17:07, ಗುಳಿಕ ಕಾಲ08:27 – 09:54.
ಮೇಷ ರಾಶಿ: ಇಂದು ನಿಮ್ಮ ಮನೋಭಿಲಾಷೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ. ಸಮುದ್ರದ ತೆರೆ ಕಳೆಯದು, ಸ್ನಾನವಾಗದು ಎನ್ನುವಂತಾಗಬಹುದು. ಮುನ್ನಡೆಯುವುದೊಂದೇ ಮಾರ್ಗ. ಯಾರನ್ನಾದರೂ ಕಡೆಗಣಿಸುವ ಅವಶ್ಯಕತೆ ಇಲ್ಲ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವ ಕಡೆ ನಿಮ್ಮ ಗಮನವಿರುವುದು. ಕೂಡಲೇ ಎಲ್ಲವೂ ಆಗದು. ಉದ್ಯೋಗದ ಕಾರಣಕ್ಕೆ ಪ್ರಯಾಣ ಮಾಡುವ ಅವಕಾಶವಿರುತ್ತದೆ. ವ್ಯಾಪಾರವನ್ನು ಹೆಚ್ಚಿಸಲು ಹೊಸ ಸ್ಥಳದ ಪರಿಶೀಲನೆ ನಡೆಸುವಿರಿ. ಇಂದು ವೃತ್ತಿಗೆ ಸೇರಿದ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ಕಛೇರಿಯ ಕೆಲಸದಲ್ಲಿ ನೌಕರರ ಕಾರ್ಯದಕ್ಷತೆತ ಕಾರಣಗಳಿಂದ ನಿಧಾನವಾಗಲಿದೆ. ಕೃಷಿಯಲ್ಲಿ ನೀವು ಹೆಚ್ಚು ಪ್ರಗತಿಯನ್ನು ಸಾಧಿಸುವ ಮನಸ್ಸು ಇರುವುದು. ನೀವು ಇಂದು ಅತಿಥಿಯಾಗಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮಿಂದಾಗಿ ಮನೆಯಲ್ಲಿ ಇಂದು ಸಂತೋಷವು ಇರಲಿದೆ. ಅನುಕಂಪದಿಂದ ಏನನ್ನಾದರೂ ಸಾಧಿಸಿಕೊಳ್ಳುವಿರಿ.
ವೃಷಭ ರಾಶಿ: ಇನ್ನೊಬ್ಬರ ಜೊತೆ ಮಾತನಾಡುವುದು ಸಮಯ ವ್ಯರ್ಥ ಎನಿಸದರೂ ಉದ್ಯಮದ ದೃಷ್ಟಿಯಿಂದ ಕಿಂಚಿತ್ ಲಾಭವೇ. ಬಿಚ್ಚು ಮನಸ್ಸಿನಿಂದ ನೀವು ಮಾತುಗಳನ್ನು ಆಡುವಿರಿ. ಆರ್ಥಿಕ ಲಾಭಕ್ಕೆ ನೂತನ ಮಾರ್ಗಗಳು ತೆರೆದಾವು. ಯಾವುದೋ ಆಲೋಚನೆಯಲ್ಲಿ ವಾಹನ ಚಲಾಯಿಸಿ ದಂಡವನ್ನೂ ಪಡೆಯಬೇಕಾಗಬಹುದು. ಇಂದಿನ ಪರಿಸ್ಥಿಗೆ ತಕ್ಕಹಾಗೆ ಮನಃಸ್ಥಿತಿಯಲ್ಲಿ ಏರಿಳಿತಗಳಿರಬಹುದು. ಉದ್ಯೋಗ ಸಂದರ್ಶನದಿಂದ ಆತಂಕ ದೂರಾಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ರಾಜಕೀಯದಿಂದ ನಿಮಗೆ ಬೇರೆ ಯಾವ ಸೌಕರ್ಯಗಳೂ ಇರಲಾರವು. ಬಾಂಧ್ಯದ ಬಂಧ ಸಡಿಲವಾಗುತ್ತ, ಎಲ್ಲರಿಂದ ದೂರಾಗುಬಿರಿ. ನಿಮ್ಮ ಜವಾಬ್ದಾರಿ ಮುಗಿದಾಗ ಸಾಧನೆಯ ಬೃಹದಾಕರ ನಿಮ್ಮನ್ನು ದಿಗ್ಭ್ರಮೆಗೊಳಿಸೀತು. ನಿಮ್ಮ ಜನಪ್ರಿಯತೆಯು ಕಡಿಮೆ ಆದಂತೆ ತೋರುವುದು. ಸಹೋದ್ಯೋಗಿಗಳಿಂದ ಸಹಾಯವನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಅಭದ್ರತೆಯನ್ನು ನೀವು ದೂರಮಾಡಿಕೊಳ್ಳುವುದು ಉತ್ತಮ. ಆನಂದದಿಂದ ಈ ದಿನವನ್ನು ಕಳೆಯಬೇಕು ಎನಿಸುವುದು.
