
ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಗಂಡ, ಕರಣ : ವಣಿಜ, ಸೂರ್ಯೋದಯ – 06 – 55 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:47 – 14:14, ಯಮಘಂಡ ಕಾಲ 08:24 – 09:51, ಗುಳಿಕ ಕಾಲ 11:19 – 12:47.
ಮೇಷ ರಾಶಿ: ಇಂದು ಸಿಗುವ ವ್ಯಕ್ತಿಗಳು ನಿಮ್ಮ ಮೇಲೆ ಸದ್ಭಾವ ಮೂಡಿಸದೇ ಇರಬಹುದು. ಅಧಿಕ ಆದಾಯದ ಕಡೆಗೆ ವಿಶೇಷಗಮನವು ಇರಲಿದೆ. ನಿಮ್ಮಲ್ಲಿರುವ ಒಳ್ಳೆಯದನ್ನು ನಿಜವಾಗಿಯೂ ಪ್ರಶಂಸಿಸಲು ನಿಮ್ಮಿಬ್ಬರಿಗೂ ಸ್ವಲ್ಪ ಅಂತರದ ಅಗತ್ಯವಿದೆ. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳುವಿರಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಆಹಾರದಿಂದ ಆರೋಗ್ಯ ಕೆಡುವುದು. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ನಿಮಗೆ ಬರುವ ಆಸ್ತಿಯಲ್ಲಿ ಕಿರಿಕಿರಿ ಮಾಡುವಿರಿ. ಮನಸ್ಸಿಗೆ ಭಾರವಾದ ವಿಚಾರವನ್ನು ನೀವು ಹೇಗಾದರೂ ಮಾಡಿ ತಲೆಯಿಂದ ತೆಗೆಯಿರಿ. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು.
ವೃಷಭ ರಾಶಿ: ಇಂದು ಸುಮ್ಮನೇ ಇರುವ ಬದಲು ಏನನ್ನಾದರೂ ಹೊಸತನ್ನು ಮಾಡುವ ಯೋಜನೆ ರೂಪಿಸಿ. ಭವಿಷ್ಯಕ್ಕೆ ಉಪಯೋಗವಾಗಬಹುದು. ಸಂಬಂಧಗಳಲ್ಲಿ ಒಡಕು ಬರಬಹುದು. ಪ್ರೀತಿಯ ವಿಷಯದಲ್ಲಿ ಪರಿಚಿತರ ಜೊತೆ ಚರ್ಚಿಸುವಿರಿ. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಸ್ವಲ್ಪಮಟ್ಟಿನ ಲಾಭವಾಗುವುದು. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಅಸಹಾಯಕತೆಯನ್ನು ಸವಾಲಾಗಿ ಪಡೆದರೆ ಯಶಸ್ಸು ಪಡೆಯಬಹುದು. ಕಷ್ಟಗಳ ನಿವಾರಣೆಗೆ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸುವಿರಿ. ಆಪ್ತರಿಂದ ಸಲಹೆಯನ್ನು ಕೇಳಲು ನಿಮಗೆ ಮುಜುಗರವಾಗಬಹುದು. ಇನ್ನೊಬ್ಬರ ವಸ್ತುವನ್ನು ನೀವು ಇಟ್ಟುಕೊಳ್ಳಲಿದ್ದೀರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು.
ಮಿಥುನ ರಾಶಿ: ಅನುಕಂಪದ ಆಧಾರದಿಂದ ಅಧಿಕಾರ ಪಡೆಯಲು ಕಷ್ಟ. ಸಂಗಾತಿಯ ಜೊತೆ ಕಾಲ ಕಳೆಯಲು ಹವಣಿಸುವಿರಿ. ಚಿತ್ತಚಾಂಚಲ್ಯವು ಕಾರ್ಯದ ಗತಿಯನ್ನು ತಗ್ಗಿಸೀತು. ಪರರ ಸ್ವತ್ತನ್ನು ಯಾವುದಾದರೂ ರೀತಿಯಲ್ಲಿ ಪಡೆಯುವ ಯೋಚನೆ ಬರಬಹುದು. ಕಾರ್ಯದ ನಿರುತ್ಸಾಹವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡಿಕೊಳ್ಳುವಿರಿ. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ. ತಂದೆ ಮತ್ತು ತಾಯಿಯರಿಗೆ ಪ್ರಿಯವಾದುದನ್ನು ಮಾಡುವಿರಿ. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಹೂಡಿಕೆಯನ್ನು ಮಾಡಲು ಎಲ್ಲರಿಂದ ಮಾಹಿತಿಯನ್ನು ಸಂಗ್ರಹಿಸುವಿರಿ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶೆ. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.
