Daily Horoscope: ಕೇಳದೆಯೇ ಕೊಡುವುದು ಈ ರಾಶಿಯವರ ಗುಣ

30 ನವೆಂಬರ್​​ 2024: ಶನಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗದು. ಗೊಂದಲು ಹೆಚ್ಚಿರುವುದು. ನೀವು ಊಹಿಸದ ಸ್ಥಿತಿ ನಿಮ್ಮ ಕಣ್ಣೆದುರು ಬರಬಹುದು. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು. ಹಾಗಾದರೆ ನವೆಂಬರ್​ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಕೇಳದೆಯೇ ಕೊಡುವುದು ಈ ರಾಶಿಯವರ ಗುಣ
ಕೇಳದೆಯೇ ಕೊಡುವುದು ಈ ರಾಶಿಯವರ ಗುಣ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಅತಿಗಂಡ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:32 ರಿಂದ 10:57ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:46 ರಿಂದ 03:11 ರವರೆಗೆ, ಗುಳಿಕ ಕಾಲ ಸಂಜೆ 06:43 ರಿಂದ 08:07 ರವರೆಗೆ.

ಮೇಷ ರಾಶಿ: ಆಪ್ತರ ದುಃಖದಿಂದ ನಿಮಗೆ ಸಂಕಟವಾಗಬಹುದು. ಎಲ್ಲವನ್ನೂ ನೀವು ಪ್ರೀತಿಯಿಂದ ವಿಶ್ವಾಸದಿಂದ ಪಡೆಯಲಾಗದು. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಯಾರಾದರೂ ನಿಮ್ಮನ್ನು ಎಚ್ಚರಿಸುವರು. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಉದ್ಯಮದಲ್ಲಿ ಆದಾಯವನ್ನು ಹೆಚ್ಚಿಸಲು ನೌಕರರ ಜೊತೆ ಮಾತನಾಡುವಿರಿ. ಮನೆಯ ಕಾರ್ಯವನ್ನು ಸರಿದೂಗಿಸುವು ನಿಮಗೆ ಕಷ್ಟ ಎನಿಸಬಹುದು. ಕಟ್ಟಡವನ್ನು ನಿರ್ಮಾಣದವರಿಗೆ ದೊಡ್ಡ ಯೋಜನೆ ಸಿಗಲಿದೆ. ಒಳ್ಳೆಯ ಗುಣವೇ ನಿಮ್ಮನ್ನು ಸಾಕಬಹುದು. ಹಣದ ಲೆಕ್ಕಾಚಾರದಲ್ಲಿ ನಿಮಗೆ ಮೋಸವಾದುದ್ದು ತಿಳಿದುಬರುವುದು. ಯಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡುವಿರಿ.

ವೃಷಭ ರಾಶಿ: ಅಮೂಲ್ಯ ವಸ್ತುಗಳ ಮಾರಾಟದ ಸಂದರ್ಭ ಬರಬಹುದು. ಕೆಲವು ಸುದ್ದಿಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಉದ್ಯೋಗದ ಕಾರಣಕ್ಕೆ ಮಾಡಿದ ಪ್ರಯಾಣದಿಂದ ಆಯಾಸವಾಗುವುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ಘಟನೆಯಿಂದ ನಿಮಗೆ ಬಹಳ ಬೇಸರ ತರಿಸಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಿರಿ. ಕೇಳದೆಯೇ ಕೊಡುವುದು ನಿಮ್ಮ ಗುಣ. ಹೂಡಕೆಯ ಹಣದಲ್ಲಿ ತೊಡಕಾಗಬಹುದು. ಸರ್ಕಾರದಿಂದ ಬರುವ ಹಣವು ಬಾರದೇ ಇರುವುದು. ನಿಮ್ಮ ಇಂದಿನ ಕಾರ್ಯವು ಪೂರ್ವಯೋಜನೆಯಂತೆ ನಡೆಯದು. ಅಪರೂಪದ ಬಂಧುಗಳು ಸಿಗುವರು. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು.

ಮಿಥುನ ರಾಶಿ: ಮಕ್ಕಳು ನಿಮ್ಮ ಹಣವನ್ನು ನಿಮಗೆ ಪರಳಿಸಬಹುದು. ಕಛೇರಿಯಲ್ಲಿ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲುವಂತೆ ಇರಿ. ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು.‌ ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಮನೆಯ ನವೀಕರಣದ ಬಗ್ಗೆ ಆಲೋಚಿಸುವಿರಿ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ಖಾಸಗಿ ಸಂಸ್ಥೆಯು ನಿಮ್ಮ ಕಾರ್ಯಕ್ಕೆ ಉನ್ನತ ಸ್ಥಾನವನ್ನು ಕೊಡುವುದು. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಚೆನ್ನಾಗಿ ಇರದು. ಸಣ್ಣ ವಿಚಾರಗಳಿಂದ ಸಂಗಾತಿಯ ನಡುವೆ ವೈಮನಸ್ಯ ಉಂಟಾಗುವುದು. ನಿಮ್ಮ ನೇರ ನುಡಿಯು ಎದುರಿನವನನ್ನು ಘಾಸಿ ಮಾಡಬಹುದು. ಆಪ್ತರನ್ನಾಗಿ ಸರಿಯಾದವರನ್ನು ಜೋಡಿಸಿಕೊಳ್ಳುವಿರಿ. ನಿಮ್ಮೊಳಗೆ ಹಿಡಿಯುವಷ್ಟನ್ನು ಮಾತ್ರ ತುಂಬಿಕೊಳ್ಳಿ.

ಕರ್ಕಾಟಕ ರಾಶಿ: ಯಾವುದೇ ಭಾವವನ್ನು ದೀರ್ಘಕಾಲ ಮುಚ್ಚಿಡುವುದು ಕಷ್ಟ. ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ನಿಮ್ಮ ನಿಧಾನಗತಿಯನ್ನು ಬದಲಿಸಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗಬಹುದು. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಮೊದಲು ಆರ್ಥಿಕ ಲಾಭವನ್ನು ನಿರೀಕ್ಷಿಸದೇ ಕಾರ್ಯವನ್ನು ಆರಂಭಿಸಿ. ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗದು. ಗೊಂದಲು ಹೆಚ್ಚಿರುವುದು. ನೀವು ಊಹಿಸದ ಸ್ಥಿತಿ ನಿಮ್ಮ ಕಣ್ಣೆದುರು ಬರಬಹುದು. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು. ಸಮಾರಂಭದಲ್ಲಿ ಆಪ್ತರ ಭೇಟಿಯಾಗಲಿದೆ. ಹಳೆಯ ಗೆಳತಿಯು ನಿಮ್ಮನ್ನು ಮಾತನಾಡಿಸಲು ಬರಬಹುದು. ನಿಮ್ಮ ಅತಿಯಾದ ಮಾತು ಕಿರಿಕಿರಿ‌ ಮಾಡೀತು. ಕಛೇರಿಯಲ್ಲಿ ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು.

ಸಿಂಹ ರಾಶಿ: ಎಷ್ಟೇ ಬೇಸರವಾದರೂ ನಿಮ್ಮ ಕಾರ್ಯವನ್ನು ಬಿಡುವಂತಿಲ್ಲ. ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ನೀವು ವರ್ತಿಸಬೇಕಾಗುವುದು. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಹೊರದೇಶಕ್ಕೆ ನೀವು ಹೋಗಬೇಕಾದ ಸಂದರ್ಭವನ್ನು ಸೃಷ್ಟಿಸಿಕೊಳ್ಳುವಿರಿ. ಅಪರಿಚಿತರ ಜೊತೆ ಸಿಕ್ಕಿ ಮಾನಸಿಕ ಹಿಂಸೆಯನ್ನು ಪಡುವಿರಿ. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು. ಸ್ತ್ರೀಯರಿಂದ ನಿಮಗೆ ಬೇಕಾದ ಸಹಾಯವು ಸಿಗದೇಹೋಗಬಹುದು. ಇನ್ನೊಬ್ಬರ ಆದಾಯಕ್ಕೆ ಕುತ್ತು ತರುವುದು ಸರಿಯಲ್ಲ. ಎಂದೋ ಮಾಡಿದ ಉಪಕಾರವು ನಿಮಗೆ ಇಂದು ವರವಾಗಿ ಬರಬಹುದು. ‌ನಾಚಿಕೆಯ ಸ್ವಭಾವವು ನಿಮ್ಮ ಅವಕಾಶಗಳನ್ನು ಹಾಳುಮಾಡಬಹುದು. ಸಭೆಯಲ್ಲಿ ಮಾತನಾಡುವ ಸನ್ನಿವೇಶ ಬರಬಹುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರಿಚಿತ ಸ್ಥಳದಿಂದ ಭೀತಿಯಾಗಬಹುದು.

ಕನ್ಯಾ ರಾಶಿ: ಸಂಗಾತಿಯಿಂದ ಮಾನಸಿಕವಾಗಿ ಘಾಸಿಗೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವು ಯಾರದೋ ಮೂಲಕ ಸಿಗುವುದು. ಇಂದು ಎಲ್ಲರಿಗೂ ನೀವು ಇಷ್ಟವಾಗುವಿರಿ. ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ‌ ಹೇರುವುದು ಬೇಡ. ಎಲ್ಲರ ಮೇಲೂ ಹಿಡಿತ ಸಾಧಿಸುವುದು ಅಶಕ್ಯ. ಮೋಹವೇ ನಿಮ್ಮ ಸಾಧನೆಯ ದಾರಿಯನ್ನು ತಪ್ಪಿಸುವುದು. ಮನೆಯ ಮೇಲೆ‌‌ ಚೋರರ ಭಯವು ಕಾಡಬಹುದು. ಕೃಷಿಯಲ್ಲಿ ಸ್ವಲ್ಪಮಟ್ಟಿಗೆ ನಷ್ಟವಾಗುವ ಸಾಧ್ಯತೆ ಇದೆ. ಅನುಭವಿಗಳ ಮಸರ್ಗದರ್ಶನವು ನಿಮಗೆ ಸಿಗಲಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ಲಾಭವಾಗುವುದು. ಬಂಧುಗಳ ಜೊತೆಗೆ ನಿಮ್ಮ ಒಡನಾಟವು ಚೆನ್ನಾಗಿರುವುದು. ಸಂಬಂಧವು ನಿಮಗೆ ಹೊಸ ಉತ್ಸಾಹವನ್ನು ಕೊಡಬಹುದು. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ. ಸಣ್ಣದಕ್ಕೂ ಸಂಗಾತಿಯ ಬೆಂಬಲವನ್ನು ಅಪೇಕ್ಷಿಸುವಿರಿ. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡಿ. ಹಳೆಯ ತಪ್ಪಿನಿಂದ ಪಾಠ ಕಲಿತರೆ ಒಳ್ಳೆಯದು.

ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