ಮಿಥುನ ರಾಶಿ: ಧಾರ್ಮಿಕ ಆಚರಣೆಯಿಂದ ಮಾನಸಿಕ ಸಮತೋಲನ ಸಿಗುವುದು. ನಿಮ್ಮ ಮಾತನಾಡುವ ಸ್ವಭಾವದಿಂದ ವೃತ್ತಿಯಲ್ಲಿ ಕಿರಿಕಿರಿ ಆಗುವುದು. ಸ್ಥಿರಾಸ್ತಿಯ ಭಾಗಗಳನ್ನು ಬಿಟ್ಟುಕೊಡುವ ಸ್ಥಿತಿ ಬರಬಹುದು. ಅನಿರೀಕ್ಷಿತ ಪ್ರಯಾಣದಿಂದ ಸುಖವಿರಲಿದೆ. ನಿಮಗೆ ದೈವದ ಪ್ರತಿಕೂಲವಿದೆ ಎಂದು ಅನ್ನಿಸಲಿದೆ. ಹಿರಿಯರು ಆಡಿದ ನಿಮ್ಮ ವಿವಾಹದ ಮಾತುಕತೆಯಿಂದ ಸಂತೋಷ. ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಕಳೆದುಕೊಂಡ ವಸ್ತುಗಳನ್ನು ಪುನಃ ಸಂಪಾದಿಸುವ ಮಾನಸಿಕ ಸ್ಥಿತಿಯನ್ನು ಹೊಂದಿರುವಿರಿ. ಹಳೆಯ ಹೂಡಿಕೆಯಿಂದ ಲಾಭವನ್ನು ಪಡೆದು ಮತ್ತೆಲ್ಲಿಯಾದರೂ ಇಡಬಹುದು. ನಿಮ್ಮ ದಿನಚರ್ಯೆಯನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗುವುದು. ಕೆಲವು ಒಳ್ಳೆಯ ಅಭ್ಯಾಸಗಳು ಕೈತಪ್ಪಿಹೋಗಬಹುದು. ವಿಷಮಸ್ಥಿತಿಯನ್ನು ಸಮಸ್ಥಿಯನ್ನಾಗಿ ಮಾಡಿಕೊಳ್ಳುವ ವಿಧಾನವು ಗೊತ್ತಿದೆ.
ಕರ್ಕಾಟಕ ರಾಶಿ: ನಿಮ್ಮ ಪ್ರೇಮದ ಕಾರಣ ಪಾಲಕರಿಗೆ ಇರಿಸುಮುರಿಸು. ಜೀವನದಲ್ಲಿ ಬರುವ ಅನಿರೀಕ್ಷಿತ ಬದಲಾವಣೆಗಳನ್ನು ಸ್ವೀಕರಿಸಲು ಸಿದ್ಧರಾಗಬೇಕು. ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಂದು ಒಳ್ಳೆಯ ಸುದ್ದಿ ಇದೆ. ಆಸ್ತಿಯ ವಿಚಾರದಲ್ಲಿ ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಗೌಪ್ಯ ಸಂಗತಿಗಳನ್ನು ಹೊರಹಾಕುವಿರಿ. ಮನೆಯ ಸ್ವಚ್ಛತೆಗೆ ಗಮನ ಕೊಡಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟವೆನಿಸುವುದು. ಪವಿತ್ರಸ್ಥಳಗಳಿಂದ ನೆಮ್ಮದಿ ನಿಮ್ಮದಾಗುವುದು. ನಿಮ್ಮ ಮಾತಿಗೆ ಇಂದು ವಿರೋಧವು ಉಂಟಾಗುವುದು. ಅಪರಿಚರ ಜೊತೆ ವ್ಯವಹಾರವು ಸರಿಯಾಗಿ ಇರಲಿ. ತಂದೆಯ ಮೇಲೆ ನಿಮಗೆ ಬೇಸರ ಬರಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ತರಬಹುದು. ನಿಮ್ಮ ಮಾರ್ಯಾದೆಯನ್ನು ಮೀರಿ ವರ್ತಿಸದಿರಿ.
ಸಿಂಹ ರಾಶಿ: ಹತ್ತಿರ ಬಂಧುಗಳು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು. ಅದಕ್ಕೆ ನಿಮ್ಮದೂ ಸೇರಿದರೆ ಮತ್ತೇನೋ ಆಗುವ ಬದಲು, ಕೇಳದಂತೆ ಸುಮ್ನನಿರಿ. ಕಠಿಣ ಪರಿಶ್ರಮದ ಜೊತೆ ಮಾಡಿದ ಕೆಲಸವು ಆಹ್ಲಾದಕರ ಫಲವನ್ನೇ ನೀಡುವುದು. ಶಾಂತ ಮನಸ್ಸಿನಿಂದ ಸವಾಲುಗಳನ್ನು ನಿಭಾಯಿಸಿ. ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು. ನಿಮಗೆ ಸ್ಥಾನವಿಲ್ಲದ ಕಡೆ ಇರಲು ಇಷ್ಟವಾಗದು. ಸಿಟ್ಟಿನಿಂದ ಎಲ್ಲರನ್ನೂ ದೂರಮಾಡಿಕೊಳ್ಳುವಿರಿ. ಮನೆಯಲ್ಲಿನ ಅಶಾಂತಿಯ ವಾತಾವರಣವು ಸರಿಮಾಡಿಕೊಳ್ಳಿ. ಹಣಕಾಸಿನ ವ್ಯವಹಾರದಲ್ಲಿ ನೀವು ದಾಖಲೆಯನ್ನು ಇಟ್ಟುಕೊಳ್ಳಿ. ಸಂಗಾತಿಯ ಕೋಪಕ್ಕೆ ಉಪಶಮನದ ಮದ್ದನ್ನು ಅರದೆ ಹಚ್ಚಿ. ತಾಯಿಯು ನಿಮಗೆ ಹಿತವಚನವನ್ನು ಹೇಳುವರು. ಆತ್ಮವಿಶ್ವಾಸದ ಕೊರತೆಯನ್ನು ಸ್ನೇಹಿತರು ತುಂಬುವರು. ಸಂಶೋಧಕರು ಒತ್ತಡದಲ್ಲಿ ಕಾರ್ಯವನ್ನು ಕಾರ್ಯವನ್ನು ಮಾಡುವರು.
ಕನ್ಯಾ ರಾಶಿ: ಅಪರಿಚಿತರು ನಿಮ್ಮನ್ನು ಕಾಡಬಹುದು. ಹಣದ ಹೂಡಿಕೆಗೆ ಪೀಡಿಸಬಹುದು. ಸುಮ್ಮನೇ ಇರಿ ಅಥವಾ ಸಂಪರ್ಕ ಕಡಿತ ಮಾಡಿಕೊಳ್ಳಿ. ಯಾರನ್ನೋ ದೂಷಿಸಿ ನೀವು ದೊಡ್ಡವರಾಗುವುದು ಬೇಡ. ಆಸ್ತಿ ಪಾಲಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳನ್ನು ಪರಿಹರಿಸಿ ಅಥವಾ ಹೊಂದಾಣಿಕೆ ಮಾಡಿಕೊಳ್ಳಿ. ಇಂದು ನೀವು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ಸಾಲ ಕೊಟ್ಟವರ ಎದುರು ತಲೆ ಮೆರೆಸಿಕೊಂಡು ಓಡಾಡುವಿರಿ. ರಾಜಕೀಯವಾಗಿ ಹಿನ್ನಡೆಯಾಗಬಹುದು. ಹೂಡಿಕೆಯಿಂದ ಬಂದ ಹಣವನ್ನು ಸ್ಥಿರಾಸ್ತಿಗೆ ಹೂಡಿಕೆ ಮಾಡುವುದು ಉತ್ತಮ. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳಬೇಕಾದೀತು. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಿ. ಹಳೆಯ ನೋವುಗಳು ನಿಮ್ಮನ್ನು ಕಾಡುವುಸು. ಶುಭ ಸುದ್ದಿಯ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರುವುದು.