ಕರ್ಕಾಟಕ ರಾಶಿ: ಅಧಿಕಾರಿ ವರ್ಗಕ್ಕೆ ಸೂಕ್ತ ಮಾಹಿತಿಯನ್ನು ನೀಡಬೇಕಾಗುವುದು. ಹಳೆಯದನ್ನು ನೀವು ನೆನೆದು ಸಂಕಟಪಡುವಿರಿ. ವಿನಾಕಾರಣ ಮಿತ್ರರನ್ನು ದೂರ ಮಾಡಿಕೊಳ್ಳುವಿರಿ. ನಿರ್ಲಕ್ಷ್ಯವನ್ನು ಜವಾಬ್ದಾರಿಯ ಯಾವ ವೃತ್ತಿಯಲ್ಲಿಯೂ ಮಾಡುವುದು ಬೇಡ. ನಿಮ್ಮ ಬಗ್ಗೆ ನೀವೇ ಪ್ರಶಂಸೆ ಮಾಡಿಕೊಳ್ಳುವಿರಿ. ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರಲು ನೋಡುವಿರಿ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ನಿಮ್ಮ ಹೆಸರನ್ನು ಹೇಳಿ ಯಾರಾದರೂ ವಂಚಿಸಿಯಾರು. ನಿಮ್ಮನ್ನು ಕಂಡರೆ ಕನಿಕರ ಹುಟ್ಟುವಂತೆ ಇರುವಿರಿ. ಕುಟುಂಬದಿಂದ ದೂರವಿದ್ದರೂ ಮಾತುಕತೆಗಳ ಮೂಲಕ ಹತ್ತಿರವಾಗುವಿರಿ. ಪೂರ್ಣಪ್ರಮಾಣದ ಕೃಷಿಯಲ್ಲಿ ತೊಡಗುವ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು.
ಸಿಂಹ ರಾಶಿ: ಅಧಿಕಾರದ ಬಳಕೆಯಿಂದ ಎಚ್ಚರಿಕೆ ಬರಬಹುದು. ಪರರ ಗುಣದಲ್ಲಿ ಅಸೂಯೆ ಇರುವುದು. ಸಂಗಾತಿಯ ಪ್ರೀತಿಗೆ ನೀವು ಸೋಲಬಹುದು. ಎಷ್ಟೋ ದಿನಗಳಿಂದ ಬಯಸಿದ್ದ ವಸ್ತುವನ್ನು ನೀವು ಅನಾಯಾಸವಾಗಿ ಯಾರಿಂದಲೋ ಪಡೆಯುವುರಿ. ವಾಸಸ್ಥಳ ಬದಲಾಣೆ ಮಾಡುವಿರಿ. ತಿಳಿವಳಿಕೆ ಇಲ್ಲದೇ ಮಾತನಾಡಿ ಅಪಹಾಸ್ಯಕ್ಕೆ ಸಿಲುಕುವಿರಿ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕತ್ತಲೆಯಲ್ಲಿ ಗುದ್ದಾಟ ಮಾಡಿ ಆಯಾಸ ಮಾಡಿಕೊಳ್ಳುವಿರಿ. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಅದು ಕನ್ನಡಿಯ ಗಾಜಿನಂತೆ. ಎಷ್ಟೇ ಕೂಡಿಸಿದರೂ ಬಿರುಕು ಎದ್ದು ತೋರುವುದು. ನಿಮ್ಮ ಬಗ್ಗೆ ಇರುವ ಕಾಳಜಿಗೆ ನೀವು ಮನಸೋಲುವಿರಿ. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದಿನ ಕಾರ್ಯ ಬೆಟ್ಟವನ್ನು ಬಗೆದು ಇಲಿಯ ತನ್ನ ಹಿಡಿದಂತೆ ಆಗಬಹುದು.
ಕನ್ಯಾ ರಾಶಿ: ಇಂದು ವ್ಯಾಪಾರದ ವಿಚಾರದಲ್ಲಿ ಮನೆಯವರ ಜೊತೆ ಕಲಹ. ನಿಮಗೆ ದ್ವಂದ್ವಗಳು ಒಂದು ಸರಿಯಾದ ನಿರ್ಧಾರಕ್ಕೆ ಬರಲು ಅನುಕೂಲ ಮಾಡಿಕೊಡುವುದಿಲ್ಲ. ಬಾರದೇ ಇರುವುದನ್ನು ನೆನಪುಮಾಡಿಕೊಂಡು ಬೇಸರಿಸುವಿರಿ. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು. ಸಪಕ್ವವಾದ ಮನಸ್ಸಿಗೆ ಏನು ಹೇಳಿದರೂ ಪ್ರಯೋಜನವಾಗದು. ಪ್ರೀತಿಯು ನಿಮಗಾಗದವರ ಮೂಲಕ ಎಲ್ಲರಿಗೂ ತಿಳಿಯುವುದು. ಇದರಿಂದ ನಿಮಗೆ ಬಹಳ ಮುಜುಗರವಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳದೇ ವರ್ತಿಸಿ. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಮಾರ್ಗವನ್ನು ಹುಡುಕುವಿರಿ. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಕೃಷಿಕರ ವಸ್ತುಗಳು ಕಾಣೆಯಾಗಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು.